ಚಳಿಗಾಲದಲ್ಲಿ ಪ್ರಕೃತಿಯ ಬಣ್ಣಬಣ್ಣದ ಫುಡ್‌ ಬ್ಯಾಸ್ಕೆಟ್‌ ಅತ್ಯಾಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲದೆ, ನಿಮಗೆ ಪೋಷಕ ಪದಾರ್ಥಗಳನ್ನು ಧಾರಾಳವಾಗಿ ಒದಗಿಸುತ್ತವೆ. ಈ ಕಾಲದಲ್ಲಿ ನಿಮ್ಮ ದೇಹ ಹಾಗೂ ಮೂಳೆಗಳಿಗೆ ಬೆಚ್ಚಗಿನ ಶಾಖ ಒದಗಿಸಲು, ನಿಮ್ಮನ್ನು ಶೀತ ನೆಗಡಿಗಳಿಂದ ರಕ್ಷಿಸಲು ಹಾಗೂ ನಿಮ್ಮ ಕುಟುಂಬದವರ ಇಮ್ಯುನಿಟಿ ಹೆಚ್ಚಿಸಲು ಬಹಳಷ್ಟು ತರಕಾರಿ ಮತ್ತು ಹಣ್ಣು ಹಂಪಲು ಲಭ್ಯವಿವೆ. ಇವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ನೀವು ಆರೋಗ್ಯವಾಗಿ ಫಿಟ್‌ ಎನಿಸುವಿರಿ. ಚಳಿಗಾಲದಲ್ಲಿ ಎಂದೂ ಹಸಿವನ್ನು ಅದುಮಿಡಬೇಡಿ. ಅದರ ಬದಲಿಗೆ ಈ ಚಳಿಗಾಲದಲ್ಲಿ ನೀವು ಆರೋಗ್ಯಕರವಾಗಿ ಹೇಗೆ ನೈಸರ್ಗಿಕ ಆಹಾರದ ಲಾಭ ಪಡೆಯುವುದು ಎಂಬುದರ ಬಗ್ಗೆ ಯೋಚಿಸಬೇಕು.

ಹಸಿರು ತರಕಾರಿ ಹಾಗೂ ಸೊಪ್ಪಿನ ಸೇವನೆ ಬಲು ಉತ್ತಮ. ಇದರಲ್ಲಿ ಫೈಬರ್‌, ಫಾಲಿಕ್‌ ಆ್ಯಸಿಡ್‌, ವಿಟಮಿನ್‌ `ಸಿ', ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳು ಹೆಚ್ಚಾಗಿವೆ. ಹೀಗಾಗಿ ಇವನ್ನು ಸೇವಿಸಿ ಫಿಟ್‌ಫೈನ್‌ ಆಗಿರಿ.

ಕಡಿಮೆ ಸಕ್ಕರೆ ಬಳಸಿ ತಯಾರಿಸಿದ ಕ್ಯಾರೆಟ್‌ ಹಲ್ವ, ಖೀರು ಸೇವಿಸಿ. ಚಳಿಗಾಲದಲ್ಲಿ ಕ್ಯಾರೆಟ್‌ನ್ನು ಹೆಚ್ಚಾಗಿ ಸಲಾಡ್‌, ಕೋಸಂಬರಿ ಅಥವಾ ಇನ್ನಿತರ ಯಾವುದೇ ರೂಪದಲ್ಲಾದರೂ ಸರಿ, ಬಳಸುತ್ತಿರಬೇಕು.

ಸಿಟ್ರಸ್‌ ಹಣ್ಣುಗಳು ವಿಟಮಿನ್‌ `ಸಿ'ಯ ಆಗರ. ಇವುಗಳ ಸೇವನೆ ದೇಹಕ್ಕೆ ಸಹಜವಾಗಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಒದಗಿಸುತ್ತವೆ. ಹೀಗಾಗಿ ಕಿತ್ತಳೆ, ಮೂಸಂಬಿ, ಟೊಮೇಟೊ ಇತ್ಯಾದಿಗಳನ್ನು ಆ ಕಾಲದಲ್ಲಿ ಧಾರಾಳ ಬಳಸಿ.

ಚಳಿಗಾಲದಲ್ಲಿ ವಿಪರೀತ ಬಿಸಿಯ ಪದಾರ್ಥ ಸೇವಿಸದಿರಿ, ಶಾಖ ಸಾಮಾನ್ಯವಾಗಿಯೇ ಇರಲಿ. ಹೃದ್ರೋಗಿಗಳು ಮುಖ್ಯವಾಗಿ ಹುರಿದ ಕರಿದ ಪದಾರ್ಥಗಳನ್ನು ದೂರವಿಡಬೇಕು. ಸಾಧ್ಯವಾದಷ್ಟೂ ಕಡಿಮೆ ಉಪ್ಪು ಬಳಸಿ.

ಇಂಥವರು ಸಂತೃಪ್ತ (ಸ್ಯಾಚ್ಯುರೇಟೆಡ್‌ ಫ್ಯಾಟ್‌) ಕೊಬ್ಬಿಗೆ ಬದಲಾಗಿ ಅಸಂತೃಪ್ತ (ಅನ್‌ಸ್ಯಾಚ್ಯುರೇಟೆಡ್‌ ಫ್ಯಾಟ್‌) ಕೊಬ್ಬಿನಾಂಶವುಳ್ಳ ಜಿಡ್ಡು ಪದಾರ್ಥ ಬಳಸಬೇಕು. ಅಂದರೆ ರೀಫೈಂಡ್‌, ಸಾಸುವೆ, ಕೊಬ್ಬರಿ, ಹಿಪ್ಪೆ ಎಣ್ಣೆ ಬಳಸಿ ಅಡುಗೆ ಮಾಡಬೇಕು.

thand-ke-mausam-main-2

ಮಧುಮೇಹದ ರೋಗಿಗಳು ಸಾಧ್ಯವಾದಷ್ಟೂ ಸಕ್ಕರೆ ಸೇವನೆ ತ್ಯಜಿಸಬೇಕು. ಇಂಥವರು ರೀಫೈಂಡ್‌ ಕಾರ್ಬೋಹೈಡ್ರೇಟ್‌ಗಳ ಸೇವನೆಯಿಂದ ದೂರವಿರಬೇಕು ಹಾಗೂ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಸೇವಿಸಬೇಕು. ಅಂದರೆ ಜವೆಗೋಧಿ, ಬ್ರೋಕನ್‌ ವೀಟ್, ಮಲ್ಟಿಗ್ರೇನ್‌ ಆಟಾ ಇತ್ಯಾದಿ ಬಳಸಬೇಕು.

ಚಳಿಗಾಲದಲ್ಲಿ ಸೊಪ್ಪು, ಹಸಿರು ತರಕಾರಿ, ಹಣ್ಣುಹಂಪಲುಗಳ ಅಧಿಕ ಸೇವನೆಯಿಂದ ರಕ್ತದಲ್ಲಿ ಹಿವೋಗ್ಲೋಬಿನ್‌ ಅಂಶ ಸರಿಯಾದ ಪ್ರಮಾಣದಲ್ಲಿ ಬ್ಯಾಲೆನ್ಸ್ ಆಗುತ್ತದೆ.

ನೀರು ಹಾಗೂ ದ್ರವ ಪದಾರ್ಥಗಳನ್ನು ಧಾರಾಳವಾಗಿ ಸೇವಿಸಬೇಕು. ಚಿಕ್ಕ ಮಕ್ಕಳು, ವಯೋವೃದ್ಧರಿಗೆ ಐಸ್‌ ಕ್ರೀಂ ಮುಂತಾದುವನ್ನು ಕೊಡಬಾರದು.

ಚಳಿಗಾಲದಲ್ಲಿ ತಮ್ಮ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಕಷ್ಟಪಡುವವರು ಮುಖ್ಯವಾಗಿ ಜಿಡ್ಡಿನ ಪದಾರ್ಥಗಳಿಂದ ದೂರವಿರಬೇಕು. ಹುರಿದ, ಕರಿದ, ಆಯ್ಲಿ ಪರೋಟ ಇತ್ಯಾದಿ ಬೇಡವೇ ಬೇಡ. ಅವರ ಆಹಾರದಲ್ಲಿ ಫೈಬರ್‌, ಹಣ್ಣುಗಳು, ಸಲಾಡ್‌, ದ್ರವ ಪದಾರ್ಥಗಳು ಇತ್ಯಾದಿ ಹೆಚ್ಚಿರಬೇಕು. ಧಾನ್ಯಗಳು, ಮಲ್ಟಿಗ್ರೇನ್‌ ಆಟಾ, ಬ್ರೌನ್‌ ಬ್ರೆಡ್‌, ಅಧಿಕ ಫೈಬರ್‌ಯುಕ್ತ ಡೈಜಿಸ್ಟಿವ್‌ಬಿಸ್ಕೆಟ್ಸ್ ಮುಂತಾದವು ಪೂರಕ.

ಸೀಬೆಹಣ್ಣು, ಕ್ಯಾರೆಟ್‌, ಸೇಬು, ಸೊಪ್ಪು ಹೆಚ್ಚು ಮಾಗಿರದ ದೋರು ಹಣ್ಣುಗಳು, ಕಿತ್ತಳೆ, ಸೌತೆಕಾಯಿ ಮುಂತಾದವು ಹೆಚ್ಚು ಲಾಭಕಾರಿ. ಮನೆಯಲ್ಲೇ ತಯಾರಿಸಿದ ಮಿಕ್ಸ್ಡ್ ವೆಜ್‌, ಸೊಪ್ಪು, ಟೊಮೇಟೊ ಸೂಪ್‌ಗಳು ಮಾರುಕಟ್ಟೆಯ ಪ್ಯಾಕ್ಡ್ ಸೂಪ್‌ಗಳಿಗಿಂತ ಹೆಚ್ಚು ಉತ್ತಮ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ