ಹೆಮ್ಮಾರಿ ಕೊರೋನಾದ ಈ ಅವಧಿಯಲ್ಲಿ ಜೀವಿಸುವ ವಿಧಾನಗಳು ಬದಲಾಗಿವೆ. ಅದರ ಜೊತೆಗೆ ಹಲವು ಸವಾಲುಗಳನ್ನು ಎದುರಿಸಬೇಕಾದ ಸಂಬಂಧಗಳು ಬಂದಿವೆ. ಈ ಹೊಸ ಬದಲಾವಣೆಗಳು ಹಾಗೂ ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.......
ಕೊರೋನಾ ಎಂತಹ ಒಂದು ಅವಧಿಯೆಂದರೆ, ಅದರ ಬಗ್ಗೆ ಯಾರೊಬ್ಬರೂ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ಕೊರೋನಾ ವೈರಸ್‌ನ ಹಾವಳಿ ಪರಿಸ್ಥಿತಿಯನ್ನು ಹೇಗೆ ಮಾಡಿಬಿಟ್ಟಿದೆಯೆಂದರೆ, ಸಾಮಾಜಿಕ ಜೀವನ ಎಂದು ಕರೆಯಿಸಿಕೊಳ್ಳುವ ಮನುಷ್ಯ ಮನುಷ್ಯನನ್ನು ಅಸ್ಪೃಶ್ಯರಂತೆ ಕಾಣುವ ಹಾಗೆ ಮಾಡಿದೆ. ಇದು ಎಂತಹ ಒಂದು ಸಮಸ್ಯೆಯೆಂದರೆ, ಸಮಸ್ಯೆಗಳು ಹೊಸದಾಗಿದ್ದು, ಅದರ ಪರಿಹಾರ ಕೂಡ ಹೊಸದಾಗಿವೆ. ಕೊರೋನಾ ರೋಗದ ಹಾವಳಿ ಅಷ್ಟು ಬೇಗ ಹೋಗುವಂಥದ್ದು ಅಲ್ಲ. ಹೀಗಾಗಿ ಕೊರೋನಾ ಕಾಲಕ್ಕಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಕೂಡ ನಮ್ಮೊಂದಿಗೆ ಬಹಳ ದಿನಗಳ ಕಾಲ ಹಾಗೆಯೇ ಉಳಿದುಕೊಳ್ಳಲಿವೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಬರುತ್ತಿರುವ ಬದಲಾವಣೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯಲಿದ್ದು ಅವುಗಳ ಮೇಲೊಮ್ಮೆ ಗಮನ ಹರಿಸೋಣ.
ಡಿಜಿಟಲ್ ಕ್ರಾಂತಿ ಲಾಕ್‌ಡೌನ್ ಸಮಯದಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಇಂಟರ್‌ನೆಟ್‌ನ ಅವಲಂಬನೆ ಬಹಳ ಹೆಚ್ಚಿನ ಪ್ರಮಾಣದಲ್ಲಿ ಆಯಿತು. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಇವು ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ ಲಾಕ್‌ಡೌನ್ ಸಮಯದಲ್ಲಿ ಇಂಟರ್‌ನೆಟ್ ಬಳಕೆಯ ಸಮಯ ಶೇ.13ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ಹೊಸ ಧಾರಾವಾಹಿ ಕಂತುಗಳ ಶೂಟಿಂಗ್ ಆಗದೇ ಇದ್ದುದರಿಂದ ಟಿವಿಯಲ್ಲಿ ಅದೇ ಹಿಂದಿನ ಕಂತುಗಳನ್ನು ಮರುಪ್ರಸಾರ ಮಾಡಲಾಯಿತು. ಹೀಗಾಗಿ ಜನರು ಮನರಂಜನೆಗಾಗಿ ಇಂಟರ್‌ನೆಟ್‌ನ ಸಹಾಯ ಪಡೆಯುವಂತಾಯಿತು. ಸುಮಾರು 1.5 ಕೋಟಿ ಜನರು ನೆಟ್‌ಫ್ಲಿಕ್ಸ್ನ ಸಂಪರ್ಕ ಪಡೆದುಕೊಂಡಿರುವುದು ಇಂಟರ್‌ನೆಟ್‌ನ ಅವಲಂಬನೆಯನ್ನು ಬಿಂಬಿಸುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಈಗ ಆನ್‌ಲೈನ್ ಕ್ಲಾಸ್‌ಗಳದ್ದೇ ಮಾತು. ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ ಈಗ ದೂರದ ಮಾತಾಗಿ ಉಳಿದಿಲ್ಲ. ಭವಿಷ್ಯದಲ್ಲಿ ಈಗ ವಿಚಾರ ವಿಮರ್ಶೆ ಮಾಡಿ ಶಿಕ್ಷಣದ ಕೆಲವು ಹಂತಗಳಲ್ಲಿ ಆನ್‌ಲೈನ್‌ನಲ್ಲಿಯೇ ಪಾಠ ಮಾಡಬಹುದಾಗಿದೆ.
ಈಗ ಬಹಳಷ್ಟು ಕಛೇರಿಗಳ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್' ಮಾಡುತ್ತಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ವಲಯದ ಕಛೇರಿಗಳ ಮುಖ್ಯಸ್ಥರು ತಮ್ಮ ಉದ್ಯೋಗಿಗಳ ಜೊತೆ ಆನ್‌ಲೈನ್‌ನಲ್ಲಿಯೇ ಮೀಟಿಂಗ್ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ತನ್ನ ವಿಭಿನ್ನ ಇಲಾಖೆಗಳ ಮೇಲೆ ಆನ್‌ಲೈನ್ ಕಣ್ಗಾವಲು ಇಟ್ಟಿದೆ. ವಿಡಿಯೋ ಕಾನ್‌ಫ್ರೆನ್ಸಿಂಗ್‌ನ ಈ ವ್ಯವಸ್ಥೆಯನ್ನು ಮುಂಬರುವ ವರ್ಷಗಳಲ್ಲಿ ಒಂದು ಹಂತದ ತನಕ ಬಳಸಲಾಗುತ್ತದೆ.
ಸರ್ಕಾರಿ ಅಧಿಕಾರಿ ದೀಪಕ್ ಹೇಳುವುದೇನೆಂದರೆ, ಮುಂಬರುವ ದಿನಗಳಲ್ಲಿ ಮೀಟಿಂಗ್‌ಗಳು ಆನ್‌ಲೈನ್ ಆಗಬಹುದು. ಹಾಗಾಗಿ ಸಮಯ ಹಾಗೂ ಹಣ ಉಳಿತಾಯ ಆಗಬಹುದು.
ತಂತ್ರಜ್ಞಾನದ ಹೊಸ ಪ್ರೋಗ್ರಾಂಗಳಿಂದ ಸಿನಿಮಾರಂಗ ಕೂಡ ಹಿಂದಿಲ್ಲ. ತಜ್ಞರ ಪ್ರಕಾರ, ಲಾಕ್‌ಡೌನ್ ಬಳಿಕ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳ ಶೂಟಿಂಗ್ ಶುರುವಾಗಿದ್ದು, ಸಾಮಾಜಿಕ ಅಂತರದ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತಿದೆ.
ಮಾಸ್ಕ್ ಬಳಕೆ