ಚಾಕಲೇಟ್ಶೇಕ್

ಸಾಮಗ್ರಿ : 1 ದೊಡ್ಡ ಬಾರ್‌ ಚಾಕಲೇಟ್‌, 3 ಸಣ್ಣ ಚಮಚ ಚಾಕಲೇಟ್‌ ಅಕ್ರೋಟ್‌ (ಹೇಝಲ್ ನಟ್ಸ್) (ರೆಡಿಮೇಡ್‌ ಲಭ್ಯ), 2 ಕಪ್ ಕ್ರೀಂ, 1 ಕಪ್‌ ಹಾಲು, ಅಲಂಕರಿಸಲು ಒಂದಿಷ್ಟು ಚಾಕಲೇಟ್‌ ಚಿಪ್ಸ್.

ವಿಧಾನ : ಚಾಕಲೇಟ್‌ ಬಾರ್‌ನ್ನು ಮೈಕ್ರೋವೇವ್ ‌ನಲ್ಲಿರಿಸಿ, ಕರಗಿಸಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಬೆರೆಸಿ ಚೆನ್ನಾಗಿ ಕದಡಿಕೊಂಡು 2-3 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಫ್ರ್ಯಾಪೆ ಟೀ

ಸಾಮಗ್ರಿ : 1 ಕಪ್‌ ನೀರು, ಅರ್ಧ ಕಪ್‌ ಹಾಲು, 1 ಚಮಚ ಟೀ ಪುಡಿ, 2 ಚಿಟಕಿ ದಾಲ್ಚಿನ್ನಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ, ಐಸ್ ಕ್ಯೂಬ್ಸ್.

ವಿಧಾನ : ಮೊದಲು ನೀರನ್ನು ಬಿಸಿ ಮಾಡಿ, ಟೀ ಪುಡಿ ಬೆರೆಸಿ ಅದನ್ನು 2-3 ನಿಮಿಷ ಚೆನ್ನಾಗಿ ಕುದಿಸಬೇಕು. ನಂತರ ಒಂದೊಂದಾಗಿ ಉಳಿದೆಲ್ಲ ಸಾಮಗ್ರಿ ಬೆರೆಸಿ, ಮತ್ತಷ್ಟು ಕುದಿಸಿ, ಕೆಳಗಿಳಿಸಿ ಆರಲು ಬಿಡಿ. ಇದನ್ನು ಸೋಸಿಕೊಂಡು, ಉದ್ದದ ಗ್ಲಾಸಿಗೆ ಸುರಿದು, ಐಸ್‌ ಕ್ಯೂಬ್ಸ್ ಬೆರೆಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

cookry-B

ಚೀಸ್ಫಿಂಗರ್ಸ್

ಸಾಮಗ್ರಿ : 1 ಕಪ್‌ ಮೈದಾ, 2-3 ಚಿಟಕಿ ಬೇಕಿಂಗ್‌ ಪೌಡರ್‌, ಒಂದಿಷ್ಟು ಬ್ರೆಡ್‌ ಕ್ರಂಬ್ಸ್, ಬ್ರೆಡ್‌ ಸ್ಲೈಸಸ್‌, ಹೆಚ್ಚಿದ 2-3 ಎಸಳು ಬೆಳ್ಳುಳ್ಳಿ, 3-4 ಹಸಿ ಮೆಣಸು, 1 ಮೊಟ್ಟೆ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, 1-2 ಚಿಟಕಿ ಹುರಿದು ಪುಡಿ ಮಾಡಿದ ಸಾಸುವೆ, ಅರ್ಧ ಕಪ್‌ ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಕರಿಯಲು ಎಣ್ಣೆ.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿಕೊಂಡು ಗೊಟಾಯಿಸಿ. ಇದಕ್ಕೆ ನೀರಿನೊಂದಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಬ್ರೆಡ್‌ ಸ್ಲೈಸ್‌ನ್ನು 3 ಭಾಗವಾಗಿ ಉದ್ದಕ್ಕೆ ಕತ್ತರಿಸಿ. ಪ್ರತಿಯೊಂದನ್ನೂ ಇದರಲ್ಲಿ ಅದ್ದಿಕೊಂಡು, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ನಂತರ ಚಿತ್ರದಲ್ಲಿರುವಂತೆ ಹೆಚ್ಚಿದ ಎಲೆಕೋಸು, ಟೊಮೇಟೊ ಕೆಚಪ್‌ ಜೊತೆ ಸವಿಯಲು ಕೊಡಿ.

cookry-C

ತೆಂಗಿನ ಐಸ್ಕ್ರೀಂ

ಸಾಮಗ್ರಿ : 1 ಗಿಟುಕು ತೆಂಗಿನ ತುರಿ, ಅರ್ಧ ಕಪ್‌ ಪುಡಿ ಸಕ್ಕರೆ, ಅರ್ಧ ಲೀ. ಕಾದಾರಿದ ಗಟ್ಟಿ ಹಾಲು.

ವಿಧಾನ : ಮೊದಲು ಮಿಕ್ಸಿಯಲ್ಲಿ ತೆಂಗಿನ ತುರಿ ನುಣ್ಣಗೆ ಮಾಡಿಕೊಂಡು ಅದಕ್ಕೆ ಸಕ್ಕರೆ, ಹಾಲು ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಫ್ರೀಝರಿನಲ್ಲಿಟ್ಟು ಸೆಟ್‌ ಆಗಲು ಬಿಡಿ. ನಂತರ ದೊಡ್ಡ ಗ್ಲಾಸ್‌ಗೆ ಸುರಿದು, ಗುಲಾಬಿ ದಳಗಳಿಂದ ಅಲಂಕರಿಸಿ ಸವಿಯಲು ಕೊಡಿ.

ಚೀಸ್ಮಶ್ರೂಂ ಸ್ಯಾಂಡ್ವಿಚ್

ಸಾಮಗ್ರಿ : 4 ಚಮಚ ಬೆಣ್ಣೆ, ಅರ್ಧ ಪ್ಯಾಕೆಟ್‌ ಹೆಚ್ಚಿದ ಮಶ್‌ರೂಂ, 1 ದೊಡ್ಡ ಈರುಳ್ಳಿ, 1-1 ಸಣ್ಣ ಚಮಚ ಮಿಕ್ಸ್ಡ್ ಹರ್ಬ್ಸ್, ಬೆಳ್ಳುಳ್ಳಿ, ಶುಂಠಿ ಪೇಸ್ಟ್. ಒಂದಿಷ್ಟು ತುರಿದ ಚೀಸ್‌, ಬ್ರೆಡ್‌ ಸ್ಲೈಸಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ