ಪ್ರೋಟೀನ್' ಇದು ದೇಹದಲ್ಲಿ ಸ್ನಾಯುಗಳು, ಅಂಗಗಳು, ಚರ್ಮ, ಕಿಣ್ವಗಳು ಹಾರ್ಮೋನು ಮುಂತಾದವು ರೂಪುಗೊಳ್ಳಲು ಅತ್ಯವಶ್ಯ. ಈ ಚಿಕ್ಕ ಕಣಗಳು ನಮ್ಮ ದೇಹದಲ್ಲಿ ಮಹತ್ವದ ಕೆಲಸ ಮಾಡುತ್ತವೆ.
ನಮ್ಮ ದೇಹದಲ್ಲಿ ಸುಮಾರು 20 ಪ್ರಕಾರದ ಅಮೈನೊ ಆ್ಯಸಿಡ್ ಗಳು ಇರುತ್ತವೆ. ಅವುಗಳಲ್ಲಿ 8 ಅತ್ಯಂತ ಅತ್ಯವಶ್ಯಕ ಅಮೈನೊ ಆ್ಯಸಿಡ್ ಗಳೆಂದು ಕರೆಯಲ್ಪಡುತ್ತವೆ. ಹೀಗಾಗಿ ಅವನ್ನು ಆಹಾರದ ಮುಖಾಂತರ ಸೇವಿಸುವುದು ಅತ್ಯವಶ್ಯ. ಉಳಿದವು ಶೇ.12ರಷ್ಟು ಅಮೈನೊ ಆ್ಯಸಿಡ್ ಗಳು ಅವಶ್ಯಕವಲ್ಲದ್ದು ಎಂದು ಹೇಳಬಹುದಾಗಿದೆ. ಏಕೆಂದರೆ ನಮ್ಮ ದೇಹ ಸ್ವತಃ ಇನ್ನು ಉತ್ಪಾದಿಸುತ್ತವೆ. ಪ್ರೋಟೀನ್ ಚಿಕ್ಕ ಅಣುಗಳಿಂದ ರೂಪುಗೊಳ್ಳುತ್ತದೆ. ಅದನ್ನು `ಅಮೈನೊ ಆ್ಯಸಿಡ್' ಗಳೆಂದು ಕರೆಯಲಾಗುತ್ತದೆ. ಈ ಅಮೈನೊ ಆ್ಯಸಿಡ್ ಗಳು ಪರಸ್ಪರ ಸೇರಿಕೊಂಡು ಪ್ರೋಟೀನ್ ಸರಪಳಿಯನ್ನು ಸೃಷ್ಟಿಸುತ್ತವೆ.
ಪ್ರೋಟೀನ್ ಒಳಗೊಂಡ ಆಹಾರ ಪಚನ ಮಾಡಿಕೊಳ್ಳಲು ದೇಹಕ್ಕೆ ಹೆಚ್ಚಿನ ಎನರ್ಜಿ ಬೇಕಾಗುತ್ತದೆ. ಹೀಗಾಗಿ ಪ್ರೋಟೀನ್ ನ್ನು ಪಚನ ಮಾಡುವ ಸಂದರ್ಭದಲ್ಲಿ ದೇಹದಲ್ಲಿ ಜಮೆಗೊಂಡ ಕ್ಯಾಲೋರಿ (ಕೊಬ್ಬು ಹಾಗೂ ಕಾರ್ಬೋಹೈಡ್ರೇಟ್) ಬರ್ನ್ ಆಗುತ್ತದೆ. ಈ ರೀತಿಯಲ್ಲಿ ಪ್ರೋಟೀನ್ ಸೇವನೆ ಮಾಡುವುದರಿಂದ ದೇಹದ ತೂಕ ಸಾಮಾನ್ಯವಾಗಿರುತ್ತದೆ.
ನೀವು ಸಸ್ಯಾಹಾರಿಯಾಗಿದ್ದರೆ ನಿಮಗೆ ಪ್ರೋಟೀನ್ ಅವಶ್ಯಕತೆ ಪೂರೈಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇದೇ ಕಾರಣದಿಂದ ಸಸ್ಯಾಹಾರಿಗಳಲ್ಲಿ ಪ್ರೋಟೀನ್ ಕೊರತೆ ಉಂಟಾಗುತ್ತದೆ.
ವ್ಯಕ್ತಿಗೆ ಪ್ರೋಟೀನ್ ಎಷ್ಟು ಅಗತ್ಯ?
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ದೇಹಕ್ಕನುಗುಣವಾಗಿ ಪ್ರೋಟೀನ್ ಅವಶ್ಯಕತೆ ಉಂಟಾಗುತ್ತದೆ. ಅದು ವ್ಯಕ್ತಿಯ ಎತ್ತರ ಹಾಗೂ ತೂಕವನ್ನು ಅವಲಂಬಿಸಿರುತ್ತದೆ. ಸೂಕ್ತ ಪ್ರಮಾಣದಲ್ಲಿ ಪ್ರೋಟೀನ್ ಸೇವನೆ ಹಲವು ಸಂಗತಿಗಳನ್ನು ಆಧರಿಸಿರುತ್ತದೆ. ನೀವು ಎಷ್ಟು ಕ್ರಿಯಾಶೀಲರಾಗಿದ್ದೀರಿ, ನಿಮ್ಮ ವಯಸ್ಸು ಎಷ್ಟು ಹಾಗೂ ನಿಮ್ಮ ಮಸಲ್ ಮಾಸ್ ಎಷ್ಟಿದೆ? ನಿಮ್ಮ ಆರೋಗ್ಯ ಹೇಗಿದೆ? ಈ ಎಲ್ಲ ಸಂಗತಿಗಳನ್ನು ಅವಲಂಬಿಸಿರುತ್ತದೆ.
ನಿಮ್ಮ ತೂಕ ಸಾಮಾನ್ಯವಾಗಿದ್ದರೆ, ನೀವು ಹೆಚ್ಚು ತೂಕ ಎತ್ತುವುದಿಲ್ಲವೆಂದರೆ ನಿಮಗೆ ಸರಾಸರಿ 0.36-0.6 ಗ್ರಾಂ ಪ್ರತಿ ಪೌಂಡ್(0.81.3 ಗ್ರಾಂ ಪ್ರತಿ ಕಿಲೋ ತೂಕ) ಪ್ರೋಟೀನ್ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಪುರುಷರಿಗೆ 56-91 ಗ್ರಾಂ ಪ್ರತಿದಿನ ಹಾಗೂ ಮಹಿಳೆಯರಿಗೆ ಸರಾಸರಿ 46-75 ಪ್ರತಿದಿನ.
ಪ್ರೋಟೀನ್ ನ ಕೊರತೆ ಏಕೆ?
ಪ್ರೋಟೀನ್ ನ ಕೊರತೆ ಅತಿಯಾಗಿ ಉಂಟಾದರೆ ದೇಹದಲ್ಲಿ ಹಲವು ರೀತಿಯ ಬದಲಾವಣೆ ಉಂಟಾಗುತ್ತದೆ. ಇದರ ಕೊರತೆ ದೇಹದ ಪ್ರತಿಯೊಂದು ಕೆಲಸದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ 13 ಲಕ್ಷಣಗಳು ನೀವು ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ನ್ನು ಸೇವನೆ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತವೆ.
ತೂಕದಲ್ಲಿ ಕೊರತೆ : ಪ್ರೋಟೀನ್ ಕೊರತೆಯಲ್ಲಿ 2 ಪ್ರಕಾರಗಳಿವೆ.
ಮೊದಲನೆಯದು ಕ್ವಾಶಿಯೋರ್ ಕೋರ್, ನೀವು ಕ್ಯಾಲೋರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದೀರಿ. ಆದರೆ ನಿಮ್ಮ ಆಹಾರದಲ್ಲಿ ಪ್ರೋಟೀನ್ ನ ಕೊರತೆ ಇದೆ.
ಎರಡನೆಯದು ಮರ್ಯಾರ್ಮಸ್. ನೀವು ನಿಮ್ಮ ಆಹಾರದಲ್ಲಿ ಕ್ಯಾಲೋರಿ ಮತ್ತು ಪ್ರೋಟೀನ್ ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಸೇವಿಸದೇ ಇದ್ದಾಗ ಈ ಸ್ಥಿತಿ ಉಂಟಾಗುತ್ತದೆ.