ಕೋಶಾ ಮಾಂಗ್‌ ಶೋ

ಸಾಮಗ್ರಿ : 500 ಗ್ರಾಂ ಮಟನ್‌ ಪೀಸಸ್‌, 2 ಸೌಟು ರೀಫೈಂಡ್‌ ಎಣ್ಣೆ, ತುಸು ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹುಳಿ ಮೊಸರು, ಹೆಚ್ಚಿದ 4-5 ಈರುಳ್ಳಿ.

ವಿಧಾನ : ಮೊದಲು ಪ್ರೆಷರ್‌ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಅರಿಶಿನ ಹಾಕಿ ಚೆನ್ನಾಗಿ ಕೆದಕಬೇಕು. ಆಮೇಲೆ ಮಟನ್‌ ಪೀಸಸ್‌ ಹಾಕಿ ಚೆನ್ನಾಗಿ ಫ್ರೈ ಮಾಡಿ. ಆಮೇಲೆ ಮೊಸರು ಬೆರೆಸಿ ಮಂದ ಉರಿಯಲ್ಲಿ ಕುದಿಸಿ. ನಂತರ ಮುಚ್ಚಳ ಮುಚ್ಚಿರಿಸಿ 4-5 ಸೀಟಿ ಬರುವಂತೆ ಕೂಗಿಸಿ. ಬಿಸಿ ಇರುವಾಗಲೇ ಇದನ್ನು ಅನ್ನದ ಜೊತೆ ಸವಿಯಲು ಕೊಡಿ.

ಸ್ವಾದಿಷ್ಟ ಸಂದೇಶ್

ಸಾಮಗ್ರಿ : 150 ಗ್ರಾಂ ಪನೀರ್‌, ಅರ್ಧ ಕಪ್‌ ಮಸೆದ ಖೋವಾ, ತುಸು ಏಲಕ್ಕಿ ಪುಡಿ, ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್‌ಸಕ್ಕರೆ, ಉದ್ದಕ್ಕೆ ಹೆಚ್ಚಿದ ತುಸು ಬಾದಾಮಿ ಚೂರು.

ವಿಧಾನ : ಮೊದಲು ಪನೀರ್‌ ಹಾಗೂ ಖೋವಾ ಎರಡನ್ನೂ ಬೇರೆ ಬೇರೆಯಾಗಿ ಮಸೆಯಿರಿ. ಆಮೇಲೆ ಇವೆರಡರ ಜೊತೆ ಸಕ್ಕರೆ ಬೆರೆಸಿ ಮತ್ತೆ ಮತ್ತೆ ಮಸೆದು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ, ಅರ್ಧ ಅಂಗುಲದ  ಪದರ ಬರುವಂತೆ ತಟ್ಟಿ ರೆಡ್ಡಿ ಮಾಡಿ. ಆಮೇಲೆ ಇದನ್ನು ಫ್ರಿಜ್‌ನಲ್ಲಿಟ್ಟು ಚೆನ್ನಾಗಿ ಸೆಟ್‌ ಆಗಲು ಬಿಡಿ. ನಂತರ ಮೇಲಿನ ಚಿತ್ರದಲ್ಲಿರುವಂತೆ ಗುಂಡಗೆ ಅಥವಾ ಡೈಮಂಡ್‌ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ.

ಮಿಷ್ಟಿ ದೋಯಿ

ಸಾಮಗ್ರಿ : 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 300 ಗ್ರಾಂ ಮುದ್ದೆ ಬೆಲ್ಲ, 2 ಚಮಚ ಮೊಸರು.

ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕಾಯಿಸಿ. ನಂತರ ಇದನ್ನು ಮಂದ ಉರಿಯಲ್ಲಿ ಕುದಿಸುತ್ತಾ, ಇದರ ಮುಕ್ಕಾಲು ಭಾಗ ಹಿಂಗುವಂತೆ ಮಾಡಿ. ನಂತರ ಒಂದು ಬಾಣಲೆಯಲ್ಲಿ ಪುಡಿ ಮಾಡಿದ ಮುದ್ದೆ ಬೆಲ್ಲ ಹಾಕಿ, ತುಸುವೇ ನೀರು ಬೆರೆಸಿ ಕರಗುವಂತೆ ಮಾಡಿ. ಇದನ್ನು ಕುದಿ ಹಾಲಿಗೆ ಬೆರೆಸಿಕೊಳ್ಳಿ. 5 ನಿಮಿಷ ಕೈಯಾಡಿಸಿ ಕೆಳಗಿಳಿಸಿ ಆರಲು ಬಿಡಿ. ತುಸು ಬೆಚ್ಚಗಿರುವಾಗಲೇ ಇದಕ್ಕೆ ಮೊಸರು ಬೆರೆಸಿ ಹೆಪ್ಪು ಹಾಕಿ. 2-3 ತಾಸು ಇದನ್ನು ಹಾಗೇ ಬಿಟ್ಟರೆ, ಗಟ್ಟಿ ಕೆನೆ ಮೊಸರು ಸಿದ್ಧವಾಗುತ್ತದೆ. ಸಿಹಿಯಾದ ಇದುವೇ ಮಿಷ್ಟಿ ದೋಯಿ! ಇದನ್ನು 2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

ಕೋಲ್ಕತಾ ಬಿರಿಯಾನಿ

ಬಿರಿಯಾನಿ ಮಸಾಲೆ ಸಾಮಗ್ರಿ : ಒಂದಿಷ್ಟು ಏಲಕ್ಕಿ, ಲವಂಗ, ಚಕ್ಕೆ, ತುಸು ತೇದ ಜಾಯಿಕಾಯಿ ರಸ, ಸ್ಟಾರ್‌ ಅನೀಸ್‌, ಜೀರಿಗೆ, ಎಳ್ಳು, ಕಾಳುಮೆಣಸು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ