‌ಕಾರ್ನ್‌ ರೋಲ್

ಸಾಮಗ್ರಿ : 2 ಕಪ್‌ ಬೆಂದ ತಾಜಾ ಜೋಳದ ಕಾಳು, 3-4 ಹಸಿಮೆಣಸು, 1 ತುಂಡು ಶುಂಠಿ, 2 ಬೆಂದ ಆಲೂ, 3-4 ಚಮಚ ಕಾರ್ನ್‌ಫ್ಲೇಕ್ಸ್, 2-3 ಚಮಚ ಚೀಸ್‌ ಸ್ಪ್ರೆಡ್‌, 2 ಈರುಳ್ಳಿ, 1-2 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಿಟಕಿ ಅರಿಶಿನ, ಕರಿಯಲು ಎಣ್ಣೆ.

ವಿಧಾನ : ಬೆಂದ ಕಾಳನ್ನು ಮಿಕ್ಸಿಯಲ್ಲಿ ನೀರು ಬೆರೆಸದೆ ತಿರುವಿರಿ. ಇದಕ್ಕೆ ಹೆಚ್ಚಿದ ಹಸಿಮೆಣಸು, ಬೇಯಿಸಿ ಮಸೆದ ಆಲೂ, ಉಪ್ಪು, ಖಾರ, ಹೆಚ್ಚಿದ  ಶುಂಠಿ ಹಾಕಿ ಪಕೋಡ ಹದಕ್ಕೆ ಬರುವಂತೆ ಕಲಸಿಡಿ. ಡ್ರೈ ಮಿಕ್ಸಿಯಲ್ಲಿ ಕಾರ್ನ್‌ಫ್ಲೇಕ್ಸ್ ನ್ನು ತರಿತರಿಯಾಗಿಸಿ. ಇದಕ್ಕೆ ಚೀಸ್‌ ಸ್ಪ್ರೆಡ್‌, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ತುಸು ಉಪ್ಪು, ಖಾರ, ಹಾಕಿ ಮಿಶ್ರಣ ಮಾಡಿ. ಚಿತ್ರದಲ್ಲಿರುವಂತೆ ಕಾಳಿನ ಮಿಶ್ರಣವನ್ನು ಸಣ್ಣ ನಿಂಬೆ ಆಕಾರದಲ್ಲಿ ಉಂಡೆಗಳಾಗಿಸಿ. ಮಧ್ಯದಲ್ಲಿ ರಂಧ್ರ ಮಾಡಿ ಅದಕ್ಕೆ 1-1 ಚಮಚ ಕಾರ್ನ್‌ಫ್ಲೇಕ್ಸ್ ಮಿಶ್ರಣ ತುಂಬಿಸಿ. ನಂತರ ಇವನ್ನು ತಟ್ಟಿಕೊಂಡು ಟಿಕ್ಕಿ ತರಹ ಆಕಾರ ಕೊಡಿ. ಹೀಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಇರುವಾಗಲೇ ಟೊಮೇಟೊ ಸಾಸ್‌, ಕಾಫಿಟೀ ಜೊತೆ ಸವಿಯಲು ಕೊಡಿ.

ಕ್ರಿಸ್ಪಿ ಆ್ಯಪಲ್

ಸಾಮಗ್ರಿ : 2 ಸೇಬು, 4-5 ಚಮಚ ಕಾರ್ನ್‌ಫ್ಲೇಕ್ಸ್, 2 ಚಮಚ ಬೆಣ್ಣೆ, 1 ದೊಡ್ಡ ಚಮಚ ಅಖರೋಟು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ ಅರ್ಧ ಕಪ್‌), ಅರ್ಧ ಕಪ್‌ಸಕ್ಕರೆ, 1 ಕಪ್‌ ಬ್ರೆಂಡ್‌ ಕ್ರಂಬ್ಸ್, ಕರಿಯಲು ತುಸು ತುಪ್ಪ.

ವಿಧಾನ : ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ಕಾರ್ನ್‌ಫ್ಲೇಕ್ಸ್ ಹಾಕಿ ಹುರಿಯಿರಿ. ಇದಕ್ಕೆ ತುರಿದ ಸೇಬು, ಸಕ್ಕರೆ, ಡ್ರೈ ಫ್ರೂಟ್ಸ್ ಸೇರಿಸಿ ಬಾಡಿಸಬೇಕು. ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಬ್ರೆಡ್‌ ಕ್ರಂಬ್ಸ್ ಉದುರಿಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಸಣ್ಣ  ಉಂಡೆ ಕಟ್ಟಿ ಚಿತ್ರದಲ್ಲಿರುವಂತೆ ಆಕಾರ ಕೊಡಿ. ನಂತರ ಇವನ್ನು ಒಂದೊಂದಾಗಿ ತುಪ್ಪ ಹಾಕಿ ಶ್ಯಾಲೋ ಫ್ರೈ ಮಾಡಬೇಕು. ಚಿತ್ರದಂತೆ ಅಲಂಕರಿಸಿ ಸವಿಯಲು ಕೊಡಿ.

ಬೇಕ್ಡ್ ಸ್ಪೈಸಿ ಆಲೂ

ಸಾಮಗ್ರಿ : 2-3 ಆಲೂ, 2-3 ಹಸಿಮೆಣಸು, 2 ಚಮಚ ಕ್ರೀಂ, 1 ಚಮಚ ಬೆಣ್ಣೆ, 4 ಚಮಚ ಚೀಸ್‌, ಅರ್ಧರ್ಧ ಕಪ್‌ ಹುಳಿ ಮೊಸರು, ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್.

ವಿಧಾನ : ಒಂದು ಬೇಸನ್ನಿಗೆ ಮೊಸರು, ಕ್ರೀಂ, ತುರಿದ ಚೀಸ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಡಲೆಹಿಟ್ಟು, ಉಪ್ಪು, ಹೆಚ್ಚಿದ ಹಸಿ ಮೆಣಸು ಹಾಕಿ ಚೆನ್ನಾಗಿ ಗೊಟಾಯಿಸಿ. ಆಲೂ ಸಿಪ್ಪೆ ಹೆರೆದು ಗೋಲಾಕಾರದ ದಪ್ಪ ಬಿಲ್ಲೆಗಳಾಗಿ ಹೆಚ್ಚಿಡಿ. ಇದನ್ನು ಉಪ್ಪು ಹಾಕಿದ ಕುದಿವ ನೀರಿನಲ್ಲಿ 1-2 ನಿಮಿಷ ಬ್ಲ್ಯಾಂಚ್‌ ಮಾಡಿ. ಬೇಕಿಂಗ್‌ ಟ್ರೇಯಲ್ಲಿ ಜಿಡ್ಡು ಸವರಿ ಅದರಲ್ಲಿ ಈ ಆಲೂ ಬಿಲ್ಲೆ ಹರಡಿ, ಮೇಲೆ ಚೀಸ್‌ ಮಿಶ್ರಣ ಹರಡಿರಿ. ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 8-10 ನಿಮಿಷ ಬೇಕ್‌ ಮಾಡಿ. ನಂತರ ತುಸು ತುಪ್ಪ ಸವರಿ, ಉಪ್ಪುಖಾರ ಉದುರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ