ಹಬ್ಬಗಳು ನಮಗೆ ಹೊಸ ಉತ್ಸಾಹ ನೀಡುತ್ತವೆ. ಜೀವನಕ್ಕೆ ಹೊಸ ತಿರುವು ಕೊಡುತ್ತವೆ ಎಂದರೂ ತಪ್ಪೇನಿಲ್ಲ.

ಪ್ರತಿ ವರ್ಷದಂತೆ ಈ ವರ್ಷ ಹಬ್ಬಕ್ಕಾಗಿ ಮನೆ ಸ್ವಟ್ಠತೆ, ಅಲಂಕಾರ, ಉಡುಗೊರೆಗಳ ಖರೀದಿ ಎಲ್ಲವನ್ನೂ ಮಾಡಿ ಮುಗಿಸಿರಬಹುದು. ಆದರೆ ನೀವು ಈ ಸಲ ನಿಮ್ಮ ಕುಟುಂಬದವರ ಆರೋಗ್ಯದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿರುವಿರಾ? ಒಂದು ವೇಳೆ `ಇಲ್ಲ' ಎಂದಾದರೆ ಈಗಲಾದರೂ ನಿಮ್ಮ ಹಾಗೂ ಇಡೀ ಕುಟುಂಬದ ಆರೋಗ್ಯದ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಿ. ಅದಕ್ಕಾಗಿ ನೀವು ನಿಮ್ಮ ಅಡುಗೆಮನೆಯ ಮೇಕ್‌ಓವರ್‌ ಮಾಡಿ. ಏಕೆಂದರೆ ನಿಮ್ಮ ಮನೆಯ ಅಡುಗೆಮನೆ ಸ್ವಚ್ಛವಾಗಿದ್ದರೆ ಮತ್ತು ಒಳ್ಳೆಯ ವಾತಾವರಣ ಹೊಂದಿದ್ದರೆ ಇಡೀ ಕುಟುಂಬದ ಆರೋಗ್ಯ ಚೆನ್ನಾಗಿರುತ್ತದೆ.

ಅದಕ್ಕಾಗಿ ಇಂಟೀರಿಯರ್‌ ಡಿಸೈನರ್‌ಗಳ ಮೇಕ್‌ಓವರ್‌ ಟಿಪ್ಸ್ ಗಮನಿಸೋಣ.

ಕಿಚನ್‌ ಸ್ಮಾರ್ಟ್‌ ಆಗಿರಲಿ

ನೀವು ನಿಮ್ಮ ಹಳೆಯ ಅಡುಗೆಮನೆಯಿಂದ ಬೋರ್‌ ಆಗಿದ್ದರೆ, ಅದಕ್ಕೆ ಹೊಸ ಲುಕ್‌ ಕೊಡ ಬಯಸಿದ್ದರೆ, ಹಬ್ಬದ ಈ ಸಂದರ್ಭ ನಿಮಗೊಂದು ಒಳ್ಳೆಯ ಅವಕಾಶವೆಂದೇ ಭಾವಿಸಿ. ಅಂದಹಾಗೆ ಬಹುತೇಕ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಹಲವು ಕಂಪನಿಗಳು ಅನೇಕ ಆಫರ್‌ಗಳನ್ನು ಕೊಡುತ್ತವೆ. ಈ ಆಫರ್‌ಗಳನ್ನು ಗಮನದಲ್ಲಿಟ್ಟುಕೊಂಡು ನೀವು ಎಕ್ಸ್ ಚೇಂಜ್‌ ಆಫರ್‌ ಅನ್ವಯ ಹಳೆಯ ಸಲಕರಣೆಗಳನ್ನು ಕೊಟ್ಟು ಹೊಸ ಸಲಕರಣೆಗಳನ್ನು ಖರೀದಿಸಬಹುದು.

ಅಡುಗೆಮನೆಯಲ್ಲಿ ಹಳೆಯ ಸಲಕರಣೆಗಳನ್ನು ನಿರಂತರವಾಗಿ ಬಳಸುತ್ತಿರುವುದರಿಂದ ಅವು ಇನ್ನಷ್ಟು ಹಳೆಯದಾಗುತ್ತವೆ. ಜೊತೆಗೆ ಅವುಗಳಲ್ಲಿ ಏನಾದರೊಂದು ಕೊಳೆ ಮೆತ್ತಿಕೊಳ್ಳುತ್ತದೆ. ಆ ಬಳಿಕ ಅವನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಅವು ಎಷ್ಟಿರಬೇಕೊ ಅಷ್ಟು ನೈರ್ಮಲ್ಯಕರಣವಾಗಿ ಉಳಿಯುವುದಿಲ್ಲ. ಆದರೆ ಹೊಸ ಉಪಕರಣದ ಜೊತೆ ಹೀಗಾಗುವುದಿಲ್ಲ. ನೀವು ಹಳೆಯ ಉಪಕರಣಗಳ ಬದಲಿಗೆ ಒಂದಿಷ್ಟು ಹಣ ಖರ್ಚು ಮಾಡಿ ಲೇಟೆಸ್ಟ್ ಡಿಸೈನಿನ ಪಾತ್ರೆಗಳನ್ನು ಕೊಂಡುಕೊಳ್ಳಬಹುದು.

ಗೃಹಿಣಿಯರ ಬಜೆಟ್‌ ಹಾಗೂ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಂಗಡಿಯವರು ಕೆಲವು ವಿಶೇಷ ಬಗೆಯ ಪಾತ್ರೆಗಳನ್ನು ತಂದಿದ್ದಾರೆ. ಅದರಲ್ಲಿ ನಾನ್‌ಸ್ಟಿಕ್‌ಕಡಾಯಿ, ತವಾ, ಫ್ರೈಯಿಂಗ್‌ ಪ್ಯಾನ್‌ ಮುಂತಾದ ಮುಖ್ಯವಾಗಿವೆ. ಈ ಪಾತ್ರೆಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಇದರ ಹೊರತಾಗಿ ಇಂಡಕ್ಷನ್‌ ಕುಕ್‌ವೇರ್‌ಗಳಿಗೂ ಬೇಡಿಕೆಯಿದೆ. ಇವುಗಳ ನಿರ್ವಹಣೆ ತುಂಬಾ ಸುಲಭ, ಜೊತೆಗೆ ಫ್ಯಾಷನ್‌ಗೆ ತಕ್ಕಂತೆಯೂ ಇವೆ.

 

ಮಾಡರ್ನ್‌ ಕಿಚನ್‌ ಅಪ್ಲಯೆನ್ಸಸ್‌

shutterstock_183281213-smaller

ಮಾಡರ್ನ್‌ ಕಿಚನ್‌ ಅಪ್ಲಯೆನ್ಸಸ್‌ ಮಿತವ್ಯಯವಂತೂ ಆಗಿರುತ್ತವೆ. ಜೊತೆಗೆ ಇವುಗಳ ಲುಕ್‌ ಕೂಡ ಮಾಡ್ಯುಲರ್‌ ಕಿಚನ್‌ಗೂ ಚೆನ್ನಾಗಿ ಮ್ಯಾಚ್‌ ಆಗುತ್ತವೆ. ಈಗ ಮನೆಗಳಲ್ಲಿ ಇಂಡಕ್ಷನ್‌ ಕುಕಿಂಗ್‌ನ ಹೆಚ್ಚುತ್ತಿರುವ ಬಳಕೆಯಿಂದಾಗಿ ಅಪ್ಲಯೆನ್ಸಸ್‌ಗಳ ಮಾರುಕಟ್ಟೆ ಕೂಡ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ.

ನಾನ್‌ಸ್ಟಿಕ್‌ ಫ್ರೈಯಿಂಗ್‌ ಪ್ಯಾನ್‌ : ಹೊಸ ಪಾತ್ರೆಗಳಲ್ಲಿ ನಾನ್‌ಸ್ಟಿಕ್‌ ಫ್ರೈಯಿಂಗ್‌ ಪ್ಯಾನ್‌ ತೆಗೆದುಕೊಳ್ಳಬಹುದು. ಇದರಲ್ಲಿ ಕಡಿಮೆ ತುಪ್ಪ ಮತ್ತು ಎಣ್ಣೆಯಲ್ಲಿ  ಪದಾರ್ಥಗಳನ್ನು ಕರಿಯಬಹುದು. ಇವುಗಳಲ್ಲಿ ತಯಾರಿಸಲಾದ ಆಹಾರ ನಿಮ್ಮ ಆರೋಗ್ಯಕ್ಕೂ ಹಿತಕರವಾಗಿರುತ್ತದೆ. ಏಕೆಂದರೆ ಇದರಲ್ಲಿ ತಯಾರಿಸಲಾದ ಆಹಾರಗಳಿಂದ ನೀವು ಹೆಚ್ಚುವರಿ ಕ್ಯಾಲೋರಿ ಮತ್ತು ಕೊಬ್ಬಿನಿಂದ ರಕ್ಷಿಸಿಕೊಳ್ಳಬಹುದು.

ಇಂಡಕ್ಷನ್‌ ಕುಕ್ಕರ್‌ : ಹಬ್ಬಗಳ ಈ ಸಂದರ್ಭದಲ್ಲಿ ನೀವು ಇಂಡಕ್ಷನ್‌ ಕುಕ್ಕರ್‌ನ್ನು ಮನೆಗೆ ತೆಗೆದುಕೊಂಡು ಬನ್ನಿ. ಇದರ ಬಳಕೆಯಿಂದ ಗ್ಯಾಸ್‌ ಮತ್ತು ವಿದ್ಯುಚಕ್ತಿ ಬಳಕೆ ಕಡಿಮೆಯಾಗುವುದರ ಜೊತೆಗೆ 1 ಗಂಟೆಯಲ್ಲಿಯೇ ಹಲವರಿಗೆ ಅತ್ಯಂತ ಸುಲಭವಾಗಿ ಅಡುಗೆ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ