ಯಾವುದೇ ವಯೋಮಾನದಲ್ಲಿ ವಿವಿಧ ಕಾರಣಗಳಿಂದಾಗಿ ಹಲ್ಲುಗಳು ಬಿದ್ದುಹೋಗುವ ಸಾಧ್ಯತೆ ಇದೆ. ಹಲ್ಲುಗಳಿಗೆ ಹಾನಿಯಾಗುವುದರಿಂದ ಮುಖದ ಸೌಂದರ್ಯ ಕುಗ್ಗುವುದು ಸಹಜ. ಆದರೆ, ದಂತ ವೈದ್ಯಕೀಯ ವಿಜ್ಞಾನ ಸಂಶೋಧಿಸಿದ `ಡೆಂಟಲ್ ಇಂಪ್ಲಾಂಟ್‌' ಎಂಬ ಚಿಕಿತ್ಸೆಯು ದಂತ ಭಗ್ನರಿಗೊಂದು ವರದಾನವಾಗಿ ಪರಿಣಮಿಸಿದೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

ಮೀನಾಕ್ಷಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ. ಅವಳ ಹಾಲು ಹಲ್ಲುಗಳು ಬಿದ್ದುಹೋದಾಗ ಅವಳಿನ್ನೂ ಪುಟ್ಟ ಬಾಲಕಿ. ಕಾಲಕ್ರಮೇಣ ಅವಳ ಎಲ್ಲಾ ಹೊಸ ಹಲ್ಲುಗಳು ಬೆಳೆದವಾದರೂ, ಮೇಲಿನ ದವಡೆಯ ಮುಂಭಾಗದ ಎರಡು ದಂತಗಳು ಚಿಗುರಲೇ ಇಲ್ಲ.

ಹೀಗಾಗಿ ಮೀನಾಕ್ಷಿ ಡೆಂಟಲ್ ಸರ್ಜನ್‌ ಒಬ್ಬರನ್ನು ಸಂಪರ್ಕಿಸಿದಾಗ, ವೈದ್ಯರು ಪ್ಲಾಸ್ಟಿಕ್‌ ಡೆಂಚರ್‌ ಅಳವಡಿಸಿದರು. ಇದರಿಂದಾಗಿ ಅವಳಿಗೆ ಅನುಕೂಲ ಆಯಿತು. ಬೇಕೆನಿಸಿದಾಗ ಡೆಂಚರ್‌ ಹಾಕಿಕೊಳ್ಳುತ್ತಿದ್ದಳು, ಬೇಡವಾದಾಗ ಕಳಚುತ್ತಿದ್ದಳು.

ಆದರೆ ಆ ಬಾಲ್ಯಾವಸ್ಥೆಯಲ್ಲಿ ಮೀನಾಕ್ಷಿಗೆ ಡೆಂಚರ್‌ ಬಳಸುವುದು ತುಸು ಕಷ್ಟಕರ ಎನಿಸುತ್ತಿತ್ತು. ಸ್ನೇಹಿತರ ಎದುರು ನಗೆಪಾಟಲಿಗೆ ಈಡಾಗಬಾರದೆಂದು ಅನಿವಾರ್ಯವಾಗಿ ಆ ಕಷ್ಟವನ್ನು ಸಹಿಸಿಕೊಂಡಿದ್ದಳು. ಇದೇ ಸಮಯದಲ್ಲಿ ದಿನಪತ್ರಿಕೆ ಒಂದರಲ್ಲಿ ಡೆಂಟಲ್ ಇಂಪ್ಲಾಂಟ್‌ ಕುರಿತಾದ ಲೇಖನ ಓದಿ ಉತ್ಸುಕಳಾಗಿ ಡೆಂಟಲ್ ಸರ್ಜನ್‌ ಬಳಿ ತೆರಳಿ ಆ ಚಿಕಿತ್ಸೆಯ ಕುರಿತಾಗಿ ಸಾಕಷ್ಟು ಚರ್ಚೆ ಮಾಡಿದಳು. ಕೆಲವೇ ದಿನಗಳಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡು, ತನ್ನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡಳು.

ಮೀನಾಕ್ಷಿಯ ಮೇಲ್ದವಡೆಯಲ್ಲಿರುವ ಖಾಲಿ ಜಾಗದಲ್ಲಿ ಎರಡು ಕೃತಕ ಹಲ್ಲುಗಳನ್ನು ಅಳವಡಿಸಲಾಯಿತು. ಅದೆಷ್ಟು ಸಹಜವಾಗಿ ಗೋಚರಿಸುತ್ತಿತ್ತು ಎಂದರೆ, ಯಾರಾದರೂ ಬೆರಳಿನಿಂದ ಸ್ಪರ್ಶಿಸಿ ನೋಡಿದರೂ ಅವು ಕೃತಕವೆಂದು ಅನಿಸುವುದಿಲ್ಲ.

ಡೆಂಟಲ್ ಇಪ್ಲಾಂಟ್‌ ನಿಂದಾಗಿ ಮೀನಾಕ್ಷಿಗೆ ಸಂತೃಪ್ತಿ ದೊರೆಯಿತು. ಇದೀಗ ಅವಳು ನಿಸ್ಸಂಕೋಚದಿಂದ ಬಾಯ್ದೆರೆದು ನಗುವಂತಾಗಿದೆ. ಜೊತೆಗೆ, ಆಹಾರವನ್ನು ಚೆನ್ನಾಗಿ ಅಗಿದು ನುಂಗಲು ಸಹಕಾರಿಯಾಗಿದೆ. ಅವಳಿಗೀಗ ಆ ಕೃತಕ ಹಲ್ಲುಗಳನ್ನು ಕಳಚಿ ಶುಭ್ರಪಡಿಸುವ ಪ್ರಮೇಯವೇ ಇಲ್ಲ ಹಾಗೂ ಮಾತನಾಡುವಾಗ, ನಗುವಾಗ ಆಕಸ್ಮಿಕವಾಗಿ ಕಳಚಿ ಬಿದ್ದೀತೆಂಬ ಆತಂಕ ಇಲ್ಲ.

ದಂತಕ್ಷಯದ ಮೂಲಗಳು

ವಿವಿಧ ಕಾರಣಗಳಿಂದಾಗಿ ಯಾವುದೇ ವಯೋಮಾನದಲ್ಲೂ ಹಲ್ಲುಗಳು ಬಿದ್ದುಹೋಗುತ್ತವೆ. ಸಾಕಷ್ಟು ಜನ ತಮ್ಮ ಸುಂದರ ದಂತಪಂಕ್ತಿಗಳನ್ನು ಹಾನಿ ಮಾಡಿಕೊಳ್ಳಲು ಪ್ರಮುಖ ಕಾರಣವೇನೆಂದರೆ, ಬಾಲ್ಯದಿಂದಲೇ ಬೆಳೆದು ಬಂದ ದಂತ ಆರೋಗ್ಯದ ಕುರಿತಾದ ಅಸಡ್ಡೆ. ಇದರ ಪರಿಣಾಮದಿಂದಾಗಿಯೇ ಕಾಲಕ್ರಮೇಣ ವಸಡುಗಳಲ್ಲಿ ಊತ, ದಂತಕ್ಷಯ, ಹಲ್ಲುಗಳು ಸಡಿಲಗೊಳ್ಳುವ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಇಷ್ಟವಾದರೂ ಚಿಕಿತ್ಸೆ ಪಡೆಯದಿದ್ದರೆ ಹಲ್ಲುಗಳು ಒಂದೊಂದಾಗಿ ಉದುರಿಹೋಗುತ್ತವೆ.

ವಿಟಮಿನ್‌ `ಸಿ' ಕೊರತೆ, ಅತಿಯಾದ ಸಿಹಿ ಸೇವನೆ, ಅಡಕೆ ಜಗಿಯುವುದು ಮುಂತಾದ ಅಭ್ಯಾಸಗಳಿಂದಾಗಿ ಹಲ್ಲುಗಳ ಆರೋಗ್ಯ ಕುಂಠಿತಗೊಳ್ಳುತ್ತದೆ. ಕೆಲವು ಸಲ ಆಕಸ್ಮಿಕ ಅಪಘಾತ ಹಾಗೂ ದುರ್ಘಟನೆಗಳಿಂದಲೂ ದಂತ ಭಗ್ನ ಆಗುವುದು ಸ್ವಾಭಾವಿಕ. ಕೆಲವು ಆನುವಂಶಿಕ ಸಮಸ್ಯೆಗಳಿಂದಾಗಿಯೂ ವಸಡು ಮತ್ತು ದಂತಗಳ ಮೇಲೆ ದುಷ್ಪರಿಣಾಮ ಉಂಟಾಗಿ ಹಲ್ಲುಗಳು ಬೀಳುತ್ತವೆ. ಮಧುಮೇಹ ಕಾಯಿಲೆಯಿಂದಲೂ ಹಲ್ಲುಗಳ ಆರೋಗ್ಯಕ್ಕೆ ಆಪತ್ತು ಎದುರಾಗುತ್ತದೆ.

ಕೃತಕ ದಂತ

dental-implants

ಕೃತಕ ದಂತಗಳನ್ನು ಎರಡು ಪ್ರಮುಖ ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಮೊದಲನೆಯದಾಗಿ, ಸುಲಭವಾಗಿ ಮತ್ತು ಬೇಕೆನಿಸಿದಾಗ ಧರಿಸಬಲ್ಲ ಹಾಗೂ ಕಳಚಬಲ್ಲ ಹಲ್ಲುಗಳು. ಇಂತಹ ಹಲ್ಲುಗಳನ್ನೇ `ಡೆಂಚರ್‌' ಎಂದು ಕರೆಯಲಾಗುತ್ತದೆ. ಒಂದು ಅಥವಾ ಎರಡಕ್ಕಿಂತಲೂ ಅಧಿಕ ಮತ್ತು ಅವಶ್ಯವಾದಲ್ಲಿ ಎಲ್ಲ ಮೂವತ್ತೆರಡು ಹಲ್ಲುಗಳಿಗೂ ಡೆಂಚರ್‌ ಅಳವಡಿಸಬಹುದಾಗಿದೆ. ಎರಡನೇಯದಾಗಿ ಕೃತಕ ದಂತಗಳು. ಹಾನಿಗೊಳಗಾಗಿ ಬಿದ್ದುಹೋದ ಹಲ್ಲುಗಳ ಜಾಗದಲ್ಲಿ ಕೃತಕ ದಂತಗಳನ್ನು ಶಾಶ್ವತವಾಗಿ ಅವಳಡಿಸಲಾಗುತ್ತದೆ. ದಂತಕುಳಿಗಳ ಮೇಲೆ ಹಾಕಲಾಗುವ `ಡೆಂಟಲ್ ಬ್ರಿಜ್‌' ಮತ್ತು `ಡೆಂಟಲ್ ಇಂಪ್ಲಾಂಟ್‌' ಕೂಡ ಕೃತಕ ಹಲ್ಲುಗಳಂತೆಯೇ ಶಾಶ್ವತವಾಗಿ ಅಳವಡಿಸುವ ವರ್ಗಕ್ಕೆ ಸೇರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ