ಬಾಲ್ಯದಲ್ಲಿ ನೀವು ನಿಮ್ಮ ತಾಯಿ, ತಂದೆ ಅಥವಾ ಹಿರಿಯರು ಹಣ್ಣು ಖರೀದಿಸುವುದನ್ನು ನೋಡಿರಬಹುದು. ಅವರು ಹಣ್ಣುಹಂಪಲನ್ನು ಮುಟ್ಟಿ ನೋಡಿ, ಚೆನ್ನಾಗಿ ತಿರುಗಿಸಿ, ಪರಿಶೀಲಿಸಿ ಅವು ತಾಜಾ ತಾನೇ ಎಂದು ಖಚಿತಪಡಿಸಿಕೊಂಡು ನಂತರವೇ ಕೊಳ್ಳುತ್ತಿದ್ದರು. ಹಲವು ಅನ್ಯ ಪ್ರಯತ್ನಗಳಿಂದಲೂ ಈ ಹಣ್ಣು ಫ್ರೆಶ್‌ ತಾನೇ ಎಂದು ಪರೀಕ್ಷಿಸುತ್ತಿದ್ದರು. ಕೇವಲ ತಾಜಾ ತರಕಾರಿ, ಹಣ್ಣು ಆರಿಸುವುದಷ್ಟೇ ಅಲ್ಲ, ಅವನ್ನು ಸರಿಯಾಗಿ ಸುರಕ್ಷಿತವಾಗಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆಗ ಮಾತ್ರ ಅವುಗಳಲ್ಲಿನ ನೈಸರ್ಗಿಕ ತೈಲಾಂಶ, ಸುವಾಸನೆ ಮತ್ತು ಅಸಲಿ ರುಚಿ ಹಾಗೇ ಉಳಿಯುವಂತಾಗಬೇಕು. ಯಾವುದೇ ಸಾಮಗ್ರಿಯಲ್ಲಿನ ಆರ್ದ್ರತೆಯನ್ನು ಅನುಸರಿಸಿ ದೀರ್ಘಕಾಲದವರೆಗೆ ಅದರ ಗುಣಗಳು ಉಳಿಯುತ್ತವೆಂದು ತಿಳಿಯಬಹುದು.

ಸಾಮಗ್ರಿ ಸುರಕ್ಷಿತವಾಗಿದ್ದರೆ ಅದರ ಗುಣಮಟ್ಟ ಉಳಿಯುವುದಲ್ಲದೆ, ಅದರ ಪೋಲೂ ತಪ್ಪುತ್ತದೆ.

ಹೀಗಾಗಿ ಈ ಕೆಳಗಿನ 5 ಸಲಹೆಗಳನ್ನು ಅನುಸರಿಸಿ. ಆಗ ನಿಮಗೆ ತಾಜಾ ಸಾಮಗ್ರಿ ಆರಿಸಲು, ಅವನ್ನು ಸುರಕ್ಷಿತವಾಗಿರಿಸಲು ಹಾಗೂ ದೀರ್ಘಕಾಲದವರೆಗೆ ಅವನ್ನು ಉಪಯೋಗಿಸಲು ಅನುಕೂಲವಾಗುತ್ತದೆ.

Jyada-Nami-Wali

ತಾಜಾ ಹಣ್ಣುತರಕಾರಿ ಆರಿಸುವುದು ಹೇಗೆ? : ಹಣ್ಣು ತರಕಾರಿಗಳ ಮೇಲಿನ ಸಿಪ್ಪೆ ಸಾಮಾನ್ಯವಾಗಿ ಮೃದುವಾಗಿರುತ್ತದೆ. ಈ ಪದರ ತುಸು ಒಳಗೆ ಧಸಕಿದಂತೆ, ಮೆತ್ತಿಕೊಳ್ಳುವಂತಾಗಿದ್ದರೆ, ಹಣ್ಣಿನ ತಿರುಳು ಹಾಳಾಗಿದೆ ಎಂದು ತಿಳಿಯಿರಿ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೂಸಂಬಿಗಳು ಮೇಲಿನಿಂದ ತಾಜಾ ಅನಿಸಿದರೂ ಒಳಭಾಗ ಒಣಗಿದಂತಾಗಿರುತ್ತವೆ. ಇಂಥ ರಸಭರಿತ ಹಣ್ಣುಗಳು ಸರಿಯಾಗಿವೆ ಎಂಬುದು ಅದರ ತೂಕದಿಂದ ತಿಳಿಯುತ್ತದೆ. ತಾಜಾ ಆಗಿದ್ದಷ್ಟೂ ಪರಿಮಳ ಹೆಚ್ಚು. ಇದರ ಸಿಪ್ಪೆ ಮೇಲೆ ಕಲೆ ಗುರುತು ಇರುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿ, ಆಲೂ ಗಟ್ಟಿ ಆಗಿರಬೇಕು. ಎಲೆಕೋಸು, ಸೊಪ್ಪಿನಂಥವುಗಳು ಹಸಿರಾಗಿ, ಬಾಡದೆ ನಳನಳಿಸುತ್ತಾ, ತುಂಡರಿಸದೆ ಇರಬೇಕು.

ಹೆಚ್ಚು ಮೃದು ಸಾಮಗ್ರಿ ಸುರಕ್ಷಿತವಾಗಿಡುವುದು ಹೇಗೆ? : ನಾವು ಸಾಮಾನ್ಯವಾಗಿ 1 ವಾರ ಅಥವಾ 15 ದಿನಗಳಿಗಾಗಿ ತಾಜಾ ಹಣ್ಣು ತರಕಾರಿ ಕೊಳ್ಳುತ್ತೇವೆ. ನಮ್ಮ  ಫ್ರಿಜ್‌ನ ತರಕಾರಿ ಬಾಸ್ಕೆಟ್‌ನಲ್ಲಿ ಬಗೆಬಗೆಯ ಹಣ್ಣು, ತರಕಾರಿಗಳನ್ನು ಒಟ್ಟೊಟ್ಟಿಗೆ ಹಾಗೇ ಇಟ್ಟುಬಿಡುತ್ತೇವೆ. ಈ ವಸ್ತುಗಳು ಸಹ ನಿಯಮಬದ್ಧವಾಗಿ ಉಸಿರಾಡುತ್ತವೆ ಎಂಬುದನ್ನು ಗಮನಿಸಿ. ಯಾವ ತಾಪಮಾನ ಮತ್ತು ಪರಿಸ್ಥಿತಿಯಲ್ಲಿ ಅದನ್ನು ಇರಿಸಲಾಗುತ್ತದೋ, ಅದು ಸಾಮಗ್ರಿಯ ದೀರ್ಘ ಬಾಳಿಕೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಸ್ವೀಟ್‌ ಕಾರ್ನ್‌, ಕೊ.ಸೊಪ್ಪು, ಬಟಾಣಿ ಕಾಳು, ಹಸಿರು ಸೊಪ್ಪುಗಳು, ಕರಿಬೇವು ಇತ್ಯಾದಿ ಹೆಚ್ಚು ಉಸಿರಾಡುತ್ತವೆ.

ಸೇಬು, ಕಿತ್ತಳೆ, ನಿಂಬೆ, ಕ್ಯಾರೆಟ್‌, ಎಲೆಕೋಸು, ಹಸಿಮೆಣಸು ಸಾಮಗ್ರಿ ಮಧ್ಯಮ ಗತಿಯಲ್ಲಿ ಉಸಿರಾಡುತ್ತವೆ.

ಪ್ಲಮ್, ಚೆರ್ರಿ, ಟೊಮೇಟೊ, ಬದನೆ, ಟರ್ನಿಪ್‌, ಸೌತೆ ಇತ್ಯಾದಿ ಮಂದ ಗತಿಯಲ್ಲಿ ಉಸಿರಾಡುತ್ತವೆ.

ಹೀಗಾಗಿ ಈ ಸಾಮಗ್ರಿಗಳನ್ನು ಅವು ಉಸಿರಾಡುವ ವೇಗಕ್ಕೆ ತಕ್ಕಂತೆ ಬೇರೆಬೇರೆ ನೆಟೆಡ್‌ ಕವರ್‌ಗಳಲ್ಲಿಡಿ. ಹೆಚ್ಚು ಉಸಿರಾಡುವ ಸಾಮಗ್ರಿಯನ್ನು, ಧಾರಾಳ ಗಾಳಿಯಾಡುವ ಅಗಲ ನೆಟೆಡ್‌ ಕವರ್‌ನಲ್ಲಿ ಇತರ ತರಕಾರಿ ಹಣ್ಣು ಆರಿಸಿಕೊಳ್ಳದಂತೆ ಆರ್ದ್ರತೆಯ ಸಮಸ್ಯೆ ಕಾಡದಂತೆ ಇರಿಸಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ