ಒಂದು ಸಲ ಡಯಾಬಿಟೀಸ್‌ ಗೆ ಒಳಗಾದರೆ ಅವರು ಜೀವನ ಪರ್ಯಂತ ಮಧುಮೇಹಿಗಳಾಗಿರುತ್ತಾರೆ. ಏನಿದ್ದರೂ ಅದನ್ನು ನಿಯಂತ್ರಿಸುತ್ತಾ, ಪ್ರಭಾವ ತಗ್ಗಿಸಬೇಕಷ್ಟೆ. ಇದು ತೀವ್ರ ಉಲ್ಬಣಗೊಂಡಾಗ ಕಿಡ್ನಿ ಸಮಸ್ಯೆ, ಕಂಗಳ ಸಮಸ್ಯೆ, ನರಗಳ ದೌರ್ಬಲ್ಯ, ಹೃದ್ರೋಗಳಿಗೆ ದಾರಿ ಮಾಡುತ್ತದೆ.

ಮಧುಮೇಹ ಮಹಿಳೆಯರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಹಿಳೆಯರು ಮುಟ್ಟಂತ್ಯ (ರಜೋನಿವೃತ್ತಿ)ಕ್ಕೆ ಮೊದಲು ಹೃದ್ರೋಗಗಳಿಂದ ಸುರಕ್ಷಿತರಾಗಿರುತ್ತಾರೆ. ಆದರೆ ಮಧುಮೇಹಿಗಳಾದವರಿಗೆ ಈ ಸುರಕ್ಷತೆ ಇಲ್ಲ. ಹೀಗಾಗಿ ಗಂಡಸರಿಗೆ ಇದರಿಂದ ಹೃದ್ರೋಗ ಬರುವ ಸಾಧ್ಯತೆ 3 ಪಟ್ಟು ಹೆಚ್ಚಿದರೆ ಹೆಂಗಸರಿಗೆ 5 ಪಟ್ಟು ಹೆಚ್ಚುತ್ತದೆ.

ಗರ್ಭಾವಸ್ಥೆ ಮತ್ತು ಡಯಾಬಿಟೀಸ್

ಇಷ್ಟು ಮಾತ್ರವಲ್ಲ, ಯಾವ ಮಹಿಳೆಗೆ ತಾನು ಹೃದ್ರೋಗಿ ಎಂದು ತಿಳಿಯುತ್ತದೋ, ಆಕಸ್ಮಿಕವಾಗಿ ಹಾರ್ಟ್‌ ಅಟ್ಯಾಕ್‌ ಆದಾಗ, ಅದು ಗಂಡಸರಿಗಿಂತ ಹೆಂಗಸರನ್ನೇ ಹೆಚ್ಚು ಬಾಧಿಸುತ್ತದೆ. ಈ ಮಾಹಿತಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಅಧ್ಯಯನದಿಂದ ತಿಳಿದು ಬಂದುದೆಂದರೆ, ಹೆಂಗಸರಿಗೆ ಕಾರ್ಡಿಯೋ ಪ್ರೊಟೆಕ್ಟಿವ್ ‌ಔಷಧಿಗಳನ್ನು ಗಂಡಸರಿಗಿಂತ ಅತಿ ಕಡಿಮೆ ಪ್ರಮಾಣದಲ್ಲಿ ಕೊಡಲಾಗತ್ತದೆ.

ಒಬ್ಬ ಹೆಣ್ಣಿಗೆ ಪ್ರೆಗ್ನೆನ್ಸಿ ಜೀವನದ ಒಂದು ಮಹತ್ವಪೂರ್ಣ ಘಟ್ಟ. ಮುಖ್ಯವಾಗಿ ಈ ಸಂದರ್ಭದಲ್ಲಿ ಮಧುಮೇಹಿ ಅಲ್ಲದ ಹೆಣ್ಣಿಗೂ ಮಧುಮೇಹ ತಗುಲಬಹುದು. ಈ ಸ್ಥಿತಿಯನ್ನೇ ಜೆಸ್ಟೇಶನ್‌ ಅಥವಾ ಟೆಂಪರರಿ ಡಯಾಬಿಟೀಸ್‌ ಎನ್ನುತ್ತಾರೆ. 30-40% ಗರ್ಭವತಿಯರು ಇದರಿಂದ ಪ್ರಭಾವಿತರಾಗುತ್ತಾರೆ. ಇದನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ತಾಯಿ ಕಾರಣ ಮುಂದೆ ಮಗು ಸಹ ಮಧುಮೇಹಕ್ಕೆ ತುತ್ತಾಗಬಹುದು.

ಪಾರಾಗುವುದು ಹೇಗೆ?

ಎಷ್ಟೋ ಹೆಂಗಸರಿಗೆ ಪ್ರೆಗ್ನೆನ್ಸಿಗೆ ಮೊದಲೇ ಮಧುಮೇಹ ತಗುಲಿರಬಹುದು. ಗಮನಿಸಬೇಕಾದ ಅಂಶವೆಂದರೆ ಮಧುಮೇಹಿ ಆಗಿಯೂ ಸಹ ಆಕೆ ಸುರಕ್ಷಿತ ರೀತಿಯಲ್ಲಿ ಯಶಸ್ವಿಯಾಗಿ ಪ್ರೆಗ್ನೆನ್ಸಿ ಪ್ಲಾನ್‌ ಮಾಡಬಹುದು. ಅವಿವಾಹಿತೆಗೆ ಮಧುಮೇಹ ಎಂದು ಗೊತ್ತಾದ ತಕ್ಷಣ, ಮದುವೆ ನಂತರ ಅವಳು ಗರ್ಭಿಣಿ ಆಗಲು ಸಾಧ್ಯವೋ ಇಲ್ಲವೋ ಎಂಬುದೇ ಹಿರಿಯರ ಚಿಂತೆ, ನಂತರ ಸುಸೂತ್ರ ಹೆರಿಗೆ ಕುರಿತಾದುದು. ಇದರ ಬದಲಿಗೆ ಅವಳು ಅವಿವಾಹಿತೆ ಆಗಿಯೇ ಉಳಿದರೂ ಮುಂದಿನ ಭವಿಷ್ಯ ಸುಖಕರ ಆಗುವುದೋ ಇಲ್ಲವೋ ಎಂದು ಚಿಂತಿಸಬೇಕು.

ಸಾಮಾನ್ಯಾಗಿ ಹೆಣ್ಣುಮಕ್ಕಳು ಟೈಪ್‌ 1 ಡಯಾಬಿಟೀಸ್‌ ನಿಂದ ಪ್ರಭಾವಿತರಾಗುತ್ತಾರೆ, ಇದು ಜೀವನಶೈಲಿಗೆ ಸಂಬಂಧಿಸಿದ ರೋಗವಲ್ಲ, ಬದಲಿಗೆ ಒಂದು ಆಟೋ ಇಮ್ಯೂನ್‌ ಮಿಸ್ಟೇಕ್‌ ಎನಿಸಿದೆ. ಇದರಲ್ಲಿ ಇನ್‌ ಸ್ಯುಲಿನ್‌ ಸೂಜಿ ಚುಚ್ಚುವಿಕೆ ಅನಿವಾರ್ಯ. ಮಧುಮೇಹ 2 ರೀತಿಯದು : ಟೈಪ್‌ 2 ಡಯಾಬಿಟೀಸ್‌ ಎಲ್ಲೆಲ್ಲೂ ಕಂಡುಬರುವ ಸಾಮಾನ್ಯ ರೀತಿಯದು. ಯಾವ ಕುಟುಂಬಗಳಲ್ಲಿ ಡಯಾಬಿಟೀಸ್‌, ಸ್ಥೂಲತೆ, ಸದಾ ಸುಖವಾಗಿ ತಿಂದುಂಡು ಕಾಲ ಕಳೆಯುವರೋ ಅಂಥವರಿಗೆ ಇದು ಕಟ್ಟಿಟ್ಟ ಬುತ್ತಿ. ಜೊತೆಗೆ ಹೆಂಗಸರಲ್ಲಿ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಇದ್ದರೆ ಅವರು ತಕ್ಷಣ ಟೈಪ್‌ 2 ಡಯಾಬಿಟೀಸ್‌ ಗೆ ಬಲಿಯಾಗುತ್ತಾರೆ. ಈ ರೋಗ ಯಾರಿಗೆ ಯಾವಾಗ ಬೇಕಾದರೂ ತಗುಲಬಹುದು. ಸಾಮಾನ್ಯವಾಗಿ ಇದು 35ರ ನಂತರ ಶುರುವಾಗುತ್ತದೆ. ಇಲ್ಲಿ ಮೂಲಸಮಸ್ಯೆ ಇನ್‌ ಸ್ಯುಲಿನ್‌ ಉತ್ಪತ್ತಿ ಆಗದೆ ಇರುವುದು. ಇದರಿಂದ ದೇಹ ಇನ್‌ ಸುಲಿನ್‌ ನ ಕೆಲಸಗಳಿಗೆ ಅಡ್ಡಿಪಡಿಸುತ್ತದೆ. ಆರಂಭದ ಸ್ಥಿತಿಯಲ್ಲಿ ಪ್ಯಾಂಕ್ರಿಯಾಸ್‌ ಈ ಸ್ಥಿತಿ ಎದುರಿಸಲು ಹೆಚ್ಚುವರಿ ಇನ್‌ ಸ್ಯುಲಿನ್‌ ಸ್ರವಿಸಲು ಯತ್ನಿಸುತ್ತದೆ. ಈ ಕಾರಣ ಬಹಳ ದಣಿಯುವ ಇದು, ಮುಂದೆ ವಯಸ್ಸಾದಂತೆ  ಇನ್‌ ಸ್ಯುಲಿನ್‌ ಪೂರೈಸಲು ಆಗದೆ, ರಕ್ತದಲ್ಲಿ ಕ್ರಮೇಣ ಹೆಚ್ಚುವರಿ ಶುಗರ್‌ ಏರುತ್ತದೆ. ಹೀಗಾಗಿ ಇದನ್ನು ಸಕ್ಕರೆ ಕಾಯಿಲೆ ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ