ಜಂಗ್ಲಿ ಗೋಶ್ತ್

ಸಾಮಗ್ರಿ : 500 ಗ್ರಾಂ ಮಟನ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಈರುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಅರ್ಧ ಸೌಟು ತುಪ್ಪ ಅಥವಾ ಆಲಿವ್ ಎಣ್ಣೆ.

ವಿಧಾನ : ಕುಕ್ಕರ್‌ಗೆ ತುಪ್ಪ ಹಾಕಿ ಬಿಸಿ ಮಾಡಿ. ಆಮೇಲೆ ಇದಕ್ಕೆ ಎಲ್ಲಾ ಪೇಸ್ಟ್ ಗಳನ್ನೂ ಹಾಕಿ ನಿಧಾನವಾಗಿ ಕೆದಕಬೇಕು. ಆಮೇಲೆ ಉಪ್ಪು, ಖಾರ ಸೇರಿಸಿ. ಮಟನ್‌ ಪೀಸಸ್‌ ಹಾಕಿ 5 ನಿಮಿಷ ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ 1 ಕಪ್‌ ನೀರು ಬೆರೆಸಿ, ಹಬೆಯಲ್ಲಿ ಬೇಯಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಚಪಾತಿ, ಅನ್ನದ ಜೊತೆ ಸವಿಯಿರಿ.

ಕಾಶ್ಮೀರಿ ದಮ್ ಆಲೂ

ಸಾಮಗ್ರಿ : 400 ಗ್ರಾಂ ಬೇಬಿ ಪೊಟೇಟೊ, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಜೀರಿಗೆ, ಸೋಂಪು, ಲವಂಗ, ಏಲಕ್ಕಿ, ಮೊಗ್ಗು, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪುಡಿ, ಕಾಶ್ಮೀರಿ ಮಿರ್ಚ್‌ ಮಸಾಲ (ರೆಡಿಮೇಡ್‌ ಲಭ್ಯ), ಅರಿಶಿನ, 1 ಕಪ್‌ಹುಳಿ ಮೊಸರು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಆಲೂ ಬೇಯಿಸಿ, ಸಿಪ್ಪೆ ಸುಲಿದಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಇವನ್ನು ಶ್ಯಾಲೋ ಫ್ರೈ ಮಾಡಿ ಬೇರೆಯಾಗಿಡಿ. ಅದೇ ಎಣ್ಣೆಗೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಆಮೇಲೆ ಧನಿಯಾಪುಡಿ, ಅರಿಶಿನ, ಕಾಶ್ಮೀರಿ ಮಿರ್ಚ್‌ ಮಸಾಲ ಹಾಕಿ ಕೆದಕಬೇಕು. ನಂತರ ಉಪ್ಪು, ಮೊಸರು ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ಆಮೇಲೆ ಆಲೂ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ಗ್ರೇವಿ ನೀವು ಬಯಸಿದಷ್ಟು ತೆಳ್ಳಗಾಗಲು ಇನ್ನಷ್ಟು ಮೊಸರು ಬೆರೆಸಿ ಕುದಿಸಬೇಕು. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಅನ್ನ, ಪೂರಿ, ದೋಸೆ ಜೊತೆ ಸವಿಯಲು ಕೊಡಿ.

ಹುರುಳಿಕಾಳಿನ ತೊವ್ವೆ

ಸಾಮಗ್ರಿ : 1 ಕಪ್‌ ಹುರುಳಿಕಾಳು, 3-4 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊ.ಸೊಪ್ಪು, 4 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಅನಾರ್‌ದಾನಾ ಪೌಡರ್‌ (ದಾಳಿಂಬೆ ಬೀಜದ ಪುಡಿ, ರೆಡಿಮೇಡ್‌ ಲಭ್ಯ), ಮೊಸರು, ಈರುಳ್ಳಿ ಬಿಲ್ಲೆಗಳು.

ವಿಧಾನ : ಹಿಂದಿನ ರಾತ್ರಿ ಹುರುಳಿಕಾಳು ನೆನೆಹಾಕಿ ಮಾರನೇ ಬೆಳಗ್ಗೆ ಚಿಟಕಿ ಉಪ್ಪು ಹಾಕಿ ಬೇಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು, ಶುಂಠಿ ಹಾಕಿ ಬಾಡಿಸಿ. ನಂತರ ಕಾಳನ್ನು (ಬಸಿಯದೆ ನೀರು ಸಮೇತ) ಸೇರಿಸಿ ಬಾಡಿಸಿ. ಮೊಸರು, ಉಪ್ಪು, ಖಾರ, ಅನಾರ್‌ದಾನಾ ಪೌಡರ್‌ ಬೆರೆಸಿ ಚೆನ್ನಾಗಿ ಕುದಿಸಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಇದರ ಮೇಲೆ ಈರುಳ್ಳಿ ಬಿಲ್ಲೆ, ಕೊ.ಸೊಪ್ಪು, ಉದ್ದಕ್ಕೆ ಸೀಳಿದ ಹಸಿ ಮೆಣಸು ತೇಲಿಬಿಟ್ಟು ಬಿಸಿ ಬಿಸಿ ಅನ್ನ, ರೊಟ್ಟಿ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ