ಸಲದ ದೀಪಾವಳಿ ಹಬ್ಬಕ್ಕೆ ನೀವು ಕಲೆರಹಿತ, ಗ್ಲೋ ತುಂಬಿದ ಚರ್ಮ ಹೊಂದಬಯಸಿದರೆ, ಸಲಹೆ ಫಾಲೋ ಮಾಡಿ.....!

ದೀಪಾವಳಿ ಹಬ್ಬ ಬರುವುದನ್ನೇ ಎಲ್ಲರೂ ಕಾಯುತ್ತಾರೆ. ಏಕೆಂದರೆ ಈ ಸಂದರ್ಭದಲ್ಲಿ ಮಾತ್ರ, ಜನ ಎಷ್ಟೇ ಬಿಝಿ ಇದ್ದರೂ ತಮ್ಮ ಕುಟುಂಬ, ನೆಂಟರಿಷ್ಟರು, ಫ್ರೆಂಡ್ಸ್, ಬಂಧುಬಳಗದೊಡನೆ ಕೂಡಿ ಸಂಭ್ರಮಿಸುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ನೀವು ಹೆಚ್ಚು ಸುಂದರವಾಗಿ ಕಂಗೊಳಿಸ ಬಯಸಿದರೆ ತಪ್ಪೇನಿಲ್ಲ, ಅತಿ ಅಗತ್ಯ ಸಹ.

ಈ ಕುರಿತಾಗಿ ಖ್ಯಾತ ಸೌಂದರ್ಯ ತಜ್ಞೆಯರ ಪ್ರಕಾರ, ಹಬ್ಬಗಳಲ್ಲಿ ಮೋಸ್ಟ್ ಬ್ಯೂಟಿಫುಲ್ ಆಗಿ ಕಂಗೊಳಿಸಬೇಕಾದ್ದು ಸಹಜ. ಕೊರೋನಾ ಮಹಾಮಾರಿಯ ಸಂಪೂರ್ಣ ಕಾಟ ಕಳೆದು, ದೀಪಗಳ ಈ ಹಬ್ಬದಲ್ಲಿ ಫ್ಲಾಲೆಸ್‌ ಸ್ಕಿನ್‌ ಪಡೆಯಲು ಈ 7 ಟಿಪ್ಸ್ ಅನುಸರಿಸಿ :

ಮಾಯಿಶ್ಚರೈಸ್‌ ಚರ್ಮವನ್ನು ಸದಾ ಮಾಯಿಶ್ಚರೈಸ್ಡ್ ಆಗಿಡಬೇಕು. ಚರ್ಮವನ್ನು ಹೈಡ್ರೇಟೆಡ್‌ ಹಾಗೂ ಸದಾ ಕಾಂತಿಯುತವಾಗಿ ಕಂಗೊಳಿಸುವಂತೆ ಮಾಡಲು, ಉತ್ತಮ ಮಾಯಿಶ್ಚರೈಸರ್‌ ಕೊಂಡು 2 ಸಲ ಆಗತ್ಯ ಮಾಯಿಶ್ಚರೈಸರ್‌ ಮಾಡಿ.

ಎಕ್ಸ್ ಫಾಲಿಯೇಟ್‌ ಮೈಲ್ಡ್ ಸ್ಕ್ರಬ್‌ ಬಳಸಿ, ವಾರದಲ್ಲಿ 2 ಸಲ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಿಸಿ. ಇದರಿಂದ ಚರ್ಮದ ಹೊರ ಪದರದಿಂದ ಡೆಡ್‌ ಸ್ಕಿನ್‌ ತೊಲಗಿಸಲು ಸಹಾಯ ಸಿಗುತ್ತದೆ. ಇದು ಚರ್ಮದಿಂದ ಕೊಳೆಯ ಪದರ ತೊಲಗಿಸಿ, ಚರ್ಮವನ್ನು ಹೆಚ್ಚು ಕಾಂತಿಯುತ ಗೊಳಿಸುತ್ತದೆ ಹಾಗೂ ಸ್ಕಿನ್‌ ಕೇರ್‌ ಕಾಸ್ಮೆಟಿಕ್ಸ್ ನ್ನು ಚರ್ಮದಲ್ಲಿ ಆಳವಾಗಿ ವಿಲೀನಗೊಳಿಸಲು ನೆರವಾಗುತ್ತದೆ.

ಕ್ಲೆನ್ಸಿಂಗ್

ನಿಮ್ಮ ಸ್ಕಿನ್‌ ಟೈಪ್‌ ಪ್ರಕಾರ, ಸೂಕ್ತ ಕ್ಲೆನ್ಸರ್‌ ಬಳಸಿಕೊಂಡು, ನಿಮ್ಮ ಚರ್ಮವನ್ನು ಕ್ಲಿಯರ್‌ ಆಗಿಸಿ. ಕ್ಲೆನ್ಸಿಂಗ್‌ ಗೆ ಮುನ್ನ ಮೈಸಿಲರ್‌ ವಾಟರ್‌ (ರೆಡಿಮೇಡ್‌ ಕಾಸ್ಮೆಟಿಕ್ಸ್) ನಿಂದ ಅಗತ್ಯ ಶುಚಿಗೊಳಿಸಿ.

ಪೌಷ್ಟಿಕ ಆಹಾರ ಸೇವಿಸಿ

ನಿಮ್ಮ ಆಹಾರದಲ್ಲಿನ ಬಹುತೇಕ ಸಕ್ಕರೆ, ಉಪ್ಪಿನ ಅಂಶ ತೆಗೆದುಬಿಡಿ. ಹಬ್ಬಗಳಲ್ಲಿ ಹೀಗೆ ಮಾಡುವುದು ಕಷ್ಟ ಸಾಧ್ಯ. ಆದರೆ ಹೀಗೆ ಮಾಡುವುದರಿಂದ ರೇಡಿಯೆಂಟ್‌ ಸ್ಕಿನ್‌ ಜೊತೆ ಇಡೀ ದಿನ ಎನರ್ಜೆಟಿಕ್‌ ಆಗಿರಬಲ್ಲಿರಿ.

ರಿಚ್‌ ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಹಣ್ಣುಗಳಾದ ಸಿಟ್ರಸ್‌ ಫ್ರೂಟ್ಸ್, ಬೆರೀಸ್‌, ಅವಕಾಡೋ ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸಿ.

ಚರ್ಮ ಹೊಳೆ ಹೊಳೆಯುವಂತೆ ಮಾಡಲು ವಿಟಮಿನ್‌ ಸಿ  ಯುಕ್ತ ಆಹಾರವನ್ನು ದಿನವೂ ಸೇವಿಸಿ.

ಪ್ಲಂಪಿ ಹೈಡ್ರೇಟೆಡ್‌ ಚರ್ಮಕ್ಕಾಗಿ ಧಾರಾಳ ಪ್ರಮಾಣದಲ್ಲಿ ನೀರು ಸೇವಿಸಿ. ಜೊತೆಗೆ ಹ್ಯಾಲೂರೋನಿಕ್‌ ಆ್ಯಸಿಡ್‌ ಸೀರಂ ಬಳಕೆಯಿಂದಲೂ ಚರ್ಮ ಹೈಡ್ರೇಟೆಡ್‌ಸ್ಮೂತ್‌ ಆಗಿರುತ್ತದೆ. ಈ ಆ್ಯಸಿಡ್‌ ಒಂದು ಶುಗರ್‌ ಮಾಲಿಕ್ಯೂ ‌ಆಗಿದ್ದು, ಚರ್ಮದಲ್ಲಿ ನೈಸರ್ಗಿಕವಾಗಿಯೇ ಇದ್ದು, ನೀರನ್ನು ಕೊಲೋಜೆನ್‌ ಜೊತೆ ಬೆಸೆಯಲು ನೆರವಾಗುತ್ತದೆ. ಇದರಿಂದ ಚರ್ಮ ಕಾಂತಿಯುತವಾಗಿ, ಹೆಚ್ಚು ಹೈಡ್ರೇಟೆಡ್‌ ಆಗಿ ಕಾಣಿಸುತ್ತದೆ. ಈ ಆ್ಯಸಿಡ್‌ ಚರ್ಮದ ಹೈಡ್ರೇಶನ್‌ ಮೇಂಟೇನ್‌ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಫೇಸ್‌ ಆಯಿಲ್ಸ್ ನ್ನು ಡ್ರೈ ಸ್ಕಿನ್‌ ಗಾಗಿ ಬಳಸಿಕೊಳ್ಳಬಹುದು.

ಫೇಸ್‌ ಪ್ಯಾಕ್ಸ್ ಯಾ ಶೀಟ್‌ ಮಾಸ್ಕ್ ನ್ನು ಸಹ ವಾರದಲ್ಲಿ 1-2 ಸಲ ಅಗತ್ಯ ಬಳಸಿಕೊಳ್ಳಿ. ಇದರಿಂದ ನೀವು ರಿಲ್ಯಾಕ್ಸ್ ಆಗಿ, ಸುಸ್ತಾದ ಮುಖ ಕಂಡುಬರದಂತೆ ಅವಾಯ್ಡ್ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ