ಎಣ್ಣೆಗಾಯಿ ಅಂದ ತಕ್ಷಣವೇ, ಥಟ್ ಅಂತ ನೆನಪಿಗೆ ಬರುವುದೇ ಉತ್ತರ ಕರ್ನಾಟಕದ ಸಾಂಪ್ರದಾಯಕ ಅಡುಗೆ ಗುಳ್ಳ ಬದನೇಕಾಯಿ ಎಣ್ಗಾಯ್ ಆದರೆ ಅದೇ ಎಣ್ಗಾಯ್ ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಸಾಂಪ್ರದಾಯಕವಾದ ಹಾಗಲಕಾಯಿ ಎಣ್ಣೆಗಾಯಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಎಣ್ಣೆಗಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಹಾಗಲಕಾಯಿ – 4-5
- ಈರುಳ್ಳಿ – 2-3
- ಬೆಳ್ಳುಳ್ಳಿ 4-6 ಎಸಳು
- ಕೊತ್ತಂಬರಿ ಸೊಪ್ಪು – 2 ಚಮಚ
- ಕರಿಬೇವಿನ ಸೊಪ್ಪು – 8-10 ಎಲೆಗಳು
- ಹುಣಸೇರಸ – 2-3 ಚಮಚ
- ಹುರಿಗಡಲೆ – 1/4 ಬಟ್ಟಲು
- ಬಿಳೀ ಎಳ್ಳು – 3-4 ಚಮಚ
- ಬೆಲ್ಲ – 1/4 ಬಟ್ಟಲು
- ಚಕ್ಕೆ – 1/2 ಇಂಚು
- ಕಾಯಿ ಚೂರು 1/2 ಬಟ್ಟಲು
- ಅಚ್ಚ ಖಾರದ ಪುಡಿ – 2-3 ಚಮಚ
- ಹುಳೀ ಪುಡಿ – 2-3 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಹಾಗಲಕಾಯಿ ಎಣ್ಣೆಗಾಯಿ ತಯಾರಿಸುವ ವಿಧಾನ
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿಕೊಂಡು ಅದಕ್ಕೆ ಸ್ವಲ್ಪ ಕರಿಬೇವು ಮತ್ತು ಅರಿಶಿನ ಬೆರೆಸಿ, ಹೆಚ್ಚಿದ ಈರಳ್ಳಿಯನ್ನು ಹಾಕಿಕೊಂಡು ಕೆಂಪಗೆ ಬರುವವರೆಗೂ ಬಾಡಿಸಿಕೊಂಡ ನಂತರ ದಪ್ಪಗೆ ಹೆಚ್ಚಿಟ್ಟುಕೊಂಡಿರುವ ಹಾಗಲ ಕಾಯಿಯನ್ನು ಬಾಣಲೆಗೆ ಹಾಕಿ ಸುಮಾರು ಎಂಟರಿಂದ ಹತ್ತು ನಿಮಿಷಗಳ ಕಾಲ ಬಾಡಿಸಿಕೊಳ್ಳಿ
- ಮಿಕ್ಸಿ ಜಾರಿಗೆ ತೆಂಗಿನ ಕಾಯಿ, ಈರುಳ್ಳಿ, ಹುರಿಗಡಲೆ, ಹುರಿದ ಎಳ್ಳು ಮತ್ತು ಚೆಕ್ಕೆಯನ್ನು ಸೇರಿಸಿಕೊಂಡು ತರಿತರಿಯಾಗಿ ರುಬ್ಬಿಕೊಂಡ ನಂತರ ಅಚ್ಚ ಖಾರದ ಪುಡಿ, ಹುಳಿಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ.
- ಬಾಡಿಸಿಕೊಂಡ ಹಾಗಲಕಾಯಿ ಮತ್ತು ರುಬ್ಬಿಕೊಂಡ ಮಿಶ್ರಣವನ್ನು ಒಂದು ಕುಕ್ಕರಿನೊಳಗೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಮತ್ತು ಹುಣಸೇ ರಸವನ್ನು ಸೇರಿಸಿ ಒಂದು ಕೂಗು ಬರುವವರೆಗೆ ಬೇಯಿಸಿದಲ್ಲಿ ರುಚಿರುಚಿಯಾದ ಹಾಗಲಕಾಯಿ ಎಣ್ಣೆಗಾಯಿ ಸವಿಯಲು ಸಿದ್ಢ.
ಮಸಾಲೆ ರೊಟ್ಟಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಅಕ್ಕಿ ಹಿಟ್ಟು – 1 ಪಾವು
- ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ – 2-3
- ತುರಿದ ತರಕಾರಿಗಳು
- ಕೊತ್ತಂಬರಿ ಸೊಪ್ಪು – 2 ಚಮಚ
- ಕರಿಬೇವಿನ ಸೊಪ್ಪು – 8-10 ಎಲೆಗಳು
- ರುಚಿಗೆ ತಕ್ಕಷ್ಟು ಉಪ್ಪು
- ರುಚಿಯನ್ನು ಹೆಚ್ಚಿಸಲು ಚೆಟ್ನೀಪುಡಿ – 2 ಚಮಚ (ಐಚ್ಚಿಕ)
ಮಸಾಲೆ ರೊಟ್ಟಿ ತಯಾರಿಸುವ ವಿಧಾನ
- ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಅಗಲವಾದ ಪಾತ್ರೆಗೆ ಹಾಕಿಕೊಂಡು ಸ್ವಲ್ಪ ನೀರನ್ನು ಬೆರೆಸಿ ಗಟ್ಟಿಯಾಗಿ ರೊಟ್ಟಿ ತಟ್ಟುವ ಹದಕ್ಕೆ ಕಲೆಸಿಕೊಳ್ಳಿ
- ಕಾವಲಿಯ ಮೇಲೆ ಕಲೆಸಿಕೊಂಡ ಹಿಟ್ಟಿನಿಂದ ರೊಟ್ಟಿಯನ್ನು ತಟ್ಟಿ ಸ್ವಲ್ಪ ಎಣ್ಣೆ ಹಾಕಿ
- ರೊಟ್ಟಿಯ ರುಚಿಯನ್ನು ಹೆಚ್ಚಿಸಲು ಸ್ವಲ್ಪ ಚೆಟ್ನೀಪುಡಿಯನ್ನು ಬೇಯುತ್ತಿರುವ ರೊಟ್ಟಿಯ ಮೇಲೆ ಉದುರಿಸಿ, ಎರಡೂ ಬದಿ ಚೆನ್ನಾಗಿ ಬೇಯಿಸಿದಲ್ಲಿ ರುಚಿ ರುಚಿಯಾದ ಮಸಾಲೆ ರೊಟ್ಟಿ ಸವಿಯಲು ಸಿದ್ಧ.
ಬಿಸಿ ಬಿಸಿಯಾದ ರೊಟ್ಟಿಯ ಜೊತೆ ಘಮ ಘಮವಾದ ಹಾಗಲಕಾಯಿ ಎಣ್ಣೆಗಾಯಿ ನೆಂಚಿಕೊಂಡು ತಿನ್ನುತ್ತಿದ್ದರೆ ಸ್ವರ್ಗಕ್ಕೇ ಕಿಚ್ಚು ಹತ್ತಿಸುವಂತಿರುತ್ತದೆ ಎಂದರೆ ಅತಿಶಯೋಕ್ತಿಏನಲ್ಲ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





