ಸ್ವಿಸ್ಸರ್ಕಲ್ಸ್

ಸಾಮಗ್ರಿ : 5-6 ಬ್ರೆಡ್‌ ಸ್ಲೈಸ್‌, 100 ಗ್ರಾಂ ತುರಿದ ಪನೀರ್‌, 2 ಕ್ಯಾಪ್ಸಿಕಂ, ಅರ್ಧ ಸೌಟು ಬೆಣ್ಣೆ, 4-5 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಟೊಮೇಟೊ ಕೆಚಪ್‌, 2 ಚಮಚ ಕಾರ್ನ್‌ಫ್ಲೋರ್‌, 4-5 ಚಮಚ ಮೈದಾ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಯಲು ಎಣ್ಣೆ.

cookry-4

ವಿಧಾನ : ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಹಸಿಮೆಣಸಿನಕಾಯಿಗೆ ತುರಿದ ಪನೀರ್‌, ನೀರಲ್ಲಿ ಅದ್ದಿ ಕಿವುಚಿದ ಬ್ರೆಡ್‌ ಸ್ಲೈಸ್‌, ಉಳಿದೆಲ್ಲ  ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ, ಮೈದಾ ಕಾರ್ನ್‌ಫ್ಲೋರ್‌ ಸೇರಿಸಿ ಅದಕ್ಕೆ ಉಪ್ಪು, ಖಾರ, ಅಗತ್ಯವಿದ್ದಷ್ಟು ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಬೇಕು. ಪನೀರ್‌ ಮಿಶ್ರಣವನ್ನು ಉದ್ದದ ಸುರುಳಿ ಆಕಾರ ನೀಡಿ, ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು ಇದನ್ನು ಪುದೀನಾ ಚಟ್ನಿ, ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಕಾರ್ನ್ಬಾಲ್ಸ್

ಸಾಮಗ್ರಿ : 1 ಕಪ್‌ ಮೈದಾ, ಅರ್ಧ ಸೌಟು ಬೆಣ್ಣೆ, 2 ಕಪ್‌ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, 1 ಕಪ್‌ ಬ್ರೆಡ್‌ ಕ್ರಂಬ್ಸ್, 2 ಕಾರ್ನ್‌ ಕೋನ್‌, 4 ಹಸಿಮೆಣಸು, ಅರ್ಧ ಕಪ್‌ ತುರಿದ ಚೀಸ್‌, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 1 ಚಮಚ ಚಿಲೀ ಸಾಸ್‌, ಕರಿಯಲು ಎಣ್ಣೆ.

cookry-2

ವಿಧಾನ : ಎಳೆ ಜೋಳದ ಕಾಳು ಬಿಡಿಸಿಕೊಂಡು ತುಸು ಉಪ್ಪು ಹಾಕಿ ಬೇಯಿಸಿ. ಆರಿದ ನಂತರ ಇದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಮೈದಾ ಹಾಕಿ ಹುರಿಯಿರಿ. ಆಮೇಲೆ ಹಾಲು ಬೆರೆಸಿ ಸತತ ಕೈಯಾಡಿಸುತ್ತಾ ಇರಬೇಕು, ಮಂದ ಉರಿ ಇರಲಿ. ನಂತರ ಇದಕ್ಕೆ ರುಬ್ಬಿದ ಕಾರ್ನ್‌ ಮಿಶ್ರಣ, ತುರಿದ ಚೀಸ್‌, ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಉಪ್ಪು, ಖಾರ ಹಾಕಿ ಬೆರೆಸಿಕೊಳ್ಳಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಉಂಡೆ ಮಾಡಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಚೆನ್ನಾಗಿ ಹೊರಳಿಸಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಆಮೇಲೆ ಚಿತ್ರದಲ್ಲಿರುವಂತೆ ಚಿಲಿ ಸಾಸ್‌, ಟೊಮೇಟೊ ಸಾಸ್‌ಗಳೊಂದಿಗೆ ಸವಿಯಲು ಕೊಡಿ.

ಕ್ರಿಸ್ಪಿ ವೆಜಿಟೆಬಲ್ಸ್

ಸಾಮಗ್ರಿ : 10-15 ಒಣಮೆಣಸಿನಕಾಯಿ, 20 ಬೆಳ್ಳುಳ್ಳಿ ಎಸಳು, 2 ಕಪ್‌ ಹೆಚ್ಚಿದ ಹೂಕೋಸು, 1-1 ಕಪ್‌ ಹೆಚ್ಚಿದ ಬೀನ್ಸ್, ಆಲೂ ಹೋಳು, 1 ದೊಡ್ಡ ಚಮಚ ಹೆಚ್ಚಿದ ಬೆಳ್ಳುಳ್ಳಿ, ಒಂದಿಷ್ಟು ಹೆಚ್ಚಿದ ಈರುಳ್ಳಿ ತೆನೆ, ಅಗತ್ಯವಿದ್ದಷ್ಟು ಎಣ್ಣೆ, ಉಪ್ಪು, 4-4 ಚಮಚ ಕಾರ್ನ್‌ಫ್ಲೋರ್‌ ಮೈದಾ, 4 ಚಮಚ ಬಿಳಿ ಎಳ್ಳು.

cookry-5

ವಿಧಾನ : ಹಿಂದಿನ ರಾತ್ರಿ ವಿನಿಗರ್‌ನಲ್ಲಿ ಒಣಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ನೆನೆಸಿ, ಮಾರನೇ ದಿನ ಅದನ್ನು ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ತರಕಾರಿ ಸೇರಿಸಿ ಚೆನ್ನಾಗಿ ಬಾಡಿಸಿ, ಇದನ್ನು ಬೇರೆಯಾಗಿಡಿ. ಇದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ತೆನೆ ಹಾಕಿ ಬಾಡಿಸಿ. ಒಂದು ಬಟ್ಟಲಲ್ಲಿ ಕಾರ್ನ್‌ಫ್ಲೋರ್‌, ಮೈದಾ, ಉಪ್ಪು, ಖಾರ ತುಸು ನೀರು ಕದಡಿಕೊಂಡು ಪೇಸ್ಟ್ ತರಹ ಮಾಡಿ ಬಾಣಲೆಗೆ ಸೇರಿಸಿ ಕೆದಕಬೇಕು. ಆಮೇಲೆ ರುಬ್ಬಿದ ಮಿಶ್ರಣ, ಉಪ್ಪು, ಅರಿಶಿನ ಹಾಕಿ ಕೈಯಾಡಿಸಿ. ಕೊನೆಯಲ್ಲಿ ಬಾಡಿಸಿದ ತರಕಾರಿ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಕೆಳಗಿಳಿಸಿದ ಮೇಲೆ ಹುರಿದ ಬಿಳಿ ಎಳ್ಳು ಉದುರಿಸಿ, ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ