ಬೇಬಿ ಸ್ಕಿನ್ಕೇರ್

ಮಕ್ಕಳ ಚರ್ಮ ಬಹಳ ಸೆನ್ಸಿಟಿವ್ ‌ಆಗಿರುತ್ತದೆ. ಹೀಗಾಗಿ ಚಿಕ್ಕ ಮಕ್ಕಳಿಗಾಗಿ ನಾವು ಒಂದಿಷ್ಟೂ ಯೋಚಿಸದೆ ಯಾವುದೋ ಪ್ರಾಡಕ್ಟ್ ಬಳಸಿ ಸ್ನಾನ ಮಾಡಿಸಿದರಾಯಿತು ಎಂದುಕೊಂಡರೆ ಅದು ತಪ್ಪು. ಅದರಲ್ಲೂ ಮುಖ್ಯವಾಗಿ ಹಿರಿಯರಾದ ನಾವು ಬಳಸುವಂಥ ಸೋಪು, ಶ್ಯಾಂಪೂ ಇತ್ಯಾದಿ ಮಕ್ಕಳಿಗೆ ಬಳಸಲೇಬಾರದು. ಏಕೆಂದರೆ ಅವರ ಅತಿ ನಾಜೂಕಾದ ಕೋಮಲ ಚರ್ಮಕ್ಕೆ ಸಾಫ್ಟ್, ಕೆಮಿಕಲ್ ಫ್ರೀ, ಜೆಂಟಲ್ ಪ್ರಾಡಕ್ಟ್ಸ್ ನ್ನೇ ಸದಾ ಬಳಸಬೇಕು. ಈ ವಿಚಾರವಾಗಿ ಚರ್ಮತಜ್ಞರ ಸಲಹೆಗಳನ್ನು ತಿಳಿಯೋಣ.

ನೋ ಮಿಸ್ಟೇಕ್ಇನ್ಶವರ್

ಮಗುವಿಗೆ ನೀವು ಸ್ನಾನ ಮಾಡಿಸುವಾಗೆಲ್ಲ, ಕುದಿ ನೀರು ಬೇಡ. ಮಗುವಿಗೆ ಹಿತಕರ ಎನಿಸುವಂಥ ಬೆಚ್ಚಗಿನ ನೀರಿರಲಿ. ಇದರಿಂದ ಮಗು ಸೇಫ್‌ ಮಾತ್ರವಲ್ಲದೆ, ಅದರ ಚರ್ಮಕ್ಕೂ ಯಾವುದೇ ಬಗೆಯ ಹಾನಿ ಆಗುವುದಿಲ್ಲ. ಏಕೆಂದರೆ ಮಗುವಿನ ಚರ್ಮ ಮತ್ತು ಸಿಸ್ಟಂ ಎರಡೂ ಬಹಳ ಸೆನ್ಸಿಟಿವ್ ‌ಆಗಿರುತ್ತದೆ. ಇನ್ನೊಂದು ವಿಷಯ ಗಮನಿಸಿ, ಮಗುವಿಗೆ ಕೇವಲ 4-5 ನಿಮಿಷ ಮಾತ್ರ ಸ್ನಾನ ಮಾಡಿಸಬೇಕು. ಹೆಚ್ಚು ಹೊತ್ತು ಸ್ನಾನ ಮಾಡಿಸಿದರೆ ಅದರ ಚರ್ಮದಲ್ಲಿ ರಾಶೆಸ್‌, ಡ್ರೈನೆಸ್‌, ಹೆಚ್ಚು ಸೆನ್ಸಿಟಿವ್ ‌ಆದಕಾರಣ ಮೈ ಮೇಲೆ ಹೊಪ್ಪಳೆ (ಪೀಲ್‌) ಕಾಣಿಸಿದರೂ ಆಶ್ಚರ್ಯವಿಲ್ಲ.

ಮಗುವಿಗೆ ಸ್ನಾನ ಮಾಡಿಸುವಾಗ ಈ ಎಲ್ಲಾ ಅಂಶಗಳನ್ನೂ ನೆನಪಿಡಿ. ಆಗ ಮಾತ್ರ ಮಗುವಿನ ಚರ್ಮ ಸಾಫ್ಟ್ಟ್, ಸಿಲ್ಕಿ, ಶೈನಿ  ಹೆಲ್ದಿ ಆಗಿರುತ್ತದೆ.

ಸ್ನಾನದ ನಂತರ ಮಾಯಿಶ್ಚರೈಸರ್‌ ಮಗುವಿಗೆ ಬಳಸುವ ಮಾಯಿಶ್ಚರೈಸರ್‌ ಹೇಗಿರಬೇಕು? ಇದಕ್ಕಾಗಿ ಉತ್ತಮ ಸುವಾಸನೆಯುಳ್ಳ ಮಾಯಿಶ್ಚರೈಸರ್‌ ಆರಿಸಲು ಹೋಗದಿರಿ. ಯಾರೋ ಏನೋ ಬಳಸಿದರು ಎಂದು ನಿಮ್ಮ ಮಗುವಿಗೂ ಅದನ್ನೇ ಬಳಸಬೇಡಿ. ಹಿಂದೆ ನಮ್ಮ ದೊಡ್ಡ ಮಗುವಿಗೆ ಇಂತಿಂಥ ಪ್ರಾಡಕ್ಟ್ಸ್ ಬಳಸಿದ್ದೆ, ಆದ್ದರಿಂದ ಎರಡನೇ ಮಗುವಿಗೂ ಅದೇ ನಡೆಯುತ್ತದೆ ಎಂದುಕೊಳ್ಳಬೇಡಿ. ಪ್ರತಿಯೊಂದು ಮಗುವಿನ ಚರ್ಮ ಅತಿ ಸೂಕ್ಷ್ಮ, ವಿಭಿನ್ನವೇ ಆಗಿರುತ್ತದೆ. ಹಾಗಾಗಿ ಅದು ವಿಭಿನ್ನವಾಗಿ ರಿಯಾಕ್ಟ್ ಆಗಬಹುದು.

ಹೀಗಾಗಿ ನೀವು ನಿಮ್ಮ ಮಗುವಿಗಾಗಿ ಮಾಯಿಶ್ಚರೈಸರ್‌ ಅರಿಸುವಾಗೆಲ್ಲ ಅದು ಕೆಮಿಕಲ್ ಫ್ರೀ, ಪ್ಯಾರಾಬಿನ್‌ ಫ್ರೀ, ಫ್ರಾಗ್ರೆನ್ಸ್ ಫ್ರೀ ಆಗಿರಬೇಕು. ಆದಷ್ಟೂ ಇಂಥ ಉತ್ಪನ್ನಗಳಲ್ಲಿ ಝಿಂಕ್‌ ಆಕ್ಸೈಡ್‌ ಇರಬೇಕು ಅಥವಾ ಜೆಂಟಲ್ ಮಾಯಿಶ್ಚರೈಸರ್‌ ನ್ನೇ ಬಳಸಬೇಕು. ಏಕೆಂದರೆ ಇದು ಮಗುವಿನ ಚರ್ಮದ ಹೊರಪದರದ ಮೇಲೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ ಮಗುವಿನ ಚರ್ಮಕ್ಕೆ ಎಕ್ಸ್ ಟ್ರಾ ಕೇರ್‌, ಎಕ್ಸ್ ಟ್ರಾ ಪ್ರೊಟೆಕ್ಷನ್‌ ದೊರಕುತ್ತದೆ.

ಸೂಕ್ತ ಬೇಬಿ ಪೌಡರ್ಆಯ್ಕೆ

ನಿಮ್ಮ ಮಗುವಿಗೆ ಯಾವುದೋ ಒಂದು ಬೇಬಿ ಪೌಡರ್‌ ಕೊಂಡರಾಯಿತೆಂದು ನಿರ್ಲಕ್ಷ್ಯ ವಹಿಸದಿರಿ. ಮಾರ್ಕೆಟ್‌ ನಲ್ಲಿ ನಿಮಗೆ ಹತ್ತು ಹಲವು ಇಂಥ ಪ್ರಾಡಕ್ಟ್ಸ್ ಲಭ್ಯ. ಆದರೆ ನಿಮ್ಮ ಮಗುವಿಗೆ ಎಂಥದ್ದು ಸೂಕ್ತ? ಯೋಚಿಸಿ ಆರಿಸಿ. ಇದಕ್ಕಾಗಿ ನೀವೇ ರಿಸರ್ಚ್ ಮಾಡಿ ಅಥವಾ ಚರ್ಮತಜ್ಞರ ಸಲಹೆ ಪಡೆದು ಅದರಂತೆ ಮುಂದುವರಿಯಿರಿ. ಅಂಥ ಬೇಬಿ ಪೌಡರ್‌ ಮಾತ್ರ ನಿಮ್ಮ ಮಗುವಿಗೆ ಸೂಕ್ತ ಆಗಬಲ್ಲದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ