ಬೆಳೆಯುತ್ತಿರುವ ಮಕ್ಕಳ ಆಹಾರದಲ್ಲಿ ಯಾವ ಉತ್ತಮ ಪೌಷ್ಟಿಕಾಂಶಗಳು ತುಂಬಿದ್ದರೆ, ಮಕ್ಕಳ ದೈಹಿಕ, ಮಾನಸಿಕ ವಿಕಾಸ ಪರಿಪೂರ್ಣ ಆಗಲು ಸಾಧ್ಯ.......?

ಆಶಾ ಮತ್ತು ಉಷಾ ಇಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಪ್ರತಿದಿನ ಸಂಜೆ ಪಾರ್ಕಿಗೆ ಬರುತ್ತಾರೆ. ಆಶಾಳ ಮಗ ಮಯಾಂಕ್‌ ಎಲ್ಲಾ ಆರೋಗ್ಯಕರ ಮಕ್ಕಳ ಹಾಗೆ, ಪ್ರತಿಯೊಂದು ಆಟೋಟದಲ್ಲೂ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಅದೇ ಉಷಾಳ ಮಗಳು ಪ್ರೀತಿ, ಸ್ವಲ್ಪ ಹೊತ್ತು ಆಡುವಷ್ಟರಲ್ಲಿ ಸುಸ್ತಾಗಿ ಬಿಡುತ್ತಿದ್ದಳು. ಅಲ್ಲಿದ್ದ ಪಾರ್ಕ್‌ ಬೆಂಚ್‌ ಮೇಲೆ ಕುಳಿತು ಮಕ್ಕಳ ಆಟ ಗಮನಿಸುವಳು.

ಈ ಕುರಿತಾಗಿ ಉಷಾ, ಆಶಾಳಿಗೆ ತನ್ನ ದುಃಖ ಹಂಚಿಕೊಂಡಳು. ``ಆಶಾ, ನಿನ್ನ ಮಗ ಅಂತೂ ಬಲು ಸ್ಟ್ರಾಂಗ್‌! ಅವನು ಸದಾ ಆ್ಯಕ್ಟಿವ್ ಆಗಿ ಎಲ್ಲಾ ಆಟಗಳಲ್ಲೂ ಭಾಗವಹಿಸಿ ಫಸ್ಟ್ ಬರುತ್ತಾನೆ. ಆದರೆ ನನ್ನ ಮಗಳು ಪ್ರೀತಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಸ್ವಲ್ಪ ಹೊತ್ತು ಆಡುವಷ್ಟರಲ್ಲಿ ಸಾಕಾಗಿ ಬಂದು ಕುಳಿತುಬಿಡುತ್ತಾಳೆ. ಅವಳ ಬೆಳವಣಿಗೆ ಸಹ ಸರಿ ಇಲ್ಲ, ಕಡ್ಡಿ ಪೈಲ್ವಾನ್‌ ಆಗಿದ್ದಾಳೆ. ನಿನ್ನ ಮಗನಿಗಿಂತ 1 ವರ್ಷ ದೊಡ್ಡವಳಾದರೂ ಇದೇಕೆ ಹೀಗಾಗಿದ್ದಾಳೆ?''

``ಅದೇನೋ ನಿಜ.... ನನ್ನ ಮಗ ಮೊದಲಿನಿಂದಲೂ ತುಸು ಎಕ್ಸ್ ಟ್ರಾ ಆ್ಯಕ್ಟಿವ್‌ ಅನ್ನಬಹುದು. ಇದಕ್ಕೆ ಕಾರಣ ಅವನ ಇಮ್ಯುನಿಟಿ ಕೆಡದಂತೆ ಮೊದಲಿನಿಂದಲೂ ನಾನು ಅವನ ಊಟ ತಿಂಡಿ ಕಡೆ ಗಮನ ಕೊಡುತ್ತಿದ್ದೆ. ಅವನಿಗೆ ಉತ್ತಮ ಪೌಷ್ಟಿಕಾಂಶದ ಆಹಾರ ಕೊಡುತ್ತೇನೆ!'' ಎಂದಳು ಆಶಾ.

``ಆದರೆ ನನ್ನ ಮಗಳು ಊಟ ತಿಂಡಿ ವಿಷಯದಲ್ಲಿ ಬಹಳ ತಗಾದೆ ಮಾಡ್ತಾಳೆ, ಏನು ಮಾಡಿಕೊಟ್ಟರೂ ಇಷ್ಟಪಟ್ಟು ತಿನ್ನುವುದಿಲ್ಲ. ಇದು ಬೇಡ.... ಅದು ಬೇಡ.... ಅಂತ ಗಲಾಟೆ ಮಾಡ್ತಾಳೆ. ಏನೋ 1-2 ಐಟಂ ತಿಂತಾಳಷ್ಟೆ.... ಜಂಕ್‌ ಫುಡ್ಸ್, ಫಾಸ್ಟ್ ಫುಡ್ಸ್ ಅಂದ್ರೆ ಅವಳಿಗೆ ಬಲು ಇಷ್ಟ. ಹೀಗಾಗಿಯೇ ನಾನು ಅವಳಿಗೆ ಇಷ್ಟ ಅಂತ ಆಗಾಗ ಪಿಜ್ಜಾ, ಬರ್ಗರ್‌, ಫ್ರೆಂಚ್‌ ಫ್ರೈ ಅಂತ ಕೊಟ್ಟುಬಿಡ್ತೀನಿ. ಏನೋ ಒಂದು, ಅವಳ ಹೊಟ್ಟೆ ತುಂಬಿದರೆ ಸಾಕು ಅಂದುಕೊಳ್ತೀನಿ. ನನಗಂತೂ ಸಾಕಾಗಿ ಹೋಗಿದೆ.....'' ಎಂದಳು ಉಷಾ.

``ಆದರೆ... ಖಂಡಿತಾ ಹಾಗೆ ಮಾಡಬೇಡ ಉಷಾ! ಈ ರೀತಿ ಆದರೆ ಅವಳಿಗೆ ಪೌಷ್ಟಿಕ ಆಹಾರ ಸಿಗುವುದಾದರೂ ಹೇಗೆ? ಸರಿಯಾದ ಪೋಷಕಾಂಶ ದೊರಕದಿದ್ದರೆ ಮುಂದೆ ಅವಳ ದೈಹಿಕ, ಮಾನಸಿಕ ಬೆಳವಣಿಗೆ ಹೇಗೆ ಸರಿಹೋದೀತು? ಚಿಕ್ಕ ವಯಸ್ಸಿನಲ್ಲೇ ರೋಗಗಳು ಶುರುವಾಗುತ್ತವೆ. ಮಕ್ಕಳು ಕೇಳಿದರು ಅಂತ  ಜಂಕ್‌ ಫುಡ್‌ ಕೊಡಬಾರದು. ಅವರ ಬೆಳವಣಿಗೆಗೆ ಪೂರಕವಾದ ಆಹಾರವನ್ನೇ ಕೊಡಬೇಕು.''

``ಮತ್ತೆ..... ಅವರು ಅದನ್ನು ತಿನ್ನದಿದ್ದರೆ?''

``ಆಗ ನೀನು ಆಹಾರ ಕೊಡುವ ವಿಧಾನ ಬದಲಿಸು. ಚಪಾತಿ ಜೊತೆ ದಾಲ್ ಕೊಟ್ಟರೆ ಬೇಡ ಅಂತಾಳಾ? ಆದರೆ ಹಾಗಂತ ಅದನ್ನು ಕೊಡದೇ ಇರಬಾರದು. ದಾಲ್ ನಲ್ಲಿ ಬೇಳೆ ಕಾಳುಗಳ ಹೇರಳ ಪ್ರೋಟೀನ್‌ ಅಂಶ ಇದೆ. ಆಗ ಒಂದು ಕೆಲಸ ಮಾಡು, ದೋಸೆಹಿಟ್ಟಿಗೆ ಈ ದಾಲ್ ‌ಸೇರಿಸಿ, ಅದರಿಂದ ಗರಿಗರಿ ದೋಸೆ ಕೊಡು. ಒಮ್ಮೆ ಕಡಲೆಬೇಳೆಯ ದಾಲ್‌, ಮತ್ತೊಮ್ಮೆ ಹೆಸರುಬೇಳೆ ದಾಲ್, ತೊಗರಿಬೇಳೆಯದ್ದು.... ಹೀಗೆ ಬದಲಾಯಿಸುತ್ತಾ ದೋಸೆ ಮಾಡಿಕೊಡು. ಆಗ ಮಕ್ಕಳು ಬೇಡ ಅನ್ನೋದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ