ಜಪಾನ್ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಬುಧವಾರದ ಸ್ಪರ್ಧೆಯಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಪದಕದ ಬೇಟೆಯನ್ನು 12ಕ್ಕೆ ಹೆಚ್ಚಿಸಿದ್ದಾರೆ.
49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು, ಒಟ್ಟು 198 ಕೆಜಿ ಭಾರ ಎತ್ತುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಏಷ್ಯನ್ ಗೇಮ್ಸ್ನಲ್ಲಿ ಅವರ ಚೊಚ್ಚಲ ಪದಕವಾಗಿದೆ. ಅಷ್ಟೇಅಲ್ಲ, ಏಷ್ಯನ್ ಗೇಮ್ಸ್ ವೇಟ್ ಲಿಫ್ಟಿಂಗ್ನಲ್ಲಿ ಭಾರತಕ್ಕೆ 28 ವರ್ಷಗಳ ಬಳಿಕ ಪದಕ ಸಿಕ್ಕಿದೆ.
ಉತ್ತರ ಕೊರಿಯಾದ ರಿ ಸಾಂಗ್ ಗಮ್ ಒಟ್ಟು 215 ಕೆಜಿ ಭಾರ ಎತ್ತಿ ಸತತ ಮೂರನೇ ಏಷ್ಯನ್ ಗೇಮ್ಸ್ ಚಿನ್ನ ಗೆದ್ದರು. ಇಂಡೋನೇಷ್ಯಾದ ಲುಲುಕ್ ಡಯಾನಾ ಟ್ರಿ ವಿಜಯಾನಾ ಒಟ್ಟು 191 ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಸ್ನ್ಯಾಚ್ ವಿಭಾಗದ ಎಲ್ಲ ಪ್ರಯತ್ನಗಳ ಅಂತ್ಯಕ್ಕೆ ಚಾನು 87 ಕೆಜಿ ಭಾರ ಎತ್ತಿ ಮುನ್ನಡೆ ಸಾಧಿಸಿದ್ದರು. ಉತ್ತರ ಕೊರಿಯಾದ ಸ್ಪರ್ಧಿ ರಿ ಸಾಂಗ್ 84 ಕೆಜಿ ತೂಕ ಎತ್ತಿದರು. ನಂತರ ಚಾನು ಕ್ಲೀನ್ ಮತ್ತು ಜರ್ಕ್ನಲ್ಲಿ ಬಲಿಷ್ಠ ಪ್ರದರ್ಶನದ ಅಗತ್ಯವಿತ್ತು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ 107 ಕೆಜಿ ತೂಕ ಎತ್ತಿದರೆ, ನಂತರ 111 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಒಟ್ಟು 198 ಕೆಜಿ ತೂಕದೊಂದಿಗೆ ಇಂಡೋನೇಷ್ಯಾದ ವಿಜಯನಾ ಅವರನ್ನು ಹಿಂದಿಕ್ಕಿದರು.
ಚಾನುಗೆ ಏಷ್ಯನ್ ಗೇಮ್ಸ್ನಲ್ಲಿ ಪದಕ ಮರೀಚಿಕೆಯಾಗಿತ್ತು. ಕಳೆದ ಮೂರು ಆವೃತ್ತಿಗಳಿಂದಲೂ ಅವರು ಪದಕಕ್ಕಾಗಿ ಹೋರಾಡಿದ್ದರು. ಆದರೆ, 2014 ಮತ್ತು 2018ರ ಗೇಮ್ಸ್ನಲ್ಲಿ 9ನೇ ಸ್ಥಾನ ಪಡೆದರೆ, 2023ರ ಗೇಮ್ಸ್ನಲ್ಲಿ 4ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು. ಆದರೆ, ಈ ಬಾರಿ ಅವರು ಸ್ನ್ಯಾಚ್ನಲ್ಲಿ 85 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ನಲ್ಲಿ 105 ಕೆಜಿ ಎತ್ತುವ ಮೂಲಕ ಬೆಳ್ಳಿಗೆ ಮುತ್ತಿಟ್ಟರು.
ವೇಟ್ ಲಿಫ್ಟಿಂಗ್ನಲ್ಲಿ ಭಾರತ ಕೊನೆಯದಾಗಿ ಪದಕ ಗೆದ್ದಿದ್ದು 1998 ರಲ್ಲಿ. ಅಂದಿನ ಏಷ್ಯನ್ ಗೇಮ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್, ವಿಶ್ವ ಚಾಂಪಿಯನ್ಶಿಪ್ ಹಾಗೂ ಕಾಮನ್ವೆಲ್ತ್ ಗೇಮ್ಸ್ಗಳಲ್ಲಿ ಈಗಾಗಲೇ ಪದಕ ಗೆದ್ದಿದ್ದ ಚಾನು, ಇದೀಗ ಏಷ್ಯನ್ ಗೇಮ್ಸ್ನಲ್ಲಿ 28 ವರ್ಷದ ಬಳಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ.





