77 ವರ್ಷದ ಮಧುಮೇಹ ರೋಗಿ ಚಂದ್ರಶೇಖರ್ ಅವರ ಜೀವನ ಈಗ ನೆಮ್ಮದಿಯಿಂದ ಕೂಡಿದೆ. ಆದರೆ 2014ರಲ್ಲಿ ಅವರ ಸ್ಥಿತಿ ಸಾಕಷ್ಟು ತೊಂದರೆಯಿಂದ ಕೂಡಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಬೈಪಾಸ್ ಸರ್ಜರಿ ಕೂಡ ಆಗಿತ್ತು. ವಯಸ್ಸಿನ ಈ ಹಂತದಲ್ಲಿ ಅವರಿಗೆ ನಡೆದಾಡಲು ಅಥವಾ ಕೆಲಸ ಮಾಡಲು ಕೂಡ ಕಷ್ಟಕರವಾಗಿತ್ತು. ಒಂದಿಷ್ಟೂ ನಡೆದರೂ ಸಾಕು, ಅವರಿಗೆ ಉಬ್ಬಸ ಬರುತ್ತಿತ್ತು. ಹೆಚ್ಚುತ್ತಾ ಹೊರಟ ಅವರ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದುಕೊಳ್ಳಲಾಯಿತು.
ವೈದ್ಯರು ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಲು ಸಲಹೆ ನೀಡಿದರು. ಅದರಲ್ಲಿ ಎಂಎಸ್‌ಸಿಟಿ (ಈ ತಂತ್ರಜ್ಞಾನದಲ್ಲಿ ಹೃದಯ ಹಾಗೂ ರಕ್ತನಾಳಗಳ 3ಡಿ ಇಮೇಜ್, ಎಕ್ಸರೇ ಬೀಮ್ ಹಾಗೂ ಲಿಕ್ವಿಡ್ ಡೈಯನ್ನು ಬಳಸಲಾಗುತ್ತದೆ) ಕೂಡ ಸೇರಿತ್ತು.
ಪರೀಕ್ಷೆಯ ಬಳಿಕ ಅವರು `ಏರೋಟಿಕ್ ಸ್ಟೆನೊಸಿಸ್'ನಿಂದ ಬಳಲುತ್ತಿದ್ದಾರೆಂದು ಹೇಳಲಾಯಿತು. ಚಂದ್ರಶೇಖರ್ ಅವರಿಗೆ ಶಸ್ತ್ರಚಿಕಿತ್ಸೆಯಾಗಿ 2 ವರ್ಷಗಳೇ ಆಗಿವೆ. ಈಗವರು ಅತ್ಯುತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಏನಿದು ಏರೋಟಿಕ್ ಸ್ಟೆನೊಸಿಸ್?
ಹೃದಯ ಪಂಪ್ ಮಾಡುವ ಸಂದರ್ಭದಲ್ಲಿ ಹೃದಯದ ಕಾಟಗಳು ತೆರೆದುಕೊಳ್ಳುತ್ತವೆ. ಆಗ ರಕ್ತ ಮುಂದೆ ಸಾಗುತ್ತದೆ ಹಾಗೂ ಹೃದಯ ಬಡಿತದ ಮಧ್ಯೆ ತಕ್ಷಣವೇ ಮುಚ್ಚಿಕೊಳ್ಳುತ್ತದೆ. ಏಕೆಂದರೆ ರಕ್ತ ವಾಪಸ್ ಸಾಗದಿರಲಿ ಎಂದು. ಏರೋಟಿಕ್ ವಾಲ್ ರಕ್ತವನ್ನು ಎಡ ಲೋಯರ್ ಚೇಂಬರ್ (ಎಡ ವೆಂಟ್ರಿಕ್) ನಿಂದ ಏರೋಟಿಕ್ ನಲ್ಲಿ ಹೋಗಲು ನಿರ್ದೇಶನ ನೀಡುತ್ತದೆ.
ಏರೋಟಿಕ್ ಮುಖ್ಯ ರಕ್ತನಾಳವಾಗಿದ್ದು ಅದು ಎಡ ಲೋಯರ್ ಚೇಂಬರ್ ನಿಂದ ಹೊರಟು ದೇಹದ ಬೇರೆ ಭಾಗಗಳಿಗೆ ಸಾಗುತ್ತದೆ. ಒಂದು ವೇಳೆ ಸಾಮಾನ್ಯ ಪ್ರವಾಹದಲ್ಲಿ ಅಡಚಣೆ ಉಂಟಾದರೆ ಹೃದಯ ಪರಿಣಾಮಕಾರಿಯಾಗಿ ಪಂಪ್ ಮಾಡಲು ಆಗುವುದಿಲ್ಲ. ಗಂಭೀರ ಏರೋಟಿಕ್ ಸ್ಟೆನೊಸಿಸ್ ಅಂದರೆ ಎಎಸ್ ನಲ್ಲಿ ಏರೋಟಿಕ್ ವಾಲ್ವ್ ಸರಿಯಾಗಿ ತೆರೆದುಕೊಳ್ಳುವುದಿಲ್ಲ.
ಕಾರ್ಡಿಯಾಲಜಿಸ್ಟ್ ಡಾ. ಪ್ರವೀಣ್ ಚಂದ್ರ ಹೀಗೆ ಹೇಳುತ್ತಾರೆ, ``ಗಂಭೀರ ಏರೋಟಿಕ್ ಸ್ಟೆನೊಸಿಸ್ ನ ಸ್ಥಿತಿಯಲ್ಲಿ ದೇಹದಲ್ಲಿ ರಕ್ತ ಪೂರೈಸಲು ನಿಮ್ಮ ಹೃದಯ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಕಾಲಕ್ರಮೇಣ ಈ ಕಾರಣದಿಂದಾಗಿ ಹೃದಯ ದುರ್ಬಲವಾಗುತ್ತಾ ಹೋಗುತ್ತದೆ. ಅದು ಇಡೀ ದೇಹದ ಮೇಲೆ ಪ್ರಭಾವ ಬೀರುತ್ತದೆ. ಈ ಕಾರಣದಿಂದಾಗಿ ಸಾಮಾನ್ಯ ಚಟುವಟಿಕೆ ನಡೆಸಲು ಕಷ್ಟವಾಗುತ್ತದೆ. ಜಟಿಲ ಎಎಸ್ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಅದರಿಂದ ಜೀವನಕ್ಕೆ ಅಪಾಯ ಉಂಟಾಗಬಹುದು. ಅದು ಹೃದಯಾಘಾತ ಇಲ್ಲಿ ಕಾರ್ಡಿಯಾಕ್ ಮೃತ್ಯುವಿಗೂ ಕಾರಣವಾಗಬಹುದು.
ಲಕ್ಷಣ ಗುರುತಿಸಿ
ಏರೋಟಿಕ್ ಸ್ಟೆನೊಸಿಸ್‌ನ ಹಲವು ಪ್ರಕರಣಗಳಲ್ಲಿ ಎಲ್ಲಿಯವರೆಗೆ ರಕ್ತದ ಪ್ರವಾಹ ವೇಗವಾಗಿ ನುಗ್ಗುವುದಿಲ್ಲವೋ ಅಲ್ಲಿಯವರೆಗೆ ಲಕ್ಷಣಗಳು ಗೋಚರಿಸುವುದಿಲ್ಲ. ಹೀಗಾಗಿ ಈ ರೋಗ ಬಹಳ ಅಪಾಯಕಾರಿ. ವೃದ್ಧರಲ್ಲಿ ಕಂಡುಬರುವ ವಿಶಿಷ್ಟ ಲಕ್ಷಣಗಳ ಬಗ್ಗೆ ಗಮನಹರಿಸುವುದು ಅತ್ಯಂತ ಅವಶ್ಯಕ. ಇದರ ಮುಖ್ಯ ಲಕ್ಷಣಗಳೆಂದರೆ ಎದೆಯಲ್ಲಿ ನೋವು, ಒತ್ತಡ ಅಥವಾ ಹಿಡಿದುಕೊಂಡಂತಾಗುವುದು, ಉಸಿರು ತೆಗೆದುಕೊಳ್ಳಲು ತೊಂದರೆ, ಪ್ರಜ್ಞಾಹೀನ ಸ್ಥಿತಿ, ಗಾಬರಿ, ದೇಹ ಭಾರವಾದಂತೆ ಎನಿಸುವುದು, ಹೃದಯ ಬಡಿತ ಮಂದಗೊಳ್ಳುವುದು, ಇಲ್ಲಿ ತೀವ್ರಗೊಳ್ಳುವುದು.