ಮುಖ ಅಥವಾ ದೇಹದ ಇತರೆ ಭಾಗದಲ್ಲಿ ಅಲ್ಲಲ್ಲಿ ಒಂದಿಷ್ಟು ಮೃದು ಕೂದಲು ಬೆಳೆಯುವುದು ಸಹಜ. ಮೃದು ಕೂದಲು ಕಠೋರವಾಗತೊಡಗಿದರೆ ಅದು ಹಾರ್ಮೋನ್‌ ಅಸಮತೋಲನದ ಸಂಕೇತವಾಗಿರಬಹುದು. ಆ ಸಂಕೇತಗಳನ್ನು ನಿರ್ಲಕ್ಷಿಸಬೇಡಿ.

ಮಹಿಳೆಯರ ಮುಖದಲ್ಲಿ ಒಂದಿಷ್ಟು ಹಗುರ ಹಾಗೂ ಮೃದು ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಅಲ್ಲಿ ಬೆಳೆದ ಕೂದಲು ದಟ್ಟವಾಗಿದ್ದರೆ, ಕಠೋರವಾಗಿದ್ದರೆ, ಅದು ಹಾರ್ಮೋನ್‌ ಅಸಮತೋಲನದ ಸಂಕೇತ. ಆ ಕಾರಣದಿಂದ ಹಲವು ಜಟಿಲತೆಗಳು ಉಂಟಾಗಬಹುದು. ಈ ಸಮಸ್ಯೆಯನ್ನು `ಹಿರ್ಸುಟಿಸಂ' ಎಂದು ಹೇಳಲಾಗುತ್ತದೆ. ಮಹಿಳೆಯರ ಗದ್ದ, ತುಟಿಯ ಮೇಲ್ಭಾಗ, ಸ್ತನಗಳ ಮಧ್ಯಭಾಗದಲ್ಲಿ ಹೊಟ್ಟೆ, ಬೆನ್ನು, ತೊಡೆಯ ಆಂತರಿಕ ಭಾಗದಲ್ಲಿ ಕೂದಲು ಇರುವುದು ಪುರುಷ ಹಾರ್ಮೋನು ಆ್ಯಂಡ್ರೋಜೆನ್‌ನ ಅಧಿಕ ಸ್ರಾವ ಉಂಟಾಗುವುದರ ಸಂಕೇತ. ಅದು ಅಡ್ರಿನ್‌ ಗ್ರಂಥಿಯ ಮುಖಾಂತರ ಅಥವಾ ಅಂಡಕೋಶದ ರೋಗಗಳ ಕಾರಣದಿಂದ ಸ್ರಾವವಾಗುತ್ತದೆ. ಈ ರೀತಿಯ ಸ್ಥಿತಿಗಳು ಅಂಡಾಣು ಉತ್ಪತ್ತಿಗೆ ತೊಂದರೆಯನ್ನುಂಟು ಮಾಡಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ. ಪಾಲಿಸಿಸ್ಟಿಕ್‌ ಓವೇರಿಯನ್‌ ಸಿಂಡ್ರೋಮ್ (ಪಿಸಿಓಎಸ್‌) ಇದು ಕೂಡ ಮಹಿಳೆಯರಲ್ಲಿ ಬೇಡವಾದ ಕೂದಲಿಗೆ ಸಂಬಂಧಪಟ್ಟಿದೆ. ಇದು ಮಧುಮೇಹ ಹಾಗೂ ಹೃದ್ರೋಗದ ಅಪಾಯಕ್ಕೆ ನಾಂದಿ. ಜಾರ್ಜಿಯಾ ಹೆಲ್ತ್ ಯೂನಿರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ, ಪಿಸಿಓಎಸ್‌ ಮಹಿಳೆಯರಲ್ಲಿ ಹಾರ್ಮೋನಿಗೆ ಸಂಬಂಧಪಟ್ಟ ಏರುಪೇರುಗಳಿಗೆ ಒಂದು ಮುಖ್ಯ ಕಾರಣವಾಗಿದೆ. ಇದು ಶೇ.10ರಷ್ಟು ಮಹಿಳೆಯರಿಗೆ ತೊಂದರೆ ಕೊಡುತ್ತದೆ.

ಹಿರ್ಸುಟಿಸಂನಿಂದ ತೊಂದರೆಗೊಳಗಾದ ಶೇ.90ರಷ್ಟು ಮಹಿಳೆಯರಲ್ಲಿ ಪಿಸಿಓಎಸ್‌ ಅಥವಾ ಇಡಿಯೊಪೆಥಿಕ್‌ ಹಿರ್ಸುಟಿಸಂನ ಸಮಸ್ಯೆ ಕಂಡುಬಂದಿದೆ. ಹೆಚ್ಚಿನ ಪ್ರಕರಣಗಳಲ್ಲಿ ಈಸ್ಟ್ರೋಜನ್‌ ಸ್ರಾವದಲ್ಲಿ ಕೊರತೆ ಹಾಗೂ ಟೆಸ್ಟೊಸ್ಟೆರಾನ್‌ ಅತಿಯಾದ ಉತ್ಪಾದನೆಯಿಂದಾಗಿ ಅದು ಹದಿವಯಸ್ಸಿನ ಬಳಿಕ ನಿಧಾನವಾಗಿ ವಿಕಸಿತವಾಗುತ್ತದೆ.

ಆನುವಂಶಿಕ ಕಾರಣಗಳು : ಕುಟುಂಬದಲ್ಲಿ ರೋಗದ ಇತಿಹಾಸ ಇದ್ದರೆ ಈ ಅಪಾಯ ಇನ್ನಷ್ಟು ಹೆಚ್ಚುತ್ತದೆ. ತ್ವಚೆಯ ಸಂವೇದನಾಶೀಲತೆ ಆನುವಂಶಿಕತೆಗೆ ಮತ್ತೊಂದು ಕಾರಣವಾಗುತ್ತದೆ. ಟೆಸ್ಟೊಸ್ಟೆರಾನ್‌ನ ಮಟ್ಟ ಕಡಿಮೆಯಾಗುವುದರಿಂದಲೂ ತುಂಬಾ ಒರಟಾದ ಹಾಗೂ ದಪ್ಪನೆಯ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.

ಪಾಲಿಸಿಸ್ಟಿಕ್‌ ಓವೇರಿಯನ್‌ ಸಿಂಡ್ರೋಮ್ : ಯಾವ ಮಹಿಳೆಯರು ಪಿಸಿಓಎಸ್‌ ಸಮಸ್ಯೆಗೆ ತುತ್ತಾಗಿರುತ್ತಾರೊ, ಅಂಥವರ ಮುಖದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂದಲಿನ ಬೆಳವಣಿಗೆ ಕಂಡುಬರುತ್ತದೆ. ಇದು ಬಂಜೆತನಕ್ಕೆ ಒಂದು ಮುಖ್ಯ ಕಾರಣ ಕೂಡ. ಪಿಸಿಓಎಸ್‌ ಕಾರಣದಿಂದ ಅಂಡಕೋಶದಲ್ಲಿ ಹಲವು ಚಿಕ್ಕಪುಟ್ಟ ಗೆಡ್ಡೆಗಳು ಉಂಟಾಗುತ್ತವೆ. ಪುರುಷ ಹಾರ್ಮೋನಿನ ಅಧಿಕ ಸ್ರಾವದ ಕಾರಣದಿಂದ ಅಂಡಾಣು ಬಿಡುಗಡೆಯಲ್ಲಿ ಅನಿಯಮಿತ, ಮುಟ್ಟಿಗೆ ಸಂಬಂಧಪಟ್ಟಂತೆ ಏರುಪೇರು ಹಾಗೂ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳಬಹುದು.

ಅಂಡಕೋಶದಲ್ಲಿ ಗೆಡ್ಡೆ : ಕೆಲವು ಪ್ರಕರಣಗಳಲ್ಲಿ ಆ್ಯಂಡ್ರೊಜೆನ್‌ನಿಂದಾಗಿ ಅಂಡಕೋಶದಲ್ಲಿ ಟ್ಯೂಮರ್‌ ಹಿರ್ಸುಟಿಸಂಗೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ ಟ್ಯೂಮರ್‌ ಬಹುಬೇಗ ಬೆಳೆಯುತ್ತದೆ. ಈ ಎಲ್ಲದರ ಪರಿಣಾಮ ಎಂಬಂತೆ ಮಹಿಳೆಯರಲ್ಲಿ ಪುರುಷರ ಲಕ್ಷಣಗಳು ಅಂದರೆ ಧ್ವನಿ ಗಡಸಾಗುವಿಕೆ, ಯೋನಿಯ ಕ್ಲೈಟೊರಿಸ್‌ನ ಆಕಾರ ವಿಸ್ತಾರಗೊಳ್ಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಅಡ್ರಿನ್‌ನಲ್ಲಿ ಏರುಪೇರು : ಕಿಡ್ನಿಯ ಮೇಲ್ಭಾಗದಲ್ಲಿರುವ ಅಡ್ರಿನ್‌ ಗ್ರಂಥಿಗಳು ಆ್ಯಂಡ್ರೋಜೆನ್‌ನ್ನು ನಿಯಂತ್ರಿಸುತ್ತವೆ. ಈ ಗ್ರಂಥಿ ಸರಿಯಾಗಿ ಕೆಲಸ ಮಾಡದೇ ಇದ್ದರೆ `ಹಿರ್ಸುಟಿಸಂ'ನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ