ಕೆಲವು ವರ್ಷಗಳ ಹಿಂದೆ ಬ್ರೇನ್ ಸ್ಟ್ರೋಕ್‌ನಂತಹ ಕಾಯಿಲೆಯನ್ನು ವಯಸ್ಸಾದ ಲಕ್ಷಣವೆಂದು ತಿಳಿಯಲಾಗುತ್ತಿತ್ತು. ಆದರೆ ಈಗ ಈ ಸ್ಟ್ರೋಕ್ ಚಿಕ್ಕ ವಯಸ್ಸಿನ ಯುವಕರಿಗೂ ಬಹಳ ವೇಗವಾಗಿ ಬರುತ್ತಿದೆ. ಸ್ಟ್ರೋಕ್, ಬ್ರೇನ್ ಅಟ್ಯಾಕ್, ಮೆದುಳಿಗೆ ಆಘಾತ, ಯಾರಿಗೇ ಆದರೂ, ಎಲ್ಲಿಯೇ ಆದರೂ ಯಾವ ಹೊತ್ತಿನಲ್ಲಾದರೂ ಆಗಬಹುದು. ಇದು ನಮ್ಮ ದೇಶದಲ್ಲಿ ಸಾವಿಗೆ ಮೂರನೆಯ ಅತ್ಯಂತ ದೊಡ್ಡ ಕಾರಣ.
ಬೇರಾವುದೇ ಕಾಯಿಲೆಗೆ ಹೋಲಿಸಿದರೆ ಶರೀರ ವಿಕಾರಗೊಳ್ಳುವುದು ಎರಡನೆಯ ದೊಡ್ಡ ಕಾರಣ.
ಸ್ಟ್ರೋಕ್ ಪೀಡಿತರು ದಿನೇದಿನೇ ಹೆಚ್ಚಾಗುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಯುವಜನತೆಯಲ್ಲಿ ಹೆಚ್ಚುತ್ತಿರುವ ಸ್ಮೋಕಿಂಗ್ ಹಾಗೂ ಡ್ರಿಂಕಿಂಗ್. ಒಮ್ಮೆ ಸ್ಟ್ರೋಕ್ ಹೊಡೆದರೆ ನಾಲ್ವರಲ್ಲಿ ಒಬ್ಬರು ಸಾವಿಗೀಡಾಗುತ್ತಾರೆ. ಉಳಿದುಕೊಂಡವರು ಜೀವನದಲ್ಲಿ ಎಂದೂ ಸಂಪೂರ್ಣವಾಗಿ ಸರಿಹೋಗುವುದಿಲ್ಲ. ಸ್ಟ್ರೋಕ್‌ನಿಂದ ಪಾರಾಗಲು ನಿಮ್ಮ ಲೈಫ್ ಸ್ಟೈಲ್‌ನ್ನು ಸರಿಯಾಗಿಟ್ಟುಕೊಳ್ಳಿ. ಸಿಗರೇಟ್‌ಮತ್ತು ಸಾರಾಯಿಗೆ ಶಾಶ್ವತವಾಗಿ ಬೈ ಬೈ ಹೇಳಿ. ಇದಲ್ಲದೆ, ಮೆದುಳಿನ ಆರೋಗ್ಯಕ್ಕಾಗಿ ಡ್ರೈ ಫ್ರೂಟ್ಸ್, ಮೀನು, ಮೊಸರು, ಕಾಳುಗಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
- ಡಾ. ವರುಣ್