ನವಜಾತ ಶಿಶುವಿನ ಸರಿಯಾದ ಬೆಳವಣಿಗೆಗೆ ಅತ್ಯುತ್ತಮ ವಿಧಾನವೆಂದರೆ ಅದು ಹುಟ್ಟಿದ 1 ಗಂಟೆಯೊಳಗೆ ಅದಕ್ಕೆ ತಾಯಿಯ ಹಾಲು (ಮುಖ್ಯವಾಗಿ ಮೊದಲ ಸಲದ ಹಳದಿ ಹಾಲು, ಕೊಲಸ್ಟ್ರಂ) ಕುಡಿಸಲು ಶುರು ಮಾಡುವುದು. ತಾಯಿಯ ಹಾಲು ಬಹಳಷ್ಟು ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಅದನ್ನು ಯಾವುದೇ ಬೇರೆ ಹಾಲಿನೊಂದಿಗೆ ಹೋಲಿಸಲಾಗದು. ಅದು ಬಿಟ್ಟಿಯಾಗಿ ಸಿಗುತ್ತದೆ. ಸುಲಭವಾಗಿ ಸಿಗುತ್ತದೆ ಮತ್ತು ಸೌಲಭ್ಯಗಳೂ ಇವೆ. ಮಹಿಳೆ ಗರ್ಭ ಧರಿಸಿದಾಗಿನಿಂದ ಹಿಡಿದು ಪ್ರಸವವಾಗುವವರೆಗೆ ಅವಳಲ್ಲಿ ಅನೇಕ ಶಾರೀರಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಉಂಟಾಗುತ್ತವೆ.

ಮಗು ಹುಟ್ಟಿದಾಗ ಅದಕ್ಕೆ ಹಾಲು ಕುಡಿಸುವ ಪ್ರಕ್ರಿಯೆ ಶುರುವಾಗುತ್ತದೆ. ಆರಂಭದ ಕೆಲವು ವಾರಗಳು ಸವಾಲಿನಿಂದ ಕೂಡಿರುತ್ತವೆ. ಹಾಲು ಕುಡಿಸುವ ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಗರ್ಭಾವಸ್ಥೆಯ ನಾಲ್ಕನೆ ತ್ರೈಮಾಸಿಕ ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಸೆಟ್‌ ಆಗುವುದು ಬಹಳ ಸುಲಭ. ಅಂದರೆ ಮಗು ಮತ್ತು ತಾಯಿಯ ತ್ವಚೆಯ ಸಂಪರ್ಕ ಬೇಗ ಆಗಬೇಕು.

ಆದರ್ಶ ಪೋಷಣೆ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನವಜಾತ ಶಿಶುವಿಗೆ ಆರಂಭದ 6 ತಿಂಗಳವರೆಗೆ ತಾಯಿಯ ಹಾಲನ್ನು ಮಾತ್ರ ಕುಡಿಸಬೇಕು. ನಂತರ ಕನಿಷ್ಠ 2 ವರ್ಷಗಳವರೆಗೆ  ತಾಯಿ ಹಾಲನ್ನೂ ಕುಡಿಸುತ್ತಿರಬೇಕು. ಆಗಲೇ ಮಕ್ಕಳ ಆರೋಗ್ಯ ವಿಕಸಿತಗೊಳ್ಳುತ್ತದೆ. ಅದರ ಇಮ್ಯೂನಿಟಿ ಹೆಚ್ಚುತ್ತದೆ.

ಒಂದು ಮೆಡಿಕಲ್ ಸೆಂಟರ್‌ನ ಅಧ್ಯಯನದಿಂದ ತಿಳಿದದ್ದು ಏನೆಂದರೆ ಮಗುವಿಗೆ ಹುಟ್ಟಿದ 6 ತಿಂಗಳವರೆಗೆ ಬರೀ ತಾಯಿ ಹಾಲು ಕುಡಿಸಿದ್ದರೆ ಮಕ್ಕಳಲ್ಲಿ ಗೂರಲು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ. ಈ ಸಂಶೋಧನೆಯ ಆಧಾರದಲ್ಲಿ 5 ಸಾವಿರ ಮಕ್ಕಳನ್ನು ಪರೀಕ್ಷಿಸಲಾಯಿತು. ತಾಯಿಯ ಹಾಲು ಕುಡಿಯದೇ ಬೆಳೆದು ದೊಡ್ಡವರಾದ ಮಕ್ಕಳಲ್ಲಿ ಶುರುವಿನ 4 ವರ್ಷಗಳವರೆಗೆ ಮೇಲುಸಿರು ಬರುವುದು, ಒಣಕೆಮ್ಮು  ಮತ್ತು ಸತತವಾಗಿ ಕಫ ಉಂಟಾಗುತ್ತಿರುವುದು ಇತ್ಯಾದಿ ತೊಂದರೆಗಳು ಇರುತ್ತವೆ. ಎಂದೂ ತಾಯಿಯ ಹಾಲನ್ನು ಕುಡಿಯದ ಮಕ್ಕಳಲ್ಲಿ ಈ ಅಪಾಯ 15 ಪಟ್ಟು ಹೆಚ್ಚು. ಗೊರ ಗೊರ ಶಬ್ದ ಬರುವಿಕೆ 1.4 ಪಟ್ಟು ಹೆಚ್ಚಿರುತ್ತದೆ.

ಸಂಶೋಧನೆಯಲ್ಲಿ ಈ ವಿಷಯವನ್ನೂ ಉಲ್ಲೇಖಿಸಲಾಗಿದೆ. ಆರಂಭದ 4 ತಿಂಗಳವರೆಗೆ ಫಾರ್ಮ್‌ ಹಾಲು ಕುಡಿಸಿದ ಮಕ್ಕಳಿಗೆ ಬೇರೆ ಆಯ್ಕೆ ಕೊಡಲಾಗುತ್ತದೆ. ಅವುಗಳಲ್ಲಿ ಬರೀ ತಾಯಿ ಹಾಲು ಕುಡಿಯುವ ಮಕ್ಕಳಿಗೆ ಹೋಲಿಸಿದರೆ ಈ ಲಕ್ಷಣಗಳು ವಿಕಸಿತಗೊಳ್ಳುವ ಅನುಮಾನ ಹೆಚ್ಚಾಗಿರುತ್ತದೆ. ಆದ್ದರಿಂದ ಉಸಿರಾಟದ ಸಮಸ್ಯೆಗಳಿಂದ ಮಗುವಿನ ಸಾವನ್ನು ತಡೆಯಲು ಅತ್ಯಂತ ಸುಲಭದ ಹಾಗೂ ಅಗ್ಗದ ಆಯ್ಕೆ ಅದಕ್ಕೆ ಸ್ತನ್ಯಪಾನ ಮಾಡಿಸುವುದು. ತಾಯಿಯ ಹಾಲನ್ನು ಮಾತ್ರ ಕುಡಿಯುವ ಮಕ್ಕಳ ಸಾವಿನ ಭಯ ಆರಂಭದ 6 ತಿಂಗಳವರೆಗೆ ಇತರ ಮಕ್ಕಳಿಗೆ ಹೋಲಿಸಿದರೆ 14 ಪಟ್ಟು ಕಡಿಮೆ ಇರುತ್ತದೆ.

ಒಳ್ಳೆಯ ಅನುಭವ

ಒಬ್ಬ ತಾಯಿಯಾಗಿ, ಸ್ತನ್ಯಪಾನ ಮಾಡಿಸುವುದು ಬಹಳ ಒಳ್ಳೆಯ ಅನುಭವ. ಏಕೆಂದರೆ ತಾಯಂದಿರು ತಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತಾರೆ. ಪ್ರಸವದ ನಂತರ 1 ಗಂಟೆಯೊಳಗೆ ಸ್ತನ್ಯಪಾನ ಮಾಡಿಸಿ ತಾಯಿ ತನ್ನ ಮಗುವಿಗೆ ಕೊಲಸ್ಟ್ರಂ ಕುಡಿಸುತ್ತಾಳೆ. ಅದು ಮಕ್ಕಳ ಆರೋಗ್ಯವನ್ನು ಚೆನ್ನಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಪ್ರಸವದ ನಂತರ ಮೊದಲ ಬಾರಿ ಬರುವ ಗಟ್ಟಿಯಾದ ಹಳದಿ ದ್ರವವಾಗಿದ್ದು, ಅದರಿಂದ ಅನೇಕ ಲಾಭಗಳಿವೆ.

ತಾಯಿಯ ಹಾಲು ಮಗುವಿನಲ್ಲಿ ಆ್ಯಂಟಿಬಾಡಿಗಳನ್ನು ತಲುಪಿಸುವ ಕೆಲಸ ಮಾಡುತ್ತದೆ. ಅದು ಎಲ್ಲ ರೀತಿಯ ಸೋಂಕುಗಳು ಮತ್ತು ಅಲರ್ಜಿಯಿಂದ ಮಗುವನ್ನು ರಕ್ಷಿಸುತ್ತದೆ. ತಾಯಿ ಹಾಲು ಮಕ್ಕಳಿಗೆ ಸಂಪೂರ್ಣ ಆಹಾರ. ಒಂದುವೇಳೆ ಮಗು ಸ್ತನ್ಯಪಾನದಿಂದ ವಂಚಿತವಾಗಿದ್ದರೆ ಅದಕ್ಕೆ ಯಾವುದೇ ರೀತಿಯ ಸೋಂಕು ಉಂಟಾಗಬಹುದು. ಅವುಗಳಲ್ಲಿ ಕಿವಿಯ ಸೋಂಕು, ಉಸಿರಾಟದ ಸಮಸ್ಯೆ, ಎಕ್ಝಿಮಾ, ಎದೆಯಲ್ಲಿ ಸೋಂಕು, ಸ್ಥೂಲತೆ, ಹೊಟ್ಟೆಯಲ್ಲಿ ಸೋಂಕು, ಡಯಾಬಿಟೀಸ್‌ ಇತ್ಯಾದಿ  ಸೇರಿವೆ.

ಇದರ ಮಹತ್ವ ತಿಳಿಯಿರಿ

ತಾಯಿಯ ಹಾಲು ಮಗುವಿಗೆ ವಿಶೇಷವಾಗಿ ತಯಾರಾಗುತ್ತದೆ. ಅದರಲ್ಲಿ ಸೇರಿರುವ ಅಂಶಗಳು ಅಗತ್ಯಕ್ಕೆ ಮತ್ತು ಸಮಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಆದ್ದರಿಂದ ಈ ಕಾಲದ ತಾಯಂದಿರು ಸ್ತನ್ಯಪಾನ ಎಷ್ಟು ಮಹತ್ವಪೂರ್ಣ, ಮಗುವಿನ ವಿಕಾಸ ಹಾಗೂ ಪ್ರಗತಿಗೆ ಅತ್ಯಂತ ಸಹಾಯಕ ಎಂದು ತಿಳಿಯಬೇಕು. 6 ತಿಂಗಳವರೆಗಿನ ಮಗುವಿಗೆ ಸ್ತನ್ಯಪಾನ ಮಾಡಿಸುವಾಗ ಬೇರೇನೂ ಆಹಾರ ಕೊಡುವ ಅಗತ್ಯವಿಲ್ಲ. ಅಷ್ಟು ಮಾಡಿದರೆ ನಿಮ್ಮ ಮಗುವನ್ನು ಉಬ್ಬಸದಂತಹ ಹಲವಾರು ರೋಗಗಳಿಂದ ರಕ್ಷಿಸಬಹುದು.

– ಎಂ.ಎನ್‌. ಅಮೃತಾ    

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ