ಇಂದಿನ ಸತತ ವ್ಯಸ್ತ ಹಾಗೂ ಓಡಾಟ ತುಂಬಿರುವ ಜೀವನದಲ್ಲಿ ನಮ್ಮ ಲೈಫ್‌ ಸ್ಟೈಲ್ ‌ಬಹಳ ಪ್ರಭಾವಿತಗೊಂಡಿದೆ. ಆದ್ದರಿಂದ ಆರೋಗ್ಯಕರ ಜೀವನ ನಡೆಸಲು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಎಲ್ಲಾ ವಯೋಮಾನದ ಜನರಿಗೂ ಇಂದು ಅನಿವಾರ್ಯವಾಗಿದೆ.

ನಮ್ಮ ಜೀವನದ ಅಡಿಪಾಯವಾಗಿರುವ ಆರೋಗ್ಯವನ್ನು ಸದಾ ಚೆನ್ನಾಗಿಟ್ಟುಕೊಳ್ಳಲು, ಮಹತ್ವಪೂರ್ಣ ಪೋಷಕ ತತ್ವಗಳಾದ ಪ್ರೋಟೀನ್‌, ವಿಟಮಿನ್ಸ್, ಮಿನರಲ್ಸ್, ಉತ್ತಮ ಫ್ಯಾಟಿ ಆ್ಯಸಿಡ್ಸ್ ಅಗತ್ಯವಾಗಿವೆ. ಇವು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

ನಮ್ಮ ಆಹಾರ ಹೇಗಿರಬೇಕು?

ಪೌಷ್ಟಿಕ ಆಹಾರದಲ್ಲಿ ಕ್ಯಾಲೋರಿ, ವಿಟಮಿನ್ಸ್, ಕೊಬ್ಬಿನ ಪದಾರ್ಥಗಳು ಪ್ರಮಾಣಬದ್ಧವಾಗಿದ್ದಾಗ ಮಾತ್ರ ನಮ್ಮ ದೈಹಿಕ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿರುತ್ತವೆ. ಈ ಅಂಶಗಳನ್ನು ಒಳಗೊಂಡ ಸ್ವಸ್ಥ, ಸಮತೋಲಿತ ಆಹಾರ ನಮ್ಮ ದೇಹವನ್ನು ಸಶಕ್ತಗೊಳಿಸಬಲ್ಲದು ಹಾಗೂ ರೋಗಗಳ ವಿರುದ್ಧ ಹೋರಾಡಲು ಅದಕ್ಕೆ ರೋಗನಿರೋಧಕ ಶಕ್ತಿ ತುಂಬಬಲ್ಲದು. ಒಂದು ಸ್ವಸ್ಥ ಸಮತೋಲಿತ ಆಹಾರದಲ್ಲಿ ಎಲ್ಲಾ ಮೂಲಗಳ ಆಹಾರ ಪದಾರ್ಥ ಬೆರೆತಿರುತ್ತದೆ. ಆದರೆ ಯಾವ ಆಹಾರದಲ್ಲಿ ಸಂತೃಪ್ತ ಕೊಬ್ಬು, ಟ್ರಾನ್ಸ್ ಫ್ಯಾಟ್‌ ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರುತ್ತದೋ, ಅದು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಏರಿಸುತ್ತದೆ ಹಾಗೂ ಸ್ವಸ್ಥ ಆಹಾರದ ಶ್ರೇಣಿಗೆ ಸೇರುವುದಿಲ್ಲ.

ಮುಖ್ಯವಾಗಿ ಮಹಿಳೆಯರಲ್ಲಿ ಇತರ ದೈಹಿಕ ಕ್ರಿಯೆಗಳ ಜೊತೆಯಲ್ಲಿ ಹೃದಯ, ಬುದ್ಧಿಗಳನ್ನು ಚುರುಕಾಗಿಟ್ಟುಕೊಳ್ಳಲು ಒಮೇಗಾ 3 ಫ್ಯಾಟಿ ಆ್ಯಸಿಡ್‌ ಬಲು ಅನಿವಾರ್ಯ. ದೇಹದಲ್ಲಿ ಇದರ ಪೂರೈಕೆಗಾಗಿ ಒಮೇಗಾ 3 ಫ್ಯಾಟಿ ಆ್ಯಸಿಡ್‌ನ ಆಹಾರ ಪದಾರ್ಥಗಳು ಮಾತ್ರವಲ್ಲದೆ, ವೈದ್ಯರ ಸಲಹೆಯಂತೆ ನ್ಯೂಟ್ರಿಲೈಟ್‌ ಸಾಲ್ಮನ್‌ ಒಮೇಗಾ 3 ಅಂಶವನ್ನೂ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಅಮೆರಿಕನ್‌ ಡಯಟೇಟಿಕ್‌ ಅಸೋಸಿಯೇಷನ್‌ ಪ್ರಕಾರ ಪೌಷ್ಟಿಕ ಆಹಾರದಲ್ಲಿ ಹಣ್ಣು, ತರಕಾರಿ, ಗೋಧಿ, ಕನಿಷ್ಠ ಜಿಡ್ಡುಳ್ಳ ಹಾಲು, ಮೊಟ್ಟೆ, ಡ್ರೈಫ್ರೂಟ್ಸ್ ಮುಂತಾದವು ಸೇರುತ್ತವೆ. ಇಂಥ ಆಹಾರದಲ್ಲಿ ಸ್ಯಾಚುರೇಟೆಡ್‌ ಫ್ಯಾಟ್‌ ಕಡಿಮೆ ಇರುತ್ತದೆ.

ನೋವಾ ಹಾಸ್ಪಿಟಲ್ಸ್ನ ಡಯೆಟ್‌ ನ್ಯೂಟ್ರಿಶಿಯನ್‌ ಕನ್ಸಲ್ಟೆಂಟ್‌ ಶೀಲಾ ಕೃಷ್ಣಸ್ವಾಮಿ ಹೇಳುವುದೆಂದರೆ, ಆರೋಗ್ಯಭರಿತ ಆಹಾರ ಮಾತ್ರವೇ ನಿಮ್ಮ ದೀರ್ಘಾಯು ಹಾಗೂ ಸ್ವಸ್ಥ ಜೀವನದ ಕೀಲಿಕೈ ಆಗಬಲ್ಲದು. ಏಕೆಂದರೆ ಇಂಥ ಆಹಾರ ಮಾತ್ರವೇ ಪೋಷಕಾಂಶಗಳಿಂದ ತುಂಬಿದ್ದು, ನಿಮ್ಮ ಹೃದಯಕ್ಕೆ ಒಳ್ಳೆಯದು ಮಾಡಬಲ್ಲದು ಹಾಗೂ ನಿಮ್ಮ ದೇಹದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಬಲ್ಲದು.

ವಿಟಮಿನ್‌ ಮತ್ತು ಸಪ್ಲಿಮೆಂಟ್ಸ್

ಸಾಮಾನ್ಯವಾಗಿ ನಾವು ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಡಿನ್ನರ್‌ಗಳಲ್ಲಿ ಸರಿಯಾಗಿ ಆಹಾರ ಸೇವಿಸದೆ ವಿಟಮಿನ್‌ ಸಪ್ಲಿಮೆಂಟ್ಸ್ ನ ಸೂಕ್ತ ಪ್ರಮಾಣದಿಂದ ವಂಚಿತರಾಗುತ್ತೇವೆ. ತರಕಾರಿ, ಹಣ್ಣು, ಬೇಳೆಕಾಳುಗಳು ನಮ್ಮ ದೇಹಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶಗಳೆಂಬುದೇನೋ ನಿಜ. ಆದರೆ ಇದರ ಹೊರತಾಗಿ ದೇಹಕ್ಕೆ ಅತ್ಯಗತ್ಯವಾದ ಪ್ರೋಟೀನ್‌, ವಿಟಮಿನ್‌, ಮಿನರಲ್ಸ್ ನ ಸಮತೋಲನ ಕಾಯ್ದುಕೊಳ್ಳಲು ನೀವು ನ್ಯೂಟ್ರಿಲೈಟ್‌ ಪ್ರೋಟೀನ್‌ ಮತ್ತು ಡೇಲಿಯನ್ನು ವೈದ್ಯರ ಸಲಹೆ ಮೇರೆಗೆ ನಿಮ್ಮ ಡಯೆಟ್‌ನ ಭಾಗವಾಗಿಸಿಕೊಳ್ಳಿ.

- ಜಿ. ಆಶಾ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ