40 ದಾಟಿದ ನಂತರ ಮುಖ ಹಾಗೂ ಕೈಕಾಲುಗಳ ಮೇಲೆ ಉಂಟಾಗುವ ಸುಕ್ಕು, ನೆರಿಗೆ, ಕಂಗಳ ಕೆಳಗಿನ ಕಪ್ಪು ಉಂಗುರಗಳು, ನರೆತ ಕೂದಲು, ದೇಹದಲ್ಲಿ ಸುಸ್ತು, ಬೇಡ ಎನಿಸುವ ಕಾಮ, ಮಂಡಿ ನೋವು, ಆಯಾಸ, ಒತ್ತಡ, ಸದಾ ಬೇಸರದ ಭಾವ.... ನಿಮ್ಮನ್ನು ಬೇಗನೆ ವೃದ್ಧಾಪ್ಯದತ್ತ ಎಳೆದೊಯ್ಯುತ್ತದೆ. ಹೆಚ್ಚುತ್ತಿರುವ ವಯಸ್ಸನ್ನು ನಿಯಂತ್ರಿಸಲು ನಾವು ಹಲವಾರು ಬಗೆಯ ಲೋಶನ್, ಕ್ರೀಂ, ವಿವಿಧ ಕಾಸ್ಮೆಟಿಕ್ಸ್ ಬಳಸುತ್ತಲೇ ಇರುತ್ತೇವೆ. ಎನರ್ಜಿ ಟಾನಿಕ್, ವಿಟಮಿನ್ ಮಾತ್ರೆಗಳ ಸೇವನೆ... ಇಷ್ಟೆಲ್ಲ ಮಾಡಿದರೂ ಮುಖದಲ್ಲಿ ಮುದಿತನದ ಆರಂಭದ ಸೂಚನೆ ಕಾಣಿಸುತ್ತದೆ, ವಯಸ್ಸಾಗುತ್ತಿರುವ ಲಕ್ಷಣಗಳನ್ನು ಮುಚ್ಚಿಡಲಾಗದು.
ಇದೀಗ ಬಂದಿದೆ ಹೊಸ ವರ್ಷ..... ಹೊಸ ಬೆಳಕಿನ ಉದಯ..... ಹೊಸ ವಿಚಾರಧಾರೆಗಳು ಹಾಗೂ 2020ರ ನಿಮ್ಮ ಮೊದಲ ಸಂಕಲ್ಪ, ಹೇಗಾದರೂ ಹೆಚ್ಚುತ್ತಿರುವ ವಯಸ್ಸಿಗೆ ಬ್ರೇಕ್ ಹಾಕಬೇಕೆನ್ನುವುದು. ಹೌದು, ಇದು ತಮಾಷೆಯ ವಿಷಯವಲ್ಲ. ಸೀರಿಯಸ್ ಆಗಿ ಇಲ್ಲಿನ ಸಲಹೆ ಅನುಸರಿಸಿದರೆ ಅದು ಖಂಡಿತಾ ಸಾಧ್ಯ. ನೀವು ದೃಢಮನಸ್ಸು ಮಾಡಿ ಈ ನಿಮ್ಮ ಸಂಕಲ್ಪಕ್ಕೆ ಬದ್ಧರಾಗಿರಬೇಕಷ್ಟೆ. ಕೈಯಲ್ಲಿ ಹಿಡಿದ ಮರಳು ಬೆರಳ ಸಂಧಿಯಲ್ಲಿ ಸೋರಿಹೋಗುವಂತೆ ದಿನೇದಿನೇ ಕರಗುತ್ತಿರುವ ಆಯುಸ್ಸನ್ನು, ವೃದ್ಧಾಪ್ಯದ ಗುರುತುಗಳನ್ನು ಖಂಡಿತಾ ತಡೆಯಬಹುದು. ಹೆಚ್ಚುತ್ತಿರುವ ವಯಸ್ಸನ್ನು ತಗ್ಗಿರುವಂತೆ ತೋರಿಸಬಹುದು. ಇದಕ್ಕಾಗಿ ದುಬಾರಿ ಕ್ರೀಂ, ಲೋಶನ್ ಎನರ್ಜಿ ಟಾನಿಕ್ ಗಳ ಅಗತ್ಯವಿಲ್ಲ. ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದಲೇ ಇದನ್ನು ಸಾಧಿಸಬಹುದು. ಇವುಗಳ ದೆಸೆಯಿಂದಲೇ ನಮ್ಮ ಪ್ರಾಚೀನ ಕಾಲದ ಹಿರಿಯರು 100 ವರ್ಷಗಳಿಗೂ ಮೇಲ್ಪಟ್ಟು ಸ್ವಸ್ಥ, ಆನಂದಮಯ ಜೀವನ ನಡೆಸುತ್ತಿದ್ದರು. ಹೌದು, ಆ್ಯಂಟಿ ಏಜಿಂಗ್ ಫುಡ್ ಕುರಿತಾಗಿ ನೀವು ಅಗತ್ಯ ಅರಿಯಬೇಕು.
ನಮ್ಮ ಅಡುಗೆಮನೆಯಲ್ಲೇ ಲಭ್ಯವಿರುವ ಇಂಥ ಹಲವಾರು ವಸ್ತುಗಳನ್ನು ನಿತ್ಯ ಬಳಸುವುದರಿಂದ ದಿನೇದಿನೇ ಹೆಚ್ಚುವ ವಯಸ್ಸನ್ನು ತಡೆಯಬಹುದು. ಈ ರೀತಿ ಚಿರಯೌವನ ಉಳಿಸಿಕೊಳ್ಳಲು ಇದು ಮೂಲ ಇಂಧನವಾಗಿದೆ.
ಆಹಾರ ಪದ್ಧತಿಯ ಇಂಥ ಆರೋಗ್ಯಕರ ಅಭ್ಯಾಸದಿಂದ ಅದರ ಪ್ರಭಾವವನ್ನು ನಿಮ್ಮ ಚರ್ಮ, ದೇಹ ಮತ್ತು ಮುಖದ ಮೇಲೆ ಮೂಡುವಂತೆ ಮಾಡಿ. ಈ ಹೊಸ ವರ್ಷದಲ್ಲಿ ನೀವು ಆ್ಯಂಟಿ ಏಜಿಂಗ್ ಫುಡ್ ನ್ನು ನಿಮ್ಮದಾಗಿಸಿ ಕೊಂಡು ಚಿರಯೌವನ ಉಳಿಯುವಂತೆ ಮಾಡಿ. ಇದರಿಂದಾಗಿ ದೀರ್ಘ ಕಾಲದವರೆಗೆ ಯೌವನದ ಜೊತೆಗೆ ಆರೋಗ್ಯ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು. ವೃದ್ಧಾಪ್ಯದ ರೋಗಗಳು ನಿಮ್ಮನ್ನು ಎಂದೂ ಕಾಡಲಾರವು.
ಮೊಟ್ಟೆ :
ಇದರಲ್ಲಿ ವಿಟಮಿನ್ಸ್ ತುಂಬಿರುತ್ತದೆ. ಇದು ಹೆಚ್ಚುತ್ತಿರುವ ವಯಸ್ಸನ್ನು ನಿಯಂತ್ರಿಸುವಲ್ಲಿ ಪೂರಕ. ಪ್ರತಿದಿನ 2 ಮೊಟ್ಟೆ ಸೇವಿಸುವುದರಿಂದ ದೇಹ ನಶಿಸುತ್ತಿರುವ ತನ್ನ ಜೀವಕೋಶಗಳನ್ನು ಪುನರುಜ್ಜೀವನ ಗೊಳಿಸಲು ಸಾಕಷ್ಟು ಪ್ರಮಾಣದಲ್ಲಿ ಕೊಬ್ಬು ಮತ್ತು ಪ್ರೋಟೀನ್ ಲಭ್ಯವಾಗುತ್ತದೆ. ಹೀಗಾಗಿ ಇಂದಿನಿಂದಲೇ ನಿಮ್ಮ ರೆಗ್ಯುಲರ್ ಉಪಾಹಾರದಲ್ಲಿ ಅಗತ್ಯ 2 ಮೊಟ್ಟೆ ಇರಲಿ.
ಸೋಯಾ :
ಸೋಯಾಬೀನ್ಸ್, ಸೋಯಾಹಿಟ್ಟು, ಸೋಯಾ ಅರೆಯ ಹಾಲು, ಇದರ ಟೋಫು (ಹಾಲಿನಿಂದ ಪನೀರ್ ತರಹ ತಯಾರಿಸಿಕೊಳ್ಳಿ, ರೆಡಿಮೇಡ್ ಸಹ ಲಭ್ಯ) ಇತ್ಯಾದಿಗಳಲ್ಲಿ ಕಡಿಮೆ ಕೊಬ್ಬಿನಂಶ ಆದರೆ ಹೆಚ್ಚು ಕ್ಯಾಲ್ಶಿಯಂ ಅಂಶ ಇರುತ್ತದೆ. ಸೋಯಾ ಉತ್ಪನ್ನಗಳು ದೇಹವನ್ನು ಆರೋಗ್ಯಕರವಾಗಿ ಹಾಗೂ ಯೌವನ ಉಳಿಸಿಕೊಳ್ಳುವಂತೆ ಮಾಡುತ್ತವೆ. ಇದರ ಬಳಕೆಯಿಂದ ಎಷ್ಟೋ ಬಗೆಯ ಕ್ಯಾನ್ಸರ್ ರೋಗ ಹತ್ತಿರ ಸುಳಿಯುವುದಿಲ್ಲ.