ಹೃದಯ ನಮ್ಮ ಶರೀರದ ಮುಖ್ಯ ಅಂಗ. ಇದು ಶರೀರದ ಪ್ರತಿಯೊಂದು ಭಾಗಕ್ಕೂ ಲಕ್ಷಗಟ್ಟಲೆ ಗ್ಯಾಲನ್‌ ರಕ್ತವನ್ನು ಪಂಪ್‌ ಮಾಡುತ್ತದೆ. ಹೃದಯ ನಿರ್ವಹಿಸುವ ಕೆಲಸದ ಒತ್ತಡಕ್ಕೆ ಹೃದಯವನ್ನು ಆರೋಗ್ಯವಾಗಿಡಲು ಮತ್ತು ಒಟ್ಟಾರೆ ಚಯಾಪಚಯ ಆರೋಗ್ಯ ಸಕ್ರಿಯವಾಗಿರಲು ನಮ್ಮ ಆಹಾರ ಮತ್ತು ಜೀವನಶೈಲಿ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೃದಯದ ಸಂಪೂರ್ಣ ಆರೋಗ್ಯದ ವಿಷಯ ಬಂದಾಗ ಅನೇಕ ವಿಷಯಗಳಲ್ಲಿ ನಾವು ತಪ್ಪು ಮಾಡುತ್ತೇವೆ. ಹೃದಯದ ಸಮಸ್ಯೆಗಳನ್ನು ಉಂಟು ಮಾಡುವ ಅನೇಕ ಅಂಶಗಳಲ್ಲಿ ಮುಖ್ಯವಾಗಿರುವುದೆಂದರೆ ನಮ್ಮ ಅಡುಗೆಮನೆಯಲ್ಲಿ ಅಡಗಿರುವ ದೋಷ ಎಂದರೆ ನಿಮ್ಮ ಅಡುಗೆ ಎಣ್ಣೆ. ಏಕೆಂದು ಇಲ್ಲಿ ನೋಡಿ.

ಯಾವುದೇ ಭಾರತೀಯ ಮನೆಯಲ್ಲಿ ಅಡುಗೆ ಮಾಡುವಾಗ ಪ್ಯಾನ್‌ಗೆ ಮೊದಲು ಹಾಕುವುದು ಎಣ್ಣೆ. ಅಡುಗೆ ಎಣ್ಣೆಯನ್ನು ಕೊಬ್ಬಿನಿಂದ ತಯಾರಿಸಲಾಗಿರುತ್ತದೆ. ಇವುಗಳಲ್ಲಿ ಕೆಲವು ಒಳ್ಳೆಯದಾಗಿದ್ದರೆ, ಮತ್ತೆ ಕೆಲವು ಅಷ್ಟೇನೂ ಒಳ್ಳೆಯದಲ್ಲ, ಎಂದರೆ ನೀವು ಎಣ್ಣೆ ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ? ಖಂಡಿತಾ ಇಲ್ಲ. ನೀವು ಸೂಕ್ಷ್ಮ ಅಂಶಗಳನ್ನು ಓದಿ ನಿಮ್ಮ ಅಡುಗೆ ಎಣ್ಣೆ ಯಾವುದರಿಂದ ತಯಾರಾಗಿದೆ ಎಂದು ತಿಳಿಯುವುದು ಮುಖ್ಯ. ಮಾರುಕಟ್ಟೆಯಲ್ಲಿ  ಅನೇಕ ಎಣ್ಣೆ ಬ್ರಾಂಡ್‌ಗಳು ಲಭ್ಯವಿದ್ದು, ಪ್ರತಿಯೊಂದೂ ಒಂದಕ್ಕಿಂತ ಮತ್ತೊಂದು ಉತ್ತಮವೆಂದು ಬಿಂಬಿಸುತ್ತವೆ. ಆದರೆ ಸೂಕ್ತವಾದ ಆಯ್ಕೆ ಮಾಡುವುದು ನಿಮ್ಮ ಜವಾಬ್ದಾರಿ. ನೀವು ಸರಿಯಾದ ಅಡುಗೆ ಎಣ್ಣೆ ಆಯ್ಕೆ ಮಾಡುವಾಗ, ರುಚಿಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲದೇ ಆರೋಗ್ಯಕರವಾದ ಮತ್ತು ನಿಮ್ಮ ಕುಟುಂಬದ ಯೋಗಕ್ಷೇಮ ನಿರ್ವಹಿಸುವ ಆಹಾರ ಸಿದ್ಧಪಡಿಸುತ್ತಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಇದನ್ನು ಸರಳವಾಗಿ ತಿಳಿಸಲು, ಮುಂದಿನ ಬಾರಿ ನೀವು ಅಡುಗೆ ಎಣ್ಣೆ ಖರೀದಿಸುವಾಗ ನೋಡಬೇಕಾದ 5 ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಅಧಿಕ ಒಮೇಗಾ 3

ಒಮೇಗಾ 3 ಉರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು ರಕ್ತದಲ್ಲಿ ಸಾಮಾನ್ಯವಾದ ಕೊಲೆಸ್ಟ್ರಾಲ್ ಮಟ್ಟ ನಿರ್ವಹಿಸಲು ನೆರವಾಗುತ್ತದೆ. ಇವೆರಡೂ ಹೃದಯ ರಕ್ತನಾಳಗಳ ರೋಗಕ್ಕೆ ಅಪಾಯದ ಅಂಶಗಳೆಂದು ಪರಿಗಣಿಸಲಾಗಿದೆ. ಒಮೇಗಾ 3 ಸಾಮಾನ್ಯವಾಗಿ ಸಮುದ್ರ ಆಹಾರದಲ್ಲಿ ಕಂಡುಬರುತ್ತದೆ. ನೀವು ಸಸ್ಯಾಹಾರಿಯಾಗಿದ್ದರೆ, ನಿಮ್ಮ ದೈನಂದಿನ ಆಹಾರದಿಂದ ಸಾಕಷ್ಟು ಒಮೇಗಾ 3 ಪಡೆಯಲು ಒಮೇಗಾ 3 ಸಮೃದ್ಧವಾಗಿರುವ ಅಡುಗೆ ಎಣ್ಣೆ ಬಳಸುವುದು ಮುಖ್ಯ.

ಒಮೇಗಾ 6 ರಿಂದ ಒಮೇಗಾ 3ರರೆಗೆ ಸೂಕ್ತ ಅನುಪಾತ ಹೃದಯದ ಒಟ್ಟಾರೆ ಆರೋಗ್ಯ ನಿರ್ವಹಿಸುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಒಮೇಗಾ 6 ರಿಂದ ಒಮೇಗಾ 3ರ ಅನುಪಾತ ಸೇವನೆಗೆ 5 ಮತ್ತು 10ರ ನಡುವಿದ್ದರೆ ಸೂಕ್ತ ಎಂದು ತಿಳಿಸಿದೆ. ಒಮೇಗಾ 3 ಪ್ರಮಾಣ ಅಧಿಕವಾಗಿದ್ದಲ್ಲಿ ಹಾಗೂ ಅದು ಸರಿಯಾದ ಅನುಪಾತದಲ್ಲಿ ಸಂಯೋಜನೆಯಾಗಿದ್ದಲ್ಲಿ ಹೃದಯದ ಒಟ್ಟಾರೆ ಆರೋಗ್ಯ ನಿರ್ವಹಣೆಗೆ ನೆರವಾಗುತ್ತದೆ.

ಅಧಿಕ ಮಾನೋಸ್ಯಾಚುರೇಟೆಡ್‌ ಫ್ಯಾಟಿ ಆ್ಯಸಿಡ್ಸ್

ಮಾನೋಸ್ಯಾಚುರೇಟೆಜ್‌ ಕೊಬ್ಬು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಅವು ಆಹಾರ ತಯಾರಿಕೆಯಲ್ಲಿ ಎಣ್ಣೆಯ ಹೀರುವಿಕೆಯನ್ನು ಕಡಿಮೆ ಮಾಡುವುದರಿಂದ ಹೊಟ್ಟೆಗೆ ಆಹಾರ ಹಗುರವೆನಿಸುತ್ತದೆ ಮತ್ತು ಜೀರ್ಣ ಸುಲಭವಾಗುತ್ತದೆ. ಅವು ಆರೋಗ್ಯ ಮತ್ತು ರುಚಿಯ ಮೇಲೆ ಯಾವುದೇ ಹೊಂದಾಣಿಕೆ ಇಲ್ಲದೇ ಆಹಾರದಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಹಾಗೇ ಉಳಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ