ಕಾಕೋರಿ ಕಬಾಬ್

ಸಾಮಗ್ರಿ : 1 ಕಿಲೋ ಮಟನ್‌ ಕೀಮಾ, 200 ಗ್ರಾಂ ಮಟನ್‌ ಕೊಬ್ಬು, 500 ಗ್ರಾಂ ಹೆಚ್ಚಿದ ಈರುಳ್ಳಿ, 100 ಗ್ರಾಂ ಗುಲಾಬಿ ದಳಗಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಏಲಕ್ಕಿ ಪುಡಿ, ಕಾಳುಮೆಣಸು, ಹಸಿಮೆಣಸು, ಬಿಳಿ ಮೆಣಸು, ಈರುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಗೋಡಂಬಿ ಪೇಸ್ಟ್, ಕೇದಗೆ ಎಸೆನ್ಸ್, 100 ಗ್ರಾಂ ಮೈದಾ.

ವಿಧಾನ : ಕೀಮಾಗೆ ಕೊಬ್ಬು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣಗೆ ಹೆಚ್ಚಿದ ಈರುಳ್ಳಿಗೆ ಹೆಚ್ಚಿದ ಗುಲಾಬಿ ದಳ, ತುಸು ಎಸೆನ್ಸ್, ಏಲಕ್ಕಿ, ಪುಡಿ ಮಾಡಿದ ಕಾಳುಮೆಣಸು, ಗೋಡಂಬಿ ಪೇಸ್ಟ್ ಸೇರಿಸಿ ಮಿಶ್ರ ಮಾಡಿ ಅದನ್ನು ಕೀಮಾಗೆ ಸೇರಿಸಿ ಬೆರೆಸಿಕೊಳ್ಳಿ. ನಂತರ ಜರಡಿಯಾಡಿದ ಮೈದಾ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, ಉಪ್ಪು, ಖಾರ, ವೈಟ್‌ ಪೆಪ್ಪರ್‌ಪುಡಿ, ಉಳಿದ ಎಸೆನ್ಸ್ ಮಿಶ್ರ ಮಾಡಿ ಇದನ್ನು ಮತ್ತೆ ಕೀಮಾಗೆ ಬೆರೆಸಬೇಕು.

ಈ ಮಿಶ್ರಣವನ್ನು ಕಬಾಬ್‌ ರಾಡ್‌ಗೆ ಸಿಗಿಸಿ, ಚೆನ್ನಾಗಿ ಗ್ರಿಲ್ ‌ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ. ಪರೋಟ ಜೊತೆ ಸವಿಯಲು ಕೊಡಿ.

ಗೋಟಿ ಕಬಾಬ್

ಸಾಮಗ್ರಿ : 1 ಕಿಲೋ ಮಟನ್‌ ಕೀಮಾ, 50 ಗ್ರಾಂ ಹಸಿ ಪರಂಗಿಕಾಯಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್, ಚಂದನದ ಪುಡಿ, ಗರಂಮಸಾಲ, ಚಾಟ್‌ ಮಸಾಲ, ಕೇದಗೆ ಎಸೆನ್ಸ್, ಸೆಂಟ್‌, ಕಡಲೆಬೀಜ (ಹುರಿದ ಪುಡಿ ಮಾಡಿದ್ದು), ಹೆಚ್ಚಿ ಬಾಡಿಸಿ ಪೇಸ್ಟ್ ಮಾಡಿದ ಈರುಳ್ಳಿ, ತುಸು ತುಪ್ಪ, ಕರಿಯಲು ಎಣ್ಣೆ.

ವಿಧಾನ : ಲವಂಗ ಬಿಟ್ಟು ಉಳಿದೆಲ್ಲ ಸಾಮಗ್ರಿ ಸೇರಿಸಿ ಕೀಮಾದ ಕಬಾಬ್‌ ಮಾಡಿಡಿ. ಲವಂಗವನ್ನು ತುಪ್ಪದಲ್ಲಿ ಹುರಿದು ಬೇರೆಯಾಗಿಡಿ. ನಂತರ ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕಬಾಬ್‌ ಮಿಶ್ರಣವನ್ನು ಪಕೋಡ ತರಹ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಚಪಾತಿಯ ಸುರುಳಿಗೆ 1-1 ಕಬಾಬ್‌ ಇರಿಸಿ, ಮೇಲೆ ಲವಂಗ ಸಿಗಿಸಿ, ಮೆಂತ್ಯ ಸೊಪ್ಪಿನಿಂದ ಅಲಂಕರಿಸಿ ಸವಿಯಲು ಕೊಡಿ.

ಬ್ರೆಡ್‌ ಮಿಠಾಯಿ

ಸಾಮಗ್ರಿ : 1-2 ಬ್ರೆಡ್‌ ಸ್ಲೈಸ್‌, 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, ಹಾಲಲ್ಲಿ ನೆನೆಸಿದ ತುಸು ಕೇಸರಿ, 4-5 ಹನಿ ಕೇದಗೆ ಎಸೆನ್ಸ್ 2 ಹನಿ ಸೆಂಟ್‌, 200 ಗ್ರಾಂ ಖೋವಾ, 250 ಗ್ರಾಂ ಸಕ್ಕರೆ, 25 ಗ್ರಾಂ ಬಾದಾಮಿ, ಕರಿಯಲು ತುಪ್ಪ.

ವಿಧಾನ : ಬ್ರೆಡ್‌ ಸ್ಲೈಸ್‌ನ್ನು (ಸ್ಟೀಲ್ ‌ಬಟ್ಟಲು ಬಳಸಿ) ಗುಂಡಗೆ ಕತ್ತರಿಸಿ, ಕಾದ ತುಪ್ಪದಲ್ಲಿ ಕರಿದು ಬೇರೆ ಇಡಿ. ಹಾಲು ಕಾಯಿಸಲು ಇಡಿ. ಅದು ಉಕ್ಕಿದಾಗ ಮಂದ ಉರಿ ಮಾಡಿ ಕೇಸರಿ, ಎಸೆನ್ಸ್, ಸೆಂಟ್‌ ಹಾಕಿ ಅರ್ಧದಷ್ಟು ಹಿಂಗಿಸಿ. ಇದರ ತುಸು ಭಾಗವನ್ನು ಬ್ರೆಡ್‌ ಮೇಲೆ ಹಾಕಿಡಿ. ಉಳಿದ ಭಾಗಕ್ಕೆ ಖೋವಾ, ಸಕ್ಕರೆ ಹಾಕಿ ಮತ್ತೆ ಕೈಯಾಡಿಸುತ್ತಾ ಕುದಿಸಬೇಕು. ಹೀಗೆ ಪರಿಪಕ್ವವಾದ ಕುದಿ ಹಾಲನ್ನು ಅದೇ ಬ್ರೆಡ್‌ ಮೇಲೆ ಹಾಕಿ ಅರ್ಧ ಗಂಟೆ ಹಾಗೇ ಬಿಡಿ. ಇದರ ಮೇಲೆ ಬಾದಾಮಿ ಚೂರು ಉದುರಿಸಿ, ತಣ್ಣಗಾದ ಮೇಲೆ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ