ಪಾರ್ಶ್ವವಾಯು ಅಥವಾ ಬ್ರೇನ್‌ ಸ್ಟ್ರೋಕ್‌ ಮೆದುಳಿನ ಯಾವ ಭಾಗದಲ್ಲಾದರೂ ರಕ್ತ ಪೂರೈಕೆ ಸ್ಥಗಿತಗೊಳಿಸುವ ಅಥವಾ ಕಡಿಮೆ ಮಾಡುವುದರಿಂದ ಉಂಟಾಗುತ್ತದೆ. ಮೆದುಳಿನಲ್ಲಿ ಆಕ್ಸಿಜನ್‌ ಹಾಗೂ ಪೋಷಕಾಂಶಗಳ ಕೊರತೆಯಿಂದ ರಕ್ತನಾಳಗಳ ಮಧ್ಯೆ ರಕ್ತ ಗರಣೆಗಟ್ಟುವ ಕಾರಣದಿಂದ ಅದರ ಕ್ರಿಯಾಕಲಾಪಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ಕಾರಣದಿಂದ ಮೆದುಳಿನ ಜೀವಕೋಶಗಳು ನಷ್ಟವಾಗುತ್ತವೆ. ಅದರಿಂದಾಗಿ ಮೆದುಳು ತನ್ನ ನಿಯಂತ್ರಣ ಕಳೆದುಕೊಳ್ಳುತ್ತದೆ. ಅದನ್ನೇ `ಸ್ಟ್ರೋಕ್‌' ಅಥವಾ `ಪಾರ್ಶ್ವವಾಯು' (ಲಕ್ವಾ) ಎಂದು ಹೇಳಲಾಗುತ್ತದೆ. ಸಕಾಲಕ್ಕೆ ಇದಕ್ಕೆ ಚಿಕಿತ್ಸೆ ಕೊಡಿಸದೇ ಇದ್ದರೆ ಮೆದುಳು ಖಾಯಂ ಆಗಿ ಹಾನಿಗೊಳಗಾಗಬಹುದು, ಇಲ್ಲಿ ವ್ಯಕ್ತಿಯ ಸಾವು ಕೂಡ ಸಂಭವಿಸಬಹುದು.

ಪ್ರಸ್ತುತ ವಿಶ್ವದಲ್ಲಿ ಸುಮಾರು 80 ದಶಲಕ್ಷ ಜನರು ಸ್ಟ್ರೋಕ್‌ ನ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 55 ಮಿಲಿಯನ್‌ ನಷ್ಟು ಮಂದಿ ಶಾಶ್ವತ ಅಂಗವಿಕಲತೆಗೆ ತುತ್ತಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಶೇ.25ರಷ್ಟು ಬ್ರೇನ್‌ ಸ್ಟ್ರೋಕ್‌ ನ ರೋಗಿಗಳ ವಯಸ್ಸು 40 ವರ್ಷ ಇರುತ್ತದೆ. ಅದೇ ಕಾರಣದಿಂದ ಅಕ್ಟೋಬರ್‌ ನ್ನು `ವರ್ಲ್ಡ್ ಸ್ಟ್ರೋಕ್‌ ಡೇ' ಎಂದು ಆಚರಿಸಲಾಗುತ್ತದೆ. ಇದರ ಉದ್ದೇಶ ಸ್ಟ್ರೋಕ್‌ ನ್ನು ತಡೆಯುವುದು, ಚಿಕಿತ್ಸೆ ಹಾಗೂ ಸಹಕಾರ ನೀಡುವ ಕುರಿತಂತೆ ಜಾಗರೂಕತೆ ಹೆಚ್ಚಿಸುವುದಾಗಿದೆ. ಈ ಕುರಿತಂತೆ ಮೆದುಳು ರೋಗ ತಜ್ಞ ಹಾಗೂ ನ್ಯೂರಾಲಜಿಸ್ಟ್ ಡಾ. ಮೊಹನೀಶ್‌ ಹೀಗೆ ಹೇಳುತ್ತಾರೆ, ``ಜಗತ್ತಿನಾದ್ಯಂತ ಬ್ರೇನ್‌ ಸ್ಟ್ರೋಕ್‌ ಸಾವಿಗೆ 3ನೇ ಅತಿ ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಭಾರತದಲ್ಲಿಯೇ ಪ್ರತಿ ನಿಮಿಷಕ್ಕೆ 6 ಜನರು ಸಾವಿಗೀಡಾಗುತ್ತಿದ್ದಾರೆ. ಏಕೆಂದರೆ ಇಲ್ಲಿ ಬ್ರೇನ್‌ ಸ್ಟ್ರೋಕ್‌ ನಂತಹ  ವೈದ್ಯಕೀಯ ಸ್ಥಿತಿಯಲ್ಲಿ ಅದರ ಲಕ್ಷಣಗಳು, ಕಾರಣಗಳು, ತಡೆ ಹಾಗೂ ತಕ್ಷಣದ ಉಪಾಯಗಳ ಬಗ್ಗೆ ಜನಜಾಗೃತಿಯ ಕೊರತೆಯಿದೆ. ಬ್ರೇನ್‌ ಸ್ಟ್ರೋಕ್‌ ನ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಿದರೆ ಅವರು ಗುಣಮುಖರಾಗುವ ಸಾಧ್ಯತೆ ಶೇ.50-70 ರಷ್ಟು ಹೆಚ್ಚುತ್ತದೆ.

ಏನು ಕಾರಣ?

ಡಾ. ಮೊಹನೀಶ್‌ ಪ್ರಕಾರ, ಇಂದಿನ ಧಾವಂತದ ಜೀವನದಲ್ಲಿ ಮಾನಸಿಕ ಒತ್ತಡ, ಜೀವನಶೈಲಿ, ಧೂಮಪಾನ, ಮದ್ಯಪಾನ, ಅತಿ ರಕ್ತದೊತ್ತಡ, ಮಧುಮೇಹ, ಬೊಜ್ಜು ಮುಂತಾದ ಬ್ರೇನ್‌ ಸ್ಟ್ರೋಕ್‌ ಗೆ ಕಾರಣವಾಗಿವೆ. ಇದರ ಹೊರತಾಗಿ ಆರಾಮದಾಯಕ ಅಥವಾ ನಿರಂತರ ಕುಳಿತು ಕೆಲಸ ಮಾಡುವ ಶೈಲಿ ಸಹ ಮೆದುಳು ಹಾಗೂ ಹೃದಯ ಸಂಬಂಧಿ ರೋಗಗಳಿಗೆ ಆಮಂತ್ರಣ ನೀಡುತ್ತದೆ. ಇವೆಲ್ಲ ಕಾರಣಗಳು ಯುವ ಜನಾಂಗದವರಲ್ಲಿ ಈ ಕಾಯಿಲೆ ವೇಗವಾಗಿ ಹರಡಲು ಮುಖ್ಯ ಕಾರಣವಾಗಿದೆ.  ಶೇ.80ರಷ್ಟು ಜನರಿಗೆ ವಾತಾವರಣ ಹಾಗೂ ಹವಾಮಾನದಲ್ಲಾದ ಅಸಾಮಾನ್ಯ ಪರಿವರ್ತನೆ ಅದು ನಮ್ಮ ಮೆದುಳು ಹಾಗೂ ತ್ವಚೆಯ ಮೇಲೆ ತದ್ವಿರುದ್ಧ ಪರಿಣಾಮ ಬೀರಬಹುದು. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಮಾರಕವಾಗಿ ಪರಿಣಮಿಸಬಹುದು.

ನರರೋಗ ತಜ್ಞ ಡಾ. ಸಿದ್ಧಾರ್ಥ ಹೀಗೆ ಹೇಳುತ್ತಾರೆ, ಬ್ರೇನ್‌ ಸ್ಟ್ರೋಕ್‌ ನ್ನು ಸಾಮಾನ್ಯವಾಗಿ ನಿರ್ಲಕ್ಷ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ಪ್ರತಿ 6 ಜನರಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಈ ರೀತಿ ಒಮ್ಮೆಯಾದರೂ ಸಿಲುಕುತ್ತಾನೆ. ಚಳಿಗಾಲದಲ್ಲಿ ಇದರ ಸಾಧ್ಯತೆ ಹೆಚ್ಚು. ಹೃದ್ರೋಗ, ಕ್ಯಾನ್ಸರ್‌ ಹಾಗೂ ಮಧುಮೇಹಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನರು ಬ್ರೇನ್‌ ಸ್ಟ್ರೋಕ್‌ ನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ