ಚಳಿಗಾಲದ ಹವಾಮಾನ ಅತ್ಯಂತ ಆಹ್ಲಾದದಾಯಕವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ಒಳ್ಳೆಯ ಹವಾಮಾನ ಎಂದು ಹೇಳಲಾಗುತ್ತದೆ. ಆದರೂ ಇದು ತನ್ನೊಂದಿಗೆ ಅನೇಕ ಕಾಯಿಲೆಗಳನ್ನು ಹೊತ್ತು ತರುತ್ತದೆ. ಇದರಿಂದ ರಕ್ಷಿಸಿಕೊಳ್ಳುವ ಉಪಾಯವೆಂದರೆ ಚಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಾಗಿದೆ.

ಹೃದಯಾಘಾತ

ಹೃದಯಾಘಾತಕ್ಕೆ ಕೊಲೆಸ್ಟ್ರಾಲ್, ಅಧಿಕ ಒತ್ತಡ ಹಾಗೂ ಧೂಮಪಾನ ಸಹಿತ ಹಲವು ಸಂಗತಿಗಳು ಕಾರಣವಾಗಿರುತ್ತವೆ ಎಂಬುದು ನಿಮಗೆ ಗೊತ್ತಿರಬಹುದು. ಆದರೆ ಚಳಿಗಾಲದಲ್ಲಿಯೇ ಹೃದಯಾಘಾತದ ಪ್ರಕರಣಗಳು ಹೆಚ್ಚಿಗೆ ಘಟಿಸುತ್ತವೆ ಎನ್ನುವುದು ನಿಮಗೆ ಗೊತ್ತೆ?

ಎಸ್ಕಾರ್ಟ್‌ ಹಾರ್ಟ್‌ ಇನ್‌ ಸ್ಟಿಟ್ಯೂಟ್‌ ಹಾಗೂ ರಿಸರ್ಚ್‌ ಸೆಂಟರ್‌ನ ಕಾರ್ಡಿಯೋ ವ್ಯಾಸ್ಕುಲರ್‌ ಸರ್ಜರಿ ವಿಭಾಗದ ನಿರ್ದೇಶಕ ಡಾ. ಮೆಹರೆ ಲಾಲ್ ‌ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಚಳಿ ವಾತಾವರಣ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದ ತಾಪಮಾನವನ್ನು ಸಾಮಾನ್ಯವಾಗಿಡಲು ಚಳಿಗಾಲದಲ್ಲಿ ಹೆಚ್ಚು ಶ್ರಮಪಡಬೇಕಾಗುತ್ತದೆ. ಹೃದಯಾಘಾತದ ಸಂಕೇತಗಳೆಂದರೆ, ಎದೆಯಲ್ಲಿ ನೋವು, ಉಸಿರಾಡುವಲ್ಲಿ ತೊಂದರೆ ಅಥವಾ ಆಕಸ್ಮಿಕ ದಣಿವಿನ ಅನುಭೂತಿ ಉಂಟಾಗುವಿಕೆ.

ಚಳಿಗಾಲದಲ್ಲಿ ವ್ಯಾಯಾಮ ಮಾಡಿ ನೀವು ಹೃದಯಾಘಾತದ ತೊಂದರೆಯನ್ನು ಕಡಿಮೆಗೊಳಿಸಬಹುದು. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಿ. ಒಂದು ವೇಳೆ ನಿಮಗೆ ಮೇಲ್ಕಂಡ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಅವನ್ನು ನಿರ್ಲಕ್ಷ್ಯ ಮಾಡಬೇಡ.

ತಕ್ಷಣವೇ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ. ಚಳಿಗಾಲದಲ್ಲಿ ಆರೋಗ್ಯವಂತ ಹೃದಯಕ್ಕಾಗಿ ನೀವು ಕೆಳಕಂಡ ಸಂಗತಿಗಳ ಮೇಲೆ ಗಮನಕೊಡಿ :

ನಿಮ್ಮ ದೇಹದ ಮಾಸ್ಕ್ ಇಂಡೆಕ್ಸ್ ನ್ನು ಕಾಯ್ದುಕೊಂಡು ಹೋಗಿ. ಅದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಿ. ಕೊಲೆಸ್ಟ್ರಾಲ್  ಪರೀಕ್ಷೆ ಮಾಡಿಸಿಕೊಳ್ಳಿ. ಆರೋಗ್ಯಕರ ಆಹಾರದ ಆಯ್ಕೆ ಮಾಡಿಕೊಳ್ಳಿ ಹಾಗೂ ಕಡಿಮೆ ಕೊಬ್ಬಿನ ಆಹಾರ ಸೇವಿಸಿ.

ನಿಮ್ಮ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆಗೊಳಿಸಿ.

ಹೆಚ್ಚು ತೂಕವುಳ್ಳವರು ಎಚ್ಚರದಿಂದಿರಬೇಕು. ಏಕೆಂದರೆ ಹೆಚ್ಚುವರಿ ತೂಕ ನಿಮ್ಮ ಹೃದಯ ಹಾಗೂ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತದೆ.

ತ್ವಚೆಯ ಸಮಸ್ಯೆಗಳು

twacha-oil (2)

ಚಳಿ ಹವಾಮಾನ ತ್ವಚೆಗೆ ಅತ್ಯಂತ ಕಠೋರವಾಗಿರುತ್ತದೆ. ತಂಪು ವಾತಾವರಣ, ಶುಷ್ಕ ಹವೆ ಹಾಗೂ ಶೀತಗಾಳಿ ನಿಮ್ಮ ತ್ವಚೆಯ ತೇವಾಂಶವನ್ನು ಕಡಿಮೆಗೊಳಿಸುತ್ತವೆ. ಇದರ ಪರಿಣಾಮವೆಂಬಂತೆ ಒರಟು ಹಾಗೂ ನವೆಯಿಂದ ಕೂಡಿದ ಚರ್ಮ. ಹಿರಿಯ ತ್ವಚಾತಜ್ಞ ಡಾ. ರೋಹಿತ್‌ ವಅರ ಪ್ರಕಾರ, ಈ ಹಾನಿಯಿಂದ ತಪ್ಪಿಸಿಕೊಳ್ಳಲು ಕೆಳಕಂಡ ಸಂಗತಿಗಳ ಬಗ್ಗೆ ಗಮನ ಕೊಡಬೇಕು.

ಸೋಪ್ ಬಳಕೆ

ಸೋಪ್‌ ನ್ನು ತ್ವಚೆಯ ಮೇಲೆ ಅಗತ್ಯಕ್ಕನುಗುಣವಾಗಿ ಮಾತ್ರ ಬಳಸಿ. ಅದು ನಿಮ್ಮ ತ್ವಚೆಯ ನೈಸರ್ಗಿಕ ತೈಲವನ್ನು ಹೀರಿಕೊಳ್ಳುತ್ತದೆ. ಅಗತ್ಯಕ್ಕಿಂತ ಹೆಚ್ಚು ಸೋಪ್‌ ಬಳಸುವುದು ಯಾವುದೇ ರೀತಿಯಿಂದಲೂ ಪ್ರಯೋಜನವಿಲ್ಲ.

ಹೆಚ್ಚುವರಿ ತೇವಾಂಶ : ದ್ರವ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸಿ. ದಿನಕ್ಕೆ ಕನಿಷ್ಠ 6 ಗ್ಲಾಸ್‌ ನೀರನ್ನಾದರೂ ಕುಡಿಯಿರಿ. ಇದರಿಂದ ತ್ವಚೆಯ ಕಾಂತಿ ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ. ಜೊತೆಗೆ ನೀವು ಫ್ಯಾಟಿ ಆ್ಯಸಿಡ್‌ ತೆಗೆದುಕೊಳ್ಳಿ. ಇದರಿಂದ ನಿಮ್ಮ ತ್ವಚೆ ಆರೋಗ್ಯದಿಂದಿರುತ್ತದೆ.

ಆಹಾರ : ಚಳಿಗಾಲದಲ್ಲಿ ಹಣ್ಣು ಹಾಗೂ ಹಸಿರು ತರಕಾರಿಗಳು ಹೇರಳವಾಗಿರುತ್ತವೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ `ಎ’ `ಬಿ’ ಹಾಗೂ `ಸಿ’ ದೊರೆಯುತ್ತದೆ. ಆಂತರಿಕವಾಗಿ ಆರೋಗ್ಯದಿಂದಿದ್ದರೆ ಬಾಹ್ಯದಲ್ಲಿ ಸುಂದರವಾಗಿ ಕಾಣುವಿರಿ.

ಸಿಜೊರೆನ್ಸಿಂಡ್ರೋಮ್ : ಇದು ಎಂತಹ ಸ್ಥಿತಿ ಎಂದರೆ, ಇದರಲ್ಲಿ ನಿಮ್ಮ ತ್ವಚೆಗೆ ತೇವಾಂಶವನ್ನುಂಟು ಮಾಡುವ ಗ್ರಂಥಿಗಳು ಪ್ರತಿರೋಧ ವ್ಯವಸ್ಥೆಯ ಮುಖಾಂತರ ಪ್ರಭಾವಿತಗೊಳ್ಳುತ್ತವೆ. ಇದರಿಂದ ನಿಮ್ಮ ಮುಖ, ಕಣ್ಣುಗಳು ಹಾಗೂ ಜೀವಕೋಶಗಳಲ್ಲಿ ಶುಷ್ಕತನ ಬರುತ್ತದೆ. ಚಳಿಗಾಲದ ಶುಷ್ಕ ದಿನಗಳು ಈ ಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇಂತಹದರಲ್ಲಿ ಒಂದು ಹ್ಯುಮಿಡಿಟಿ ಫೈರ್‌ ನ ನೆರವಿನಿಂದ ಕೋಣೆಯ ತೇವಾಂಶದ ಮಟ್ಟವನ್ನು ಹೆಚ್ಚಿಸಿಕೊಳ್ಳಿ. ನೀವು ಕಳೆದುಕೊಂಡ ತೇವಾಂಶದ ಮಟ್ಟವನ್ನು ಮಾಯಿಶ್ಚರೈಸಿಂಗ್‌ ಲೋಶನ್‌ ಹಾಗೂ ನೀರಿನ ಬಳಕೆಯಿಂದ ಪಡೆದುಕೊಳ್ಳಬಹುದು. ಖಿನ್ನತೆ ರೋಧಕ ಹಾಗೂ ಅತಿರಕ್ತದೊತ್ತಡವನ್ನು ಕಡಿಮೆಗೊಳಿಸಲು ಬಳಸಲ್ಪಡುವ ಔಷಧಿಗಳು ಕೂಡ ತ್ವಚೆಯಲ್ಲಿ ಶುಷ್ಕತನವನ್ನು ಉಂಟು ಮಾಡಬಹುದು.

ಆಸ್ತಮಾ : ವರ್ಷದ ಕೊನೆಯಲ್ಲಿ ಜನರು ಒಂದು ರೀತಿಯ ಹಬ್ಬದ ವಾತಾವರಣದಲ್ಲಿರುತ್ತಾರೆ. ಈ ಚಳಿಯ ದಿನಗಳಲ್ಲಿ ಸಾಕಷ್ಟು ಖುಷಿ ಅನುಭವಿಸಬೇಕೆನ್ನುತ್ತಾರೆ. ಆದರೆ ವಾತಾವರಣದಲ್ಲಿ ತೇವಾಂಶ ಹೆಚ್ಚುತ್ತ ಹೋದಂತೆ ಆಸ್ತಮಾ ರೋಗಿಗಳು ಇಂತಹ ಹವಾಮಾನ ವೈಪರೀತ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಹೊರಗೆ ಹೋಗುವುದನ್ನು ಆದಷ್ಟೂ ತಪ್ಪಿಸಬೇಕು. ಮನೆಯವರು ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಏಕೆಂದರೆ ವೈರಲ್ ಸೋಂಕು ಅವರ ಸ್ಥಿತಿಯನ್ನು ಮತ್ತಷ್ಟು ತೊಂದರೆಗೀಡು ಮಾಡಬಹುದು.

ಸಂಧಿವಾತ

ss--Amani-Aromatherapy-oil (2)

ಚಳಿಗಾಲದಲ್ಲಿ ಸಂಧಿವಾತ ಅಂದರೆ ಮೊಣಕಾಲು ಮುಂತಾದ ಸಂಧುಗಳಲ್ಲಿ ಉಂಟಾಗುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಯುವಕರಿಗೆ ಹಾಗೂ ವೃದ್ಧರಿಗೆ ಉಂಟಾಗುವ ಸಂಧಿವಾತದಲ್ಲಿ ತಾಪಮಾನ ಅತ್ಯಂತ ಕೆಳಮಟ್ಟಕ್ಕೆ ಬರುತ್ತಿದ್ದಂತೆ ಕೀಲುಗಳಲ್ಲಿ ನೋವನ್ನು ಹೆಚ್ಚಿಸುತ್ತದೆ.

ಡಾಕ್ಟರ್‌ಪ್ರಕಾರ, ಸೂರ್ಯ ಕಿರಣಗಳಿಗೆ ಸ್ವಲ್ಪ ಹೊತ್ತು ಮೈಯೊಡ್ಡುವುದು, ವಾರದಲ್ಲಿ ಕನಿಷ್ಠ 5 ಬಾರಿ ದೇಹಕ್ಕೆ ಅಷ್ಟೇನೂ ಭಾರ ಎನ್ನಿಸದ ವ್ಯಾಯಾಮಗಳನ್ನು ಮಾಡುವುದು ಸಂಧಿವಾತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ ಸೂಕ್ತ ಆಹಾರ ಸೇವಿಸುವುದರ ಮೂಲಕ ಸಂಧಿವಾತದಿಂದ ಬಳಲುತ್ತಿರುವವರು ಚಳಿಗಾಲವನ್ನು ನೆಮ್ಮದಿಯಿಂದ ಕಳೆಯಬಹುದು.

ಮೇಲ್ಕಂಡ ಸಮಸ್ಯೆಗಳನ್ನು ಎದುರಿಸುತ್ತಿರುವವರು ಚಳಿಗಾಲ ಶುರುವಾಗುತ್ತಿದ್ದಂತೆ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡು ಸಕಾಲದಲ್ಲಿ ವೈದ್ಯರ ಮಾರ್ಗದರ್ಶನ ಪಡೆಯಬೇಕು.

ಬಿ. ನಿರ್ಮಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ