ಮುಖಕ್ಕೆ ಹೆಚ್ಚಿನ ಕಾಂತಿ ತಂದುಕೊಂಡು, ಹೆಚ್ಚುತ್ತಿರುವ ವಯಸ್ಸಿನ ಪ್ರಭಾವ ತಗ್ಗಿಸಲು ಬಯಸುವಿರಾದರೆ, ಫೇಸ್ಸೀರಂ ನೀಡುವ ಲಾಭಗಳ ಬಗ್ಗೆ ತಿಳಿಯಿರಿ......!

ಇತ್ತೀಚಿನ ದಿನಗಳಲ್ಲಿ ನಮ್ಮ ಆಧುನಿಕ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ, ಎಲ್ಲೆಲ್ಲೂ ಪರಿಸರ ಮಾಲಿನ್ಯ ಇತ್ಯಾದಿಗಳಿಂದಾಗಿ ನಮ್ಮ ಚರ್ಮ ಸಮಯಕ್ಕೆ ಮೊದಲೇ ನಿರ್ಜೀವ, ಶುಷ್ಕ, ವಯಸ್ಸಾದಂತೆ ಕಂಡುಬರುತ್ತದೆ. ಅಂಡರ್‌ 40+ ನವರಿಗೂ ಸಹ ಈಗೀಗ ಮುಖದಲ್ಲಿ ರಿಂಕಲ್ಸ್, ಕಲೆಗುರುತು, ಆ್ಯಕ್ನೆ ಮೊಡವೆಗಳ ಕಾಟ ತಪ್ಪಿದ್ದಲ್ಲ. ಹೀಗಾಗಿ ಮುಖದ ಚರ್ಮವನ್ನು ನೀಟಾಗಿ ಆರೈಕೆ ಮಾಡಬೇಕಾದುದು ನಮ್ಮ ಕರ್ತವ್ಯ. ಅನಗತ್ಯವಾಗಿ ಅತಿಯಾದ ಮೇಕಪ್‌ ಮಾಡಿಕೊಂಡು ಈ ಸಮಸ್ಯೆಗಳನ್ನು ಮುಚ್ಚಿಡುವ ಬದಲು, ಇದನ್ನು ಸ್ವಾಭಾವಿಕ ರೂಪದಲ್ಲಿಯೇ ಸ್ವಸ್ಥ, ಆಕರ್ಷಕ ಮಾಡಬಹುದು.

ತ್ವಚೆಯ ಸಂರಕ್ಷಣೆಯ ಒಂದು ಮುಖ್ಯ ಭಾಗ ಎಂದರೆ, ಒಂದು ಉತ್ತಮ ಗುಣಮಟ್ಟದ ಫೇಸ್‌ ಸೀರಂ ಬಳಸಿಕೊಳ್ಳುವಿಕೆ. ಇದು ಒಂದು ತರಹದ ಲೈಟ್‌ ವೆಯ್ಟ್ ಮಾಯಿಶ್ಚರೈಸರ್‌ ಎಂದರೂ ತಪ್ಪಲ್ಲ. ವಾಟರ್‌ ಬೇಸ್ಡ್ ಆದ್ದರಿಂದ, ಇದು ತಕ್ಷಣ ಚರ್ಮದೊಳಗೆ ಆಳವಾಗಿ ವಿಲೀನ ಆಗಬಲ್ಲದು, ಅದರಿಂದ ಸಹಜವಾಗಿ ಚರ್ಮವನ್ನು ಅತಿ ಕೋಮಲ, ಮೃದುಗೊಳಿಸಬಲ್ಲದು. ನಿಯಮಿತವಾಗಿ ಸೀರಂ ಬಳಸುವುದರಿಂದ ಚರ್ಮ ಹೆಚ್ಚು ಆರೋಗ್ಯಕರ, ನಳನಳಿಸುವ ತಾರುಣ್ಯ, ಆರ್ದ್ರತೆ ಹಾಗೂ ಹೊಳಪನ್ನು ಗಳಿಸುತ್ತದೆ.

ಇದನ್ನು ಮಾಯಿಶ್ಚರೈಸರ್‌, ಸನ್‌ ಸ್ಕ್ರೀನ್‌ ಹಾಗೂ ಮೇಕಪ್‌ ನ ಕೆಳಭಾಗದಲ್ಲಿ ಒಂದು ಬೇಸ್‌ ಪದರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ 30ರವರೆಗೂ ಚರ್ಮಕ್ಕೆ ಇದರ ಅಗತ್ಯ ಇಲ್ಲವಾದರೂ, ಮುಂದೆ ಕ್ರಮೇಣ ಇದರ ಅಗತ್ಯ ಹೆಚ್ಚುತ್ತದೆ. ಇದರ ಬಳಕೆಯಿಂದ ಅಂಥವರಿಗೂ ಉತ್ತಮ ಆರೋಗ್ಯಕರ, ಕಲೆರಹಿತ ಚರ್ಮ ಸಿಗುತ್ತದೆ. ಕಾಲಕ್ಕೆ ಮೊದಲೇ ಮುಪ್ಪು ಅಮರದಂತೆ ಕಾಪಾಡುತ್ತದೆ. ಸುಕ್ಕುಗಳ ನಿವಾರಣೆಗೆ ಧಾವಿಸುತ್ತದೆ. ನಿಮ್ಮ ಚರ್ಮದ ಕ್ಲೆನ್ಸಿಂಗ್‌ಟೋನಿಂಗ್‌ ನಂತರ, ದಿನಕ್ಕೆ 2 ಸಲ ಈ ಸೀರಂ ಬಳಸಿಕೊಳ್ಳಿ.

ಮುಖಕ್ಕೆ ಇದರ ಅಗತ್ಯವೇನು?

ಯಾರಿಗೆ ಮುಖದಲ್ಲಿ ವಯಸ್ಸು ಹೆಚ್ಚುವಂತೆ ಅಧಿಕ ಸುಕ್ಕುಗಳು, ಆಳವಾದ ಕಲೆಗುರುತು, ಹೈಪರ್‌ ಪಿಗ್ಮೆಂಟೇಶನ್‌, ಆ್ಯಕ್ನೆ, ಕ್ಲೋಸ್ಡ್ ಹೇರ್‌ ಫಾಲಿಕ್ಸ್‌, ಡೀ ಹೈಡ್ರೇಶನ್ನಿನ ಕಾಟಗಳಿವೆಯೋ ಅಂಥವರಿಗೆ ಫೇಸ್‌ ಸೀರಂ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೇಲ್ಕಂಡ ಎಲ್ಲಾ ಸಮಸ್ಯೆಗಳೂ ಕ್ರಮೇಣ ದೂರಾಗುತ್ತವೆ.

ಮುಖದ ಕಲೆಗುರುತುಗಳ ನಿವಾರಣೆಗಾಗಿ : ನಾವು ಹೊರಗೆ ಓಡಾಡಿದಾಗೆಲ್ಲ ಸೂರ್ಯನ UV ಕಿರಣಗಳು ನಮ್ಮ ಚರ್ಮವನ್ನು ನಿರ್ಜೀವಗೊಳಿಸಿ ಹಿಂಸಿಸುತ್ತವೆ. ಹೀಗಾಗಿ ಫೇಸ್‌ ಸೀರಂನಲ್ಲಿನ ಗ್ಲೈಕಾಲಿಕ್‌ ಆ್ಯಸಿಡ್‌, ಚರ್ಮವನ್ನು ಹೊಳೆಯುವಂತೆ ಮಾಡಿ, ಹೊಸ ಕಾಂಪ್ಲೆಕ್ಷನ್‌ ನೀಡುತ್ತದೆ. ನೀವು ಇದನ್ನು ನಿಯಮಿತವಾಗಿ ಬಳಸಿದರೆ, ಕೆಲವೇ ದಿನಗಳಲ್ಲಿ ನಿಮಗೇ ವ್ಯತ್ಯಾಸ ತಿಳಿಯುತ್ತದೆ. ಮುಖದಲ್ಲಿದ್ದ ಗಾಢ ಕಲೆಗುರುತು ತಂತಾನೇ ತಗ್ಗುತ್ತಿರುವುದು ತಿಳಿಯುತ್ತದೆ. 1-2 ತಿಂಗಳ ಬಳಕೆಯಿಂದ ಮುಖದ ಡಾರ್ಕ್‌ ಸರ್ಕಲ್ಸ್, ಸುಕ್ಕುಗಳು ಕ್ರಮೇಣ ದೂರವಾಗುತ್ತವೆ.

ನಿರ್ಜೀವ ಚರ್ಮಕ್ಕೆ ಹೊಸ ಕಾಂತಿ ತುಂಬಲು : ವಯಸ್ಸು ಹೆಚ್ಚ ತೊಡಗಿದಂತೆ, ನಮ್ಮ ಚರ್ಮ ತನ್ನ ಸಹಜ ಕಾಂತಿ ಕಳೆದುಕೊಂಡು ನಿರ್ಜೀವ ಎನಿಸುತ್ತದೆ. ಹೀಗಾಗಿ ಇಂಥ ಚರ್ಮಕ್ಕೆ ಫೇಸ್‌ ಸೀರಂ ಅತ್ಯಗತ್ಯ. ಇದು ಚರ್ಮದ ಆಳಕ್ಕಿಳಿದು, ಚರ್ಮಕ್ಕೆ ಹೊಸ ಕಾಂತಿ ತರಿಸಿಕೊಟ್ಟು, ನಿಮ್ಮ ತಾರುಣ್ಯ ನಳನಳಿಸುವಂತೆ ಮಾಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ