ಕೆಲವು ವರ್ಷಗಳ ಹಿಂದೆ ವೈದ್ಯರ ಬಳಿ ಒಂದು ಜೋಡಿ ಹೋಗಿತ್ತು. 34 ವರ್ಷದ ಶಾಲಿನಿಯ ಮದುವೆ 36 ವರ್ಷದ ಮೋಹನ್‌ ಜೊತೆ ಆಗಿತ್ತು. ಇಬ್ಬರೂ ಐಟಿ ಉದ್ಯಮದಲ್ಲಿದ್ದರು. ಅವರು ಬಂಜೆತನದ ತಕರಾರಿನೊಂದಿಗೆ ವೈದ್ಯರ ಬಳಿ ಹೋಗಿದ್ದರು.

ವೈದ್ಯರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಅವರು ತಿಳಿಸಿದ್ದೇನೆಂದರೆ, ಮದುವೆಯ ಬಳಿಕ ವ್ಯಸ್ತತೆಯ ದಿನಚರಿಯಿಂದಾಗಿ ಎಂದೂ ಸರಿಯಾಗಿ ಸಮಾಗಮ ನಡೆಸುವುದು ಕೂಡ ಸಾಧ್ಯವಾಗಿರಲಿಲ್ಲ.

ವೈದ್ಯರು ದಂಪತಿಗೆ ಕೌನ್ಸೆಲಿಂಗ್‌ ನಡೆಸಿದರು. ಅವರಿಗೆ  ಯೋನಿ ಮಾರ್ಗದ ಮೂಲಕ ಕೃತಕ ಗರ್ಭಧಾರಣೆಯ ಬಗ್ಗೆ ತಿಳಿಸಲಾಯಿತು. ದಂಪತಿಗಳು ಅದಕ್ಕಾಗಿ ಸನ್ನದ್ಧರಾದರು. ಪ್ರಕ್ರಿಯೆಯ 3ನೇ ಋತುಚಕ್ರದ ಸಂದರ್ಭದಲ್ಲಿ ಪ್ರತಿಭಾ ಗರ್ಭಿಣಿಯಾದಳು. ಈಗ ಅವಳು 1 ವರ್ಷದ ಆರೋಗ್ಯವಂತ ಮಗುವಿನ ತಾಯಿ. ಪ್ರತಿಭಾಳ ಹಾಗೆ ಸಮಸ್ಯೆ ಹೊತ್ತ ನೂರಾರು ಜನರು ಇದ್ದಾರೆ. ಸಂತಾನೋತ್ಪತ್ತಿ ವಯಸ್ಸಿನಲ್ಲಿ ಪ್ರತಿ 10ರಲ್ಲಿ 1 ಜೋಡಿಗೆ ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಮಹಾನಗರಗಳಲ್ಲಿ ಈ ಅನುಪಾತ ಇನ್ನೂ ಹೆಚ್ಚುತ್ತಲೇ ಹೊರಟಿದೆ. ಇಬ್ಬರೂ ಉದ್ಯೋಗಸ್ಥರಾಗಿರುವ ದಂಪತಿಗಳಲ್ಲಿಯೇ ಈ ಸಮಸ್ಯೆ ಹೆಚ್ಚು.

ವಿವಿಧ ಕಾರಣಗಳು

ಅದಕ್ಕೆ ವಿವಿಧ ಕಾರಣಗಳಿರುತ್ತವೆ. ಇಂದಿನ ಹೆಚ್ಚಿನ ಮಹಿಳೆಯರು ತಮ್ಮ ಕೆರಿಯರ್‌ ಕುರಿತಂತೆ ಹೆಚ್ಚು ಜಾಗೃತರಾಗಿದ್ದಾರೆ. ಅವರು ಒಂದು ಹಂತದಲ್ಲಿ ಸೆಟಲ್ ಆದ ಬಳಿಕವೇ ಮದುವೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಕಾರಣದಿಂದ ಅವರ ಮದುವೆಗೆ ತಡವಾಗುತ್ತದೆ. ಹೆಚ್ಚಿನ ಯುವತಿಯರಿಗೆ ಮದುವೆಯಾಗುವ ಹೊತ್ತಿಗೆ 30 ದಾಟಿ ಹೋಗಿರುತ್ತದೆ.

ಮಹಿಳೆಯರ ದೇಹ ಹೇಗೆ ರೂಪುಗೊಂಡಿರುತ್ತದೆಂದರೆ, ಸಂತಾನೋತ್ಪತ್ತಿಗೆ ಅರ್ಹ ಅಂಡಾಣುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಏಕೆಂದರೆ ಪ್ರತಿಯೊಬ್ಬ ಮಹಿಳೆಗೂ ಪ್ರಾರಂಭಿಕ ಹಂತದಲ್ಲಿ 3 ರಿಂದ 5 ಲಕ್ಷದವರೆಗೂ ಅಂಡಾಣುಗಳಿರುತ್ತವೆ. ಮುಟ್ಟು ಅಂತ್ಯವಾಗುವ ಹೊತ್ತಿಗೆ ಅವರ ದೇಹದಲ್ಲಿರುವ ಎಲ್ಲ ಅಂಡಾಣುಗಳೂ ನಷ್ಟವಾಗುತ್ತವೆ. ಮಹಿಳೆಯರ ದೇಹದಲ್ಲಿ ಅಂಡಾಣುಗಳು ಪ್ರತಿ ತಿಂಗಳೂ ಉತ್ಪನ್ನವಾಗುವುದಿಲ್ಲ. 35ನೇ ವಯಸ್ಸಿನ ಬಳಿಕ ಸಂತಾನೋತ್ಪತ್ತಿ ಸಾಮರ್ಥ್ಯದಲ್ಲಿ ಭಾರಿ ಕುಸಿತ ಕಂಡುಬರುತ್ತದೆ. ಇಂತಹದರಲ್ಲಿ ಅಂಡಾಣುಗಳ ಗುಣಮಟ್ಟ ಕುಸಿಯುವುದರಿಂದ ಬಹಳಷ್ಟು ಮಹಿಳೆಯರಿಗೆ ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ.

ಈ ಶ್ರೇಣಿಯಲ್ಲಿ ಬರುವ ಹೆಚ್ಚಿನ ಜೋಡಿಗಳು `ಎ' ವ್ಯಕ್ತಿತ್ವದಡಿ ಪರಿಗಣಿಸಲ್ಪಡುತ್ತಾರೆ. ಅವರಲ್ಲಿ ಕೆಲವು ಬಗೆಯ ವಿಶಿಷ್ಟತೆಗಳು ಕಂಡುಬರುತ್ತವೆ. ಉದಾಹರಣೆಗೆ ಅವರು ವರ್ಕೋಹಾಲಿಕ್‌ ಆಗಿರುತ್ತಾರೆ. ಅತ್ಯಂತ ಮಹತ್ವಾಕಾಂಕ್ಷಿಗಳಾಗಿರುತ್ತಾರೆ ಮತ್ತು ಬಹುಬೇಗ ಅಸಮಾಧಾನಗೊಳ್ಳುತ್ತಾರೆ. ಅಷ್ಟೇ ಬೇಗನೇ ಒತ್ತಡಕ್ಕೆ ಸಿಲುಕುತ್ತಾರೆ. ಯಶಸ್ವಿ ಗರ್ಭಧಾರಣೆಗಾಗಿ ದಂಪತಿಗಳು ಒತ್ತಡಮುಕ್ತರಾಗಿ ಇರಬೇಕಾಗುತ್ತದೆ ಹಾಗೂ ನಿಯಮಿತವಾಗಿ ಸಮಾಗಮ ನಡೆಸುತ್ತಿರಬೇಕು. ಆದರೆ ತಮ್ಮ ಕೆಲಸ ಕಾರ್ಯಗಳ ಒತ್ತಡದಿಂದ ಹೀಗೆ ಮಾಡಲು ಸಾಧ್ಯವಾಗುವುದಿಲ್ಲ. ಬಹಳಷ್ಟು ಒತ್ತಡಮಯ ಜೀವನಶೈಲಿಯ ಜನರು ಧೂಮಪಾನ ಹಾಗೂ ಆಲ್ಕೊಹಾಲ್‌ಗೆ ತುತ್ತಾಗುತ್ತಾರೆ.

ಈ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರವಿದೆ.

ನಿಸರ್ಗದತ್ತ ಮರಳುವುದು

ಒಬ್ಬ ಮಹಿಳೆಯ ದೈಹಿಕ ರಚನೆ ಹೇಗೆ ರೂಪುಗೊಂಡಿರುತ್ತದೆ ಎಂದರೆ, ಅದು ಜಗತ್ತಿನ ಅತ್ಯಂತ ಗೌರವಾನ್ವಿತ ಕಾರ್ಯಕ್ಕೆ ಅನುಕೂಲಕರವಾಗಿದೆ. ಈ ಒಂದು ವಿಶೇಷತೆಯ ಲಾಭ ಪಡೆದುಕೊಳ್ಳಲು ಕುಟುಂಬ ರೂಪಿಸಿಕೊಳ್ಳುವ ಕೆಲಸವನ್ನು 23-24ನೇ ವಯಸ್ಸಿನಲ್ಲಿಯೇ ಆರಂಭಿಸಬೇಕು. ಒಂದು ವೇಳೆ ಬಹಳ ತಡವಾದರೂ 30ನೇ ವಯಸ್ಸಿನೊಳಗೆ ಮಗು ಪಡೆಯುವ ಬಗ್ಗೆ ಯೋಚಿಸಬೇಕು. ಬಹಳಷ್ಟು ಮಹಿಳೆಯರು ಹೀಗೆ ಮಾಡಿ ಕುಟುಂಬ ಮತ್ತು ಕೆರಿಯರ್‌ ನಡುವೆ ಸಮತೋಲನ ಸಾಧಿಸಿ ಮಾದರಿ ಎನಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ