ಹಬ್ಬಗಳಲ್ಲಿ ನೀವು ಅಚ್ಚುಕಟ್ಟಾಗಿ ಅಲಂಕರಿಸಿಕೊಂಡು, ಬಂದ ಅತಿಥಿಗಳ ಉಪಚಾರಕ್ಕೆ ತೊಡಗಿದರೆ, ಎಲ್ಲರ ನಡುವೆ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ. ಹೇಗೆ.....?
ಕಾಲ ಸರಿದಂತೆ ಫ್ಯಾಷನ್ ಬದಲಾಗುವುದು ಲೋಕಾರೂಢಿ. ಇದೀಗ ಲೈಫ್ ಸ್ಟೈಲ್ ದೃಷ್ಟಿಯಿಂದ ನಮ್ಮ ಸ್ಕಿನ್ ಕೇರ್, ಬ್ಯೂಟಿ, ಗ್ರೂಮಿಂಗ್ ನೀಡ್ಸ್ ಸಹ ಬದಲಾಗುತ್ತಿವೆ. ಈ ಶ್ರಾವಣ ಮಾಸದಿಂದ ಹಬ್ಬಗಳ ಸಾಲು ಶುರುವಾಗುತ್ತದೆ. ಇದಕ್ಕಾಗಿ ನಾವು ಕೊಂಚ ಹೊಸತೇನಾದರೂ ಟ್ರೈ ಮಾಡಿದರೆ, ನಮ್ಮ ಖುಷಿಯೂ ಹೆಚ್ಚುತ್ತದೆ, ಹಬ್ಬದ ಸಡಗರ, ಸಂಭ್ರಮಗಳೂ ಹೆಚ್ಚುತ್ತವೆ. ಇದಕ್ಕಾಗಿ ನ್ಯೂ ಏಜ್ ಕಾಸ್ಮೆಟಿಕ್ ಪ್ರಾಡಕ್ಟ್ಸ್ ನಿಂದ ನ್ಯೂ ಅಮೇಝಿಂಗ್ ಲುಕ್ಸ್ ಪಡೆಯಬಹುದು. ಈ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ?
ನ್ಯೂ ಏಜ್ ಕಾಸ್ಮೆಟಿಕ್ ಪ್ರಾಡಕ್ಟ್ಸ್
ಇಂದಿನ ಆಧುನಿಕ ತರುಣಿಯರು ನ್ಯೂ ಏಜ್ ಕಾಸ್ಮೆಟಿಕ್ ಪ್ರಾಡಕ್ಟ್ಸ್ ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಅವರ ಚರ್ಮ ಹೆಚ್ಚು ಕಾಂತಿಯುತ, ಆಕರ್ಷಕ ಅನ್ನಿಸುವುದರ ಜೊತೆಗೆ ಹೆಚ್ಚು ಆರೋಗ್ಯ ತುಂಬಿಕೊಂಡು ಕಳೆಕಳೆಯಾಗುತ್ತಿದ್ದಾರೆ. ಕಾರಣ, ಇದರಲ್ಲಿ ನೈಸರ್ಗಿಕ ವಿಟಮಿನ್ಸ್, ಮಿನರಲ್ಸ್, ಎಸೆನ್ಶಿಯಲ್ ಆಯಿಲ್ಸ್ ಇತ್ಯಾದಿ ಹೇರಳವಾಗಿವೆ. ಇದರಿಂದ ಚರ್ಮಕ್ಕೆ ಹೆಚ್ಚಿನ ಲಾಭವಿದೆ. ಇದರಲ್ಲಿ ಅಡಗಿರುವ ಪ್ರಾಡಕ್ಟ್ಸ್ ಗಮನಿಸೋಣ :
ಅಡ್ವಾನ್ಸ್ಡ್ ಆ್ಯಂಟಿ ರಿಂಕಲ್ ರೆಟಿನಾಲ್ ಫೇಸ್ ಕ್ರೀಂ
ಮುಖದಲ್ಲಿ ಕಾಡು ರಿಂಕಲ್ಸ್ ಯಾರನ್ನೂ ಬಿಟ್ಟಿದ್ದಲ್ಲ. ಹೆಂಗಸರು ತಮ್ಮ ಚರ್ಮ ಸ್ವೀಟ್ 16 ಆಗಿರಬೇಕೆಂದೇ ಬಯಸುತ್ತಾರೆ. ತಪ್ಪಾದ ಬ್ಯೂಟಿ ಪ್ರಾಡಕ್ಟ್ಸ್ ಬಳಕೆ, ಹಾರ್ಮೋನ್ಸ್ ಇಂಬ್ಯಾಲೆನ್ಸ್, ಸ್ಕಿನ್ ಕಡೆ ಸರಿಯಾಗಿ ನಿಗಾ ವಹಿಸದ ಕಾರಣ ಚರ್ಮದಲ್ಲಿ ಏಜಿಂಗ್ ಸಮಸ್ಯೆ ಕಾಡಲು ಆರಂಭಿಸುತ್ತದೆ. ಇಂಥವರಿಗಾಗಿಯೇ ನ್ಯೂ ಏಜ್ ಪ್ರಾಡಕ್ಟ್ಸ್ ನಲ್ಲಿ ಅಡ್ವಾನ್ಸ್ಡ್ ಆ್ಯಂಟಿ ರಿಂಕಲ್ಸ್ ರೆಟಿನಾಲ್ ಫೇಸ್ ಕ್ರೀಂ ಮೊದಲಿಗೆ ಬರುತ್ತದೆ. ಇದು ನ್ಯಾಚುರಲ್ ಕ್ಲಿನಿಕಲಿ ಟೆಸ್ಟೆಡ್ ಆಗಿದ್ದು, ಫೇಶಿಯಲ್ ಮಸಲ್ಸ್ ರಿಲ್ಯಾಕ್ಸ್ ಆಗಲು ನೆರವಾಗುತ್ತದೆ.
ಇದರಲ್ಲಿನ ವಿಟಮಿನ್ ಸಿ ಸಹಜವಾಗಿ ಕೊಲೋಜೆನ್ ನಿರ್ಮಾಣಕ್ಕೆ ಸಹಕರಿಸಿ, ನಿಮ್ಮ ವಯಸ್ಸು ಹೆಚ್ಚಿಸುವ ಚರ್ಮದ ಸೆಲ್ಸ್ ನ್ನು ಸದಾ ಲವಲವಿಕೆಯಿಂದಿಡುತ್ತದೆ. ಇದರಿಂದಾಗಿ ಮುಖದಲ್ಲಿ ಸುಕ್ಕಿನ ಕಾಟ ಇರುವುದಿಲ್ಲ. ಇದರ ಫೇಶಿಯಲ್ ಮಾಯಿಶ್ಚರೈಸರ್ ನಿಂದ ಚರ್ಮದ ವಿಟಮಿನ್ ಲೆವೆಲ್ ಬ್ಯಾಲೆನ್ಸ್ ಆಗುತ್ತದೆ. ಇದನ್ನು ಹಚ್ಚಿಕೊಳ್ಳುವುದರಿಂದ ಮುಖದ ಚರ್ಮ ಎಷ್ಟೋ ಸಾಫ್ಟ್ ಆಗಿ, ಹಬ್ಬಕ್ಕಾಗಿ ಮಾಡಿಕೊಂಡ ಮೇಕಪ್ ಚೆನ್ನಾಗಿ ಕಾಣುವುದಲ್ಲದೆ, ಬಹು ಹೊತ್ತು ಉಳಿಯುತ್ತದೆ. ಇದು ಎಲ್ಲಾ ಬಗೆಯ ಚರ್ಮಕ್ಕೂ ಸೂಟ್ ಆಗುತ್ತದೆ. ಯಾವ ವಯಸ್ಸಿನವರಾದರೂ ಬಳಸಬಹುದು.
ವಿಟಮಿನ್ ಸಿ ಸೀರಂ
ಚರ್ಮ ಆಂತರಿಕಾಗಿ ಹೀಲ್ ಆಗದಿದ್ದರೆ, ನೀವು ಎಂಥ ಮೇಕಪ್ ಮಾಡಿದರೂ, ಬಯಸಿದ ಎಫೆಕ್ಟ್ ಸಿಗುವುದಿಲ್ಲ. ಹೀಗಾಗಿ ಈ ವಿಟಮಿನ್ ಸಿ ಸೀರಂ ಚರ್ಮವನ್ನು ಸೂಪರ್ ಹೈಡ್ರೇಟ್ ಮಾಡುತ್ತದೆ. ಇದರಿಂದ ಸಹಜ ಕಾಂತಿ ಚಿಮ್ಮುತ್ತದೆ. ಇದರಲ್ಲಿನ ನೈಸರ್ಗಿಕ ಘಟಕಗಳಿಂದಾಗಿ ಚರ್ಮಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಇದನ್ನು ಪ್ರತಿದಿನ ಹಚ್ಚಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ. ದ್ರವ ರೂಪದ ಇದು ಚರ್ಮದಲ್ಲಿ ಸುಲಭವಾಗಿ ವಿಲೀನಗೊಳ್ಳುತ್ತದೆ.