ಸೌತೆಯ ಸ್ಪೆಷಲ್ ಸಲಾಡ್
ಸಾಮಗ್ರಿ : 1 ಮಾಗಿದ ಮಾವಿನಹಣ್ಣಿನ ಹೋಳು, 1 ಸಣ್ಣ ತಾಜಾ ಸೌತೇಕಾಯಿಯ ಹೋಳು, ಸಣ್ಣಗೆ ಹೆಚ್ಚಿಕೊಂಡ 1-2 ಈರುಳ್ಳಿ, 2-3 ಹಸಿ ಮೆಣಸಿನಕಾಯಿ, ಸಣ್ಣಗೆ ಹೋಳು ಮಾಡಿಕೊಂಡ ಕೆಂಪು ಹಳದಿ ಹಸಿರು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ನಿಂಬೆರಸ ಚಾಟ್ ಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತೆಂಗಿನ ತುರಿ.
ವಿಧಾನ : ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿಕೊಂಡು 2-3 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ. ನಂತರ ಹೊರತೆಗೆದು ಉಪ್ಪು ಸೇರಿಸಿ, ತಕ್ಷಣ ಸವಿಯಲು ಕೊಡಿ.
ಸೌತೆಯ ದಿಢೀರ್ ಉಪ್ಪಿನಕಾಯಿ
ಸಾಮಗ್ರಿ : 1 ದೊಡ್ಡ ಸೌತೇಕಾಯಿ (ಬಿಲ್ಲೆಗಳಾಗಿ ಹೆಚ್ಚಿಡಿ), ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಸಕ್ಕರೆ, ವಿನಿಗರ್, ಉದ್ದುದ್ದಕ್ಕೆ ಹೆಚ್ಚಿಕೊಂಡ ಒಂದಿಷ್ಟು ಈರುಳ್ಳಿ ಕ್ಯಾಪ್ಸಿಕಂ (ಹಸಿರು ಹಳದಿ ಕೆಂಪು), 2-2 ಚಿಟಕಿ ಅರಿಶಿನ ಸಾಸುವೆ ಪುಡಿ, ಒಗ್ಗರಣೆಗೆ ಎಣ್ಣೆ, ಜೀರಿಗೆ, ಮೆಂತ್ಯ.
ವಿಧಾನ : ಒಂದು ಸಾಸ್ ಪ್ಯಾನ್‌ನಲ್ಲಿ ವಿನಿಗರ್, ಉಪ್ಪು, ಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. 10 ನಿಮಿಷಗಳ ನಂತರ ಕೆಳಗಿಳಿಸಿ ಸಾಮಗ್ರಿ ಆರಲು ಬಿಡಿ. ಒಂದು ಗಾಜಿನ ಬಟ್ಟಲಿಗೆ ಸೌತೇಕಾಯಿ ಹೋಳು ಮತ್ತಿತರ ಸಾಮಗ್ರಿ, ಮಸಾಲೆ ಬೆರೆಸಿಕೊಂಡು ಅದಕ್ಕೆ ವಿನಿಗರ್ ಮಿಶ್ರಣ ಬೆರೆಸಿಕೊಳ್ಳಿ. ನಂತರ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, 2 ತಾಸು ಫ್ರಿಜ್ ನಲ್ಲಿರಿಸಿ. ಆಮೇಲೆ ಅದಕ್ಕೆ ಒಗ್ಗರಣೆ ಕೊಟ್ಟು, ಅನ್ನ ಚಪಾತಿ ಜೊತೆ ಸವಿಯಲು ಕೊಡಿ.
ಸೌತೇಕಾಯಿ ರಾಯ್ತಾ
ಸಾಮಗ್ರಿ : 1 ಸಣ್ಣ ತಾಜಾ ಸೌತೇಕಾಯಿ (ತುರಿದಿಡಿ), 2-3 ಕಪ್ ಗಟ್ಟಿ ಕೆನೆ ಮೊಸರು, ಅರ್ಧರ್ಧ ಕಪ್ ದಾಳಿಂಬೆ ಸೀಡ್ಸ್, ದ್ರಾಕ್ಷಿ (ಉದ್ದಕ್ಕೆ ಹೆಚ್ಚಿಡಿ), 2-3 ಕಿವೀ ಫ್ರೂಟ್ (ತುಂಡರಿಸಿ), ರುಚಿಗೆ ತಕ್ಕಷ್ಟು ಉಪ್ಪು ವೈಟ್ ಪೆಪ್ಪರ್ ಪೌಡರ್, ಸಕ್ಕರೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿಕೊಂಡು, 2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.
ತೊಂಡೆಕಾಯಿ ನುಚ್ಚಿನುಂಡೆ
ಮೂಲ ಸಾಮಗ್ರಿ : 250 ಗ್ರಾಂ ತೊಂಡೆಕಾಯಿ (ಸಣ್ಣಗೆ ಹೆಚ್ಚಿಡಿ), ಸಣ್ಣ ರವೆ, ಕಡಲೆಹಿಟ್ಟು, ಗೋದಿಹಿಟ್ಟು (ತಲಾ ಅರ್ಧರ್ಧ ಕಪ್), ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 3-4 ಹಸಿ ಮೆಣಸಿನಕಾಯಿ, 1 ತುಂಡು ಶುಂಠಿ, 7-8 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಗರಂಮಸಾಲ, ಧನಿಯಾಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪಿನ ಪುಡಿ, ಸಕ್ಕರೆ, ನಿಂಬೆರಸ, ಅರ್ಧ ಸೌಟು ರೀಫೈಂಡ್ ಎಣ್ಣೆ, 2 ಚಿಟಕಿ ಸೋಡ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ.
ಒಗ್ಗರಣೆಗೆ ಸಾಮಗ್ರಿ : 2 ಚಮಚ ಎಣ್ಣೆ, ಒಂದಿಷ್ಟು ಕರಿಬೇವು, ಸಾಸುವೆ, ಜೀರಿಗೆ, ಎಳ್ಳು.
ಅಲಂಕರಿಸಲು ಸಾಮಗ್ರಿ : ಒಂದು ಗಿಟುಕು ತೆಂಗಿನ ತುರಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ತುಸು ಚಾಟ್ ಮಸಾಲ.