ಚಳಿಗಾಲದಲ್ಲಿ ಸನ್ ಸ್ಕ್ರೀನ್ ಅಗತ್ಯವಿಲ್ಲ, ಏಕೆಂದರೆ ಸೂರ್ಯನ ಕಿರಣಗಳು ಚಳಿಗಾಲದಲ್ಲಿ ಚರ್ಮದ ಆಳಕ್ಕೆ ಇಳಿಯಲಾರದು ಎಂದು ನೀವು ಭಾವಿಸಿದ್ದರೆ, ಸನ್ ಸ್ಕ್ರೀನ್ ಈ ಕಾಲದಲ್ಲೂ ಏಕೆ ಬೇಕು ಎಂದು ತಿಳಿದುಕೊಳ್ಳಿ......!
ಚಳಿಗಾಲದಲ್ಲಿ ಚುರಿಚುರಿ ಎನ್ನುವ ಬಿಸಿಲಿಗೆ ಮೈಯೊಡ್ಡುವುದು ಎಲ್ಲರಿಗೂ ಇಷ್ಟ. ಆದರೆ ಎಳೆ ಬಿಸಿಲಿಗೆ ಆಸೆಪಟ್ಟು ನಾವು ನಮ್ಮ ಚರ್ಮವನ್ನು ನಿರ್ಲಕ್ಷಿಸಬಾರದು. ಇದರಿಂದಾಗಿ ಚರ್ಮ ಸೂರ್ಯನ UV ರೇಸ್‌ಗೆ ತುತ್ತಾಗಿ ಹಾನಿಗೀಡಾಗುತ್ತದೆ. ಅದರಿಂದಾಗಿ ಚರ್ಮ ರಫ್‌ಪೇಲ್ ಆಗುತ್ತದೆ. ಹೀಗಾಗಿ ಚಳಿಗಾಲದಲ್ಲೂ ಸೂರ್ಯನ UV ಕಿರಣಗಳ ವಿರುದ್ಧ ರಕ್ಷಣೆ ಪಡೆಯಲು ಸನ್ ಸ್ಕ್ರೀನ್ ಲೋಶನ್ ಅತ್ಯಗತ್ಯ. ಇದಕ್ಕಾಗಿ ಯಾವ ಯಾವ ಬಗೆಯ ಉತ್ಪನ್ನ ಬಳಸಬೇಕೆಂದು ನೋಡೋಣವೇ.....?
ಗ್ರೀನ್ ಬೆರಿ ಆರ್ಗ್ಯಾನಿಕ್ಸ್ ಸನ್ ಸ್ಕ್ರೀನ್ ಸ್ಪ್ರೇ ಲೋಶನ್ : ಈ ಲೋಶನ್ ನಲ್ಲಿ SPF ಕಾರಣ, ಇದು ಚಳಿಗಾಲದ ಬಿಸಿಲಲ್ಲಿ ಅಡ್ಡಾಡಲು ಸಹಕಾರಿ. ಇದನ್ನು ಕಿವೀ ಹಣ್ಣಿನ ಸಾರ, ನ್ಯಾಚುರಲ್ ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ತಯಾರಿಸಲಾಗಿದೆ. ಹೀಗಾಗಿ ಇದು ಚರ್ಮದಲ್ಲಿನ ಫ್ರೀರಾಡಿಕಲ್ಸ್ ವಿರುದ್ಧ ಹೋರಾಡಿ, ಸ್ಕಿನ್ ಸೆಲ್ಸ್ ನ್ನು ನ್ಯಾಚುರಲಿ ಹೈಡ್ರೇಟ್ ಗೊಳಿಸುತ್ತದೆ. ಇದು ಪ್ಯಾರಾಬೇನ್‌ಸಲ್ಫೇಟ್ ಫ್ರೀ. ಇದು ಡ್ರೈ ಸ್ಕಿನ್ ನವರಿಗೆ ಒಂದು ವರದಾನ.
ನ್ಯೂಟ್ರೋಜೆನಾ ಹೈಡ್ರೋಬೂಸ್ಟ್ ಸನ್ ಸ್ಕ್ರೀನ್ : ಇದು ಹೈಡ್ರೋಬೂಸ್ಟ್ ಫಾರ್ಮುಲಾದಿಂದ ಸಮೃದ್ಧವಾಗಿದ್ದು, ಅದರಲ್ಲಿನ ಹ್ಯಾಲೂರೋನಿಕ್ ಆ್ಯಸಿಡ್, ಗ್ಲಿಸರಿನ್ ನಂಥ ಮುಖ್ಯ ಘಟಕ ಹೊಂದಿದೆ. ಚಳಿಗಾಲದ ಶುಷ್ಕ ಹವೆಯ ವಿರುದ್ಧ ಇದು ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿನ ಹೈಡ್ರೋಬೂಸ್ಟ್ SPF ಚರ್ಮಕ್ಕೆ UV ವಿರುದ್ಧ ರಕ್ಷಣೆ ನೀಡುತ್ತದೆ. ಚಳಿಗಾಲದಲ್ಲಿ ಚರ್ಮಕ್ಕೆ ಎಕ್ಸ್ ಟ್ರಾ ಪ್ರೊಟೆಕ್ಷನ್ ನೀಡಲು ನೀವು ಹ್ಯೂಮೆಕ್ಟಿಂಟ್ಸ್ ಯುಕ್ತ ಸೀರಂ ನಂತರ ಈ ಸನ್ ಸ್ಕ್ರೀನ್ ಬಳಸಿದರೆ, ಆಗ ಇದು ನಿಮಗೆ ಹೆಚ್ಚಿನ ರಕ್ಷಣೆಯೊಂದಿಗೆ ಚರ್ಮವನ್ನು ಮತ್ತಷ್ಟು ಹೆಲ್ದಿ, ಸಾಫ್ಟ್ ಸ್ಮೂಥ್ ಗೊಳಿಸುತ್ತದೆ. ಇದರ ಮತ್ತೊಂದು ವೈಶಿಷ್ಟ್ಯ ಎಂದರೆ, ಇದು ಎಲ್ಲಾ ಬಗೆಯ (ಡ್ರೈ, ಆಯ್ಲಿ, ನಾರ್ಮಲ್) ಚರ್ಮದವರಿಗೂ ಉಪಯುಕ್ತ.
ದಿ ಬಾಡಿ ಶಾಪ್ ವಿಟಮಿನ್ ಮಾಯಿಶ್ಚರೈಸಿಂಗ್ ಕ್ರೀಂ : ಚಳಿಗಾಲದಲ್ಲಿ ಈ ವಿಟಮಿನ್‌ಯುಕ್ತ ಕ್ರೀಂ, ಚರ್ಮbನ್ನು ಡೀಪ್ ಹೈಡ್ರೇಟ್‌ಗೊಳಿಸುವುದಷ್ಟೇ ಅಲ್ಲ, ಜೊತೆಗೆ ಚರ್ಮಕ್ಕೆ ಫುಲ್ ಪ್ರೊಟೆಕ್ಷನ್ ಸಹ ನೀಡುತ್ತದೆ. ಅಸಲಿಗೆ ಇದರ ಹ್ಯಾಲೂರೋನಿಕ್ ಆ್ಯಸಿಡ್ ಯುಕ್ತ ಫಾರ್ಮುಲಾ ಚರ್ಮಕ್ಕೆ ಹೆಚ್ಚಿನ ಆರ್ದ್ರತೆ ಒದಗಿಸುವುದರೊಂದಿಗೆ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ರಿಚ್ ರಾಸ್ಪ್ ಬೆರಿ ಸಾರ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡುವುದರ ಜೊತೆಗೆ, ಸೂಪರ್ ಸ್ಮೂತ್ ಗೊಳಿಸುವುದರಲ್ಲಿಯೂ ಸಹಕಾರಿ. ಇದರ ವಿಟಮಿನ್ ಉತ್ತಮಿಕೆಯು ಚರ್ಮಕ್ಕೆ UV ವಿರುದ್ಧ ರಕ್ಷಣೆ ನೀಡುತ್ತಾ, ಚರ್ಮ ಟ್ಯಾನ್, ಡಾರ್ಕ್ ಪ್ಯಾಚೆಸ್, ರಿಂಕಲ್ಸ್ ಗೆ ಈಡಾಗದಂತೆ ಕಾಪಾಡುತ್ತದೆ.
ಬೊಟಾನಿಕಾ ವಿಟಮಿನ್ ಸನ್ ಸ್ಕ್ರೀನ್ ಇದರಲ್ಲಿ ವಿಟಮಿನ್ SPF ಎರಡೂ ಇರುವುದರ ಕಾರಣ, ಇದು ಚರ್ಮಕ್ಕೆ ದೊಡ್ಡ ಮ್ಯಾಜಿಕ್ ಮಾಡುತ್ತದೆ ಎಂದೇ ಹೇಳಬಹುದು. ಇದರ ಕ್ವಿಕ್ ಸ್ಕಿನ್ ಅಬ್ಸಾರ್ಬಿಂಗ್ ಫಾರ್ಮುಲಾ, ಚರ್ಮದ ಪದರಗಳಲ್ಲಿ ಆಳವಾಗಿಳಿದು, ಅದನ್ನು ಸ್ಮೂತ್ ಗೊಳಿಸಿ, ಇಡೀ ದಿನ ಸೂರ್ಯನ UV ಕಿರಣ ಕಾಡದಂತೆ ರಕ್ಷಿಸುತ್ತದೆ. ಇದರ ಝಿಂಕ್ ಟೈಟ್ಯಾನಿಯಂ ಆಕ್ಸೈಡ್ ಕಾರಣ, ಇದು ಚರ್ಮದ Ph ಲೆವೆಲ್ ನ್ನು ಸದಾ ಬ್ಯಾಲೆನ್ಸ್ ಮಾಡುತ್ತದೆ. ಇದನ್ನು ಹಚ್ಚಿಕೊಂಡು ನೀವು ದಿನವಿಡೀ ಹೊರಗೆ ತಿರುಗಾಡಿದರೂ ಅಡ್ಡಿಯಿಲ್ಲ.