ಕೊಬ್ಬರಿ ಎಣ್ಣೆ ಪೌಷ್ಟಿಕಾಂಶಗಳ ಗಣಿಯೇ ಸರಿ! ಮೊದಲೇ ಕಲ್ಪವೃಕ್ಷ ಎನಿಸಿರುವ ತೆಂಗಿನ ಮರದ ಉತ್ಪನ್ನ, ಎಂದಮೇಲೆ ಕೇಳಬೇಕೇ? ಇದು ನಮ್ಮ ಆರೋಗ್ಯಕ್ಕೆ ಹೆಚ್ಚು ಉಪಕಾರಿ. ನೀವು ನಿಯಮಿತ ರೂಪದಲ್ಲಿ ಇದನ್ನು ಸೇವಿಸುತ್ತಿದ್ದರೆ, (ದೋಸೆ, ಚಪಾತಿ, ಇತರೆ ಅಡುಗೆ ಎಣ್ಣೆ ರೂಪದಲ್ಲಿಯೂ ಸಹ) ಇದು ನಿಮಗೆ ಶಕ್ತಿಯ ಅಮೂಲ್ಯ ಸ್ರೋತ ಮಾತ್ರವಲ್ಲದೆ, ಆರೋಗ್ಯದ ಭಂಡಾರವನ್ನೇ ತೆರೆದಿಡುತ್ತದೆ.
ಬನ್ನಿ, ಕೊಬ್ಬರಿ ಎಣ್ಣೆಯ ಮಹತ್ವ ತಿಳಿಯೋಣ :
ಕೊಬ್ಬರಿ ಎಣ್ಣೆಯಲ್ಲಿ ಸರಿಸುಮಾರು 40% ಲ್ಯಾಸಿಕ್ ಆ್ಯಸಿಡ್ ಇದ್ದು, ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಸಮೃದ್ಧವಾಗಿದೆ. ಸಹಜವಾಗಿ ಇದು ದೇಹದ ಇಮ್ಯುನಿಟಿ (ರೋಗ ನಿರೋಧಕ ಶಕ್ತಿ) ಹೆಚ್ಚಿಸುತ್ತದೆ. ಇಷ್ಟು ಮಾತ್ರವಲ್ಲದೆ, ತಾಯಿಯ ಎದೆ ಹಾಲಿನಲ್ಲೂ ಲ್ಯಾಸಿಕ್ ಆ್ಯಸಿಡ್ ಕಂಡುಬರುತ್ತದೆ.
ಅನೇಕ ಸಂಶೋಧನೆಗಳಿಂದ ತಿಳಿದುಬಂದ ವಿಚಾರವೆಂದರೆ ಕೊಬ್ಬರಿ ಎಣ್ಣೆ ಡಯಾಬಿಟೀಸ್ ನಿಯಂತ್ರಿಸುವಲ್ಲಿಯೂ ಪೂರಕ.
ಅನೇಕ ಗಂಭೀರ ರೋಗಗಳಾದ ಅಲ್ಝೈಮರ್, ಅಪಸ್ಮಾರ (ಫಿಟ್ಸ್), ಹೃದ್ರೋಗಗಳಿಗೆ ಉಪಶಮನಕಾರಿ ಹಾಗೂ ಅಪಘಾತದಿಂದ ಮೃತ ಜೀವಕೋಶಗಳ ಪುನರುಜ್ಜೀವನ ಇದೆಲ್ಲ ಕೊಬ್ಬರಿ ಎಣ್ಣೆಯಿಂದ ಖಂಡಿತಾ ಸಾಧ್ಯ.
ಕೊಬ್ಬರಿ ಎಣ್ಣೆಯಲ್ಲಿನ ಲ್ಯಾಸಿಕ್ ಆ್ಯಸಿಡ್ ನಿಂದಾಗಿ ಇದು ಹೃದಯವನ್ನು ಸಂಪೂರ್ಣ ಸ್ವಸ್ಥವಾಗಿಡುವಲ್ಲಿ ಸಮರ್ಥವಾಗಿದೆ. ಜೊತೆಗೆ ಸೋಂಕು ತಗುಲದಂತೆಯೂ ದೇಹವನ್ನು ಕಾಪಾಡಬಲ್ಲದು.
ಕೊಬ್ಬರಿ ಎಣ್ಣೆಯಲ್ಲಿ ಕ್ಯಾಲ್ಶಿಯಂ, ಮೆಗ್ನಿಶಿಯಂ ಮುಂತಾದ ಖನಿಜಾಂಶಗಳು ತುಂಬಿರುವುದರಿಂದ ಇದು ಮೂಳೆಗಳನ್ನು ಸದಾ ಸದೃಢವಾಗಿಡಬಲ್ಲದು.
ಕೊಬ್ಬರಿ ಎಣ್ಣೆಯ ವ್ಯಂಜನಗಳ ಸೇವನೆಯಿಂದ ನಮಗೆ ತಕ್ಷಣ ಶಕ್ತಿಯ ಸಂಚಾರವಾಗುತ್ತದೆ. ಇತರ ಕೊಬ್ಬಿನಾಂಶಗಳಿಗೆ ಹೋಲಿಸಿದರೆ ಈ ಎಣ್ಣೆ ಬಹುಬೇಗ ಜೀರ್ಣಗೊಂಡು ರಕ್ತದಲ್ಲಿ ವಿಲೀನಗೊಳ್ಳುತ್ತದೆ.
ಕೊಬ್ಬರಿ ಎಣ್ಣೆ ನಮ್ಮ ಚರ್ಮದಲ್ಲಿ ಸದಾ ಆರ್ದ್ರತೆ ಉಳಿಯುವಂತೆ ಕಾಪಾಡುತ್ತದೆ. ಆದ್ದರಿಂದ ಇದು ಶುಷ್ಕ ತ್ವಚೆ, ನಿರ್ಜೀವ ಚರ್ಮ, ಅಕಾಲ ನೆರಿಗೆಗಳು ಇತ್ಯಾದಿ ತಡೆಗಟ್ಟುವಲ್ಲಿ ಹೆಚ್ಚು ಲಾಭಕಾರಿ.
ಈ ಎಣ್ಣೆಯಿಂದ ನಿಯಮಿತವಾಗಿ ಹೆಡ್ ಮಸಾಜ್ ಮಾಡುವುದರಿಂದ, ಮಸ್ತಿಷ್ಕಕ್ಕೆ ತಂಪು ಅನಿಸುವುದಲ್ಲದೆ ಟೆನ್ ಶನ್, ಅರೆ ತಲನೋವು ಸಹ ದೂರವಾಗುತ್ತದೆ.
ಈ ಎಣ್ಣೆಗೆ ಗಾಯ ವಾಸಿ ಮಾಡುವ ಸಾಮರ್ಥ್ಯವಿದೆ. ಏಕೆಂದರೆ ಹಾನಿಗೊಳಗಾದ ಗಾಯದ ಚರ್ಮದ ಮೇಲ್ಭಾಗವನ್ನು ಪುನರುಜ್ಜೀಗೊಳಿಸುವಲ್ಲಿ ಇದು ಎತ್ತಿದ ಕೈ.
- ರೇವತಿ