ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ತಮ್ಮ ದೇಹವನ್ನು ಆರೋಗ್ಯದಿಂದಿಡುವ ಕ್ರೇಜ್‌ ಇದೆ. ಅದಕ್ಕಾಗಿ ಅವರು ಬಗೆ ಬಗೆಯ ವ್ಯಾಯಾಮ ಮಾಡುತ್ತಾರೆ? ಜಿಮ್ ಗೆ ಹೋಗುತ್ತಾರೆ ಹಾಗೂ ಡಯೆಟಿಂಗ್‌ ಮಾಡುತ್ತಾರೆ. ಫಿಟ್ನೆಸ್‌ ಗೆ ಕುರಿತಂತೆ ಅವರ ಮನಸ್ಸಿನಲ್ಲಿ ಕೆಲವು ತಪ್ಪು ಕಲ್ಪನೆಗಳಿರುತ್ತವೆ. ಅವನ್ನು ಮನಸ್ಸಿನಿಂದ ಹೊರಹಾಕುವುದೇ ಉತ್ತಮ.

ವ್ಯಾಯಾಮಕ್ಕೂ ಮುಂಚೆ ಸ್ಟ್ರೆಚ್‌ ಮಾಡುವುದು ಅತ್ಯವಶ್ಯ : ಕೆಲವು ಜನರು ವ್ಯಾಯಾಮ ಮಾಡುವ ಮೊದಲು ಸ್ಟ್ರೆಚ್ ಮಾಡಬೇಕೆಂದು ಹೇಳುತ್ತಾರೆ. ಆದರೆ ಇದಕ್ಕೂ ಉತ್ತಮವೆಂದರೆ, ವ್ಯಾಯಾಮದ ಬಳಿಕ ಡೈನಾಮಿಕ್‌ ಸ್ಟ್ರೆಚ್‌ ಮಾಡುವುದು ಉತ್ತಮವಾಗಿರುತ್ತದೆ. ಆಗ ಕೀಲುಗಳು ಹಾಗೂ ಸ್ನಾಯುಗಳು ಬಿಸಿಯಾಗಿರುತ್ತವೆ. ಅದರಿಂದ ಸ್ಟ್ರೆಸ್‌ ಕಡಿಮೆಯಾಗುತ್ತದೆ. ಪೋಸ್ಚರ್‌ ಮತ್ತು ರಕ್ತಪರಿಚಲನೆ ಅತ್ಯುತ್ತಮಗೊಳ್ಳುತ್ತದೆ.

ಜಿಮ್ ನಲ್ಲಿ ಹೆಚ್ಚು ಹೊತ್ತು ಎಕ್ಸರ್‌ ಸೈಜ್‌ ಮಾಡುವುದು ಹೆಚ್ಚು ಒಳ್ಳೆಯದು :

ಇದು ಕೂಡ ನಿಜವಲ್ಲ. ಹೆಚ್ಚು ಹೊತ್ತು ವ್ಯಾಯಾಮ ಹಾಗೂ ವರ್ಕ್‌ ಔಟ್‌ ಮಾಡುವುದಕ್ಕಿಂತ, ನೀವು ಯಾವ ವ್ಯಾಯಾಮ ಮಾಡುತ್ತೀರೊ ಅದನ್ನು ಧೈರ್ಯದಿಂದ ಮಾಡಿ ಹಾಗೂ ಸರಿಯಾದ ರೀತಿಯಲ್ಲಿ ವರ್ಕ್‌ ಔಟ್‌ ಮಾಡುವುದರಿಂದ ಹೆಚ್ಚಿನ ಲಾಭವಿದೆ. ಅದಕ್ಕಾಗಿ ಏರೋಬಿಕ್‌ ಎಕ್ಸರ್‌ ಸೈಜ್‌ ಗಿಂತ ಮುಂಚೆಯೇ ಸ್ಟ್ರೆಂಥ್‌ ಟ್ರೇನಿಂಗ್‌ ತೆಗೆದುಕೊಳ್ಳಬೇಕು. ಇದರಿಂದ ದೇಹದಲ್ಲಿರುವ ಕಾರ್ಬೊಹೈಡ್ರೇಟ್‌ ಬಹುಬೇಗ ಜೀರ್ಣವಾಗುತ್ತದೆ.

ಆ ಬಳಿಕ ಏರೋಬಿಕ್‌ ಎಕ್ಸರ್‌ ಸೈಜ್‌ ಮಾಡುವುದರಿಂದ ದೇಹದಲ್ಲಿರುವ ಫ್ಯಾಟ್‌ ಹಾಗೂ ಕೊಲೆಸ್ಟ್ರಾಲ್ ದಹಿಸಲ್ಪಡುತ್ತದೆ. ಕೇವಲ ಜಿಮ್ ನಲ್ಲಿ ವರ್ಕ್‌ ಔಟ್‌ ಮಾಡುವುದರಿಂದಷ್ಟೇ ಎಲ್ಲವೂ ಸರಿಹೋಗುವುದಿಲ್ಲ. ಅದರ ಜೊತೆಗೆ ನಡಿಗೆ, ಈಜು, ಸೈಕ್ಲಿಂಗ್‌ ಕೂಡ ಮಾಡುತ್ತಿರಬೇಕು.

ಸ್ಟ್ರೆಂಥ್ಟ್ರೇನಿಂಗ್ಬಂದ್ಆಗುವುದರಿಂದ ಮಸಲ್ಸ್ ಫ್ಯಾಟ್ಆಗಿ ಪರಿವರ್ತನೆಗೊಳ್ಳುತ್ತವೆ : ಮಸಲ್ಸ್ ಎಂದೂ ಫ್ಯಾಟ್‌ ಆಗಿ ಪರಿವರ್ತನೆಗೊಳ್ಳುವುದಿಲ್ಲ. ಸ್ಟ್ರೆಂಥ್‌ಟ್ರೇನಿಂಗ್‌ ನಿಲ್ಲಿಸುನಿದರಿಂದ ಮಸಲ್ಸ್ ನ ಮೂವ್ಸ್ ಕುಗ್ಗಬಹುದು. ಅದರಿಂದಾಗಿ ಮೆಟಬಾಲಿಸಂ ಕಡಿಮೆಯಾಗುತ್ತದೆ. ಮೆಟಬಾಲಿಸಂ ಮಂದಗೊಳ್ಳುವುದರಿಂದ ಕಡಿಮೆ ಕ್ಯಾಲೋರಿ ದಹಿಸಲ್ಪಡುತ್ತದೆ ಹಾಗೂ ತೂಕ ಹೆಚ್ಚುವ ಸಾಧ್ಯತೆಯೂ ಇರುತ್ತದೆ. ದೇಹ ಸ್ಥೂಲಗೊಳ್ಳುವುದರಿಂದ ಕೋಲನ್‌ ಪ್ಯಾಂಕ್ರಿಯಾಸ್‌, ಕಿಡ್ನಿ, ಗಾಲ್ ‌ಬ್ಲ್ಯಾಡರ್‌, ಬ್ರೆಸ್ಟ್ ಮುಂತಾದ ಅಂಗಗಳಲ್ಲಿ ಕ್ಯಾನ್ಸರ್‌ ನ ಸಾಧ್ಯತೆ ಹೆಚ್ಚುತ್ತದೆ.

ಬಾಡಿ ಫ್ಯಾಟ್ದಹಿಸುವ ಗುರಿ ಸಾಧಿಸಬಹುದು : ವರ್ಕ್‌ ಔಟ್‌ ನಿಂದ ನೀವು ನಿಮ್ಮ ದೇಹದ ಫ್ಯಾಟ್‌ ನ್ನಂತೂ ದಹಿಸಬಹುದು. ಆದರೆ ನಿಮ್ಮ ದೇಹದ ನಿರ್ದಿಷ್ಟ ಅಂಗವೊಂದರ ಫ್ಯಾಟ್‌ ನ್ನು ದಹಿಸುವುದನ್ನು ಖಾತ್ರಿಪಡಿಸಿಕೊಳ್ಳಲಾಗುದಿಲ್ಲ. ವರ್ಕ್‌ ಔಟ್‌ ನ ಸಂದರ್ಭದಲ್ಲಿ ನಿಮ್ಮ ದೇಹದ ಫ್ಯಾಟ್‌ ದಹಿಸಲ್ಪಡುತ್ತದೆ. ಆದರೆ ದೇಹದ ನಿರ್ದಿಷ್ಟ ಭಾಗದ ಫ್ಯಾಟ್‌ ದಹಿಸುವ ಗುರಿಯನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ.

ಹೆಚ್ಚು ತೂಕ ಎತ್ತುವುದರಿಂದ ಬಾಡಿ ಟೋನ್ಮತ್ತು ಶೇಪ್ಉತ್ತಮಗೊಳ್ಳುತ್ತದೆ : ವೇಟ್‌ ಲಿಫ್ಟಿಂಗ್‌ ನಿಂದ ಬಾಡಿ ಟೋನ್‌ ಹಾಗೂ ಶೇಪ್‌ ಒಳ್ಳೆಯದಾಗುತ್ತದೆ. ಆದರೆ ಇದರಿಂದ ನೀವು ಬಾಡಿ ಬಿಲ್ಡರ್‌ ರೀತಿ ಕಂಡುಬರುವುದಿಲ್ಲ. ಮಹಿಳೆಯರಲ್ಲಿ ಟೆಸ್ಟೊಸ್ಟೆರಾನ್ ಮಟ್ಟ ಕಡಿಮೆಯಿರುತ್ತದೆ. ಈ ಕಾರಣದಿಂದ ಅವರಲ್ಲಿ ಮಸಲ್ಸ್ ಬಿಲ್ಡಿಂಗ್‌ ಪುರುಷರ ಹಾಗೆ ಕಂಡುಬರುವುದಿಲ್ಲ. ವೇಟ್‌ ಲಿಫ್ಟಿಂಗ್ ನಿಂದ ನಿಮ್ಮ ಕ್ಯಾಲೋರಿ ಅವಶ್ಯವಾಗಿ ದಹಿಸಲ್ಪಡುತ್ತದೆ ಮತ್ತು ಹೆಲ್ದಿ ವೇಟ್‌ ಮೆಂಟೇನ್‌ ಆಗಿರುತ್ತದೆ. ಹೆಲ್ದೀ ವೇಟ್‌ ಅನೇಕ ರೋಗಗಳನ್ನು ಕೂಡ ದೂರ ಇಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ