ಇತ್ತೀಚೆಗೆ ನವದೆಹಲಿಯಲ್ಲಿ `ಮದರ್ಸ್‌ ಡೇ' ಸಲುವಾಗಿ ಲಿಟಿಲ್ ‌ಸ್ಟಾರ್‌ ಸೀನಿಯರ್‌ ಸೆಕೆಂಡರಿ ಸ್ಕೂಲ್, ಚೌಹಾನ್‌ ಪುರ್‌, ಕ್ಯಾರೆವಾರ್‌ ನಗರ್‌, ನವದೆಹಲಿಯಲ್ಲಿ ಒಂದು ದಿನ ಮಟ್ಟಿಗೆ ಪಾಕಕಲೆ ಮತ್ತು ಕ್ರಾಫ್ಟ್ ಕಲೆಗಳ ಸ್ಪರ್ಧೆಗಳನ್ನು ಡೆಲ್ಲಿ ಪ್ರೆಸ್‌ ಸಂಸ್ಥೆಯ ಯುವತಿಯರ ಅಚ್ಚುಮೆಚ್ಚಿನ ಮಾಸಪತ್ರಿಕೆ `ಗೃಹಶೋಭಾ' ಆಯೋಜಿಸಲಾಗಿತ್ತು. ಇದಕ್ಕಾಗಿ ಸುಮಾರು ನೂರಾರು ಹೆಂಗಸರು ಬಂದು ಭಾಗವಹಿಸಿದರು, ಸಾವಿರಾರು ಮಂದಿ ಸಾಕ್ಷಿಯಾದರು.

DSC_9413

ಪಾಕಕಲೆಯ ಪ್ರತಿಭೆಗಳು

ಪಾಕಕಲೆಯ ಸ್ಪರ್ಧೆಯಲ್ಲಿ ಫೈರ್‌ ಲೆಸ್‌ ರೆಸಿಪೀಸ್‌ ಗೆ ಆದ್ಯತೆ ನೀಡಲಾಗಿತ್ತು. ಇದಕ್ಕಾಗಿ 1 ಗಂಟೆ ಕಾಲದ ಸಮಯ ಒದಗಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರು, ಚಾಕಲೇಟ್‌ ರೋಲ್ಸ್ ತಯಾರಿಸಿದ ಭಾರತಿ. 2ನೇ ಸ್ಥಾನ ಪಡೆದವರು, ಮ್ಯಾಂಗೋ ಶ್ರೀಖಂಡ ತಯಾರಿಸಿದ ಊರ್ವಶಿ. 3ನೇ ಸ್ಥಾನ ಪಡೆದವರು ಬ್ರೆಡ್‌ ಡೋನಟ್ಸ್ ತಯಾರಿಸಿದ ಪ್ರೇಮಲತಾ!

DSC_9548

ಇದರ ಹೊರತಾಗಿ 2 ಸಮಾಧಾನಕರ ಪುರಸ್ಕಾರಗಳೂ ದೊರೆತವು. ಚಾಕಲೇಟ್‌ ಕೇಕ್‌ ಗಾಗಿ ನ್ಯಾನ್ಸಿ ಹಾಗೂ ಅಮೃತಸಿರಿ ಲಸ್ಸಿ ತಯಾರಿಸಿದ್ದ ಲಕ್ಷ್ಮಿ ಇದನ್ನು ಪಡೆದರು.

ಈ ವಿಜೇತರು ಮಾತ್ರವಲ್ಲದೆ, ಸುಮಾರು 80ಕ್ಕೂ ಹೆಚ್ಚಿನ ಮಹಿಳೆಯರು ಅನೇಕ ಇನ್ನಿತರ ಸ್ವಾದಿಷ್ಟ ಡಿಶ್‌ ತಯಾರಿಸಿದ್ದರು. ಇವರೆಲ್ಲರಿಗೂ `ಗೃಹಶೋಭಾ' ವತಿಯಿಂದ ಭಾಗವಹಿಸಿದ್ದಕ್ಕಾಗಿ ಪ್ರಶಸ್ತಿಪತ್ರ ಹಂಚಲಾಯಿತು. ಎಲ್ಲಾ ವಿಜೇತರಿಗೂ ಈ ಆಯೋಜನೆಯಲ್ಲಿ ಸೂಕ್ತ ಬಹುಮಾನ ನೀಡಲಾಯಿತು.

DSC_9368

ಕ್ರಾಫ್ಟ್ ಕಲೆಯ ಪ್ರತಿಭೆಗಳು

`ಗೃಹಶೋಭಾ' ಇಲ್ಲಿ ಏರ್ಪಡಿಸಿದ್ದ ಮತ್ತೊಂದು ಸ್ಪರ್ಧೆ ಎಂದರೆ ಕ್ರಾಫ್ಟ್ ಕಲೆಯ ಪ್ರದರ್ಶನ. ಇದರಲ್ಲಿ ಅತ್ಯಂತ ಬ್ಯೂಟಿಫುಲ್ ಆದರಲ್ಲಿ ಆರ್ಟ್‌ ನ 2 ಕಲಾಕೃತಿಗಳನ್ನು ತಯಾರಿಸಿದ್ದ ರೇಖಾ ತೋಮರ್‌ ಮೊದಲ ಸ್ಥಾನ, ತಾಯಿಮಗುವಿನ ಬಿಂಬ ಪ್ರತಿಬಿಂಬ ಕಲಾಕೃತಿ ತಯಾರಿಸಿದ್ದ ಪೂರ್ಣಿಮಾ 2ನೇ ಸ್ಥಾನ, ಸುಂದರ ಫ್ಲವರ್‌ ಪಾಟ್‌ ತಯಾರಿಸಿದ್ದ ಮಮತಾ 3ನೇ ಸ್ಥಾನ ಗಳಿಸಿದರು.

cooking-winneer1

ಇದರ ಜೊತೆ ವಾಲ್ ‌ಹ್ಯಾಂಗಿಂಗ್‌ ರೂಪದ ನವಿಲಿನ ಕಲಾಕೃತಿ ತಯಾರಿಸಿದ್ದ ಚಂಚಲಾ ಕುಮಾರಿ ಸಮಾಧಾನಕರ ಬಹುಮಾನ ಪಡೆದರು. ಎಲ್ಲರಿಗೂ ಪ್ರಶಸ್ತಿ ಪತ್ರ ಹಂಚಲಾಯಿತು.

ಈ ಸ್ಪರ್ಧೆಗಳಲ್ಲಿ ಭಾಗಹಿಸಿದ್ದ ಎಲ್ಲಾ ಹೆಂಗಸರಿಗೂ, ಡೆಲ್ಲಿ ಪ್ರೆಸ್‌ ಪರವಾಗಿ  `ಗೃಹಶೋಭಾ' ಪ್ರತಿಕೆಯ ಒಂದೊಂದು ಪ್ರತಿಯನ್ನು ಉಚಿತವಾಗಿ ಹಂಚಲಾಯಿತು.

- ಪ್ರತಿನಿಧಿ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ