ವಯಸ್ಸು ಮೀರಿದ ಮಹಿಳೆಯರು ಒಮ್ಮೊಮ್ಮೆ ಹೊಳೆಯುವ ಮೇಕಪ್ ಮತ್ತು ಉಡುಪುಗಳಿಂದಾಗಿ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ. ಕೆಳಗಿನ ಸೂಚನೆಗಳನ್ನು ಪಾಲಿಸಿದರೆ ಅಂತಹ ಮಹಿಳೆಯರೂ ಕೂಡ ಫಿಟ್ ಆಗಿ ಯುವತಿಯರಂತೆ ಕಾಣಿಸಬಹುದು......!
ನಿಮ್ಮ ಸಂಬಂಧಿಕರು, ಚಿಕ್ಕಮ್ಮ, ಸೋದರತ್ತೆ, ಅತ್ತಿಗೆ, ಅಕ್ಕ, ತಂಗಿ ಅಥವಾ ನಿಮ್ಮ ನೆರೆಹೊರೆಯ ಆಂಟಿಗಳ ಹೊಳೆಯುವ ಮೇಕಪ್ ಕಂಡು ಈ ಮುದಿಗೂಬೆಗೇನ್ಬಂತು? ಎಂದು ಗೊಣಗುತ್ತಾರೆ. 65 ವರ್ಷದ ಚಿಕ್ಕಮ್ಮನ ತುಟಿಗಳ ಮೇಲೆ ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್ ಕಂಡು ಬಲವಂತವಾಗಿ ನಗುವುದು ಸ್ವಾಭಾವಿಕವೇ. ಸ್ಥೂಲಕಾಯದ ಮಮ್ಮಿ, ಪೆನ್ಸಿಲ್ ಹೀಲ್‌ನ ಸ್ಯಾಂಡಲ್ಸ್ ಧರಿಸಿ ವೈಯಾರದಿಂದ ನಡೆಯುತ್ತಾಳೆ. ಇನ್ನೇನು ಬೀಳುವಂತೆ ನಡೆಯುತ್ತಿರುತ್ತಾಳೆ. ಅದನ್ನು ಕಂಡು ಎಲ್ಲರಿಗೂ ಒಳ್ಳೆಯ ಮೋಜಿನ ದೃಶ್ಯ ಕಂಡುಬರುತ್ತದೆ.
ಗಾಢ ಶ್ಯಾಮಲವರ್ಣದ, ಸ್ಥೂಲಕಾಯದ ಚಿಕ್ಕಮ್ಮ ಯಾವುದಾದರೂ ಪಾರ್ಟಿಯಲ್ಲಿ ಹಳದಿ ಸೀರೆ ಉಟ್ಟಿರುವುದನ್ನು ಕಂಡು ಜೋರಾಗಿ ನಗುತ್ತಾರೆ. ಹಲವಾರು ಸಂದರ್ಭಗಳಲ್ಲಿ ವಯಸ್ಸಾದ ಮಹಿಳೆಯರು ಸಂಬಂಧಿಕರು ಮತ್ತು ನೆರೆಯವರ ಉಡುಪು ಮತ್ತು ಮೇಕಪ್ ಕಂಡು ನಗುವಿನೊಂದಿಗೆ ನಾಚಿಕೆಯನ್ನೂ ಅನುಭವಿಸುತ್ತಿರುತ್ತಾರೆ.
ಅಂದಹಾಗೆ ಹೆಚ್ಚಿನ ಮಹಿಳೆಯರಿಗೆ ತಮ್ಮ ಜೀವನದ ವಸಂತ ಸಾಕಷ್ಟು ವರ್ಷಗಳ ಮೊದಲೇ ತೀರಿಹೋಗಿದೆ ಎಂದು ತಿಳಿಯುವುದೇ ಇಲ್ಲ. ಹೆಚ್ಚುತ್ತಿರುವ ಹಾಗೂ ಇಳಿಯಸ್ಸಿನ ಅನುಭವ ಆಗುವುದೇ ಇಲ್ಲ ಅಥವಾ ಅವರು ತಮ್ಮ ವಯಸ್ಸು ಹಾಗೂ ನೆರಿಗೆಗಳನ್ನು ಮುಚ್ಚಲು ಹೊಳೆಯುವ ಉಡುಪು ಧರಿಸಬಹುದು ಹಾಗೂ ಗಾಢ ಮೇಕಪ್ ಮಾಡಿಕೊಳ್ಳುತ್ತಿರಬಹುದು.
ವಿಷಯ ಏನೇ ಇರಲಿ, ಹೆಚ್ಚುತ್ತಿರುವ ವಯಸ್ಸನ್ನು ಮೇಕಪ್ ಮತ್ತು ಬಣ್ಣಬಣ್ಣದ ಬಟ್ಟೆಗಳಿಂದ ಮುಚ್ಚಿಕೊಳ್ಳುವ ಅವರ ವಿಧವಿಧವಾದ ಪ್ರಯತ್ನಗಳು ಹಲವು ಬಾರಿ ಅವರನ್ನು ನಗೆಪಾಟಲಿಗೆ ಗುರಿ ಮಾಡುತ್ತವೆ.
ವಯಸ್ಸಿಗೆ ತಕ್ಕಂತೆ ಧರಿಸುವುದು ಅಗತ್ಯ
ಬ್ಯೂಟಿ ಎಕ್ಸ್ ಪರ್ಟ್ ಸೀಮಾ ಹೀಗೆ ಹೇಳುತ್ತಾರೆ, ಹೆಚ್ಚುತ್ತಿರುವ ವಯಸ್ಸಿನ ಮಹಿಳೆಯರು ಕಾಲದ ಹೊಡೆತಗಳನ್ನು ಸೋಲಿಸಿ ತಾವು ಯಾವಾಗಲೂ ತರುಣಿಯರಾಗಿರಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು. ವಯಸ್ಸಿಗೆ ತಕ್ಕಂತೆ ಮೇಕಪ್ ಹಾಗೂ ಉಡುಪು ಧರಿಸುವುದರಿಂದ ಅವರು ಯಾವಾಗಲೂ ಸ್ಮಾರ್ಟ್ ಆಗಿರಬಹುದು. ಅಂತಹ ಉಡುಪಿನಿಂದ ಅವರು ತಮ್ಮನ್ನು ರಾಯಲ್ ಎಂದುಕೊಳ್ಳುತ್ತಾರೆ. ಅವರ ಸಂಬಂಧಿಕರು ಮತ್ತು ಗೆಳೆಯರೂ ಸಹ ಪಾರ್ಟಿಗಳಲ್ಲಿ ಅವರನ್ನು ತಮಾಷೆ ಮಾಡುವುದಿಲ್ಲ. ವಯಸ್ಸಿಗೆ ತಕ್ಕಂತೆ ಉಡುಪನ್ನು ಬದಲಿಸುವುದು ಅವಶ್ಯಕ.
ಮೇಕಪ್ ಮತ್ತು ಬಟ್ಟೆಗಳ ಆಯ್ಕೆ
40-45 ವರ್ಷಗಳ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ನಿರ್ಲಕ್ಷ್ಯದಿಂದಿರುವುದನ್ನು ನೋಡಬಹುದು. ಅದರಿಂದಾಗಿ ಅವರ ಶರೀರ ಕುರೂಪ ಹಾಗೂ ಸ್ಥೂಲವಾಗುತ್ತದೆ. ಕುರೂಪಿ ಶರೀರದ ಮೇಲೆ ಯಾವುದೇ ರೀತಿಯ ಉಡುಪು ಒಪ್ಪುವುದಿಲ್ಲ.
ಫ್ಯಾಷನ್ ಡಿಸೈನರ್ ಅನಿತಾ ಹೀಗೆ ಹೇಳುತ್ತಾರೆ, ನಗರಗಳಲ್ಲಿ ವಯಸ್ಸು ಮೀರಿದ ಮಹಿಳೆಯರು ದಪ್ಪಗಾಗಿದ್ದೂ, ಜೀನ್ಸ್ ಟಾಪ್ ಹಾಗೂ ಲೆಗ್ಗಿಂಗ್ಸ್ ಇತ್ಯಾದಿ ಧರಿಸುತ್ತಾರೆ. ಅಂತಹ ಮಹಿಳೆಯರಿಗೆ ವಯಸ್ಸು ಮತ್ತು ಶರೀರದ ರಚನೆಗೆ ತಕ್ಕಂತೆ ಅಂತಹ ಉಡುಪು ಒಪ್ಪುವುದಿಲ್ಲ ಎಂದು ಹೇಳುವವರು ಯಾರು?
ನಗೆಪಾಟಲು
40ನೇ ವಯಸ್ಸಿನ ನಂತರ ಮಹಿಳೆಯರಿಗೆ ಎಕ್ಸ್ ಟ್ರಾ ಕೇರ್ ಅಗತ್ಯವಿದೆ. ಆಹಾರ ಸರಿಯಾಗಿ ಸೇವಿಸಿ ನಿಯಮಿತವಾಗಿ ಎಕ್ಸರ್‌ಸೈಜ್ ಮಾಡಿ ಅವರು ಶರೀರವನ್ನು ಸದೃಢ ಹಾಗೂ ಸ್ಮಾರ್ಟ್ ಆಗಿ ಮಾಡಿಕೊಳ್ಳಬಹುದು.