ಜರ್ಮಿನಿಯ ಪ್ರವಾಸ ಕೈಗೊಂಡಿರುವ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ನೇತೃತ್ವದ ನಿಯೋಗ ಎರಡನೇ ದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದೆ.

ಸಚಿವರ ನಿಯೋಗ ಡಸೆಲ್ಡಾರ್ಫ್‌ನಲ್ಲಿ ಸಾಂಸ್ಥಿಕ ಮತ್ತು ರಾಜ್ಯಮಟ್ಟದ ಸಹಕಾರದ ಕುರಿತು ಸಮಾಲೋಚನೆ ನಡೆಸಿತು.

ವೃತ್ತಿಪರ ಶಾಲೆಗೆ ಭೇಟಿ: ಕರ್ನಾಟಕದ ತಾಂತ್ರಿಕ ತರಬೇತಿ ಪಠ್ಯಕ್ರಮವನ್ನು ಜರ್ಮನ್ ಮಾದರಿಯೊಂದಿಗೆ ಅಳವಡಿಸುವುದು, ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳು ಮತ್ತು ಜಿಟಿಟಿಸಿ ಮತ್ತು ಎಚ್‌ಎಚ್‌ಬಿಕೆ ನಡುವೆ ಜಂಟಿ ಕಾರ್ಯಾಚರಣೆ ನಡೆಸುವ ಕುರಿತು ನಿಯೋಗವು ಸಮಗ್ರ ಚರ್ಚೆ ನಡೆಸಿತು.ಆರ್ಥಿಕ ವ್ಯವಹಾರಗಳ ಸಚಿವಾಲಯ, ನಾರ್ಥ್ ರೈನ್ ವೆಸ್ಟ್ ಫಾಲಿಯಾ (ಎನ್‌ಆರ್‌ಡಬ್ಲ್ಯೂ) ಜೊತೆ ರಚನಾತ್ಮಕ ಕೌಶಲ್ಯಪೂರ್ಣ ವಲಸೆ ಕಾರಿಡಾರ್‌ಗಾಗಿ ಔಪಚಾರಿಕವಾಗಿ ಸಚಿವರು ಪ್ರಸ್ತಾಪಿಸಿದರು. ಭಾಷಾ-ಸನ್ನದ್ಧತೆ, ಉದ್ಯಮ ಅವಕಾಶ ಮತ್ತು ಯುವ ಸುರಕ್ಷತೆಯ ಮೇಲೆ ಹೆಚ್ಚು ಕೇಂದ್ರೀಕರಿಸಲು ಇದೇ ಸಂದರ್ಭದಲ್ಲಿ ಸಚಿವರು ಮನವಿ ಸಲ್ಲಿಸಿದರು.

ತರಬೇತಿ, ಉದ್ಯೋಗ ಮತ್ತು ಶೈಕ್ಷಣಿಕ ಚಲನಶೀಲತೆಯ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ನಾರ್ಥ್ ರೈನ್ ವೆಸ್ಟ್ ಫಾಲಿಯಾ (ಎನ್‌ಆರ್‌ಡಬ್ಲ್ಯೂ) ನಡುವೆ ದೀರ್ಘಾವಧಿಯ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಪ್ರಮುಖ ಹೆಜ್ಜೆ ಇರಿಸಬೇಕಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ