ಮದುವೆಯ ದಿನ ವಧು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾಳೆ. ಅಂದು ಸುಂದರವಾಗಿ ಹಾಗೂ ಫಿಟ್‌ ಆಗಿ ಕಾಣುವುದು ಅವಳ ಹಕ್ಕು. ಸರಿಯಾದ ಡಯೆಟ್‌ ಹಾಗೂ ಎಕ್ಸ್ ಪರ್ಟ್‌ ಗಳ ಸಹಾಯದಿಂದ ಆ ದಿನವನ್ನು ಇನ್ನಷ್ಟು ಸುಂದರವಾಗಿ ಮಾಡಬಹುದು.

ಅದರ ಬಗ್ಗೆ ಖ್ಯಾತ ಡಯೆಟೀಶಿಯನ್‌ ಡಾ. ಕಿರಣ್‌ ಹೀಗೆ ಹೇಳುತ್ತಾರೆ, ``ಜನರ ಲೈಫ್‌ ಸ್ಟೈಲ್ ‌ಹಾಗೂ ಫುಡ್‌ ಹ್ಯಾಬಿಟ್‌ ಗಳು ಬೇರೆ ಬೇರೆಯಾದ್ದರಿಂದ ಅವರು ಶಾರೀರಿಕ ಅಗತ್ಯಗಳೂ ಭಿನ್ನವಾಗಿರುತ್ತವೆ. ಹೀಗಾಗಿ ನಿಮ್ಮ ಫಿಟ್ನೆಸ್‌ ಖಾಯಮ್ಮಾಗಿಟ್ಟುಕೊಳ್ಳಲು ವಿಶೇಷಜ್ಞರ ಸಲಹೆ ಪಡೆಯಿರಿ ಮತ್ತು ನಿಮ್ಮ ಹೊಸ ಬದುಕಿನ ಆರಂಭವನ್ನು ಫಿಟ್ನೆಸ್‌ ನೊಂದಿಗೆ ಮಾಡಿ.''

ಆಹಾರ ತಿಂಡಿಯಲ್ಲಿ ಬ್ರೆಡ್‌, 1 ಮೊಟ್ಟೆ ಮತ್ತು ಫ್ರೆಶ್‌ ಜ್ಯೂಸ್‌ ಇರಲಿ. ಅಖರೋಟ್‌ ಮತ್ತು ಬಾದಾಮಿಯನ್ನು ಸೇರಿಸಿಕೊಳ್ಳಿ. ಅವುಗಳಲ್ಲಿರುವ ಪ್ರೋಟೀನ್‌, ಫೈಬರ್‌, ಫೈಟೋಕೆಮಿಕಲ್ಸ್ ನಿಮ್ಮ ಹೃದಯವನ್ನು ಆರೋಗ್ಯವಾಗಿಡುವ ಜೊತೆಗೆ ನಿಮ್ಮ ಬಾಡಿಯ ವೇಸ್ಟಟೈನ್‌ ಹೆಚ್ಚಾಗದಂತೆ ತಡೆಯುತ್ತವೆ.

ದಿನಕ್ಕೊಮ್ಮೆ ಅಗತ್ಯವಾಗಿ ಮೊಸರು ಸೇವಿಸಿ. ಮೊಸರಿನಲ್ಲಿ ಝಿಂಕ್‌, ಕ್ಯಾಲ್ಶಿಯಂ ಮತ್ತು ವಿಟಮಿನ್‌ ಗಳಿದ್ದು, ಅದರಿಂದ ನಿಮ್ಮ ತ್ವಚೆ ಕೋಮಲವಾಗಿರುತ್ತದೆ.

ಸಂಜೆ ಹೊತ್ತು ಪನೀರ್‌ ನಿಂದ ತಯಾರಿಸಿದ ಖಾದ್ಯಗಳನ್ನೇ ತಿನ್ನಿ. ಪನೀರ್‌ ನಲ್ಲಿ ಪ್ರೋಟೀನ್‌ ಮತ್ತು ಕ್ಯಾಲ್ಶಿಯಂ ಇದ್ದು, ಅದರಿಂದ ನಿಮ್ಮ ಹೊಟ್ಟೆಯ ಕಾಯಿಲೆಗಳೆಲ್ಲಾ ದೂರವಾಗುತ್ತವೆ. ನಿಮ್ಮ ದೇಹದ ಮೂಳೆಗಳೂ ಸದೃಢವಾಗುತ್ತವೆ.

ನೀವು ಮಾಂಸಾಹಾರಿಯಾಗಿದ್ದರೆ, ಮೀನನ್ನು ಅಗತ್ಯವಾಗಿ ಸೇವಿಸಿ. ಅದರಲ್ಲಿನ ಪ್ರೋಟೀನ್‌ ಕೂದಲಿಗೆ ಲಾಭಕಾರಿಯಾಗಿದ್ದು, ಅವಕ್ಕೆ ಹೊಳಪು ಬರುತ್ತದೆ.

ಶಾಕಾಹಾರಿಯಾಗಿದ್ದರೆ ಹಸಿರು ತರಕಾರಿಗಳನ್ನು ಬೇಯಿಸಿ ತಿನ್ನಿ. ಅದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಮೊಡವೆಗಳ ತೊಂದರೆಯೂ ಇರುವುದಿಲ್ಲ.

ಬ್ಯೂಟಿ ಮುಖಕ್ಕೆ ಪ್ರತಿದಿನ ಅಗತ್ಯವಾಗಿ ಸಿಟಿಎಂ ಅಂದರೆ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ ಮಾಡಿ. ಅದರಿಂದ ಮೃತ ತ್ವಚೆ ದೂರಾಗುತ್ತದೆ ಮತ್ತು ಮುಖ ಅರಳುತ್ತದೆ.

ಒಂದು ವೇಳೆ ನಿಮ್ಮ ಕೂದಲು ರಫ್‌ಆಗಿದ್ದರೆ, ಮದುವೆಗೆ 4 ತಿಂಗಳ ಮೊದಲಿನಿಂದಲೇ ಮಸಾಜ್‌ ಆರಂಭಿಸಿ ಮತ್ತು ಹೇರ್ ಮಾಸ್ಕ್ ಹಚ್ಚಿ. ಅದರಿಂದ ಕೂದಲಿಗೆ ಹೊಳಪು ಬರುವುದರ ಜೊತೆಗೆ ಅವುಗಳ ಗ್ರೋಥ್‌ ಕೂಡ ಸರಿಯಾಗಿರುತ್ತದೆ. ಆಗ ಮದುವೆಯ ದಿನ ನಿಮಗಿಷ್ಟವಾದ ಹೇರ್‌ ಸ್ಟೈಲ್ ಮಾಡಿಸಿಕೊಳ್ಳಬಹುದು.

2 ತಿಂಗಳು ಮೊದಲಿನಿಂದಲೇ ಪೆಡಿಕ್ಯೂರ್‌ ಮತ್ತು ಮೆನಿಕ್ಯೂರ್‌ ಮಾಡಿಸಿಕೊಳ್ಳಲು ಶುರುಮಾಡಿ. ಆಗ ಕೈಕಾಲುಗಳ ಮೃತ ತ್ವಚೆ ದೂರವಾಗುತ್ತದೆ ಮತ್ತು ಡ್ಯಾಮೇಜ್‌ ಆಗಿರುವ ನೇಲ್ಸ್ ಕೂಡ ಸರಿಯಾದ ಶೇಪ್‌ ಪಡೆಯುತ್ತವೆ. ಮೆಹಂದಿ ಜೊತೆ ಮೆನಿಕ್ಯೂರ್ ನಿಂದ ನಿಮ್ಮ ಕೈಗಳ ಸೌಂದರ್ಯಕ್ಕೆ ಇನ್ನಷ್ಟು ಗರಿ ಮೂಡಿಸಿ.

15032012vk0297

ನಿಮ್ಮ ದೇಹಕ್ಕೆ ಅಗತ್ಯವಾಗಿ ಸ್ಪಾ ಟಚ್‌ ಕೊಡಿ. ಸ್ಪಾನಿಂದ ನಿಮ್ಮ ದೇಹದಲ್ಲಿ ಆಯಾಸ ದೂರವಾಗುತ್ತದೆ ಮತ್ತು ನಿಮಗೆ ತಾಜಾತನದ ಅನುಭವವಾಗುತ್ತದೆ. ಬಾಡಿ ಮಸಾಜ್‌, ಹೆಡ್‌ ಮಸಾಜ್‌, ಫುಟ್‌ ಮಸಾಜ್‌, ಹಾಟ್‌ ಮಸಾಜ್‌ ಇತ್ಯಾದಿ ಅನೇಕ ರೀತಿಯ ಸ್ಪಾ ಇರುತ್ತವೆ. ಆದರೆ ವಧುವಿಗೆ ಬ್ರೈಡಲ್ ಮೇಕಪ್‌ ಸರಿಯಾಗಿರುತ್ತದೆ. ಮದುವೆಗೆ 3 ತಿಂಗಳ ಮೊದಲಿನಿಂದಲೇ ಸ್ಪಾ ಮಾಡಿಸಲು ಶುರು ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ