ಪತಿ : ಥೂ...! ಇದೆಂಥ ಟೊಮೇಟೊ ಗೊಜ್ಜು ಮಾಡಿದ್ದೀಯಾ? ಇಷ್ಟು ಸಪ್ಪೆ ಇದೆಯಲ್ಲ... ಇದಕ್ಕೊಂದಿಷ್ಟು ಉಪ್ಪು ಖಾರ ಹಾಕಬಾರದಿತ್ತೇ?

ಪತ್ನಿ : ಬಡ್ಕೊಂಡ್ರು ನನ್ನ ಕರ್ಮಕ್ಕೆ! ಆ ಹಾಳಾದ ಮೊಬೈಲ್ ‌ನ್ನು ಎಡಗೈಲಿ ಹಿಡ್ಕೊಂಡು ಚಪಾತೀನಾ ಗೊಜ್ಜಿನ ಬದಲು ನೀರಲ್ಲಿ ಅದ್ದಿ ತಿಂದರೆ ಇನ್ನೇನಾದೀತು....?!

ಒಂದು ಅಂಗಡಿಯಲ್ಲಿ ನಿಂಗಿ ಚಿಪ್ಸ್ ಪ್ಯಾಕೆಟ್‌ ಕದಿಯಲು ಹೋಗಿ ಅಂಗಡಿಯವನ ಬಳಿ ಸಿಕ್ಕಿಬಿದ್ದಳು. ಆತ ತಕ್ಷಣ ಪೊಲೀಸರಿಗೆ ಫೋನಾಯಿಸಲು, ಅವರು ಬಂದು ನಿಂಗಿಯನ್ನು ಅರೆಸ್ಟ್ ಮಾಡಿ, ಕೋರ್ಟಿನಲ್ಲಿ ಹಾಜರುಪಡಿಸಿದರು.

ಜಡ್ಜ್ : ಏನಮ್ಮ..... ನೀನು ಕದ್ದಿದ್ದನ್ನು ಒಪ್ಪಿಕೊಳ್ತೀಯಾ?

ನಿಂಗಿ : ಹ್ಞೂಂ ಸ್ವಾಮಿ... ನನ್ನ ಪ್ರಾಮಾಣಿಕತೆಗೆ ಮೆಚ್ಚಿ ದಯವಿಟ್ಟು ಕಡಿಮೆ ಶಿಕ್ಷೆ ಕೊಡಿ.

ಜಡ್ಜ್ : ಇರಲಿ.... ಈ ಪ್ಯಾಕೆಟ್‌ ನಲ್ಲಿ 25 ಚಿಪ್ಸ್ ಇದೆ, ಹಾಗಾಗಿ ನಿನಗೆ 25 ದಿನ ಸೆರೆವಾಸ!

ನಿಂಗ : ಸ್ವಾಮಿ, ನಾನು ಇವಳ ಗಂಡ. ಪ್ರಾಮಾಣಿಕವಾಗಿ ಹೇಳ್ತಿದ್ದೀನಿ.... ಜೊತೆಗೆ ಇವಳು ಕಾಲು ಕೆ.ಜಿ. ಗಸಗಸೆ ಪ್ಯಾಕೆಟ್‌ ಸಹ ಕದ್ದಿದ್ದಾಳೆ..... ತಾವು ಪರಾಂಬರಿಸಬೇಕು!

ರಾತ್ರಿ 2.30ರ ಹೊತ್ತಿಗೆ ರವಿ ಗಾಬರಿಯಿಂದ ಡಾಕ್ಟರಿಗೆ ಫೋನಾಯಿಸಿದ.

ರವಿ : ಡಾಕ್ಟರ್‌, ಬಹುಶಃ ನನಗೆ ಅನಿದ್ರೆಯ ರೋಗ ತಗುಲಿದೆ ಅನ್ಸುತ್ತೆ! ಏನು ಮಾಡಿದರೂ ನಿದ್ದೆಯೇ ಬರುತ್ತಿಲ್ಲವಲ್ಲ....?

ಡಾಕ್ಟರ್‌ : ಇದನ್ನು ನಾಳೆ ಆಸ್ಪತ್ರೆಗೆ ಬಂದು ಹೇಳಿದ್ದರೆ ಆಗುತ್ತಿರಲಿಲ್ಲವೇ? ಈ ಕರ್ಮಕ್ಕೆ ನನ್ನ ನಿದ್ದೆ ಹಾಳು ಮಾಡಬೇಕೇ?

ದಿನೇಶ್‌ : ಹಿಂದಿನ ಕಾಲ ವಿಭಿನ್ನವಾಗಿತ್ತು. ಆಗಿನ ಅಪ್ಪಂದಿರು ತಾವೇ ಅಪ್ಪ ಅಂತ ನಿರೂಪಿಸಲು `ಫಾದರ್ಸ್‌ ಡೇ'ಗಾಗಿ ಕಾಯುತ್ತಾ ಕೂರುತ್ತಿರಲಿಲ್ಲ.

ಸತೀಶ್‌ : ಈಗ ಇದರಲ್ಲಿ ಹೊಸತನ ಏನು ಬಂತು?

ದಿನೇಶ್‌ : ತಪ್ಪು ಮಾಡಿದ ಮಗನ ಮುಂದೆ ಕೆಂಗಣ್ಣು ಬೀರುತ್ತಾ, ಕೈಗೆ ಚಪ್ಪಲಿ ತೆಗೆದುಕೊಂಡರೆ, ಫಾದರ್‌ ಯಾರು ಅಂತ ಇಡೀ ವಠಾರಕ್ಕೆ ಗೊತ್ತಾಗಿಬಿಡುತ್ತಿತ್ತು!

ರೋಹಿತ್‌ : ನಿನ್ನೆ ನಾನು ಮಹಡಿಯಿಂದ ಬಿಟ್ಟ ಪೇಪರ್‌ ರಾಕೆಟ್‌ ಯಾರಿಗೆ ತಗುಲಿತು ಗೊತ್ತಾ?

ಮೋಹಿತ್‌ : ಓಹೋ.... ಸೀದಾ ಚಂದ್ರಮಂಡಲಕ್ಕಾ!

ರೋಹಿತ್‌ : ಅಲ್ಲ... ಎದುರು ಮನೆಯ ಚಂದ್ರಾಳಿಗೆ!

ಮೋಹಿತ್‌ : ಗಮ್ಮತ್ತಾಗಿದೆ... ಅವಳು ಸುಖಾ ಸುಮ್ಮನೆ `.... ನಲ್ಲನೇ ಸವಿ ಮಾತೊಂದ ನುಡಿವೆಯಾ?' ಅಂತ ಹಾಡು ಹೇಳಿದಳೇ?

ರೋಹಿತ್‌ : ಇಲ್ಲ....! ಎಲ್ಲಿದ್ದನೋ ಅವರಪ್ಪ ಸೂರ್ಯ ಪ್ರಕಾಶ್‌ ಎದ್ದು ಬಂದವನೇ, `ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾರು?' ಅಂತ ಕೈಯಲ್ಲಿದ್ದ ದೊಣ್ಣೆಯನ್ನು ನನ್ನ ಕಡೆಗೇ ಬೀಸುವುದೇ?

ಗುಂಡ : ಹೆಣ್ಣು ಸಹನಾಮಯಿ ಅಂತಾರೆ. ಇದು ನಿಜವೇ?

ಕಿಟ್ಟಿ : ಕಟ್ಟಿಕೊಂಡಾಗಿನಿಂದ ಕೊನೆಯವರೆಗೂ ಅವಳ ಶೋಷಣೆ ಸಹಿಸುತ್ತಾನಲ್ಲ ಅವಳ ಗಂಡ, ಇವಳಿಗಿಂತ ಅವನಿಗೆ ಸಹನೆ ಹೆಚ್ಚಲ್ಲವೇ?

ಲವ್ ಮ್ಯಾರೇಜ್‌ ಮಾಡಿಕೊಂಡ ಗುಂಡ ಹ್ಯಾಪ್‌ ವೋರೆ ಹಾಕಿಕೊಂಡು ಗೆಳೆಯರನ್ನು ಕಾಣಲು ಬಂದ.

ಕಲ್ಲೇಶಿ : ನಮ್ಮದಂತೂ ಅರೇಂಜ್ಡ್ ಮ್ಯಾರೇಜ್‌ ಕರ್ಮ... ನೀನ್ಯಾಕೋ ಹೀಗೆ ಸಪ್ಪಗಿದ್ದೀಯಾ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ