ಕೊರೋನಾದ ಹಾವಳಿಯಿಂದ ಬಹಳಷ್ಟು ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಅವರ ದೈಹಿಕ ಚಟುಟಿಕೆಗೆ ಕಡಿವಾಣ ಬಿದ್ದಿದೆ. ಅದರ ನೇರ ಪರಿಣಾಮ ನಮ್ಮ ಮೂಳೆಗಳ ಮೇಲೆ ಆಗುತ್ತಿದೆ. ನಮ್ಮ ಮೂಳೆಗಳು ದುರ್ಬಲಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ ಒಂದಿಷ್ಟು ತಿಳಿದುಕೊಳ್ಳಿ.......

ಕೊರೋನಾ ಒಂದು ಮಹಾಮಾರಿಯ ರೂಪ ಪಡೆದುಕೊಂಡಿದೆ. ಹೀಗಾಗಿ ಬಹಳಷ್ಟು ಜನರು ಬೇರೆ ಬೇರೆ ತೆರನಾದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಗಮನಕೊಡುವುದು ಅತ್ಯಂತ  ಅವಶ್ಯವಾಗಿದೆ. ಲಾಕ್‌ಡೌನ್‌ ಬಳಿಕ ಅನ್‌ಲಾಕ್‌ ದಿನಗಳು ಶುರುವಾದವು. ಆದರೂ ಕೆಲವು ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ನೇರ ಪರಿಣಾಮ ಮೂಳೆಗಳ ಮೇಲೆ ಬೀಳುತ್ತಿದೆ.

ಮೂಳೆಗಳು ದೇಹದ ವ್ಯವಸ್ಥೆಯ ಅಡಿಪಾಯವಾಗಿವೆ. ಆದರೆ ಮಕ್ಕಳು ಹಾಗೂ ವೃದ್ಧರು ತಪ್ಪು ಜೀನಶೈಲಿಯಿಂದಾಗಿ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕೊರೋನಾದಿಂದಾಗಿ ನಾವು ಮನೆಯಲ್ಲಿಯೇ  ಉಳಿಯಬೇಕಾದ ಸಂದರ್ಭದಲ್ಲಿ ಅವುಗಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಮೂಳೆತಜ್ಞ ಡಾ. ಸತ್ಯಂ ಭಾಸ್ಕರ್‌ ಇಲ್ಲಿ ಉತ್ತರಿಸಿದ್ದಾರೆ :

ಕೊರೋನಾದ ಕಾರಣದಿಂದಾಗಿ ಎಲ್ಲರ ಜೀವನದಲ್ಲೂ ಸಾಕಷ್ಟು ಬದಲಾವಣೆ ಬಂದಿದೆ. ಮೊದಲು ಜನರು ವರ್ಕ್‌ಔಟ್‌ಗಾಗಿ ಗಾರ್ಡನ್‌, ಜಿಮ್ ಗೆ ಹೋಗುತ್ತಿದ್ದರು. ಆದರೆ ಈಗ ಅದಾವುದೂ ಇಲ್ಲ. ಜನರು ದೈಹಿಕ ಚಟುವಟಿಕೆಗಳಿಂದ ದೂರಾಗುತ್ತಿದ್ದಾರೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?

ಜನರು ದೈಹಿಕ ಚಟುವಟಿಕೆಯಿಂದ ದೂರವಾಗಿಲ್ಲ. ಅವರು ಉದ್ದೇಶಪೂರ್ವಕವಾಗಿ ತಮ್ಮನ್ನು ತಾವು ದೂರ ಇಟ್ಟುಕೊಂಡಿದ್ದಾರೆ. ನಾವು ಇಷ್ಟಪಟ್ಟರೆ ಮನೆಯಲ್ಲಿ ಅದರಲ್ಲೂ ಬಾಲ್ಕನಿಯಲ್ಲಿ ಸುಲಭಾಗಿ ವ್ಯಾಯಾಮ ಮಾಡಬಹುದು. ಈ ವ್ಯಾಯಾಮದಿಂದ ಮೂಳೆಗಳಿಗೆ ಲಾಭ ದೊರೆಯುತ್ತದೆ. ಅದರಿಂದ ನಮ್ಮ ದೇಹ ಚೆನ್ನಾಗಿ ಚಲನೆ ಪಡೆದುಕೊಳ್ಳುತ್ತದೆ. ಮೂಳೆಗಳನ್ನು ಆರೋಗ್ಯಕರವಾಗಿಡಲು ಎಲ್ಲಕ್ಕೂ ಉತ್ತಮ ವ್ಯಾಯಾಮವೆಂದರೆ ಮುಖ ಮೇಲೆ ಮಾಡಿಕೊಂಡು ನೇರವಾಗಿ ಮಲಗಿ. ನಿಮ್ಮ ಬೆನ್ನಿನ ಕೆಳಭಾಗದಲ್ಲಿ ಒಂದು ಸಣ್ಣ ದಿಂಬು ಇಟ್ಟುಕೊಳ್ಳಿ. ಪುನಃ 2 ನಿಮಿಷಗಳ ಕಾಲ ನೇರವಾಗಿ ಮಲಗಿಕೊಳ್ಳಿ. ಇದನ್ನು `ಸ್ಪೈನ್‌ ಎಕ್ಸ್ ಟೆನ್ಶನ್‌' ಎಂದು ಹೇಳಲಾಗುತ್ತದೆ. ನೀವು ಈ ಎಕ್ಸರ್‌ಸೈಜ್‌ನ್ನು ಮಲಗುವ ಮುಂಚೆ ದಿನ ಮಾಡುತ್ತಾ ಇದ್ದರೆ, ನಿಮ್ಮ ಬೆನ್ನುನೋವು ಹೆಚ್ಚು ಕಡಿಮೆ ಹೊರಟೇ ಹೋಗುತ್ತದೆ. ಇದನ್ನು ಪ್ರತಿದಿನ 10-15 ನಿಮಿಷಗಳ ಕಾಲ ಮಾಡಿ.

ಬಹಳಷ್ಟು ಜನರು ಈಗ ಮನೆಯಿಂದಲೇ ಆಫೀಸ್‌ ಕೆಲಸ ಮಾಡುತ್ತಿದ್ದಾರೆ. ಅವರು ಗಂಟೆಗಟ್ಟಲೇ ಸೋಫಾ ಅಥವಾ ಬೀನ್‌ಬ್ಯಾಗ್‌ ಮೇಲೆ ಕುಳಿತು ಕೆಲಸ ಮಾಡುತ್ತಾರೆ. ಅದರಿಂದ ಅವರ ಬೆನ್ನಿನ ಭಂಗಿ ಹಾಳಾಗುತ್ತದೆ. ಮೂಳೆಗಳಿಗೆ ಸರಿಯಾದ ಕುಳಿತುಕೊಳ್ಳುವ ಭಂಗಿ ಯಾವುದು? ಅದಕ್ಕಾಗಿ ನಾವು ಯಾವ ಎಚ್ಚರಿಕೆಗಳನ್ನು ವಹಿಸಬೇಕು?

ನಾವು ಆಫೀಸಿನಲ್ಲಿ ಕೆಲಸ ಮಾಡುವಾಗ ಕೆಲಸಕ್ಕಾಗಿ ಹಾಗೂ ಸೀಟಿಗಾಗಿ ಬಂಧಿಗಳ ಥರ ಆಗಿಬಿಟ್ಟಿರುತ್ತೇವೆ. ಆದರೆ ಮನೆಯಲ್ಲಿದ್ದಾಗ ನಮ್ಮ ಮೇಲೆ ಯಾವುದೇ ನಿಬಂಧನೆಗಳು ಇರುವುದಿಲ್ಲ. ಹಾಗಾಗಿ ಆಗಾಗ ನಾವು ಒಂದಿಷ್ಟು ಚಲನೆ ಮಾಡಿಕೊಳ್ಳುತ್ತಾ ಇರಬೇಕು. ನೀವು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರೆ ಪ್ರತಿನಿತ್ಯ 30 ನಿಮಿಷಗಳಿಗೊಮ್ಮೆ ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನು ಬದಲಿಸಿಕೊಳ್ಳಿ. ಒಂದೇ ರೀತಿಯ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮೂಳೆಗಳಲ್ಲಿ ನೋವು ಶುರುವಾಗುತ್ತದೆ. ಅದು ಸರ್ವೈಕಲ್ ಪೇನ್‌ಗೆ ಆಹ್ವಾನ ಕೊಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ