ಒಂದು ವಿಷಯವಂತೂ ಸತ್ಯ. ಇಡೀ ವರ್ಷ ನೀವು ಚೆನ್ನಾಗಿ ಕಾಪಾಡಿಕೊಂಡು ಬಂದ ಆರೋಗ್ಯಕ್ಕೆ ಹಬ್ಬಗಳು ಸ್ವಲ್ಪ ಎಡವಟ್ಟು ಮಾಡುತ್ತವೆ. ಈ ಕಾರಣದಿಂದಾಗಿ ಇಚ್ಛೆ ಇಲ್ಲದಿದ್ದಾಗ್ಯೂ ನಮ್ಮ ತೂಕ ಹೆಚ್ಚು ಪ್ರಸಂಗ ಬರುತ್ತದೆ. ಆದರೆ ಮತ್ತೊಂದು ಸತ್ಯವನ್ನು ನಾವು ಅಲ್ಲಗಳೆಯಲು ಕೂಡ ಆಗುವುದಿಲ್ಲ. ಅದೇನೆಂದರೆ ಹಬ್ಬಗಳು ಎಲ್ಲರೂ ಕೂಡಿ ಆಚರಿಸುವ ವಿಶಿಷ್ಟ ಅವಕಾಶ ನೀಡುತ್ತವೆ. ಜೊತೆಗೆ ಎಲ್ಲರೊಂದಿಗೆ ಒಂದಿಷ್ಟು ತಿಂಡಿಗಳನ್ನು ಖುಷಿಯಿಂದ ತಿನ್ನುವಂತೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಂದು ತುತ್ತಿಗೂ ನೀವು ಬೊಜ್ಜಿನ ಬಗ್ಗೆ ಚಿಂತೆ ಮಾಡುತ್ತಾ ಕೂತರೆ ಹಬ್ಬಗಳ ಖುಷಿಯನ್ನು ಅನುಭವಿಸಲು ಆದೀತೆ? ಇಲ್ಲ ಅಲ್ಲವೇ? ಹಾಗಿದ್ದರೆ ಮನಸೋಕ್ತವಾಗಿ ಹಬ್ಬಗಳನ್ನು ಎಂಜಾಯ್ ಮಾಡಿ. ಆದರೆ ಯಾವುದನ್ನೂ ಅತಿಯಾಗಿ ತಿನ್ನಬೇಡಿ. ಹಬ್ಬಗಳ ಬಳಿಕ ನಿಮ್ಮ ಆರೋಗ್ಯದ ಬಗ್ಗೆ ಮೊದಲಿನಂತೆ ಪರಿಶ್ರಮ ಪಡುವುದನ್ನು ಮರೆಯಬೇಡಿ. ಇದರಿಂದ ನೀವು ಹಬ್ಬಗಳನ್ನೂ ಎಂಜಾಯ್ ಮಾಡಬಹುದು ಹಾಗೂ ಆರೋಗ್ಯದ ಬಗೆಗೂ ಗಮನ ಕೊಡಬಹುದು.
ಈ ಕುರಿತಂತೆ ಡಯೇಟಿಶಿಯನ್ ಡಾ. ವಿಭಾ ಹೀಗೆ ಹೇಳುತ್ತಾರೆ, ``ಸಾಮಾನ್ಯವಾಗಿ ನಾವು ಹಬ್ಬಗಳಲ್ಲಷ್ಟೇ ಅಲ್ಲ, ಹಬ್ಬಗಳ ಬಳಿಕ ಅದರ ಎಂಜಾಯ್ ಮಾಡುತ್ತಿರುತ್ತೇವೆ. ಆ ಕಾರಣದಿಂದ ತೂಕ ಹೆಚ್ಚುವುದು, ಅಸಿಡಿಟಿ ಸಮಸ್ಯೆ, ಹೆಚ್ಚು ಸಿಹಿ ತಿನ್ನುವುದರಿಂದ ಶುಗರ್ ಲೆವೆಲ್ ಹೆಚ್ಚುವಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.
``ಹಬ್ಬಗಳ ಸಂದರ್ಭದಲ್ಲಿ ಹಬ್ಬವನ್ನು ಎಂಜಾಯ್ ಮಾಡುವುದು ಹಾಗೂ ಹಬ್ಬಗಳ ಬಳಿಕ ಹಳೆಯ ದಿನಚರಿಗೆ ಪುನಃ ಮರಳಬೇಕಾಗುತ್ತದೆ. ಏಕೆಂದರೆ ದೇಹ ಕೂಡ ಅದನ್ನೇ ಬಯಸುತ್ತಿರುತ್ತದೆ. ಹಬ್ಬಗಳ ಸಂದರ್ಭದಲ್ಲಿ ದೇಹ ಹಗುರವಾಗಿರುವಂತೆ ಫೀಲ್ ಮಾಡಿಕೊಳ್ಳಬೇಕು. ನೀವು ಒಳಗಿಂದೊಳಗೆ ಎನರ್ಜಿಟಿಕ್ ಎಂಬಂತೆ ಅನುಭವ ಪಡೆದುಕೊಳ್ಳಬೇಕು. ಅದಕ್ಕಾಗಿ ನೀವು ಕೆಲವು ಟಿಪ್ಸ್ ಅನುಸರಿಸಬೇಕು, ಫಿಟ್ ಮತ್ತು ಎನರ್ಜಿಟಿಕ್ ಆಗಬೇಕು.''
ಆರೋಗ್ಯದ ಕಾಳಜಿ ಹೇಗೆ?
ಹಬ್ಬಗಳ ಸಂದರ್ಭದಲ್ಲಿ ಅತಿಥಿಗಳು ನಮ್ಮ ಮನೆಗೆ ಬರುವುದು ಹಾಗೂ ನಾವು ಬೇರೆಯವರ ಮನೆಗೆ ಹೋಗುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಹಲವು ಸಲ ಚಹಾ/ಕಾಫಿ ಸೇವನೆ ಮಾಡಬೇಕಾಗಿ ಬರುತ್ತದೆ. ಸಿಹಿ ತಿಂಡಿ ಕೂಡ ತಿನ್ನಬೇಕಾಗುತ್ತದೆ. ಈ ರೀತಿ ನೀವು ಹಬ್ಬದ ಸಂದರ್ಭದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶವನ್ನು ಸೇವಿಸುತ್ತೀರಿ. ಹಾಗಾಗಿ ಹಬ್ಬಕ್ಕೆ ಮುಂಚೆಯೇ ನಿಮ್ಮ ಆಹಾರಗಳಿಂದ ಸಕ್ಕರೆ ಅಂಶ ಕಡಿಮೆ ಮಾಡಲು ಪ್ರಯತ್ನಿಸಿ. ಏಕೆಂದರೆ ಈ ಸಕ್ಕರೆ ಅಂಶ ದೇಹದಲ್ಲಿ ಆ್ಯಸಿಡ್ ಸಿದ್ಧಪಡಿಸುವ ಕೆಲಸ ಮಾಡುತ್ತದೆ ಹಾಗೂ ಹೆಚ್ಚುವರಿ ಸಕ್ಕರೆಯಿಂದ ದೇಹದಲ್ಲಿ ಬೊಜ್ಜು ನಿರ್ಮಾಣವಾಗುತ್ತದೆ.
ಅಮೆರಿಕದ ಒಂದು ಸಂಶೋಧನೆಯ ಪ್ರಕಾರ ಒಬ್ಬ ವ್ಯಕ್ತಿ ಇಡೀ ದಿನದಲ್ಲಿ 94 ಗ್ರಾಂ (ಅಂದರೆ ಅದು 358 ಕ್ಯಾಲೋರಿಗೆ ಸಮ) ಸಕ್ಕರೆ ಅಂಶ ಸೇವನೆ ಮಾಡುತ್ತಿದ್ದರೆ, ಟೈಪ್ ಮಧುಮೇಹದ ಜೊತೆಗೆ ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ ಸಕ್ಕರೆಯನ್ನು ನಿಮ್ಮ ಡಯೆಟ್ ನಿಂದ ಕಡಿಮೆ ಮಾಡಲು ಮರೆಯಬೇಡಿ.
ನೀವು ದಿನಕ್ಕೆ 3-4 ಸಲ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದರೆ, ಅದರ ಬದಲಿಗೆ ಗ್ರೀನ್ ಟೀ, ಬ್ಲ್ಯಾಕ್ ಟೀ, ಲೆಮನ್ ಟೀ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಈ ಪರ್ಯಾಯ ಉಪಾಯಗಳು ನಿಮ್ಮನ್ನು ಫಿಟ್‌ಆಗಿ ಇಟ್ಟಿರುವುದರ ಜೊತೆ ಜೊತೆಗೆ ನಿಮ್ಮ ಶುಗರ್ ಕ್ರೀಮಿಂಗ್ ನ್ನು ತಡೆಯುವ ಕೆಲಸ ಮಾಡುತ್ತವೆ. ಒಂದು ವೇಳೆ ನಿಮಗೆ ಮಿಲ್ಕ್ ಟೀ ಕುಡಿಯಲೇಬೇಕಿದ್ದರೆ, ಅದರಲ್ಲಿ ಸಕ್ಕರೆ ಬೆರೆಸಬೇಡಿ. ಬರ್ಫಿ, ಸ್ವೀಟ್ಸ್ ಮುಂತಾದವುಗಳನ್ನು ನೆಪ ಮಾತ್ರಕ್ಕೆ ತಿನ್ನಿ. ಅದರ ಬದಲಿಗೆ ನೀವು ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.