- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಹಾಸ್ಯ ಲೋಕದಲ್ಲಿ ಖ್ಯಾತಿ ಪಡೆದ ಮಂಜು ಪಾವಗಡ ತಮ್ಮ ವೈಯಕ್ತಿಕ ಜೀವನದ ಮಹತ್ವದ ಸುದ್ದಿಯನ್ನು ಇದೀಗ ಬಹಿರಂಗಪಡಿಸಿದ್ದಾರೆ. 2024ರಲ್ಲಿ ನಂದಿನಿ ಅವರೊಂದಿಗೆ ಸರಳವಾಗಿ ವಿವಾಹವಾಗಿದ್ದ ಮಂಜು, ಈಗಾಗಲೇ ತಂದೆಯಾಗಿರುವ ವಿಚಾರವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ್ದು ಈಗಾಗಲೇ ಏಳು ತಿಂಗಳು ಕಳೆದಿದೆ. ಆದರೆ ಈ ಸಂತಸದ ವಿಷಯವನ್ನು ಇದುವರೆಗೆ ಬಹಿರಂಗಪಡಿಸಿರಲಿಲ್ಲ. ‘ಹೇಳೋಕೆ ಸಮಯ ಸಿಕ್ಕಿರಲಿಲ್ಲ, ಅದಕ್ಕೆ ಹೇಳಿಲ್ಲ. ನಮ್ಮ ಮಗ ತುಂಬಾ ತರ್ಲೆ ಮಾಡ್ತಾನೆ’ ಎಂದು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರರಂಗದವರಲ್ಲದ ನಂದಿನಿಯನ್ನು ಮಂಜು ಪಾವಗಡ ಮದುವೆಯಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಂದಿನಿ ಜೊತೆ 2024ರಲ್ಲಿ ಮಂಜು ಸಪ್ತಪದಿ ತುಳಿದಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 8 ವಿಜೇತರಾದ ಮಂಜು, ಇದೀಗ ZEE5 ನಲ್ಲಿ ಬಿಡುಗಡೆಯಾಗಲಿರುವ ‘ಜೆರಾಕ್ಸ್’ ವೆಬ್‌ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 24ರಿಂದ ಈ ಸರಣಿ ಪ್ರಸಾರವಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ