ವಧುವಾಗಲು ಹೊರಟಿರುವ ಯಾವುದೇ ಹುಡುಗಿಗೆ ಕೂದಲು ಒತ್ತಾಗಿಲ್ಲದಿದ್ದರೆ, ಬಲಹೀನ ಹಾಗೂ ಕಾಂತಿಹೀನವಾಗಿದ್ದರೆ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ಈಗ ಹೆದರಬೇಕಾಗಿಲ್ಲ. ಮದುವೆಗೆ ಮೊದಲು ನಿಮ್ಮ ಕೂದಲನ್ನು ಒತ್ತಾಗಿ ಹಾಗೂ ಸುಂದರವಾಗಿ ಹೇಗೆ ಮಾಡುವುದೆಂದು ಇಲ್ಲಿ ತಿಳಿಸಿದ್ದೇವೆ.
ನಿಮ್ಮ ದಿನಚರಿ ಬದಲಿಸಿ
ಮೊದಲು ವಾರಕ್ಕೆ 3 ಬಾರಿ ಮಾತ್ರವೇ ಸ್ಛೀಟ್ ಇಲ್ಲದ ಶ್ಯಾಂಪು ಉಪಯೋಗಿಸಿ. ಸಲ್ಫೇಟ್ ಇರುವ ಶ್ಯಾಂಪೂವನ್ನು ಸತತವಾಗಿ ಉಪಯೋಗಿಸಿದರೆ ಕೂದಲಿಗೆ ಹಾನಿಯಾಗುತ್ತದೆ. ಅದರಿಂದ ಕೂದಲು ಶುಷ್ಕವಾಗುತ್ತದೆ. ಆದ್ದರಿಂದ ಅದನ್ನು ನೋಡಿಕೊಳ್ಳಲು ತುಂಬಾ ಕಠಿಣವಾದ (ಡಿಟರ್ಜೆಂಟ್) ಸಲ್ಫೇಟ್ ಇಲ್ಲದ ಉತ್ಪನ್ನವನ್ನು ಆಯ್ಕೆ ಮಾಡಿ. ಇದಲ್ಲದೆ, ಯಾವಾಗಲೂ ಕೂದಲಿಗೆ ಕಂಡೀಶನರ್ ಉಪಯೋಗಿಸಿ. ಕಂಡೀಶನರ್ ಕೂದಲಿಗೆ ಆರ್ದ್ರತೆ ಮತ್ತು ಪೋಷಣೆ ನೀಡಿ ಅವನ್ನು ಮೃದುವಾಗಿ ರೇಷ್ಮೆಯಂತೆ ಮಾಡುತ್ತದೆ. ಕೂದಲಿಗೆ ಎಣ್ಣೆ ಹಚ್ಚುವುದನ್ನು ಮರೆಯದಿರಿ. ಎಣ್ಣೆ ಹಚ್ಚುವ ಪರಂಪರೆ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ಎಣ್ಣೆ ಕೂದಲನ್ನು ಸದೃಢವಾಗಿ ಮತ್ತು ಕಾಂತಿಯುತವನ್ನಾಗಿ ಮಾಡುವ ಜೊತೆಗೆ ಅವುಗಳ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಮೊದಲು 5-10 ನಿಮಿಷ ತಲೆಗೆ ಮಸಾಜ್ ಮಾಡಿದ ನಂತರ ಕೂದಲಿಗೆ ಕೊಂಚ ಎಣ್ಣೆ ಹಾಕಿದರೆ ಕ್ಯೂಟಿಕಲ್ಸ್ ವರೆಗೆ ತಲುಪುತ್ತದೆ. ಒಳ್ಳೆಯ ಫಲಿತಾಂಶಕ್ಕಾಗಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಉಪಯೋಗಿಸಿ 1 ಗಂಟೆಯ ನಂತರ ಕೂದಲನ್ನು ತೊಳೆಯಿರಿ.
ಮನೆಯಲ್ಲೇ ಸೌಂದರ್ಯ
ಕಡಿಮೆ ಗುಂಗುರು ಕೂದಲಿಗೆ ಅವಕಾಡೋ ಮತ್ತು ಮೊಟ್ಟೆಯ ಮಾಸ್ಕ್ ಹಾಕಿ. ಅವಕಾಡೋದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ವಿಟಮಿನ್‌ಗಳು ಇರುತ್ತವೆ. ಮೊಟ್ಟೆಯಲ್ಲಿರುವ ಪ್ರೋಟೀನ್ ಕೂದಲನ್ನು ಸದೃಢಗೊಳಿಸುತ್ತದೆ. ಇದನ್ನು ಕೂದಲಿಗೆ ಹಚ್ಚಿ ಒಣಗಲು ಬಿಡಿ. ಒಣಗಿದ ನಂತರ ತೊಳೆಯಿರಿ. ಅದರಿಂದ ಕೂದಲು ಮೃದು ಹಾಗೂ ಕಡಿಮೆ ಗುಂಗುರಾಗುತ್ತದೆ. ಕೂದಲನ್ನು ಸದೃಢಗೊಳಿಸಲು ಮನೆಯಲ್ಲಿಯೇ ಮಿಶ್ರಿತ ಥೆರಪಿ ಮಾಡಿ. ಅದರಲ್ಲಿ ಶುಂಠಿ, ದಾಸವಾಳ ಮತ್ತು ಎಳ್ಳೆಣ್ಣೆಯನ್ನು ಬೆರೆಸಿ. ಮನೆಯಲ್ಲಿ ಶುಂಠಿಯ ಟಾನಿಕ್ ತಯಾರಿಸಿ. ಅದರಲ್ಲಿ ದಾಸವಾಳದ ಎಲೆಗಳನ್ನು ಹಾಕಿ ಇಡೀ ರಾತ್ರಿ ಬಿಡಿ. ನಂತರ ಅದಕ್ಕೆ ಎಳ್ಳೆಣ್ಣೆ ಹಾಕಿ ಆಯುರ್ವೇದಿಕ್ ಥೆರಪಿ ಮಾಡಿ. ಅದನ್ನು ನೆತ್ತಿಗೆ ಹಚ್ಚಿ 4-5 ನಿಮಿಷ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ಇದನ್ನು ವಾರದಲ್ಲಿ 2-3 ಬಾರಿ ಪ್ರಯತ್ನಿಸಿ.
ರೂಟ್ಸ್ ಲೈಟ್ ಥೆರಪಿ
ಇದು ಸಂಪೂರ್ಣವಾಗಿ ನೂತನ ಟೆಕ್ನಿಕ್ ಆಗಿದೆ. ರೂಟ್ಸ್ ಲೈಟ್ ಥೆರಪಿ ಬಯೋ ಉತ್ತೇಜನದ ಕೆಳಸ್ತರದ ಪ್ರಕಾಶವನ್ನು ಪ್ರಯೋಗಿಸುತ್ತದೆ. ಇದು ಕೂದಲಿನ ಬೆಳವಣಿಗೆ ಹೆಚ್ಚಿಸಿ ಅದನ್ನು ದಪ್ಪಗಾಗಿಸುತ್ತದೆ. ಇದು ನೋವುರಹಿತ, ಸೈಡ್ ಎಫೆಕ್ಟ್ ಇಲ್ಲದ ಮತ್ತು ಉನ್ನತವಾದ ಕೋಮಲ ಪ್ರಕಾಶದ ಟೆಕ್ನಿಕ್ ಆಗಿದ್ದು, ಅದನ್ನು ತಲೆಯ ಮೇಲೆ ಪ್ರಯೋಗಿಸಲಾಗುತ್ತದೆ. ಈ ಕಡಿಮೆ ಎನರ್ಜಿಯ ಬೆಳಕು ಕೂದಲಿನೊಳಗೆ ಪ್ರವೇಶಿಸಿ ಅದನ್ನು ಉತ್ತೇಜಿಸುತ್ತದೆ. ಅದರಿಂದ ಕೂದಲು ಬೆಳೆಯತೊಡಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗೆ 20-30 ನಿಮಿಷಗಳು ಹಿಡಿಯುತ್ತದೆ.
- ಡಾ. ಸರಳಾ.