ಮ್ಯಾಂಗೋ ಬರ್ಗರ್

ಸಾಮಗ್ರಿ : 2 ಮಾಗಿದ ಮಾವು, 1 ಕರ್ಬೂಜಾ, 1 ಪರಂಗಿ ಹಣ್ಣು, 1 ಕಪ್‌ ಮಸೆದ ಪನೀರ್‌, 1 ದೊಡ್ಡ ಚಮಚ ಹಾಲಿನಪುಡಿ, ಅಗತ್ಯವಿದ್ದಷ್ಟು ಕ್ರೀಂ ಚೆರ್ರಿ ಪುಡಿ ಸಕ್ಕರೆ ಡ್ರೈಫ್ರೂಟ್ಸ್.

ವಿಧಾನ : ಎಲ್ಲಾ ಹಣ್ಣುಗಳ ಸಿಪ್ಪೆ ಹೆರೆದಿಡಿ. ಮಾವನ್ನು 2 ಪದರಗಳಾಗಿ ಕತ್ತರಿಸಿ. 2 ಪದರಗಳೂ ಟೊಳ್ಳಾಗುವಂತೆ ಅದರ ತಿರುಳನ್ನು ತೆಗೆದುಬಿಡಿ. ಕರ್ಬೂಜಾ, ಪರಂಗಿ ಹಣ್ಣುಗಳನ್ನು ಚೆನ್ನಾಗಿ ಮಸೆದಿಡಿ. ಇದಕ್ಕೆ ಪನೀರ್‌, ಹಾಲಿನಪುಡಿ, ಪುಡಿಸಕ್ಕರೆ ಸೇರಿಸಿ. ಮಾವಿನ 2 ಪದರಗಳ ಒಳಭಾಗಕ್ಕೆ ಕ್ರೀಂ ಸವರಿ, ಈ ಮಿಶ್ರಣವನ್ನು ತುಂಬಿಸಿ. ಆಮೇಲೆ ಇನ್ನೊಂದು ಭಾಗವನ್ನು ಬರ್ಗರ್‌ನಂತೆ ಮುಚ್ಚಿ, ಟೂತ್‌ ಪಿಕ್‌ ಸಿಗಿಸಿಡಿ. ಚಿತ್ರದಲ್ಲಿರುವಂತೆ ಡ್ರೈಫ್ರೂಟ್ಸ್, ಚೆರ್ರಿಯಿಂದ ಅಲಂಕರಿಸಿ, 1 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಜೆಲ್ಲಿ ಫ್ರೂಟ್‌ ಸಲಾಡ್‌

JELLY-FRUIT-SALAD-(1)

ಸಾಮಗ್ರಿ : 1 ಪ್ಯಾಕೆಟ್‌ ರೆಡಿಮೇಡ್‌ ಜೆಲ್ಲಿ, 1 ಸಣ್ಣ ಸ್ಪಾಂಜ್‌ ಕೇಕ್‌, 1 ಕಪ್‌ ವೆನಿಲಾ ಐಸ್‌ಕ್ರೀಂ, 1 ಕಪ್‌ ಕ್ರೀಂ, 1 ನಿಂಬೆಹಣ್ಣು, 4-5 ಲೀಚೀ ಹಣ್ಣು, 7-8 ಸೀಡ್‌ಲೆಸ್ ದ್ರಾಕ್ಷಿ, ಅರ್ಧರ್ಧ ಕಪ್‌ ಅನಾನಸ್‌ ಮಾವಿನ ಹೋಳು, ಒಂದಿಷ್ಟು ಹೆಚ್ಚಿದ ಕಿವೀ ಪ್ರಟ್‌, ಊಟಿ ಆ್ಯಪಲ್, ಚೆರ್ರೀ ಹಣ್ಣು, ಮಿಕ್ಸ್ಡ್ ಫ್ರೂಟ್‌ ಜ್ಯಾಂ.

ವಿಧಾನ : ಸ್ಪಾಂಜ್‌ ಕೇಕಿಗೆ ಜ್ಯಾಂ ಕ್ರೀಂ ಬೆರೆಸಿ ಕೂಲ್ ‌ಮಾಡಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಳ್ಳಿ. ಸರ್ವಿಂಗ್‌ ಡಿಶ್‌ನಲ್ಲಿ ಕೇಕ್‌ ಲೇಯರ್‌ ಹರಡಿರಿ. ಇದರ ಮೇಲೆ ತುಸು ಹೆಚ್ಚಿದ ಹಣ್ಣು ಬರಲಿ. ನಂತರ ಜೆಲ್ಲಿ ಹರಡಿರಿ. ಆಮೇಲೆ ಉಳಿದ ಹಣ್ಣಿನ ಪದರ ಬರಲಿ. ಇದರ ಮೇಲೆ ಐಸ್‌ಕ್ರೀಂ ಹರಡಿ, ಚಿತ್ರದಲ್ಲಿರುವಂತೆ ಚೆರ್ರಿ, ಕಿವೀ ಫ್ರೂಟ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಫ್ರೂಟ್‌ ಲೇಯರ್ಡ್‌ ಪುಡಿಂಗ್‌

ಸಾಮಗ್ರಿ : 1 ಕಪ್‌ ಕ್ರೀಂ, 5-6 ಅನಾನಸ್‌ ಬಿಲ್ಲೆಗಳು, 5-6 ಅಗಲದ ಮಾವಿನ ಸ್ಲೈಸ್‌, 2 ಚಮಚ ಪುಡಿಸಕ್ಕರೆ, 1 ನಿಂಬೆಹಣ್ಣು, 1 ಕ್ಯಾಪ್ಸಿಕಂ, ಒಂದಿಷ್ಟು ಗೋಡಂಬಿ ದ್ರಾಕ್ಷಿ ಬಾದಾಮಿ ಪಿಸ್ತಾ ಚೂರು ಪುದೀನಾ.

ವಿಧಾನ : ಬೇಕಿಂಗ್‌ ಡಿಶ್‌ಗೆ ಜಿಡ್ಡು ಸವರಿ, ಮಾವಿನ ಸ್ಲೈಸ್‌ ಹರಡಿರಿ. ಕ್ರೀಮಿಗೆ ನಿಂಬೆರಸ, ಪುಡಿಸಕ್ಕರೆ ಬೆರೆಸಿಕೊಂಡು ಅದನ್ನು ಮಾವಿನ ಮೇಲೆ ಹರಡಬೇಕು. ಇದರ ಮೇಲೆ ಒಂದು ಪದರ ಹೆಚ್ಚಿದ ಕ್ಯಾಪ್ಸಿಕಂ ಬರಲಿ. ಅದರ ಮೇಲೆ ಅನಾನಸ್‌ ಬಿಲ್ಲೆಗಳು ಬರಲಿ. ಇದರ ಮೇಲೆ ಮತ್ತೊಂದು ಪದರ ಕ್ರೀಂ ಬರಲಿ. ಇದರ ಮೇಲೆ ಪುಡಿಸಕ್ಕರೆ ಉದುರಿಸಿ. ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿರಿಸಿ ಬೇಕ್‌ ಮಾಡಿ. ಹೊರತೆಗೆದು ಆರಿದ ನಂತರ ಗೋಡಂಬಿ ದ್ರಾಕ್ಷಿ ಉದುರಿಸಿ ಸವಿಯಲು ಕೊಡಿ.

ಕ್ರೀಮೀ ಸ್ಟ್ಯೂಡ್‌ ಸ್ಪೆಷಲ್

AAM-BURGER-(6)

ಸಾಮಗ್ರಿ : 4-5 ಪೀಚ್‌ ಹಣ್ಣು, 2-3 ಲವಂಗ, 2 ಚಮಚ ಸಕ್ಕರೆ, 1 ನಿಂಬೆಹಣ್ಣು, 7-8 ಬಾದಾಮಿ ಗೋಡಂಬಿ (ಹಾಲಲ್ಲಿ ನೆನೆದದ್ದು), ಒಂದಿಷ್ಟು ಕೋಲ್ಡ್ ಕ್ರೀಂ, ಚೆರ್ರಿ ಹಣ್ಣು, ದ್ರಾಕ್ಷಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ