ಬ್ರೌನಿ ಶೇಕ್

ಸಾಮಗ್ರಿ : 1 ದೊಡ್ಡ ಬಾರ್‌ ನಟ್ಸ್ ತುಂಬಿದ ಬ್ರೌನ್‌ ಚಾಕಲೇಟ್‌, 1 ಸಣ್ಣ ಚಮಚ ಸಕ್ಕರೆ, 1 ಸ್ಕೂಪ್‌ ವೆನಿಲಾ ಐಸ್‌ ಕ್ರೀಂ, ಅಗತ್ಯವಿದ್ದಷ್ಟು ಕೋಲ್ಡ್ ಮಿಲ್ಕ್.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸರ್‌ಗೆ ಹಾಕಿ ಚೆನ್ನಾಗಿ ಬ್ಲೆಂಡ್‌ ಮಾಡಿ. ನಂತರ ಇದನ್ನು 2-3 ಗ್ಲಾಸುಗಳಿಗೆ ತುಂಬಿಸಿ, ಐಸ್‌ ಹಾಗೂ ಚಾಕಲೇಟ್‌ ಬಾರ್‌ ತೇಲಿಬಿಟ್ಟು ಸವಿಯಲು ಕೊಡಿ.

ಜೆಲ್ಲಿ ಡ್ರಿಂಕ್

ಸಾಮಗ್ರಿ : 2-3 ಕ್ಯೂಬ್ಸ್ ಆರೆಂಜ್‌ ಜೆಲ್ಲಿ, ಅರ್ಧ ಬಾಟಲ್ ಸೋಡ, 4-5 ಚಮಚ ಬ್ಲೂ ಸಿರಪ್‌ (ರೆಡಿಮೇಡ್‌ ಲಭ್ಯ).

ವಿಧಾನ : 2-3 ಗ್ಲಾಸುಗಳಿಗೆ ಸಮನವಾಗಿ ಬ್ಲೂ ಸಿರಪ್‌ ಸುರಿದು, ಅದರ ಮೇಲೆ ಸೋಡ ಬೆರೆಸಿರಿ. ಕೊನೆಯಲ್ಲಿ ಜೆಲ್ಲಿ ಕ್ಯೂಬ್ಸ್ ತೇಲಿಬಿಟ್ಟು ತಕ್ಷಣ ಸವಿಯಲು ಕೊಡಿ.

ಫ್ರೂಟ್‌ ಮ್ಯಾಜಿಕ್‌

Cookry-2

ಸಾಮಗ್ರಿ : 4 ಚಮಚ ಆರೆಂಜ್‌ ಸ್ಕ್ವಾಶ್‌, 1-2 ಸ್ಕೂಪ್‌ ವೆನಿಲಾ ಐಸ್‌ ಕ್ರೀಂ, ಅರ್ಧ ಬಾಟಲ್ ಸೋಡ, ಒಂದಿಷ್ಟು ಪುಡಿ ಐಸ್. ವಿಧಾನ : ಎಲ್ಲಾ ಸಾಮಗ್ರಿಗಳನ್ನೂ ಚೆನ್ನಾಗಿ ಬೆರೆಸಿಕೊಂಡು, 2-3 ಗ್ಲಾಸುಗಳಿಗೆ ತುಂಬಿಸಿಕೊಂಡು, ಮೇಲೆ ಪುಡಿ ಐಸ್‌ ಹಾಕಿ ಸವಿಯಲು ಕೊಡಿ.

ಪೈನ್‌ ಆ್ಯಪಲ್ ಸೋಡ

ಸಾಮಗ್ರಿ : 2 ಕಪ್‌ ನೀರು, 1 ಕಪ್‌ ಸಕ್ಕರೆ, 2-3 ಸಣ್ಣ ಚಮಚ ಪೈನ್‌ ಆ್ಯಪಲ್ ಎಸೆನ್ಸ್, 2-3 ಹನಿ ಹಳದಿ ಬಣ್ಣ, 2-3 ಚಮಚ ನಿಂಬೆರಸ, 1 ಸ್ಕೂಪ್‌ ವೆನಿಲಾ ಐಸ್‌ ಕ್ರೀಂ, ಅಗತ್ಯಕ್ಕೆ ತಕ್ಕಷ್ಟು ಸೋಡ.

ವಿಧಾನ : ಶರಬತ್ತು ತಯಾರಿಸಲು ಎಲ್ಲಕ್ಕೂ ಮೊದಲು ಪ್ಯಾನಿನಲ್ಲಿ ನೀರು ಕುದಿಸಿರಿ. ನಂತರ ಇದಕ್ಕೆ ಸಕ್ಕರೆ ಹಾಕಿ ಕದಡಿಕೊಳ್ಳಿ. ಸಕ್ಕರೆ ಚೆನ್ನಾಗಿ ಕರಗಿದ ನಂತರ ಪೈನ್‌ ಆ್ಯಪಲ್ ಎಸೆನ್ಸ್ ಬೆರೆಸಿಕೊಳ್ಳಿ. ಆಮೇಲೆ ಹಳದಿ ಬಣ್ಣ, ನಿಂಬೆ ರಸ ಬೆರೆಸಬೇಕು. 2 ಕುದಿ ಬಂದಾಗ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ 2-3 ಗ್ಲಾಸುಗಳಿಗೆ 2-2 ಚಮಚ ಶರಬತ್ತು ಹಾಕಿಟ್ಟು, 1-1 ಸ್ಕೂಪ್‌ವೆನಿಲಾ ಐಸ್‌ ಕ್ರೀಂ ಹಾಕಬೇಕು. ಇದರ ಮೇಲೆ ಸೋಡ ಬೆರೆಸಿ ಸವಿಯಲು ಕೊಡಿ.

ಕ್ಯಾರಮೆಲ್ ‌ಮ್ಯಾಜಿಕ್‌

ಸಾಮಗ್ರಿ : 1 ಕಪ್‌ ಸಕ್ಕರೆ, 100 ಗ್ರಾಂ ಕ್ರೀಂ, 50 ಗ್ರಾಂ ಬೆಣ್ಣೆ, ಒಂದಿಷ್ಟು ಬಟರ್‌ ಸ್ಕಾಚ್‌ಚಿಪ್ಸ್.

ವಿಧಾನ : ನೀರು ಬಿಸಿ ಮಾಡಿ, ಅದರಲ್ಲಿ ಸಕ್ಕರೆ ಹಾಕಿ ಚೆನ್ನಾಗಿ ಕದಡಿಕೊಳ್ಳಿ. ನೀರು ಕುದ್ದು ಸಕ್ಕರೆ ಕರಗಿದಾಗ, ಅದಕ್ಕೆ ಕ್ರೀಂ ಮತ್ತು ಬೆಣ್ಣೆ ಬೆರೆಸಿ, ಮತ್ತೆ 2-3 ನಿಮಿಷ ಕೆದಕಬೇಕು. ಇದಾದ ನಂತರ ಈ ಶರಬತ್ತನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಆಮೇಲೆ ಬೇರೆ ಬೇರೆ ಗ್ಲಾಸುಗಳಿಗೆ 2-2 ಚಮಚ ಶರಬತ್ತು ಹಾಕಿ, ಮೇಲೆ 100 ಗ್ರಾಂ ಕ್ರೀಂ ಬೆರೆಸಿ. ಗಾರ್ನಿಶ್‌ಗಾಗಿ ಬಟರ್‌ ಸ್ಕಾಚ್‌ ಚಿಪ್ಸ ಹಾಕಿ, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ