ತೂಕ ಕರಗಿಸಲು ಹಾಗೂ ಸ್ಲಿಮ್ ಟ್ರಿಮ್ ಆಗಿ ಇರಲು ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಸಹ ಈ ದಿನಗಳಲ್ಲಿ ವಿಧವಿಧವಾದ ಉಪಾಯ ಪ್ರಯೋಗಿಸುತ್ತಿದ್ದಾರೆ. ವಿಶ್ವದೆಲ್ಲೆಡೆ ಡಯೆಟೀಶಿಯನ್ನರು ಇದರ ಬಗ್ಗೆ ಅನೇಕ ರೀತಿಯ ಡಯೆಟ್‌ಫಾರ್ಮುಲಾಗಳನ್ನು ಉಪಯೋಗಿಸುತ್ತಿದ್ದಾರೆ. ಇಲ್ಲಿ ನಾವು ಅಂತಹ ಡಯೆಟ್‌ಗಳ ಬಗ್ಗೆ ತಿಳಿಸುತ್ತಿದ್ದೇವೆ.

ಆಲ್ಕೈನ್ಡಯೆಟ್

ಆಲ್ಕೈನ್‌ ಡಯೆಟ್‌ನಲ್ಲಿ ವೇಟ್‌ ಲಾಸ್‌ ಪ್ರೋಗ್ರಾಂನ ಆಧಾರದಲ್ಲಿ ಮುಖ್ಯ ರೂಪದಲ್ಲಿ ಕ್ಷಾರೀಯ ಪ್ರಕೃತಿಯ ಆಹಾರ ತಿನ್ನಲು ಒತ್ತಾಯಿಸುತ್ತದೆ. ಇದರಲ್ಲಿ ಬಾಡಿಯ ಪಿ.ಎಚ್‌. ಬ್ಯಾಲೆನ್ಸ್ 7.35 ನಿಂದ 7.45ರವರೆಗೆ ಸದೃಢವಾಗಿಡಲು  ಪ್ರಯತ್ನಿಸಲಾಗುತ್ತದೆ.

ಲಾಭಗಳು : ಆಲ್ಕೈನ್‌ ಡಯೆಟ್‌ನ ಸಮರ್ಥಕರು ಅದರಿಂದ ಬರೀ ತೂಕ ಮಾತ್ರ ಕಡಿಮೆಯಾಗುವುದಿಲ್ಲ. ಬದಲಾಗಿ ಆರ್ಥ್ರೈಟಿಸ್‌, ಡಯಾಬಿಟೀಸ್‌ ಮತ್ತು ಆ ರೀತಿಯ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ, ಈ ಡಯೆಟ್‌ ಏಜಿಂಗ್‌ನ ಪ್ರಕ್ರಿಯೆಯನ್ನು ಮಂದಾಗಿಡುತ್ತದೆ ಎನ್ನುತ್ತಾರೆ.

ಥಿಯರಿ : ಆಲ್ಕೈನ್‌ ಡಯೆಟ್‌ನ ಸಮರ್ಥಕರ ಪ್ರಕಾರ ನಮ್ಮ ರಕ್ತ ಒಂದು ಹಂತದವರೆಗೆ ಕ್ಷಾರೀಯ ಪ್ರಕೃತಿಯದಾಗಿರುತ್ತದೆ. ಅದರ ಪಿ.ಎಚ್‌ ಲೆವೆಲ್ ‌.35 ರಿಂದ 7.45ರ ಮಧ್ಯೆ ಇರುತ್ತದೆ. ನಮ್ಮ ಡಯೆಟ್‌ ಸಹ ಇದೇ ಪಿ.ಎಚ್‌. ಲೆವೆಲ್ ‌ನ್ನು ಮೇಂಟೇನ್ ಮಾಡುವಂತೆ ಇರಬೇಕು. ಧಾನ್ಯಗಳು, ಮೀನು, ಮಾಂಸ, ಡೇರಿ ಉತ್ಪನ್ನಗಳು ಇತ್ಯಾದಿ ತಿನ್ನುವುದರಿಂದ ಸಮತೋಲನದಲ್ಲಿ ತೊಂದರೆಯಾಗಿ ಅದರಿಂದ ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ ಇತ್ಯಾದಿ ಅಗತ್ಯ ಖನಿಜಗಳು ನಷ್ಟವಾಗುತ್ತವೆ. ಈ ಅಸಮತೋಲನದಿಂದ ಶರೀರದಲ್ಲಿ ಕಾಯಿಲೆಗಳ ರಿಸ್ಕ್ ಹೆಚ್ಚುತ್ತದೆ. ತೂಕ ಹೆಚ್ಚಾಗುತ್ತದೆ. ಆದ್ದರಿಂದ ಶೇ.70 ರಷ್ಟು ಆಲ್ಕೈನ್‌ ಫುಡ್‌ ತಿನ್ನಬೇಕು ಹಾಗೂ ಶೇ.30ರಷ್ಟು ಆ್ಯಸಿಡ್‌ ಫುಡ್‌ ತಿನ್ನಬೇಕು.

ಸೆಕೆಂಡ್ಒಪೀನಿಯನ್‌ : ಬ್ರಿಟಿಷ್‌ ಡಯೆಟಿಕ್‌ ಅಸೋಸಿಯೇಷನ್‌ನ ರಿಕ್‌ ಮಿಲರ್‌ ಹೀಗೆ ಹೇಳುತ್ತಾರೆ, ``ಆಲ್ಕೈನ್‌ ಡಯೆಟ್‌ನ ಸಿದ್ಧಾಂತವೇನೆಂದರೆ, ವಿಶೇಷ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಶರೀರದ ಪಿ.ಎಚ್‌. ಬ್ಯಾಲೆನ್ಸ್ ಮೇಂಟೇನ್‌ ಆಗಿರುತ್ತದೆ. ಆದರೆ ಶರೀರ ತನ್ನ ಪಿ.ಎಚ್‌. ಬ್ಯಾಲೆನ್ಸ್ ಮೇಂಟೇನ್‌ ಮಾಡಲು ಡಯೆಟ್‌ನ್ನು ಆಧರಿಸುವುದಿಲ್ಲ ಎಂಬುದೇ ಸರಿ. ಆಲ್ಕೈನ್‌ ಡಯೆಟ್‌ನಿಂದ ಕ್ಯಾಲ್ಶಿಯಂ, ಕಿಡ್ನಿ ಸ್ಟೋನ್‌, ಆಸ್ಟೂಯೋಪೋರೋಸಿಸ್‌ ಮತ್ತು ಏಜಿಂಗ್‌ ಸಮಸ್ಯೆಗಳಿಂದ ನೆಮ್ಮದಿ ಸಿಗುತ್ತದೆ. ಆದರೆ ಆ್ಯಸಿಡ್‌ ಪ್ರೊಡ್ಯೂಸಿಂಗ್‌ ಡಯೆಟ್‌ ಕ್ರಾನಿಕ್‌ ಕಾಯಿಲೆಯ ಕಾರಣದಿಂದಾಗಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ.

ಮಾನೋ ಮೀಲ್ ಡಯೆಟ್

ಇದರಲ್ಲಿ ಬೆಳಗ್ಗೆ ಅಥವಾ ರಾತ್ರಿಯ ಊಟದಲ್ಲಿ ಬರೀ ಒಂದು ಆಹಾರ ಪದಾರ್ಥ (ಅದೂ ಹಣ್ಣು ಅಥವಾ ತರಕಾರಿ) ಇರುತ್ತದೆ. ನಮ್ಮ ಈಗಿನ ಆಹಾರದಂತೆ ಇದರಲ್ಲಿ ದಾಲ್‌, ರೈಸ್‌ ಅಥವಾ ಚಪಾತಿ ಪಲ್ಯ ಇರುವುದಿಲ್ಲ. ಮಾನೋಮೀಲ್ ‌ತೆಗೆದುಕೊಳ್ಳುವವರು ಲಂಚ್‌ಗೆ ಬರೀ ಬಾಳೆಹಣ್ಣು ಮತ್ತು ಡಿನ್ನರ್‌ನಲ್ಲಿ ಬರೀ ಕ್ಯಾರೆಟ್‌ ಮತ್ತು ಸೇಬನ್ನು ತಿನ್ನಬೇಕು. ಈ ಡಯೆಟ್‌ನ್ನು ಕೆಲವರು 1-2 ವಾರ ಅನುಸರಿಸಿದರೆ, ಕೆಲವರು 6 ತಿಂಗಳರೆಗೆ ಅನುಸರಿಸುತ್ತಾರೆ.

ಲಾಭಗಳು : ಈ ಡಯೆಟ್‌ನ್ನು ಅನುಸರಿಸುವುದು ಬಹಳ ಸುಲಭ. ಇದರಲ್ಲಿ ಯಾವುದೇ ರೀತಿಯ ಕೃತಕ ಆಹಾರ ಸಾಮಗ್ರಿಗಳನ್ನು ಉಪಯೋಗಿಸದಿರುವುದರಿಂದ ಇದೂ ಹೆಲ್ದಿ ಆಗಿರುತ್ತದೆ. ಒಂದೇ ರೀತಿಯ ಆಹಾರ ಸೇವನೆ ಅದರಲ್ಲೂ ಪ್ರಾಕೃತಿಕ ಆಹಾರವಾಗಿದ್ದರೆ ಜೀರ್ಣಾಂಗಗಳು ಹೆಚ್ಚು ಶ್ರಮ ವಹಿಸಬೇಕಾಗಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ