ದಿಢೀರ್‌ ಮಾವಿನ ಉಪ್ಪಿನಕಾಯಿ

ಸಾಮಗ್ರಿ : ಸಿಪ್ಪೆ ಹೆರೆದು ಸಣ್ಣ ಹೋಳಾಗಿಸಿದ 500 ಗ್ರಾಂ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಬ್ಲ್ಯಾಕ್‌ ಸಾಲ್ಟ್, ಮೆಣಸು, ಇಂಗು, ಗರಂಮಸಾಲ, ಒಗ್ಗರಣೆಗೆ ಸಾಸುವೆ, ಜೀರಿಗೆ, ಎಣ್ಣೆ, ಅರ್ಧ ಸಣ್ಣ ಚಮಚ ಅರಿಶಿನ.

ವಿಧಾನ : ಒಂದು ಸಣ್ಣ ಬಾಣಲೆಯಲ್ಲಿ ಜೀರಿಗೆ, ಮೆಣಸು, ಲವಂಗ, ಏಲಕ್ಕಿ ಹುರಿದುಕೊಂಡು, ಆರಿದ ನಂತರ ಪುಡಿ ಮಾಡಿಡಿ. ಒಂದು ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಮೊದಲು ಸಾಸುವೆ, ಇಂಗಿನ ಒಗ್ಗರಣೆ ಕೊಡಿ. ನಂತರ ಪುಡಿ ಮಾಡಿದ ಮಿಶ್ರಣ, ಅರಿಶಿನ, ಗರಂಮಸಾಲ, 2 ಬಗೆಯ ಉಪ್ಪು ಬೆರೆಸಿ ಕೆದಕಬೇಕು. ಆಮೇಲೆ ಮಾವಿನ ಹೋಳು ಸೇರಿಸಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಇಳಿಸುವ ಮುನ್ನ ಸಕ್ಕರೆ ಹಾಕಿ 2 ನಿಮಿಷ ಕೈಯಾಡಿಸಿ. ಇದೀಗ ದಿಢೀರ್‌ ಮಾವಿನ ಉಪ್ಪಿನಕಾಯಿ ಸವಿಯಲು ಸಿದ್ಧ. ಫ್ರಿಜ್‌ನಲ್ಲಿಟ್ಟು ಬಳಸಿದರೆ 1 ವಾರ ಕೆಡುವುದಿಲ್ಲ.

ಎಣ್ಣೆರಹಿತ ಮಾವಿನ ಉಪ್ಪಿನಕಾಯಿ

cookry-achar-4

ಸಾಮಗ್ರಿ : ಸಿಪ್ಪೆ ಹೆರೆದು ಉದ್ದದ ಹೋಳಾಗಿಸಿದ 500 ಗ್ರಾಂ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಅಚ್ಚ ಮೆಣಸಿನ ಪುಡಿ, ಇಂಗು, ಬೆಲ್ಲ, ಅರ್ಧ ಸಣ್ಣ ಚಮಚ ಅರಿಶಿನ.

ವಿಧಾನ : ಮೊದಲು ಮಾವಿನ ಹೋಳಿಗೆ ಉಪ್ಪು, ಅರಿಶಿನ ಹಾಕಿ 2 ದಿನ ಹಾಗೇ ಕಟ್ಟಿಡಿ. ಮಾರನೇ ದಿನ ಇದಕ್ಕೆ ತುರಿದ ಬೆಲ್ಲ ಹಾಗೂ ಉಳಿದೆಲ್ಲ ಸಾಮಗ್ರಿ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಭರಣಿಯ ಬಾಯಿ ಕಟ್ಟಿ, 10-12 ದಿನ ಬಿಸಿಲಿಗಿಡಿ. ನಂತರ ಉಪ್ಪಿನಕಾಯಿ ಬಳಸಲು ಸಿದ್ಧ.

ಅಮಟೆ ಮಾವಿನ ಉಪ್ಪಿನಕಾಯಿ

cookry-achar-2

ಸಾಮಗ್ರಿ : 250 ಗ್ರಾಂ ಮಾವಿನಕಾಯಿ, 300 ಗ್ರಾಂ ಅಮಟೆಕಾಯಿ, 1 ಕಪ್‌ ಸಾಸುವೆ ಎಣ್ಣೆ ಅಥವಾ ಎಳ್ಳೆಣ್ಣೆ, 1 ಕಪ್‌ ರೆಡಿಮೇಡ್ ಉಪ್ಪಿನಕಾಯಿ ಮಸಾಲೆ, ಅರ್ಧ ಚಮಚ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ತುಸು ಅರಿಶಿನ.

ವಿಧಾನ : ಅಮಟೆಕಾಯಿ ಇಡಿಯಾಗಿರಲಿ. ಇದನ್ನು ಚೆನ್ನಾಗಿ ಒರೆಸಿಕೊಂಡು ಪೋರ್ಕ್‌ನಿಂದ ಚುಚ್ಚಿಡಿ. ಮಾವನ್ನು ಹೋಳು ಮಾಡಿ. ಎರಡನ್ನೂ ಜಾಡಿಗೆ ತುಂಬಿಸಿ, ಮೇಲೆ ಉಪ್ಪು, ಅರಿಶಿನ ಹಾಕಿ ಚೆನ್ನಾಗಿ ಕುಲುಕಿ 1 ವಾರ ಹಾಗೇ ಬಿಡಿ. ನಂತರ ರೆಡಿಮೇಡ್ ಉಪ್ಪಿನಕಾಯಿ ಮಸಾಲೆ, ಕಾಯಿಸಿದ ಎಣ್ಣೆಗೆ ಇಂಗಿನ ಒಗ್ಗರಣೆ ಕೊಟ್ಟು ಇದಕ್ಕೆ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಭರಣಿ ಅಥವಾ ಜಾಡಿಯನ್ನು 15 ದಿನ ಬಿಸಿಲಿಗಿಟ್ಟು ಆಮೇಲೆ ಬಳಸಲು ಆರಂಭಿಸಿ.

ಕಡಲೆಕಾಳು ಮಾವಿನ ಉಪ್ಪಿನಕಾಯಿ

cookry-achar-3

ಸಾಮಗ್ರಿ : ಒಂದು ಕಪ್‌ ಕಾಬೂಲ್ ‌ಕಡಲೆಕಾಳು. 500 ಗ್ರಾಂ ಸಣ್ಣಗೆ ಹೆಚ್ಚಿದ ಹುಳಿ ಮಾವಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, 1-1 ಚಮಚ ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಮೆಂತ್ಯ, 2 ಸೌಟು ಎಣ್ಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ