ಬಾಲಿವುಡ್‌ನ `ಹಮ್ ಆಪ್‌ ಕೆ ಹೈ ಕೌನ್‌’ ಚಿತ್ರದಲ್ಲಿ ಮಾಧುರಿ ಧರಿಸಿದ್ದ ಡೋರಿ ಬ್ಲೌಸ್‌ನ್ನು ಜನ ಇಂದಿಗೂ ಮರೆತಿಲ್ಲ. ಆಕೆಯ ಆ ಸ್ಟೈಲ್ ದೇಶಾದ್ಯಂತ  ಯುವತಿಯರಲ್ಲಿ ಹೊಸ ಫ್ಯಾಷನ್ನಿನ ಹುಚ್ಚು ಹೊಳೆಯನ್ನೇ ಹರಿಸಿತು. ಈ ರೀತಿ ಹೊಸ ಫ್ಯಾಷನ್‌ ಟ್ರೆಂಡ್‌ ಕ್ರಿಯೇಟ್‌ ಮಾಡುವುದರಲ್ಲಿ ಬಾಲಿವುಡ್‌ ಸೆಲೆಬ್ಸ್ ಸದಾ ಮುಂದು. ಯುವಜನತೆ ಅವರನ್ನು ಅನುಸರಿದೇ ಇರಲಾರರು.

ಸ್ಟೈಲಾಗಿ ಹೀಗೆ ಮಿಂಚಿರಿ

ಫ್ಯಾಷನ್‌  ಸ್ಟೈಲ್ ಕುರಿತು ಯುವಜನತೆಯಲ್ಲಿ ಸದಾ ಕ್ರೇಜ್ ಇದ್ದೇ ಇರುತ್ತದೆ. ಫ್ಯಾಷನೆಬಲ್ ಜೊತೆಜೊತೆಗೆ ಸ್ಟೈಲಿಶ್‌ ಆಗಿ ಕಂಗೊಳಿಸಲು ನಿಮಗೆ ಎಲ್ಲ ಋತುಗಳ ಟ್ರೆಂಡ್‌ ಬಗ್ಗೆ ಗೊತ್ತಿರಬೇಕು. ಫ್ಯಾಷನ್‌ ಎಂದರೇನೇ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಮ್ಮದೇ ಆದ ಸ್ಟೈಲ್ ನಿಮ್ಮ ಆ್ಯಟಿಟ್ಯೂಡ್‌ ಎತ್ತಿಹಿಡಿಯುತ್ತದೆ ಎಂಬುದನ್ನು ಮರೆಯಬೇಡಿ, ಇದನ್ನು ಜನ ಸದಾ ಸ್ಮರಿಸುತ್ತಾರೆ. ನೀವು ಎಲ್ಲರೂ ಮೆಚ್ಚುವಂಥ ಫ್ಯಾಷನೆಬಲ್ ಡ್ರೆಸ್‌ ಧರಿಸಿದ್ದೀರಿ ಸರಿ, ಆದರೆ ಅದು ಗುಂಪಿನಲ್ಲಿ ಹತ್ತರಲ್ಲಿ ಮತ್ತೊಂದು ಎಂದಾಗಬಾರದು. ನೀವು ಅದನ್ನು ಯಾವ ಸ್ಟೈಲ್ನಲ್ಲಿ ಪ್ರಸ್ತುತಪಡಿಸುತ್ತೀರಿ ಎಂಬುದು ಬಲು ಮುಖ್ಯ. ಹಾಗಾದಾಗ ಮಾತ್ರವೇ ನೀವು ಜನರ ದೃಷ್ಟಿಯಲ್ಲಿ ಫ್ಯಾಷನ್‌ ಐಕಾನ್‌ ಆಗಲು ಸಾಧ್ಯ!

ಸ್ಮಾರ್ಟ್ ಸ್ಟೈಲ್ನಿಂದ ಕ್ರಿಯೇಟಿವ್‌ ಆಗಿ

ನಿಮ್ಮನ್ನು ನೀವು ಸ್ಟೈಲಿಶ್‌ ಆಗಿ ತೋರ್ಪಡಿಸಲು, ಸ್ಮಾರ್ಟ್ ಸ್ಟೈಲ್‌ ರೂಪಿಸಿಕೊಳ್ಳಿ. ನಿಮ್ಮದೇ ಆದ ಕ್ರಿಯೇಟಿವಿಟಿ ತೋರಿಸಿ. ಇದರಲ್ಲಿ ಮಿಕ್ಸ್  ಮ್ಯಾಚ್‌ನ ಯಾವುದೇ ಕಾನ್ಸೆಪ್ಟ್ ಬಳಸಿಕೊಳ್ಳಬಹುದು. ನಿಮಗೆ ಯಾವುದು ಪರ್ಫೆಕ್ಟ್ ಆಗಿ ಸೂಟ್‌ ಆಗುತ್ತದೋ ಅದನ್ನೇ ಕ್ಯಾರಿ ಮಾಡಿ. ಇದರಲ್ಲಿ ಕೆಲವು ಡಿಫರೆಂಟ್‌ ಥಿಂಗ್ಸ್ ಬೆರೆಸಿ, ನಿಮ್ಮದೇ ಆದ ಸ್ಟೈಲ್ ರೂಪಿಸಿ, ಆಗ ಅದು ಟೋಟಲಿ ನ್ಯೂ ಡಿಫರೆಂಟ್‌ ಬಟ್‌ ಬೆಟರ್‌ ಆಗಿರುತ್ತದೆ. ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಡ್ರೆಸ್‌ ಕಲರ್ಸ್‌ ನಿಮ್ಮ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತಿರಬೇಕು.

scarf

ಕಾಲೇಜು ಕಿಶೋರಿಯರಿಗಾಗಿ

– ನೀವು ಒನ್‌ ಪೀಸ್‌ ಲಾಂಗ್‌ ಡ್ರೆಸ್‌ ಜೊತೆ ಡೆನಿಮಂನ ಸಣ್ಣ ಪ್ಲಾಸೀವ್‌ ಜ್ಯಾಕೆಟ್‌ ಧರಿಸಿ. ಇದರ ಜೊತೆ ಡ್ಯಾಂಗ್ಲಿಂಗ್‌ ಇಯರ್‌ರಿಂಗ್ಸ್ ಫಿಂಗರ್‌ ರಿಂಗ್‌ ಧರಿಸಿದರೆ ಲುಕ್‌ ಹೆಚ್ಚು ಸ್ಟೈಲಿಶ್‌ ಎನಿಸುತ್ತದೆ.

– ಹ್ಯಾರೆಮ್ ಪ್ಯಾಂಟ್‌ ಅಥವಾ ಧೋತಿ ಸ್ಟೈಲ್ ಪ್ಯಾಂಟ್‌ನ್ನು ಪ್ರಿಂಟೆಡ್‌ ಜ್ಯಾಕೆಟ್‌ ಜೊತೆ ಧರಿಸಿ.

– ಜೀನ್ಸ್ ಅನ್ನು ಪೇಡ್‌ ಮಾಡಿ ಕೇಸರಿ ಲುಕ್‌ ಕೊಡಬಹುದು. ಜೊತೆಗೆ ಕೈಗಳಿಗೆ ಫಂಕಿ ಕಡಗ, ಕಿವಿಗೆ ಸ್ಟ್ರಾಪ್‌ ಟಾಪ್‌ ಧರಿಸಿರಿ.

– ಪ್ಯಾಂಟ್‌, ಜೀನ್ಸ್ ಜೊತೆ ವಿಂಟರ್‌ನಲ್ಲಿ ಸ್ಟೈಲಿಶ್‌ ಪ್ಯಾಟರ್ನ್ ವುಳ್ಳ ಡೆನಿಮ್ ಜ್ಯಾಕಿಟ್‌  ಸ್ವೆಟರ್‌ ಧರಿಸಿರಿ. ಇದರ ಜೊತೆಯಲ್ಲೇ ಚಳಿಗಾಲದಲ್ಲಿ ಸ್ಟೈಲಿಶ್‌ ಆಗಿ ತೋರ್ಪಡಿಸಲು ಉಲ್ಲನ್‌ ಕ್ಯಾಪ್‌ ಧರಿಸಿರಿ. ಮಾರುಕಟ್ಟೆಯಲ್ಲಿ ಚೆಕ್ಸ್, ಸ್ಟ್ರೈಪ್ಸ್ ಇತ್ಯಾದಿ ಎಲ್ಲಾ ಬಗೆಯ ಕ್ಯಾಪ್ಸ್ ದೊರಕುತ್ತವೆ. ಇದರಲ್ಲಿ ನಿಮ್ಮ ಮನಸ್ಸಿಗೆ ಹಿಡಿಸಿದ್ದನ್ನು ಆರಿಸಿಕೊಳ್ಳಿ.

– ಲಾಂಗ್‌ ಸೈಡ್‌ ಸ್ಲಿಟೆಡ್‌ ಡ್ರೆಸೆಸ್‌ ಲೆಗ್ಗಿಂಗ್‌ ಜೊತೆ ಧರಿಸಿರಿ ಹಾಗೂ ಇದರೊಂದಿಗೆ ಚಂಕೀ ಬಳೆಗಳು, ಕುತ್ತಿಗೆಗೆ ಸಣ್ಣ ಪೆಂಡೆಂಟ್‌ನ ಚೇನ್‌ ಧರಿಸಿರಿ.

– ಸ್ಟೈಲಿಶ್‌ ಆಗಿ ಕಂಗೊಳಿಸಲು ಋತುವಿಗೆ ತಕ್ಕಂತೆ ಸ್ಕರ್ಟ್‌ ಆರಿಸಿಕೊಳ್ಳಿ. ಬೇಸಿಗೆಯಲ್ಲಿ ಮಂಡಿಯವರೆಗೂ ಉದ್ದನೇ ಸ್ಕರ್ಟ್‌ನ್ನು ನಿಮ್ಮ ಸ್ಟೈಲ್ ಆಗಿಸಿ. ಸ್ಕರ್ಟ್‌ ಫಾರ್ಮ್‌ ಅಥವಾ ಡೇಲಿವೇರ್‌ ಆಗಿರಲಿ, ಇದರ ಅನುಸಾರವೇ ಟಾಪ್‌ ಆರಿಸಿ. ಎಥ್ನಿಕ್‌ ಪ್ರಿಂಟ್ಸ್ ವುಳ್ಳ ಸ್ಕರ್ಟ್‌, ಬ್ಲ್ಯಾಕ್‌ ಯಾ ವೈಟ್‌ ಟಾಪ್‌, ಬಾಂಧನಿ ದುಪಟ್ಟಾ ಮತ್ತು ಕೊಲ್ಹಾಪುರಿ ಫುಟ್‌ವೇರ್‌ ಧರಿಸಿ.

bag

ಆಫೀಸ್‌ವೇರ್‌ ಸ್ಟೈಲಿಶ್‌ ಡ್ರೆಸೆಸ್‌ : ಆಫೀಸ್‌ನಲ್ಲಿ ಸ್ಟೈಲಿಶ್‌ ಆಗಿ ಕಂಡುಬರಲು ಕಾಟನ್‌ ಸ್ಕರ್ಟ್‌, ಪ್ಯಾಂಟ್‌, ಟ್ರೌಸರ್ಸ್‌ ಜೊತೆ ಪ್ಲೇನ್‌ ಶರ್ಟ್‌ ಟಾಪ್‌ ಪೋಂಚ್‌ ಜ್ಯಾಕೆಟ್‌ ಧರಿಸಿರಿ. ಇಷ್ಟು ಮಾತ್ರಲ್ಲದೆ ವೀನೆಕ್‌ ಕಾಟನ್ನಿನ ಲಾಂಗ್‌ ಶರ್ಟ್‌ ಲೆಗ್ಗಿಂಗ್‌ ಜೊತೆ ಕುರ್ತಿ ಧರಿಸಿರಿ. ಇದರ ಜೊತೆ ವುಡನ್‌, ಪ್ಲಾಸ್ಟಿಕ್‌ ಆ್ಯಕ್ಸೆಸರೀಸ್‌ ಧರಿಸಬಹುದು. ವುಡನ್‌ ಆ್ಯಕ್ಸೆಸರೀಸ್‌ ಅಂತೂ ಎಲ್ಲಾ ಡ್ರೆಸ್ಸುಗಳಿಗೂ ಹೊಂದುತ್ತವೆ. ಜೊತೆಗೆ ಕಾಲಿಗೆ ಫ್ಲಾಟ್‌ ಫುಟ್‌ವೇರ್‌ ಧರಿಸಿ.

ಫಾರ್ಮಲ್ ಯಾ ಬಿಸ್‌ನೆಸ್‌ ಅಕೇಷನ್‌ಗಾಗಿ : ಇತ್ತೀಚೆಗೆ ವೆಸ್ಟರ್ನ್‌ ಔಟ್‌ಫಿಟ್ಸ್ ನಲ್ಲಿ ಟ್ಯೂಲಿಪ್‌ ಪ್ಯಾಟರ್ನ್‌ ಡ್ರೆಸೆಸ್‌ ಸಾಕಷ್ಟು ಜನಪ್ರಿಯವಾಗಿವೆ. ಡಿಫರೆಂಟ್‌ ಸ್ಟೈಲ್  ಪ್ಯಾಟರ್ನ್‌ ಫ್ಯಾಬ್ರಿಕ್‌ ಮಾತ್ರವಲ್ಲದೆ, ಬಾಡಿ ಶೇಪ್‌ ಅನುಸಾರ ಸ್ಕರ್ಟ್‌ ಶೇಪ್‌ ಸಹ ಡಿಫರೆಂಟ್‌ ಆಗಿರುತ್ತದೆ. ಫ್ಯಾನ್ಸಿ ಟಾಪ್‌ ಮತ್ತು ಟ್ರೆಂಡಿ ಆ್ಯಕ್ಸೆಸರೀಸ್‌ನಿಂದ ಈ ಡ್ರೆಸ್‌ಗಳಲ್ಲಿ ಇನ್ನಷ್ಟು ಸ್ಟೈಲ್‌ ಆ್ಯಡ್‌ ಆನ್‌ ಆಗುತ್ತದೆ. ಇದೇ ತರಹ ಈ ಸ್ಕರ್ಟ್ಸ್ ಡಿಸೈನ್‌ ಸಹ ಸಾಕಷ್ಟು ವಿಭಿನ್ನವಾಗಿದೆ. ಕೆಲವು ಕಡೆ ಸ್ಟ್ರೇಟ್‌ ಫಿಟ್ಟಿಂಗ್‌ ಜೊತೆ ಟ್ಯೂಲಿಪ್‌ ಟಚ್‌ ನೀಡಿದ್ದರೆ, ಮತ್ತೆ ಕೆಲವಕ್ಕೆ  ವೈಟ್‌ ಸ್ಟ್ರೈಪ್ಸ್ ಜೊತೆ ಪ್ಯಾಟರ್ನ್‌ ಆ್ಯಡ್‌ ಮಾಡಲಾಗಿದೆ. ಇವು ಲಾಂಗ್‌  ಶಾರ್ಟ್‌ ಎರಡೂ ಅಳತೆಯಲ್ಲಿ ಲಭ್ಯ.

ಡೆನಿಮ್  ಲಾಂಗ್‌ ಸ್ಕರ್ಟ್‌ ಜೊತೆ ರೆಡ್‌, ವೈಟ್‌, ಬ್ಲ್ಯಾಕ್‌ ಟಾಪ್‌ ಅಥವಾ ಶಾರ್ಟ್‌ ಸ್ಕರ್ಟ್‌ ಜೊತೆ ವಿಂಟರ್‌ನಲ್ಲಿ ಸ್ಟಾಕಿಂಗ್ಸ್ ಧರಿಸಿರಿ. ಈ ನಿಟ್ಟಿನಲ್ಲಿ ಡೆನಿಮ್ ಲುಕ್‌ ಎವರ್‌ಗ್ರೀನ್‌ ಎನಿಸಿದೆ. ಇದು ಎಲ್ಲರಿಗೂ ಸೂಟ್‌ ಆಗುತ್ತದೆ. ಇದರ ಜೊತೆ ಫಂಕಿ ಜ್ಯೂವೆಲರಿ ಯಾ ಲೈಟ್‌ ಹೀಲ್‌ ಸ್ಯಾಂಡಲ್ಸ್, ನಿಮ್ಮ ಲುಕ್ಸನ್ನು ಬೆಸ್ಟ್ ಆಗಿಸುತ್ತವೆ.

ಸ್ಕಾರ್ಫ್‌  ಸ್ಟೋಲ್‌ : ಸ್ಕಾರ್ಫ್‌  ಸ್ಟೋಲಿಗೆ ತನ್ನದೇ ಆದ ಸ್ಟೈಲಿಶ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ ಇದೆ. ನೀವು ಇದನ್ನು ನಿಮ್ಮ ಸ್ಟೈಲ್‌ನಂತೆ ಕುತ್ತಿಗೆಗೆ ಸುತ್ತಿಕೊಳ್ಳಿ, ತಲೆ ಅಥವಾ ಜಡೆಗೆ ಸುತ್ತಿಕೊಳ್ಳಿ ಅಥವಾ ಬೇಕಾದರೆ ನಾಟ್‌ ಹಾಕಿಕೊಳ್ಳಿ. ನಿಮ್ಮ ಡ್ರೆಸ್‌ಗೆ ತಕ್ಕಂತೆ ಇವನ್ನು ಕ್ಯಾರಿ ಮಾಡಿ. ಸ್ಕಾರ್ಪ್‌  ಅಂಡ್ ಸ್ಟೋಲ್ ಎರಡೂ ನಿಮ್ಮ ಡ್ರೆಸ್‌ನ್ನು ಇನ್ನಷ್ಟು ಹೆಚ್ಚು ಸ್ಟೈಲಿಶ್‌ ಆಗಿಸುತ್ತವೆ.

ಫಂಕೀ ಲುಕ್ಸ್ ಗಾಗಿ ಆ್ಯಕ್ಸೆಸರೀಸ್‌ : ಫಂಕೀ ಲುಕ್ಸ್ ಗಾಗಿ ಫಂಕೀ ಆ್ಯಕ್ಸೆಸರೀಸ್‌ ಅಂದರೆ ವುಡನ್‌, ಪ್ಲಾಸ್ಟಿಕ್‌, ಮೆಟಲಿನ ಬೋಲ್ಡ್ ಜ್ಯೂವೆಲರಿ ಬಳಸಿಕೊಳ್ಳಿ. ಇದರಲ್ಲಿ ಡಿಫರೆಂಟ್‌ ಸ್ಟೈಲ್‌ನಲ್ಲಿ ಕಲರ್‌ ಫುಲ್ ಜ್ಯೂವೆಲರಿ ಸಹ ಲಭ್ಯ. ಅದನ್ನೂ ಧರಿಸಿ ಆನಂದಿಸಿ.

ಎಲಿಗೆಂಟ್‌ ಲುಕ್ಸ್ ಗಾಗಿ : ನೀವು ಎಲಿಗೆಂಟ್‌ ಲುಕ್ಸ್ ಬಯಸಿದರೆ, ಸಿಂಪಲ್ ಸೋಬರ್‌ ಜ್ಯೂವೆಲರಿ ಧರಿಸಿ. ಇದಕ್ಕಾಗಿ ಮುತ್ತಿನ ಒಡವೆ ಸೆಟ್‌ ಬಲು ಪರ್ಫೆಕ್ಟ್.

ಫಾರ್ಮಲ್ ಲುಕ್ಸ್ : ಇದಕ್ಕಾಗಿ ಹೆಚ್ಚಿನ ಆ್ಯಕ್ಸೆಸರೀಸ್‌ ಬದಲು ನೀವು ನಿಮ್ಮ ಹೇರ್‌ಸ್ಟೈಲ್ ಮತ್ತು ಇಯರ್‌ರಿಂಗ್ಸ್ ಬಗ್ಗೆ ಫೋಕಸ್‌ ಮಾಡಿ. ಹೆಚ್ಚಿನ ಜ್ಯೂವೆಲರಿ ನಿಮ್ಮ ಲುಕ್ಸ್ ನ್ನು ಡಲ್ ಮಾಡುತ್ತವೆ.

ವ್ಯಾಲೆಂಟೈನ್‌ ಪಾರ್ಟಿಯಲ್ಲಿ  ಹೀಗೆ ಸ್ಟೈಲಿಶ್‌ ಆಗಿರಿ : ಈ ಪಾರ್ಟಿಯಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿ ಕಂಡುಬರಲು ಗಾರ್ಜಿಯಸ್‌ ಫ್ಲೋರ್‌ಲೆಂಥ್‌ ಅನಾರ್ಕಲಿ ಸೂಟ್‌ ಜೊತೆ ಪೋಟ್ಲಿ ಪರ್ಸ್‌ ಇರಲಿ. ಇದರಿಂದ ನಿಮ್ಮ ಪರ್ಸನಾಲಿಟಿಗೆ ಪರ್ಫೆಕ್ಟ್ ಲುಕ್‌ ಸಿಗುತ್ತದೆ. ಪೋಟ್ಲಿ ಪರ್ಸ್‌ನ್ನು ನೀವು ಎಡ/ಬಲ ಕೈನ ಮಣಿಕಟ್ಟಿಗೂ ತೂಗುಬಿಡಬಹುದು. ಜೊತೆಗೆ ಎಥ್ನಿಕ್‌ ಜ್ಯೂವೆಲರಿ ಹಾಗೂ ಹೀಲ್/ಫ್ಲಾಟ್‌ ಫುಟ್‌ವೇರ್‌ ಧರಿಸಿರಿ.

ಗಾರ್ಜಿಯಸ್‌ ಗೋಲ್ಡ್ ಲಹಂಗಾ ಜೊತೆ ಹೈ ಕಾಲರ್‌ ಗ್ಲಿಟರಿ ಶೈನಿ ಬ್ಲೌಸ್‌ ಧರಿಸಿರಿ. ಇದಕ್ಕೆ ಪೂರಕವಾಗಿ ಕಿವಿಗಳಿಗೆ ದೊಡ್ಡ ಇಯರ್‌ರಿಂಗ್ಸ್ ಹಾಗೂ ಕೈಗಳಿಗೆ ದಪ್ಪ ಕಡಗ ಧರಿಸಿರಿ.

glasses

ಸ್ಟೈಲಿಶ್‌ ಫುಟ್‌ವೇರ್‌ನಿಂದ ಸ್ಟೈಲ್ : ಇತ್ತೀಚೆಗೆ ಫ್ಲಾಟ್‌ ಚಪ್ಪಲಿಗಳಲ್ಲಿ ಸಾಕಷ್ಟು ಸ್ಟೈಲಿಶ್‌ ವೆರೈಟಿ ಸಿಗುತ್ತವೆ. ಅದರಲ್ಲಿ ಝಿಗ್‌ಜ್ಯಾಗ್,  ಡೋರಿ, ಕೃತಕ ಒಡವೆಗಳೂ ಅಳವಡಿಸಿರುತ್ತವೆ. ಪ್ರತಿ ಕಟರ್‌ ಮತ್ತು ಡಿಸೈನ್‌ನಲ್ಲಿ ಲಭ್ಯವಿರುವ ಈ ಫುಟ್‌ವೇರ್ಸ್‌ನಲ್ಲಿ ಅರ್ಧ ಇಂಚಿನ ಹೀಲ್‌ ಕಡಿಮೆ/ಅಧಿಕ ವರ್ಕ್‌ ಎರಡೂ ತರಹ ಇರುವಂತೆ ಲಭಿಸುತ್ತವೆ. ಕಿಟೀ ಪಾರ್ಟಿಗೆ ಹೊರಡಲು ಕಿಟನ್‌ ಹೀಲ್ಸ್, ಮದುವೆ ಪಾರ್ಟಿಗೆ ಸ್ಟೋನ್‌/ ಮುತ್ತು ಹುದುಗಿಸಲ್ಪಟ್ಟ ಹೈಹೀಲ್‌, ನ್ಯೂ ಇಯರ್‌/ವ್ಯಾಲೆಂಟೈನ್‌ ಪಾರ್ಟಿಗಳಿಗೆ ಸ್ಲ್ಯಾಟೋ ಫುಟ್‌ವೇರ್‌ ಸಹ ಧರಿಸಬಹುದು.

ಸನ್‌ಗ್ಲಾಸಸ್‌ನಿಂದ ಮಸ್ತ್ ಸ್ಟೈಲ್ : ಲುಕ್ಸ್ ಅನ್ನು ಸ್ಟೈಲಿಶ್‌ ಆಗಿಸಲು ಸನ್‌ಗ್ಲಾಸಸ್‌ ಬಳಸಿರಿ. ನಿಮ್ಮ ಮುಖದ ಆಕಾರಕ್ಕೆ ಹೊಂದಿಕೊಳ್ಳುವಂಥದ್ದನ್ನೇ ಆರಿಸಿ. ದೊಡ್ಡ ಗಾತ್ರದ ಮುಖವುಳ್ಳವರು ನೀವು ದೊಡ್ಡ ಫ್ರೇಮ್ ವುಳ್ಳ ಸ್ಟೈಲಿಶ್‌ ಗಾಗಲ್ಸ್ ಬಳಸಿ. ಆದರೆ ಅದು ಇಡೀ ಮುಖವನ್ನೇ ಆವರಿಸುವಂತೆ ಆಗಬಾರದು. ಮಾರ್ಕೆಟ್‌ನಲ್ಲಿ ಗೋಲಾಕಾರ, ಚೌಕಾಕಾರ, ದೊಡ್ಡಚಿಕ್ಕ ಎಲ್ಲಾ ಬಗೆಯ ಫ್ರೇಮಿನವು ಸಿಗುತ್ತವೆ. ನೀವು ನಿಮ್ಮ ಸ್ಕಿನ್‌ಟೋನ್‌ ಮತ್ತು ಮುಖಕ್ಕೆ ತಕ್ಕಂತೆ ಫ್ರೇಮ್ ಆರಿಸಬೇಕು. ಅದರಿಂದ ನಿಮ್ಮ ಸ್ಟೈಲ್ ಎಷ್ಟೋ ಸುಧಾರಿಸುತ್ತದೆ.

ಸ್ಟೈಲಿಶ್‌ ಹ್ಯಾಂಡ್‌ಬ್ಯಾಗ್‌ನಿಂದ ಡಿಫರೆಂಟ್‌ ಸ್ಟೈಲ್ : ಬ್ಯಾಗ್‌ ಒಂದು ಫ್ಯಾಷನೆಬಲ್ ಆ್ಯಕ್ಸೆಸರಿ. ಇದನ್ನು ಸ್ಟೈಲ್ ಸ್ಟೇಟ್‌ಮೆಂಟ್‌ ಆಗಿ ಬಳಸಿಕೊಳ್ಳಿ. ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಬಗೆಯ ಬ್ಯಾಗ್‌ ಕ್ಯಾರಿ ಮಾಡಿ. ಡಿಫರೆಂಟ್‌  ಸ್ಟೈಲಿಶ್‌ ಲುಕ್ಸ್ ಪಡೆಯಿರಿ. ಇತ್ತೀಚೆಗೆ ಮಾರ್ಕೆಟ್‌ನಲ್ಲಿ ವಿಭಿನ್ನ ಸಂದರ್ಭಗಳಾದ ಮಾರ್ಕೆಟಿಂಗ್‌, ಔಟಿಂಗ್‌ ಇತ್ಯಾದಿಗಳಿಗೆ ಎಷ್ಟೋ ವಿಧದ ಬ್ಯಾಗುಗಳು ಅಂದರೆ ಹೋಬೋ ಬ್ಯಾಗ್‌, ಈವ್ನಿಂಗ್‌ ಬ್ಯಾಗ್‌, ರಿಸ್ಟೀಟ್‌ ಬ್ಯಾಗ್‌, ಟೋಟೆ ಬ್ಯಾಗ್‌, ಶೋಲ್ಡರ್‌ ಸ್ಟ್ರಾಪ್‌ ಬ್ಯಾಗ್‌, ಕ್ಲಚ್‌, ಪರ್ಸ್‌ಬ್ಯಾಗ್‌ ಇತ್ಯಾದಿಗಳು ಲಭ್ಯವಿವೆ.

ಕಾಲೇಜು ಕಿಶೋರಿಯರಿಗೆ ಸ್ವಿಂಗಲ್ ಬ್ಯಾಗ್‌ ಬಹಳ ಸ್ಟೈಲಿಶ್‌ ಎನಿಸುತ್ತದೆ. ಇದನ್ನು ಬಗಲಲ್ಲಿ ಸೈಡ್‌ಗೆ ಇಳಿಬಿಡುವ ಬದಲು, ಕ್ರಿಸ್‌ಕ್ರಾಸ್‌ ಆಗಿ ಕ್ಯಾರಿ ಮಾಡಿದರೆ, ಹೆಚ್ಚು ಸ್ಟೈಲಿಶ್‌ ಆಗಿರುತ್ತದೆ.

ಫ್ಯಾಷನ್‌ ಟ್ರೆಂಡ್‌ನಲ್ಲಿನ ಈ ಎಲ್ಲಾ ವಿಷಯಗಳನ್ನೂ ನೆನಪಿಟ್ಟುಕೊಂಡು, ಅದಕ್ಕೆ ತಕ್ಕಂತೆ ನೀವು ವ್ಯಾಲೆಂಟೈನ್‌ ಪಾರ್ಟಿಗೆ ರೆಡಿಯಾಗಿ ಹೋದರೆ, ನಿಮ್ಮ ಸಂಗಾತಿಯನ್ನು ಕ್ಲೀನ್‌ ಬೋಲ್ಡ್ ಮಾಡುವುದರಲ್ಲಿ ಎರಡು ಮಾತಿಲ್ಲ.

ಹ್ಯಾಪಿ ವ್ಯಾಲೆಂಟೈನ್‌ ಡೇ!

– ಪ್ರಭಾ ಮಾಧವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ