ಈ ವಯಸ್ಸು ಎಂತಹ ಒಂದು ಘಟ್ಟವೆಂದರೆ, ಮಹಿಳೆ ಸಂತಾನೋತ್ಪತ್ತಿ ವಯಸ್ಸನ್ನು ದಾಟಿ, ಮುಟ್ಟು ನಿಲ್ಲುವ ಹಂತಕ್ಕೆ ಬಂದಾಗ ಅದು ಅತ್ಯಂತ ಸೂಕ್ಷ್ಮ ಹಂತವಾಗಿರುತ್ತದೆ. ಆಗ ದೇಹದಲ್ಲಿ ಹತ್ತು ಹಲವು ಬದಲಾವಣೆಗಳು ಆಗುತ್ತವೆ. ಈ ಸ್ಥಿತಿಯಲ್ಲಿ ದೇಹದಲ್ಲಿ ಈಸ್ಟ್ರೋಜನ್‌ ಹಾರ್ಮೋನಿನ ಮಟ್ಟ ಕಡಿಮೆಯಾಗುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಟೆಸ್ಟೋಸ್ಟೆರಾನ್ ಹಾರ್ಮೋನಿನ ಪ್ರಮಾಣ ಕಡಿಮೆಯಾಗುವುದರಿಂದ ಮಾಂಸಖಂಡಗಳಲ್ಲಿ ದುರ್ಬಲತೆ ಹಾಗೂ ದೇಹ ತೂಕ ಏರಿಕೆಯಾಗುವುದರಿಂದ ಮಧುಮೇಹ ಹಾಗೂ ಅತಿ ರಕ್ತದೊತ್ತಡದಂತಹ ಸಮಸ್ಯೆಗಳು ಬಾಧಿಸುವ ಸಾಧ್ಯತೆ ಹೆಚ್ಚುತ್ತದೆ.

ಇಂತಹದರಲ್ಲಿ 40 ದಾಟಿದ ಮಹಿಳೆಯರು ತಮ್ಮ ದೇಹದ ಬಗ್ಗೆ ಹೇಗೆ ಗಮನಹರಿಸಬೇಕು? ತಮ್ಮ ನಿಯಮಿತ ದಿನಚರಿಯಲ್ಲಿ ಯಾವ ರೀತಿ ಬದಲಾವಣೆ ತಂದುಕೊಳ್ಳಬೇಕು? ಅದಕ್ಕಾಗಿ ಸ್ತ್ರೀ ರೋಗ ತಜ್ಞೆ ಡಾ. ನಿರ್ಮಲಾ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ :

40+ ವಯಸ್ಸಿನ ಮಹಿಳೆಯರ ದೇಹದಲ್ಲಿ ಏನೇನು ಬದಲಾವಣೆಗಳು ಆಗುತ್ತವೆ?

40+ ವಯಸ್ಸಿನಲ್ಲಿ ಉಂಟಾಗುವ ಪ್ರಮುಖ ದೈಹಿಕ ಬದಲಾವಣೆಗಳೆಂದರೆ, ದೇಹ ತೂಕ ಹೆಚ್ಚಾಗುವುದಾಗಿದೆ. ಪೃಷ್ಠ ಭಾಗದಲ್ಲಿ ತೊಡೆಯ ಭಾಗದಲ್ಲಿ ಹಾಗೂ ಹೊಟ್ಟೆಯ ಆಸುಪಾಸು ಕೊಬ್ಬು ಜಮೆಗೊಳ್ಳುತ್ತದೆ. ತೂಕ ಹೆಚ್ಚುವ ಕಾರಣದಿಂದ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದ ಅಪಾಯ ಕೂಡ ಹೆಚ್ಚುತ್ತದೆ. ಇದರ ಜೊತೆ ಜೊತೆಗೆ ಈಸ್ಟ್ರೋಜೆನ್‌ ಹಾರ್ಮೊನಿನ ಮಟ್ಟ ಕುಸಿಯುವುದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದರಿಂದ ರಕ್ಷಿಸಿಕೊಳ್ಳಲು ಆರೋಗ್ಯಕರ ಆಹಾರ (ಕಡಿಮೆ ಕ್ಯಾಲೋರಿ ಆಹಾರ, ಪ್ರೋಟೀನ್‌ನ್ನು ಆಹಾರದಲ್ಲಿ ಸೇರಿಸುವುದು, ಹಣ್ಣು, ತರಕಾರಿಗಳು ಮತ್ತು ಮೊಳಕೆ ಕಾಳುಗಳು) ಸೇವಿಸಬೇಕು.

ತೂಕದ ಮೇಲೆ ನಿಯಂತ್ರಣ ಹೊಂದಲು ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ವ್ಯಾಯಾಮ ಅಂದರೆ ಕಾರ್ಡಿಯೋ ಎಕ್ಸರ್‌ಸೈಜ್‌, ಏರೋಬಿಕ್ಸ್ ಹೀಗೆ ಯಾವುದೇ ಆಗಿರಬಹುದು. ಟೆಸ್ಟೊಸ್ಟೆರಾನ್‌ ಹಾರ್ಮೋನ್‌ ಸ್ರಾವದ ಪ್ರಮಾಣ ಕಡಿಮೆಯಾಗುವುದರಿಂದ ಮಾಂಸಖಂಡಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆ ಕಾರಣದಿಂದ ಶೋಲ್ಡರ್‌ (ಭುಜದಲ್ಲಿ ತೀವ್ರ ನೋವು ಮತ್ತು ಜೋಮು ಹಿಡಿದಂತಾಗುವುದು) ತೊಂದರೆ ಕೂಡ ಆಗಬಹುದು. ವ್ಯಾಯಾಮದ ಮುಖಾಂತರವಷ್ಟೇ ಇದರ ಮೇಲೆ ನಿಯಂತ್ರಣ ಹೇರಬಹುದಾಗಿದೆ.

ಮತ್ತೊಂದು ರೀತಿಯ ಬದಲಾವಣೆ ಮಾನಸಿಕವಾಗಿ ಆಗುತ್ತದೆ. ಹಾರ್ಮೋನುಗಳ ಏರುಪೇರಿನಿಂದ ಮೂಡ್‌ನಲ್ಲಿ ಬಹಳಷ್ಟು ವ್ಯತ್ಯಾಸಗಳು ಗೋಚರಿಸುತ್ತವೆ.  ಒಮ್ಮೊಮ್ಮೆ  ಸಿಡಿಮಿಡಿತನ ಹೆಚ್ಚಾಗುತ್ತದೆ. ಕೋಪದ ಮೇಲೆ ನಿಯಂತ್ರಣ ಹೇರಲು ಆಗುವುದೇ ಇಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಸಹಾನುಭೂತಿ, ಪ್ರೀತಿ ತೋರಿಸದೆ ಇದ್ದರೆ, ಎಷ್ಟೋ ಮಹಿಳೆಯರು ಖಿನ್ನತೆಗೆ ತುತ್ತಾಗುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಸ್ತನ ಕ್ಯಾನ್ಸರ್‌ ಮತ್ತು ಗರ್ಭಕಂಠದ ಕ್ಯಾನ್ಸರ್‌ ಅತ್ಯಂತ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಸ್ತನ ಕ್ಯಾನ್ಸರಿಗೆ  ಈಗ ಚಿಕಿತ್ಸೆ ಲಭ್ಯ ಇದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಸ್ನಾನ ಮಾಡುವ ಸಮಯದಲ್ಲಿ ಒಂದು ಕೈ ಮೇಲೆತ್ತಿ. ಇನ್ನೊಂದು ಕೈಯಿಂದ ಸ್ತನದ ಪರೀಕ್ಷೆ ಮಾಡುತ್ತ ಹೋಗಬೇಕು. ನಿಮಗೆ ಸ್ತನದಲ್ಲಿ ಯಾವುದಾದರೂ ಗಂಟು ಇರುವ ಅನುಭವ ಉಂಟಾದರೆ ತಕ್ಷಣವೇ ವೈದ್ಯರ ಗಮನಕ್ಕೆ ತನ್ನಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ