ಈ ಮಳೆ, ಚಳಿಗಾಲದಲ್ಲಿ ಕೈಕಾಲುಗಳ ಚರ್ಮದತ್ತ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ. ಹೀಗಾಗಿ ಈ ಸಂದರ್ಭಕ್ಕಾಗಿಯೇ ಇರುವ ಈ ನೈಸರ್ಗಿಕ ಮಾಸ್ಕ್ ಗಳನ್ನು ಟ್ರೈ ಮಾಡಿ ನೋಡಿ......!
ಜನ ಕೇವಲ ನಿಮ್ಮ ಮುಖ ಮಾತ್ರ ಗಮನಿಸದೆ, ನಿಮ್ಮ ಕೈಕಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿಯೂ ನಿಮ್ಮ ವಯಸ್ಸನ್ನು ಅಂದಾಜಿಸಬಲ್ಲರು. ಕೈಗಳಲ್ಲಿನ ಸುಕ್ಕು, ಹಿಮ್ಮಡಿಯ ಒಡೆತ ನೋಡಲು ಹಿಂಸೆ ಎನಿಸುತ್ತದೆ. ಇದರಿಂದ ಅವರು ನಿಮ್ಮನ್ನು ಇರುವ ವಯಸ್ಸಿಗಿಂತ ಹಿರಿಯರೆಂದೇ ಭಾವಿಸುತ್ತಾರೆ.
ಹೀಗಾದಾಗ, ಹೇಗೂ ನಾನು 1-2 ತಿಂಗಳಲ್ಲಿ ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸುವೆ, ಇನ್ನು ಚಿಂತೆ ಏಕೆ ಅಂದುಕೊಳ್ಳಬೇಡಿ. ಈ ಮಾಸ್ಕ್ ಗಳನ್ನು ಬಳಸುವ ಪ್ರಕ್ರಿಯೆ ನಿಮ್ಮ ಕೈಕಾಲುಗಳನ್ನು ಎಕ್ಸ್ ಫಾಲಿಯೇಟ್ ಮಾಡುವುದರ ಜೊತೆಗೆ ಡೀಪ್ ಹೈಡ್ರೇಟ್ ಸಹ ಮಾಡುತ್ತದೆ. ಕೆಲವೇ ದಿನಗಳಲ್ಲಿ ಈ ಜೀವಕೋಶಗಳಲ್ಲಿ ಮತ್ತೆ ಹೊಸ ಪ್ರಾಣವಾಯು ತುಂಬಿಕೊಂಡು ಸಶಕ್ತವಾಗಿ ದುಡಿಯಲಾರಂಭಿಸುತ್ತವೆ. ಈ ಚಕ್ರ ನಿರಂತರ ನಡೆಯುತ್ತದೆ. ಇದರಿಂದ ಚರ್ಮ ಎಷ್ಟೋ ಸಾಫ್ಟ್, ಸ್ಮೂತ್ ಮಾತ್ರವಲ್ಲದೆ ವೆಲ್ ಗ್ರೂಮ್ಡ್ ಆಗಿರುತ್ತದೆ. ಇದನ್ನೇ ಎಲ್ಲಾ ಹೆಂಗಸರೂ ಬಯಸುತ್ತಾರೆ. ಇದಕ್ಕಾಗಿ ಯಾವ ರೀತಿಯ ಮಾಸ್ಕ್ ಹಾಕಿಕೊಂಡರೆ ಚರ್ಮಕ್ಕೆ ಲಾಭಕರ ಎಂದು ತಿಳಿಯೋಣವೇ? :
ಲೀಡರ್ಸ್ ಫುಟ್ ಪೀಲಿಂಗ್ ಮಾಸ್ಕ್ : ನೀವು ಮಳೆ, ಚಳಿಗಾಲದಲ್ಲಿ ಕಾಲಿಗೆ ಸಾಕ್ಸ್ ಧರಿಸಿ ಅಥವಾ ಹೊರಗೆ ಓಡಾಡುವಾಗ ಚಪ್ಪಲಿ ಧರಿಸಿದರೆ, ಅತಿಯಾದ ಥಂಡಿ ಹವೆ ಅಥವಾ ತುಂತುರು ಹನಿ ನಿಮ್ಮ ಪಾದಗಳನ್ನು ಅತಿ ಶುಷ್ಕಗೊಳಿಸಿ ಬಿಡುತ್ತದೆ. ಬದಲಾದ ಋತು ನಿಮ್ಮ ಕೈಕಾಲಿನ ಸೌಂದರ್ಯಕ್ಕೆ ಖಂಡಿತಾ ಹಾನಿ ಮಾಡುತ್ತದೆ. ಈ ಸಂದರ್ಭದಲ್ಲಿ ಫುಟ್ ಫೀಲಿಂಗ್ ಮಾಸ್ಕ್, ನಿಮ್ಮ ಕಾಲುಗಳ ಚರ್ಮವನ್ನು ಸೂಪರ್ ಸಾಫ್ಟ್ ಮಾಡುತ್ತದೆ.
ಅಸಲಿಗೆ ಇದರಲ್ಲಿ ಲ್ಯಾಕ್ಟಿಕ್‌ಗ್ಲೈಕಾಲಿಕ್ ಆ್ಯಸಿಡ್ ಇದ್ದು, ಇದು ಡೆಡ್ ಸ್ಕಿನ್‌ತೊಲಗಿಸಿ, ಪಾದ, ಹಿಮ್ಮಡಿಗಳನ್ನು 100% ಕ್ಲೆನ್ಸ್ಡ್ ಕ್ಲಿಯರ್ ಮಾಡಿ, ಡ್ರೈನೆಸ್ ನಿವಾರಿಸುತ್ತದೆ.
ಲೀಡರ್ಸ್ ಹ್ಯಾಂಡ್ ಮಾಯಿಶ್ಚರೈಸರಿಂಗ್ ಮಾಸ್ಕ್ : ಕೋಮಲ ಕರಗಳು ಯಾರಿಗೆ ಬೇಡ? ಆದರೆ ಎಷ್ಟೋ ಸಲ ನಿರ್ಲಕ್ಷ್ಯದಿಂದಾಗಿ, ಋತು ಬದಲಾವಣೆ ಕಾರಣ, ಕೈಕಾಲು ಬಲು ರಫ್ ಆಗುತ್ತದೆ. ಎಷ್ಟೋ ಸಲ ಚರ್ಮದಲ್ಲಿ ಹೊಪ್ಪಳೆ ಎದ್ದು, ಉದುರಲಾರಂಭಿಸುತ್ತದೆ. ಇದನ್ನು ಸಕಾಲಕ್ಕೆ ನಿವಾರಿಸಿಕೊಳ್ಳದಿದ್ದರೆ, ಕೈಕಾಲು ಬಲು ಕುರೂಪಿಯಾಗಿ ಕಾಣುತ್ತವೆ. ಹೊಪ್ಪಳೆ ಏಳುವ ಕಾರಣ ಉರಿ, ನೋವು, ರಕ್ತ ಒಸರುವಿಕೆಯೂ ಕಾಡುತ್ತದೆ.
ಈ ಸಂದರ್ಭಕ್ಕೆ ಬಳಸಬೇಕಾದುದೇ ಹ್ಯಾಂಡ್ ಮಾಯಿಶ್ಚರೈಸಿಂಗ್ ಮಾಸ್ಕ್. ಇದು ಚರ್ಮದ ಆಳಕ್ಕಿಳಿದು ಉತ್ತಮ ಪರಿಣಾಮ ಬೀರುತ್ತದೆ. ಇದರಲ್ಲಿ ಶಿಯಾ ಬಟರ್, ಕೋಕೋ ಬಟರ್, ಆರ್ಗನ್ ಆಯಿಲ್, ಮ್ಯಾಂಗೊ ಸೀಡ್ ಎಕ್ಸ್ ಟ್ರಾಕ್ಟ್ ನಂಥ ಘಟಕಗಳಿದ್ದು, ಕೈ ಪಾದಗಳ ಭಾಗಕ್ಕೆ ಉತ್ತಮ ಪೋಷಣೆ ಒದಗಿಸುತ್ತವೆ.
ಇನಿಸ್ ಫ್ರೀ ಸ್ಪೆಷಲ್ ಕೇರ್ ಹ್ಯಾಂಡ್ಫುಟ್ ಮಾಸ್ಕ್ : ಸ್ಪೆಷಲ್ ಕೇರ್ ಹ್ಯಾಂಡ್ ಮಾಸ್ಕ್ ನಿಮ್ಮ ಕೈ ಕಾಲುಗಳ ಚರ್ಮಕ್ಕೆ ಮಾಯಿಶ್ಚರೈಸ್‌ನರಿಶ್ ಮಾಡಿ, ಅದನ್ನು ಹೆಲ್ದಿಗೊಳಿಸುತ್ತದೆ. ಕೇವಲ ಕೈ ಕಾಲಿಗೆ ಯಾವುದೋ ಕ್ರೀಂ ಬಳಿದುಕೊಂಡ ಮಾತ್ರಕ್ಕೆ, ಕೆಲಸವಾಗದು. ಉಗುರಿಗೆ ಬಣ್ಣ ಬಳಿದ ಮಾತ್ರಕ್ಕೆ ಕೈ ಅಂದವಾಗದು. ಇದಕ್ಕಾಗಿ ಹ್ಯಾಂಡ್ ಮಾಸ್ಕ್ ನ ಅಗತ್ಯವಿದೆ. ಇದಕ್ಕಾಗಿ ಹರ್ಬಲ್ ಗ್ರೀನ್ ಕಾಂಪ್ಲೆಕ್ಸ್ ಎಕ್ಸ್ ಟ್ರಾಕ್ಟ್ ಜೊತೆ 7 ನ್ಯಾಚುರಲ್ ಹರ್ಬ್ ಎಕ್ಸ್ ಟ್ರಾಕ್ಟ್ ಬಳಸಿದರೆ, ಅದು ಕೈಕಾಲುಗಳ ಚರ್ಮದ ಎಲಾಸ್ಟಿಸಿಟಿ ಹೆಚ್ಚಿಸಿ, ಅದನ್ನು ಸಾಫ್ಟ್, ಸ್ಮೂತ್‌ಬ್ಯೂಟಿಫುಲ್ ಮಾಡುತ್ತದೆ.